ಜಿಯೋ-ಕ್ವಾಲ್‌ಕಾಮ್ ಗೇಮಿಂಗ್ ಆ್ಯಪ್ ಮೂಲಕ 25 ಲಕ್ಷ ರೂ ಗೆಲ್ಲುವ ಅವಕಾಶ!

By Suvarna News  |  First Published Apr 3, 2021, 6:08 PM IST

ಜಿಯೋ ಹಾಗೂ ಕ್ವಾಲ್‌ಕಾಮ್ ಗೇಮಿಂಗ್ ಆ್ಯಪ್ ಬಿಡುಗಡೆ ಮಾಡಿದೆ. ಈ ಮೂಲಕ ವಿಜೇತ ತಂಡಗಳಿಗೆ 25 ಲಕ್ಷ ರೂ ಬಹುಮಾನ ಗೆಲ್ಲುವ ಅವಕಾಶವಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.


ಬೆಂಗಳೂರು(ಎ.03):  ಭಾರತದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಸಂಸ್ಥೆ ಜಿಯೋ ಮತ್ತು ಮೊಬೈಲ್ ಗೇಮಿಂಗ್ ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿರುವ ಕ್ವಾಲ್‌ಕಾಮ್ ಟೆಕ್ನಾಲಜೀಸ್ ಇಂಕ್‌ನ ಅಂಗಸಂಸ್ಥೆ ಕ್ವಾಲ್‌ಕಾಮ್ CDMA ಟೆಕ್ನಾಲಜೀಸ್ ಏಷ್ಯಾ-ಪೆಸಿಫಿಕ್ ಪ್ರೈವೇಟ್ ಲಿಮಿಟೆಡ್  ಜಂಟಿಯಾಗಿ ಗೇಮಿಂಗ್ ಆ್ಯಪ್ ಬಿಡುಗಡೆ ಮಾಡಿದೆ. 

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ ಜಿಯೋ!.

Tap to resize

Latest Videos

undefined

ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ ಬ್ರಾಂಡ್‌ ಮೂಲಕ, ಜಿಯೋಗೇಮ್ಸ್ 'ಇಸ್ಪೋರ್ಟ್ಸ್ ಪ್ಲಾಟ್‌ಫಾರ್ಮ್'ನಲ್ಲಿ ಇಡೀ ವರ್ಷದ ಸಹಯೋಗದ ಪ್ರಾರಂಭವನ್ನು ಘೋಷಿಸಿವೆ. ಜಿಯೋ ಗೇಮ್ಸ್ ಇಸ್ಪೋರ್ಟ್ಸ್ ಪ್ಲಾಟ್‌ಫಾರ್ಮ್‌ನಲ್ಲಿ, ಶೀರ್ಷಿಕೆಗೆ QCTAP ಪ್ರಾಯೋಜಕತ್ವದೊಂದಿಗೆ,  ಜಿಯೋ ಗೇಮ್ಸ್ ಆಯೋಜಿಸಲಿರುವ ಹಲವು ಸ್ಪರ್ಧೆಗಳ ಮೂಲಕ ಭಾರತದೆಲ್ಲೆಡೆಯ ಗೇಮಿಂಗ್ ಉತ್ಸಾಹಿಗಳಿಗೆ ಉತ್ತಮ ಗೇಮಿಂಗ್ ಅನುಭವಗಳನ್ನು ತರಲು ಈ ಸಹಯೋಗವು ಸಿದ್ಧವಾಗಿದೆ. ಜಿಯೋಗೇಮ್ಸ್ ಇಸ್ಪೋರ್ಟ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಫೀಚರ್ ಮಾಡಲಾದ ಮೊದಲ ಸ್ಪರ್ಧೆಯಾದ ‘ಕಾಲ್ ಆಫ್ ಡ್ಯೂಟಿ ಮೊಬೈಲ್ ಏಸಸ್ ಇಸ್ಪೋರ್ಟ್ಸ್ ಚಾಲೆಂಜ್’ನೊಂದಿಗೆ ಈ ಸಹಯೋಗವು ಪ್ರಾರಂಭವಾಗಲಿದೆ.

ಭಾರತದ ವೇಗವಾಗಿ ಬೆಳೆಯುತ್ತಿರುವ ಇಸ್ಪೋರ್ಟ್ಸ್ ಸಮುದಾಯ ಮತ್ತು ಅಭಿಮಾನಿ ಬಳಗಕ್ಕಾಗಿ, ವೇದಿಕೆಯ ಬೃಹತ್ ವ್ಯಾಪ್ತಿ ಹಾಗೂ 400 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರ ಸಾಮರ್ಥ್ಯದ ನೆರವಿನಿಂದ ಸದೃಢವಾದ ದೇಶೀಯ ಇಸ್ಪೋರ್ಟ್ಸ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಜಿಯೋನ ಉಪಕ್ರಮವೇ ಜಿಯೋ ಗೇಮ್ಸ್ ಇಸ್ಪೋರ್ಟ್ಸ್. ಗೇಮರ್‌ಗಳನ್ನು ಸಶಕ್ತರಾಗಿಸುವ ದೂರದೃಷ್ಟಿಯೊಂದಿಗೆ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ ಮತ್ತು ಜಿಯೋ ಗೇಮ್ಸ್ ಒಂದು ವೇದಿಕೆಯನ್ನು ರಚಿಸುವ ಗುರಿಯನ್ನು ಹೊಂದಿದ್ದು ಅದು ಗೇಮಿಂಗ್-ಆಧಾರಿತ ಕಂಟೆಂಟ್ ಅನ್ನು ಅಭಿವೃದ್ಧಿಪಡಿಸುವುದಲ್ಲದೆ ಹೆಚ್ಚಿನ ವೃತ್ತಿಪರ ಮಟ್ಟದ ಅವಕಾಶಗಳಿಗಾಗಿ ಗೇಮರ್‌ಗಳು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶವನ್ನೂ ನೀಡುತ್ತದೆ.

4G ಡೌನ್‌ಲೋಡ್‌ ವೇಗದಲ್ಲಿ ಜಿಯೋಗೆ ಮತ್ತೊಮ್ಮೆ ಮೊದಲ ಸ್ಥಾನ!.

"ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ವಿಭಾಗಗಳಲ್ಲಿ ಮೊಬೈಲ್ ಗೇಮಿಂಗ್ ಕೂಡ ಒಂದು. ಭಾರತದಲ್ಲಿ ಸುಮಾರು 90% ಗೇಮರ್‌ಗಳು ಗೇಮಿಂಗ್‌ಗಾಗಿ ತಮ್ಮ ಪ್ರಾಥಮಿಕ ಸಾಧನವಾಗಿ ತಮ್ಮ ಮೊಬೈಲನ್ನು ಬಳಸುತ್ತಿದ್ದಾರೆ. ಉತ್ತಮ ಗ್ರಾಫಿಕ್ಸ್ ಸಾಮರ್ಥ್ಯಗಳ ಹೊರತಾಗಿ, ಇಂದಿನ ಗೇಮರ್‌ಗಳು ವೇಗವಾದ, ತಡೆರಹಿತ ಸಂಪರ್ಕ ಮತ್ತು ದೀರ್ಘಕಾಲೀನ ಬ್ಯಾಟರಿ ಲೈಫ್ ಅನ್ನು ಕೂಡ ಬಯಸುತ್ತಾರೆ." ಎಂದು ಕ್ವಾಲ್‌ಕಾಮ್ ಇಂಡಿಯಾ ಪ್ರೈ.ಲಿ.ನ ಉಪಾಧ್ಯಕ್ಷ ಮತ್ತು ಅಧ್ಯಕ್ಷ ರಾಜೇನ್ ವಗಾಡಿಯಾ ಹೇಳಿದರು. 

"ಮೊಬೈಲ್ ಗೇಮಿಂಗ್ ಮಾತ್ರವಲ್ಲದೆ ಲೈವ್ ಸ್ಟ್ರೀಮಿಂಗ್ ಗೇಮಿಂಗ್ ಕಂಟೆಂಟ್‌ಗೂ ಭಾರೀ ಸಂಖ್ಯೆಯ ಪ್ರೇಕ್ಷಕರಿರುವ ಭಾರತವು ಕ್ವಾಲ್‌ಕಾಮ್ ಟೆಕ್ನಾಲಜೀಸ್‌ ಪಾಲಿಗೆ ಬಹಳ ಮಹತ್ವಪೂರ್ಣವಾಗಿದೆ. ತಮ್ಮ ಉನ್ನತ-ಕಾರ್ಯಕ್ಷಮತೆಯ ಗ್ರಾಫಿಕ್ಸ್ ಮತ್ತು ದೀರ್ಘವಾದ ಸ್ಮೂತ್ ಪ್ಲೇ‌ಗಳೊಂದಿಗೆ ಗಮನಾರ್ಹವಾದ ಗೇಮಿಂಗ್ ಅನುಭವವನ್ನು ಸಕ್ರಿಯಗೊಳಿಸುವ ಮೂಲಕ ಕ್ವಾಲ್‌ಕಾಮ್® ಸ್ನಾಪ್‌ಡ್ರಾಗನ್™ ಮೊಬೈಲ್ ಪ್ರೊಸೆಸರ್‌ಗಳು ಬಳಕೆದಾರರ ನಿರೀಕ್ಷೆಗಳನ್ನು ಮೀರುವುದಷ್ಟೇ ಅಲ್ಲದೆ, ಅನೇಕ ಶ್ರೇಣಿಗಳು ಮತ್ತು ಬೆಲೆ ವಿಭಾಗಗಳಲ್ಲಿ ಪ್ರತಿಯೊಂದು ರೀತಿಯ ಬಳಕೆದಾರರಿಗೂ ಲಭ್ಯವಿವೆ. ನಮ್ಮ ತಂತ್ರಜ್ಞಾನವು ನೀಡುವ ಅತ್ಯುನ್ನತ ಅನುಭವಗಳಲ್ಲಿ ಮಾತ್ರವಲ್ಲದೆ, ಬಹಳ ಸ್ಪರ್ಧಾತ್ಮಕವಾದ ಮೊಬೈಲ್ ಇಸ್ಪೋರ್ಟ್ಸ್‌ ಜಗತ್ತಿನಲ್ಲಿ ಭಾರತೀಯರ ಪ್ರಚಂಡ ಗೇಮಿಂಗ್ ಸಾಮರ್ಥ್ಯಗಳಲ್ಲಿಯೂ ಸಹ, ಅವಕಾಶವನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಮತ್ತು ನಮ್ಮ ನಂಬಿಕೆಗೆ ಹೊಂದಿಕೆಯಾಗುವ ಜಿಯೋನಂತಹ ಬ್ರಾಂಡ್‌ನೊಂದಿಗೆ ಸಹಯೋಗ ರೂಪಿಸಿಕೊಳ್ಳಲು ನಾವು ಬಯಸಿದ್ದೆವು ಎಂದರು.

ಭಾರತದಲ್ಲಿ ಮೊಬೈಲ್ ಇಂಟರ್‌ನೆಟ್ ವ್ಯಾಪ್ತಿ ಬೆಳೆದಂತೆ, ಮೊಬೈಲ್ ಇಸ್ಪೋರ್ಟ್ಸ್‌ಗಾಗಿ ಹೆಚ್ಚುತ್ತಿರುವ ಬೇಡಿಕೆಗೆ ಸ್ಪಂದಿಸಲು ಈ ಇಸ್ಪೋರ್ಟ್ಸ್ ಚಾಲೆಂಜ್ ಜಿಯೋನ ಹೊಸ ಪ್ರಯತ್ನವಾಗಿದೆ. ಗೇಮರ್‌ಗಳಿಗಾಗಿ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು, ಲೈವ್ ಸ್ಟ್ರೀಮ್‌ಗಳ ಮೂಲಕ ಗೇಮಿಂಗ್ ಸಮುದಾಯದಲ್ಲಿ ಆಳವಾದ ಸಹಭಾಗಿತ್ವ ಮತ್ತು ಗುಣಮಟ್ಟದ ಕಂಟೆಂಟ್ ಅನ್ನು ಸಕ್ರಿಯಗೊಳಿಸುವುದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಮತ್ತು ಗೆಲ್ಲಲು ಮುಂದಿನ ಹಂತದ ಗೇಮಿಂಗ್ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಮತ್ತು ಪೋಷಿಸುವುದು ಇದರ ಅಂತಿಮ ಗುರಿಯಾಗಿದೆ. ಭಾರತೀಯ ಗೇಮರ್‌ಗಳಿಗಾಗಿ ಉತ್ತಮ ಮತ್ತು ತಡೆರಹಿತ ಗೇಮಿಂಗ್ ಅನುಭವವನ್ನು ನೀಡಲು ಜಿಯೋ ಗೇಮ್ಸ್ ಮತ್ತು ಕ್ವಾಲ್‌ಕಾಮ್ ಟೆಕ್ನಾಲಜೀಸ್ ಕೈಜೋಡಿಸಿವೆ.

click me!