50 ಕೋಟಿ ಫೇಸ್‌ಬುಕ್ ಖಾತೆ ಮಾಹಿತಿ ಸೋರಿಕೆ| 106 ದೇಶಗಳ ಬಳಕೆದಾರರ ಮಾಹಿತಿ ಲಭ್ಯ| ಫೋನ್ ನಂಬರ್, ಜನ್ಮದಿನಾಂಕವೂ ಲೀಕ್
ನ್ಯೂಯಾರ್ಕ್(ಏ.05): ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್‌ನ 50 ಕೋಟಿ ಬಳಕೆದಾರರ ಮಾಹಿತಿ ಸೋರಿಕೆಯಾಗಿರುವ ಸಂಗತಿ ಬಯಲಾಗಿದೆ. ಈ ಮಾಹಿತಿ ವೆಬ್‌ಸೈಟ್‌ವೊಂದರಲ್ಲಿ ಹ್ಯಾಕರ್‌ಗಳಿಗಾಗಿ ಲಭ್ಯವಿದೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಎಲ್ಲ ವೈಯಕ್ತಿಕ ಮಾಹಿತಿಯನ್ನೂ ಹಂಚಿಕೊಳ್ಳುವ ಬಳಕೆದಾರರು ಆತಂಕಪಡುವಂತಾಗಿದೆ. ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಎಷ್ಟುಸುರಕ್ಷಿತ ಎಂಬ ಪ್ರಶ್ನೆ ಮತ್ತೊಮ್ಮೆ ಏಳುವಂತಾಗಿದೆ.
ಅಮೆರಿಕದಲ್ಲಿ ಸಾವಿರಾರು ಭಾರತೀಯ ಐಟಿ ನೌಕರರಿಗೆ ಸಿಹಿಸುದ್ದಿ
undefined
106 ದೇಶಗಳ ಬಳಕೆದಾರರ ಫೋನ್ ನಂಬರ್, ಫೇಸ್‌ಬುಕ್ ಐಡಿ, ಸಂಪೂರ್ಣ ಹೆಸರು, ಸ್ಥಳ, ಜನ್ಮದಿನಾಂಕ ಹಾಗೂ ಇ-ಮೇಲ್ ವಿಳಾಸಗಳ ಕುರಿತು ತನಗೆ ಮಾಹಿತಿ ಸಿಕ್ಕಿದೆ ಎಂದು ಬ್ಯುಸಿನೆಸ್ ಇನ್‌ಸೈಡರ್ ಎಂಬ ಅಮೆರಿಕ ಮೂಲದ ವೆಬ್‌ಸೈಟ್‌ವೊಂದು ವರದಿ ಮಾಡಿದೆ. ಆದರೆ ಇದು 2019ರಲ್ಲೇ ವರದಿಯಾಗಿದ್ದ ಪ್ರಕರಣ. 2019ರ ಆಗಸ್ಟ್‌ನಲ್ಲೇ ನಾವು ಆ ಸಮಸ್ಯೆ ಸರಿಪಡಿಸಿದ್ದೇವೆ ಎಂದು ಫೇಸ್‌ಬುಕ್ ಕಂಪನಿ ಹೇಳಿಕೊಂಡಿದೆ.
ಫೇಸ್‌ಬುಕ್‌ನಲ್ಲಿ ಮಾಹಿತಿ ರಕ್ಷಣೆ ಸಮಸ್ಯೆ ಇದೆ ಎಂಬುದು ಗೊತ್ತಾಗುತ್ತಿರುವುದು ಇದೇ ಮೊದಲಲ್ಲ. ಬ್ರಿಟನ್ ಮೂಲದ ಕೇಂಬ್ರಿಜ್ ಅನಾಲಿಟಿಕಾ ಕಂಪನಿ 8.7 ಕೋಟಿ ಫೇಸ್‌ಬುಕ್ ಬಳಕೆದಾರರಿಗೆ ಅರಿವಿಲ್ಲದೆ ಅವರ ಮಾಹಿತಿಯನ್ನು ಪಡೆದಿರುವುದಾಗಿ ಹೇಳಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಫೋನ್ ನಂಬರ್‌ಗಳ ಮೂಲಕ ಸ್ನೇಹಿತರನ್ನು ಹುಡುಕುವ ಅವಕಾಶವನ್ನು 2018ರಲ್ಲಿ ಫೇಸ್‌ಬುಕ್ ನಿಷ್ಕಿ್ರಯಗೊಳಿಸಿತ್ತು. 26.7 ಕೋಟಿ ಫೇಸ್‌ಬುಕ್ ಬಳಕೆದಾರರ ಮಾಹಿತಿ ತನ್ನ ಬಳಿ ಇದೆ ಎಂದು 2019ರ ಡಿಸೆಂಬರ್‌ನಲ್ಲಿ ಉಕ್ರೇನ್ ಮೂಲದ ಸಂಸ್ಥೆಯೊಂದು ಹೇಳಿಕೊಂಡಿತ್ತು.
ಏನೇನು ಮಾಹಿತಿ ಸೋರಿಕೆ?
106 ದೇಶಗಳ ಬಳಕೆದಾರರ ಫೋನ್ ನಂಬರ್, ಫೇಸ್‌ಬುಕ್ ಐಡಿ, ಸಂಪೂರ್ಣ ಹೆಸರು, ಸ್ಥಳ, ಜನ್ಮದಿನಾಂಕ ಹಾಗೂ ಇ-ಮೇಲ್ ವಿಳಾಸಗಳ ಕುರಿತು ತನಗೆ ಮಾಹಿತಿ ಸಿಕ್ಕಿದೆ ಎಂದು ಬ್ಯುಸಿನೆಸ್ ಇನ್‌ಸೈಡರ್ ಎಂಬ ಅಮೆರಿಕ ಮೂಲದ ವೆಬ್‌ಸೈಟ್‌ವೊಂದು ವರದಿ ಮಾಡಿದೆ.
ಕಾರ್ಯನಿರ್ವಹಿಸುತ್ತಿಲ್ಲ ವ್ಯಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್; ಬಳಕೆದಾರರ ಪರದಾಟ!
ಫೇಸ್‌ಬುಕ್ ಹೇಳೇದೇನು?
ಆದರೆ ಇದು 2019ರಲ್ಲೇ ವರದಿಯಾಗಿದ್ದ ಪ್ರಕರಣ. 2019ರ ಆಗಸ್ಟ್‌ನಲ್ಲೇ ನಾವು ಆ ಸಮಸ್ಯೆ ಸರಿಪಡಿಸಿದ್ದೇವೆ ಎಂದು ಫೇಸ್‌ಬುಕ್ ಕಂಪನಿ ಹೇಳಿಕೊಂಡಿದೆ.
ಸೋರಿಕೆ ಇದೇ ಮೊದಲಲ್ಲ
ಬ್ರಿಟನ್ ಮೂಲದ ಕೇಂಬ್ರಿಜ್ ಅನಾಲಿಟಿಕಾ ಕಂಪನಿ 8.7 ಕೋಟಿ ಫೇಸ್‌ಬುಕ್ ಬಳಕೆದಾರರಿಗೆ ಅರಿವಿಲ್ಲದೆ ಅವರ ಮಾಹಿತಿಯನ್ನು ಪಡೆದಿರುವುದಾಗಿ ಹೇಳಿಕೊಂಡಿತ್ತು. 26.7 ಕೋಟಿ ಫೇಸ್‌ಬುಕ್ ಬಳಕೆದಾರರ ಮಾಹಿತಿ ತನ್ನ ಬಳಿ ಇದೆ ಎಂದು 2019ರ ಡಿಸೆಂಬರ್‌ನಲ್ಲಿ ಉಕ್ರೇನ್ ಮೂಲದ ಸಂಸ್ಥೆಯೊಂದು ಹೇಳಿಕೊಂಡಿತ್ತು.