
ನವದೆಹಲಿ(ಜೂ.28): ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದ ಲಸಿಕಾ ಅಭಿಯಾನ ಇತರ ಎಲ್ಲಾ ದೇಶಗಳಿಂದ ಅತ್ಯುತ್ತಮ ಹಾಗೂ ಅತೀ ಹೆಚ್ಚು ಮಂದಿಯನ್ನು ತಲುಪಿದೆ. ಇದಕ್ಕೆ ಹಲವು ಕಾರಣಗಳಿವೆ. ಇದರಲ್ಲಿ ಕೋವಿನ್ ಆ್ಯಪ್, ಹಾಗೂ ಪೋರ್ಟಲ್ ಪಾಲು ಹೆಚ್ಚಾಗಿದೆ. ಕೋವಿನ್ ಮೂಲಕ ಭಾರತದಲ್ಲಿ ಲಸಿಕೆ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದೆ. ಭಾರತದ ಕೋವಿನ್ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ಇದೀಗ 50ಕ್ಕೂ ಹೆಚ್ಚು ದೇಶಗಳು ಕೋವಿನ್ ಬಳಸಿಕೊಳ್ಳಲು ಆಸಕ್ತಿ ತೋರಿದೆ.
CoWin ನಿಂದಲೇ ಪಾಸ್‌ಪೋರ್ಟ್‌ಗೆ ವ್ಯಾಕ್ಸೀನ್ ಸರ್ಟಿಫೀಕೇಟ್ ಲಿಂಕ್ ಮಾಡೋದೇಗೆ ?.
ವಿದೇಶಗಳ ಬೇಡಿಕೆ ಹೆಚ್ಚಾಗುತ್ತದ್ದಂತೆ ಪ್ರಧಾನಿ ನರೇಂದ್ರ ಮೋದಿ, ಕೋವಿನ್ ಪೋರ್ಟಲ್ ತಂತ್ರಜ್ಞಾನವನ್ನು ಓಪನ್ ಸೋರ್ಸ್ ವರ್ಶನ್ ನೀಡಲು ಸೂಚನೆ ನೀಡಿದ್ದಾರೆ. ಇಷ್ಟೇ ಅಲ್ಲ ಇದು ಉಚಿತವಾಗಿ ನೀಡಲು ಸೂಚಿಸಿದ್ದಾರೆ. ಈ ಮೂಲಕ ಕೋವಿನ್ ಬಳಸಲು ಇಚ್ಚಿಸುವ ದೇಶಗಳು ಸುಲಭವಾಗಿ, ಯಾವುದೇ ಅಡೆ ತಡೆ ಇಲ್ಲದೆ ಬಳಕೆ ಮಾಡುವಂತೆ ಅನುವು ಮಾಡಿಕೊಡಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯಸ್ಥ ಡಾ. ಆರ್.ಎಸ್ .ಶರ್ಮಾಗೆ ಮೋದಿ ಸೂಚಿಸಿದ್ದಾರೆ.
ಮೋದಿ ಸೂಚನೆ ಬೆನ್ನಲ್ಲೇ ಶರ್ಮಾ ಸಂತಸ ಹಂಚಿಕೊಂಡಿದ್ದಾರೆ. ಕೋವಿನ ಇದೀಗ ಅತ್ಯಂತ ಜನಪ್ರಿಯವಾಗಿದೆ. ಸೆಂಟ್ರಲ್ ಏಷ್ಯಾ, ಲ್ಯಾಟಿನ್ ಅಮೆರಿಕ, ಆಫ್ರಿಕಾ ಸೇರಿದಂತೆ 50ಕ್ಕೂ ಹೆಚ್ಚು ದೇಶಗಳು ಕೋವಿನ್ ತಂತ್ರಜ್ಞಾನ ಬಳಸಲು ಆಸಕ್ತಿ ತೋರಿದೆ. ಇದೀಗ ಪ್ರಧಾನಿ ಮೋದಿ, ಉಚಿತವಾಗಿ ಕೋವಿನ್ ತಂತ್ರಜ್ಞಾನವನ್ನು ಓಪನ್ ಸೋರ್ಸ್ ವರ್ಶನ್ ನೀಡಿ ಎಂದು ಸೂಚಿಸಿದ್ದಾರೆ ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ.
ಕೋವಿನ್‌ನಿಂದ ಲಸಿಕೆ ನೀಡುವಿಕೆ ಪ್ರಕ್ರಿಯೆ ಸರಳವಾಗಲಿದೆ. ನೋಂದಣಿ ಮಾಡಿದವರಿಗೆ ಮೆಸೇಜ್ ಬರಲಿದೆ. ಇನ್ನು ಇಂಗ್ಲೀಷ್, ಹಿಂದಿ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.