BSNLನಿಂದ 199 ರೂ. ಪ್ರಿಪೇಡ್ ಪ್ಲ್ಯಾನ್, ನಿತ್ಯ 2ಜಿಬಿ ಹೈಸ್ಪೀಡ್ ಇಂಟರ್ನೆಟ್!

By Suvarna News  |  First Published Dec 24, 2020, 3:10 PM IST

ಖಾಸಗಿ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಗಳಿಂದ ತೀವರ್ ಸ್ಪರ್ಧೆಯನ್ನು ಎದುರಿಸುತ್ತಿರುವ ಭಾರತ್ ಸಂಚಾರ್ ನಿಗಮ ಲಿ.(ಬಿಎಸ್‌ಎನ್‌ಎಲ್), ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಪ್ಲ್ಯಾನ್‌ಗಳನ್ನು ಘೋಷಿಸುತ್ತಿದೆ. ತೀವ್ರ ಪೈಪೋಟಿಯ ಹೊರತಾಗಿಯೂ ಬಿಎಸ್‌ಎನ್‌ಎಲ್ ಸರ್ವವ್ಯಾಪಿ ನೆಟ್‌ವರ್ಕ್‌ನಿಂದಾಗಿ ಗ್ರಾಹಕರ ಮೆಚ್ಚಿನ ಕಂಪನಿಯಾಗಿದೆ.
 


ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ಲಿ.(ಬಿಎಸ್ಎನ್ಎಲ್) 199 ರೂ. ಪ್ರಿಪೇಡ್ ಪ್ಲ್ಯಾನ್ ಅನ್ನು ಪ್ರಕಟಿಸಿದೆ. ಈ ಪ್ಲ್ಯಾನ್ ಡಿ.24ರಿಂದಲೇ ಜಾರಿಯಾಗುತ್ತಿದ್ದು, ಕ್ರಿಸ್ಮಸ್  ಆಫರ್ ಆಗಿ ಹೊಸ ಪ್ಲ್ಯಾನ್ ನೀಡಲಾಗುತ್ತದೆ.

ಜಿಯೋ, ಏರ್‌ಟೆಲ್, ವಿಐನಂಥ ಖಾಸಗಿ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಆಫರ್‌ಗಳನ್ನು ಘೋಷಣೆ ಮಾಡುತ್ತಲೇ ಇರುತ್ತದೆ. ಇದೀಗ ಕ್ರಿಸ್ಮಸ್ ಆಫರ್ ಆಗಿ ಆರಂಭಿಕ 199 ರೂ. ಪ್ರಿಪೇಡ್ ಪ್ಲ್ಯಾನ್ ಪ್ರಕಟಿಸಿದೆ.

Tap to resize

Latest Videos

undefined

ಡಿ.28ಕ್ಕೆ ಶಿಯೋಮಿ ಎಂಐ 11 ಸ್ಮಾರ್ಟ್‌ಫೋನ್ ಬಿಡುಗಡೆ ಪಕ್ಕಾ

ಪ್ರಿಪೇಡ್ ಬಳಕೆದಾರರಿಗೆ 199 ರೂ. ಪ್ಲ್ಯಾನ್ ಮಾತ್ರವಲ್ಲದೇ, ತನ್ನ ಸ್ಪೇಷಲ್ ಟ್ಯಾರಿಫ್ ವೋಚರ್(ಎಸ್‌ಟಿವಿ)  998 ಪ್ರಿಪೇಡ್ ಪ್ಲ್ಯಾನ್ ಅನ್ನು ಕೂಡ ಪರಿಷ್ಕರಿಸಿದೆ. ಪರಿಣಾಮ, ಪರಿಷ್ಕೃತ ಎಸ್‌ಟಿವಿ 998 ಪ್ಲ್ಯಾನ್ ಅನ್ವಯ ಗ್ರಾಹಕರಿಗೆ ನಿತ್ಯ 3ಜಿ ಡೇಟಾ ದೊರೆಯಲಿದೆ. ಈ ಮೊದಲು ಈ ಪ್ಲ್ಯಾನ್ ಅನ್ವಯ ಗ್ರಾಹಕರು ನಿತ್ಯ 2ಜಿಬಿ ಡೇಟಾ ಪಡೆದುಕೊಳ್ಳುತ್ತಿದ್ದರು. ಈ ಪ್ಲ್ಯಾನ್ ವ್ಯಾಲಿಡಿಟಿ 240 ದಿನಗಳದ್ದಾಗಿದೆ. ಬಿಎಸ್‌ಎನ್‌ಎಲ್ ಕೇರಳ ಟ್ವಿಟರ್ ಹ್ಯಾಂಡಲ್ ಮೂಲಕ ಈ ಘೋಷಣೆ ಮಾಡಲಾಗಿದೆ. 

ಬಿಎಸ್ಎನ್ಎಲ್ 199 ರೂ. ಪ್ಲ್ಯಾನ್ ನಿಮಗೆ 2ಜಿಬಿ ಹೈಸ್ಪೀಡ್ ಡೇಟಾ ಮತ್ತು ನಿತ್ಯ 250 ನಿಮಿಷ ಉಚಿತ ಲೋಕಲ್ ಮತ್ತು ಎಸ್‌ಟಿಡಿ ಕರೆಗಳನ್ನು ಮಾಡಲು ಅವಕಾಶ ನೀಡುತ್ತದೆ. ಇದರ ಜೊತೆಗೆ ನೀವು ನಿತ್ಯ ಉಚಿತವಾಗಿ 100 ಎಸ್ಎಂಎಸ್‌ಗಳನ್ನು ಕಳುಹಿಸಬಹುದು. ಈ ಪ್ರೀಪೇಡ್ ಪ್ಲ್ಯಾನ್ ವ್ಯಾಲಿಡಿಟಿ 30 ದಿನಗಳದ್ದಾಗಿದೆ ಮತ್ತು ಈ ಘೋಷಣೆಯನ್ನು ಬಿಎಸ್‌ಎನ್ಎಲ್ ತನ್ನ ರಾಜಸ್ಥಾನದ ಬಿಎಸ್ಎನ್ಎಲ್ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. 

ಮತ್ತೊಂದೆಡೆ ಬಿಎಸ್ಎನ್ಎಲ್ ಚೆನ್ನೈ ಹತ್ತು ದಿನಗಳ ವ್ಯಾಲಿಡಿಟಿಯ ಎಫ್‌ಟಿಟಿ 160 ಪ್ಲ್ಯಾನ್‌ನಲ್ಲಿ ಫುಲ್ ಟಾಕ್ ಟೈಮ್ ಆಫರ್ ನೀಡುತ್ತಿದೆ. ಈ ಪ್ಲ್ಯಾನ್ ಡಿಸೆಂಬರ್ 21ರಿಂದಲೇ ಆರಂಭವಾಗಿದೆ. ನೀವಿದನ್ನು ಸಿ-ಟಾಪ್ ಅಪ್, ವೆಬ್ ಪೋರ್ಟಲ್, ಎಂ ವಾಲೆಟ್ ಮೂಲಕ ಪಡೆದುಕೊಳ್ಳಬಹುದು. ರೆಗ್ಯುಲರ್ ಬ್ರಾಡ್ ಬ್ಯಾಂಡ್ ಪ್ಲ್ಯಾನ್‌ಗಳಲ್ಲಿ ಒದಗಿಸುವ ಡೇಟಾದ ವೇಗವನ್ನೂ ಬಿಎಸ್‌ಎನ್‌ಎಲ್ ಹೆಚ್ಚಿಸಿದೆ. ರೂಪಾಯಿ 779ರ ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ ಪಡೆದ ಗ್ರಾಹಕರು ಈ ಹಿಂದಿನಿಗಿಂತಲೂ ಎರಡು ಪುಟ್ಟ ಹೆಚ್ಚು ವೇಗದ ಇಂಟರ್ನೆಟ್ ಸೇವೆ ಪಡೆದುಕೊಳ್ಳಬಹುದು.

ಜಿಯೋಗೆ ಸೆಡ್ಡು: ಕಡಿಮೆ ದರದಲ್ಲಿ ಎಕ್ಸ್‌ಕ್ಲೂಸಿವ್ ಪ್ಲ್ಯಾನ್ ಆರಂಭಿಸಿದ Vi

ಬಿಎಸ್‌ಎನ್‌ಎಲ್ ಮತ್ತೊಂದು ಪ್ಲ್ಯಾನ್ ಆಗಿರುವ 500 ಜಿಬಿ ಸಿಯುಎಲ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ನಿಮಗೆ ಒಳ್ಳೆಯ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತಿದೆ. ಈ ಪ್ಲ್ಯಾನ್‌ನಲ್ಲಿ ಗ್ರಾಹಕರು 300 ಜಿಬಿ ತಲುಪವರೆಗೂ 100 ಎಂಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ಪಡೆದುಕೊಳ್ಳಬಹುದು. ತಿಂಗಳಿಗೆ 777 ರೂಪಾಯಿ ಈ ಪ್ಲ್ಯಾನ್‌ನಲ್ಲಿ ಗ್ರಾಹಕರು ಈ ಹಿಂದೆ 500 ಜಿಬಿಗೆ ತಲುಪುತ್ತಿದ್ದಂತೆ ಸ್ಪೀಡ್ 2ಎಂಬಿಪಿಎಸ್‌ಗೆ ಕುಸಿಯುತ್ತಿತ್ತು. ಇದೀಗ ಹೊಸ ಆಫರ್‌ ಅನ್ವಯ ಈ ಸ್ಪೀಡ್ 5 ಎಂಬಿಪಿಎಸ್‌ವರೆಗೂ ಇರಲಿದೆ.

ಭಾರತ್ ಸಂಚಾರ್ ನಿಗಮ ಲಿ.(ಬಿಎಸ್‌ಎನ್‌ಎಲ್) ಕಂಪನಿ ಸರ್ಕಾರಿ ಸ್ವಾಮ್ಯ ಪ್ರಮುಖ ಟೆಲಿಕಾಂ ಸೇವಾ ಪೂರೈಕದಾರ ಕಂಪನಿಯಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ. ಬಿಎಸ್‌ಎನ್‌ಎಲ್‌ಗೆ ದೇಶದ ಹಲವು ಸರ್ಕರಲ್‌ಗಳಿಗೆ 4ಜಿ  ಸೇವೆಯನ್ನು ಒದಗಿಸಲು ಪ್ರಯಾಸ ಪಡುತ್ತಿದೆ. ಆದರೆ, ದೇಶಾದ್ಯಂತ ಈ ಕಂಪನಿಯ ನೆಟ್‌ವರ್ಕ್ ಸಖತ್ತಾಗಿದ್ದು, ಗ್ರಾಹಕರು ಈಗಲೂ ಬಿಎಸ್‌ಎನ್‌ಎಲ್ ಸೇವೆಯನ್ನು ಇಷ್ಟಪಡುತ್ತಾರೆ. 

ಇನ್ಸ್‌ಟಾಗ್ರಾಮ್‌ನಲ್ಲಿ ಮೂವೀ ನೋಡಲು ‘ವಾಚ್‌ ಟುಗೆದರ್’ ಫೀಚರ್!

click me!