ಕಳೆದ ಜನವರಿಯಲ್ಲಿ ಪರಿಚಯಿಸಲಾಗಿದ್ದ 398 ರೂ. ಎಸ್‌ಟಿವಿ ಪ್ರಿಪೇಡ್ ಪ್ಲ್ಯಾನ್ ಅನ್ನು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ ಲಿ. ಮತ್ತೆ ಮೂರು ತಿಂಗಳವರೆಗೂ ವಿಸ್ತರಿಸಿದೆ. ಈ ಪ್ಲ್ಯಾನ್‌ನಲ್ಲಿ ಪ್ರಿಪೇಡ್ ಗ್ರಾಹಕರು ಅನಿಯಂತ್ರಿತ ಕಾಲ್ಸ್ ಮತ್ತು ಡೇಟಾ ಸೇವೆ ಪಡೆದುಕೊಳ್ಳಬಹುದಾಗಿದೆ.
ಖಾಸಗಿ ಟೆಲಿಕಾಂ ಕಂಪನಿಗಳಿಂದ ಭಾರೀ ಸ್ಪರ್ಧೆಯನ್ನು ಎದುರಿಸುತ್ತಿರುವ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ಲಿಮಿಟೆಡ್(ಬಿಎಸ್‌ಎನ್‌ಎಲ್) ಹೊಸ ಗ್ರಾಹಕರನ್ನು ಸೆಳೆಯಲು ಮತ್ತು ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಹಲವು ಹೊಸ ಹೊಸ ಆಫರ್‌ಗಳನ್ನು ಘೋಷಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಬಿಸ್ಸೆನ್ನೆಲ್ ಕಳೆದ ಜನವರಿಯಲ್ಲಿ 398 ರೂ. ಮೌಲ್ಯದ ಅನ್‌ಲಿಮಿಟೆಡ್ ಪ್ರಿಪೇಡ್ ಸ್ಪೆಷಲ್ ಟಾರಿಫ್ ವೋಚರ್ಸ್(ಎಸ್‌ಟಿವಿ) ಗ್ರಾಹಕರಿಗೆ ಘೋಷಿಸಿತ್ತು ಮತ್ತು ಈ ಆಫರ್ ಏಪ್ರಿಲ್ 9ಕ್ಕೆ ಮುಕ್ತಾಯವಾಗಿತ್ತು. ಆದರೆ, ಇದೀಗ ಭಾರತ್ ಸಂಚಾರ ನಿಗಮ ಲಿ. ಈ ಆಫರ್ ಅನ್ನು ಪ್ರೀಪೇಡ್ ಗ್ರಾಹಕರಿಗೆ ಮತ್ತೆ 90 ದಿನಗಳವರೆಗೆ ವಿಸ್ತರಿಸಿದೆ. ಈಗಾಗಲೇ ಈ ಆಫರ್ ಪಡೆದುಕೊಂಡಿರುವ ಪ್ರಿಪೇಡ್ ಗ್ರಾಹಕರು ಬೇಕಿದ್ದರೆ ಆಫರ್ ಅನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗಬಹುದು. ಹೊಸ ಗ್ರಾಹಕರು ಕೂಡ ಈ ಫ್ಲ್ಯಾನ್ ಆಫರ್ ಪಡೆದುಕೊಳ್ಳಬಹುದು.
undefined
6000 mAh ಬ್ಯಾಟರಿಯ ಟೆಕ್ನೋ ಸ್ಪಾರ್ಕ್ 7 ಸ್ಮಾರ್ಟ್ ಫೋನ್ ಬಿಡುಗಡೆ
398 ರೂ. ಮೌಲ್ಯದ ಸ್ಪೆಷಲ್ ಟಾರಿಫ್ ವೋಚರ್ಸ್ ಅನ್‌ಲಿಮಿಟೆಡ್ ಪ್ರಿಪೇಡ್ ಆಫರ್ ಈಗ ಏಪ್ರಿಲ್ 10ರಿಂದ ಜುಲೈ 8ರವರೆಗೂ ಸಿಂಧುತ್ವ ಹೊಂದಿದೆ. ಹಾಗಾಗಿ ಗ್ರಾಹಕರು ಈ ಪ್ರಿಪೇಡ್ ಪ್ಲ್ಯಾನ್ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಜನವರಿಯಲ್ಲಿ ಆರಂಭಿಸಲಾಗಿದ್ದ ಈ ಪ್ಲ್ಯಾನ್ ಅನ್ನು ವಿಸ್ತರಿಸುವ ಬಗ್ಗೆ ಬಿಸ್ಸೆನ್ನೆಲ್ ಕಂಪನಿಯ ಚೈನ್ನೈ ಟ್ವಿಟರ್ ಹ್ಯಾಂಡಲ್ ಮಾಹಿತಿಯನ್ನು ಷೇರ್ ಮಾಡಿಕೊಂಡಿದೆ. ಈ ಟ್ವೀಟ್ ಖಾತೆಯಲ್ಲಿ ಬಿಎಸ್ಸೆನ್ನೆಲ್‌ನ ಎಸ್‌ಟಿವಿ 398 ಪ್ರಿಪೇಡ್ ಪ್ಲ್ಯಾನ್ ವಿಸ್ತರಣೆಯಾಗಿರು ಬಗ್ಗೆ ಮಾಹಿತಿ ನೀಡಲಾಗಿದೆ.
ಈ 398 ರೂ. ಮೌಲ್ಯದ ಎಸ್‌ಟಿವಿ ಅನ್‌ಲಿಮಿಟೆಡ್ ಪ್ರಿಪೇಡ್ ಪ್ಲ್ಯಾನ್‌ನಡಿ ಗ್ರಾಹಕರಿಗೆ ಸಿಗಲಿರುವ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಯಾವುದೇ ಎಫ್‌ಯುಪಿ ಮಿತಿ ಇಲ್ಲದೇ ಅನಿಯಂತ್ರಿತ ಹೈಸ್ಪೀಡ್ ಇಂಟರ್ನೆಟ್ ಡೇಟಾ, ದಿಲ್ಲಿ ಮತ್ತು ಮುಂಬೈಯಲ್ಲಿರುವ ಎಂಟಿಎನ್ಎಲ್ ಸೇರಿದಂತೆ ನ್ಯಾಷನಲ್ ನೆಟ್ವರ್ಕ್ಸ್, ಎಲ್‌ಎಸ್ಎ, ಹೋಮ್ ಸೇರಿದಂತೆ ಎಲ್ಲ ರೀತಿಯ ಅನಿಯಂತ್ರಿತ ವಾಯ್ಸ್ ಕರೆಗಳಿಗೆ ಅವಕಾಶವಿರಲಿದೆ. ಜೊತೆಗೆ ದಿನಕ್ಕೆ 100 ಎಸ್ಸೆಮ್ಮೆಸ್ ಉಚಿತವಾಗಿದ್ದು, ಇವು 30 ದಿನಗಳವರೆಗೆ ವ್ಯಾಲಿಡಿಟಿಯನ್ನು ಹೊಂದಿರುತ್ತವೆ.
Mi 11 ಅಲ್ಟ್ರಾ ಫೋನ್ ಹಿಂಬದಿಯಲ್ಲೂ ಡಿಸ್‌ಪ್ಲೇ! ಏ.23ಕ್ಕೆ ಲಾಂಚ್
ಆದರೆ, ಈ 398 ರೂ. ಮೌಲ್ಯದ ಎಸ್‌ಟಿವಿ ಅನ್‌ಲಿಮಿಟೆಡ್ ಪ್ರಿಪೇಡ್ ಪ್ಲ್ಯಾನ್‌ನಡಿ ದೊರೆಯುವ 100 ಎಸ್ಸೆಮ್ಮೆಸ್ ಮತ್ತು ವಾಯ್ಸ್ ಕರೆಗಳನ್ನು ನೀವು ಪ್ರೀಮಿಯಂ ನಂಬರ್ಸ್, ಐಎನ್ ನಂಬರ್ಸ್, ಇಂಟರ್ ನ್ಯಾಷನಲ್ ನಂಬರ್ಸ್ ಮತ್ತು ಚಾರ್ಜೇಬಲ್ ಶಾರ್ಟ್ ಕೋಡ್ಸ್‌ಗೆ ಬಳಸುವಂತಿಲ್ಲ. ಈ ಸೇವೆಗಳಿಗೆ ಈ ಪ್ಲ್ಯಾನ್ ಅಪ್ಲೈ ಆಗುವುದಿಲ್ಲ.
ಒಂದು ವೇಳೆ, ಗ್ರಾಹಕರು ಈ ಸೇವೆಗಳನ್ನು ಬಳಸಿಕೊಳ್ಳಲೇಬೇಕೆಂದರೆ ಶುಲ್ಕ ಪಾವತಿಸಬೇಕಾಗುತ್ತದೆ. ಇದೇ ವೇಳೆ, ಟೆಲಿ ಮಾರ್ಕೆಟಿಂಗ್ ಅಥವಾ ವಾಣಿಜ್ಯ ಉದ್ದೇಶದ ಬಳಕೆಗೂ ಬಳಸಿಕೊಳ್ಳುವಂತಿಲ್ಲ ಎಂದು ಭಾರತ್ ಸಂಚಾರ ನಿಗಮ್ ಲಿ. ಹೇಳಿದೆ. ಅಲ್ಲದೆ, ಯೋಜನೆಯ ಪ್ರಸ್ತುತ ಪುನರ್ಭರ್ತಿ ಅವಧಿ ಮುಗಿದ ನಂತರ ಬಳಕೆಯಾಗದ ಉಚಿತ ಪ್ರಯೋಜನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಬಿಎಸ್‌ಎನ್‌ಎಲ್ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.
ಭಾರೀ ನಿರೀಕ್ಷೆಯ ಗೂಗಲ್ ಪಿಕ್ಸೆಲ್ 6 ಸ್ಮಾರ್ಟ್‌ಫೋನ್ ಯಾವಾಗ ರಿಲೀಸ್?
ಬಿಎಸ್ಸೆನ್ನೆಲ್ ಮೂರು ಹೊಸ ಡಿಎಸ್ಎಲ್ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಪರಿಚಯಿಸಿದ ನಂತರ ಈ ಪ್ಲ್ಯಾನ್ ಬರುತ್ತದೆ. 299, ರೂ. 399, ಮತ್ತು ರೂ. 555 ರೂ. ಮೌಲ್ಯದ ಪ್ಲ್ಯಾನ್‌ಗಳೆಲ್ಲವೂ 10ಎಂಬಿಪಿಎಸ್ ವೇಗದ ಡೇಟಾ ಸೇವೆ ಒದಗಿಸುತ್ತವೆ. ಆದರೆ, ಇದು ಬಿಎಸ್‌ಎನ್‌ಎಲ್‌ನ ಭಾರತ್ ಫೈಬರ್ ಯೋಜನೆಗಳಿಗೆ ಹೋಲಿಸಿದರೆ ನಿಧಾನವೇ ಆಗಿದೆ. ಅವು ಕ್ರಮವಾಗಿ 100 ಜಿಬಿ, 200 ಜಿಬಿ ಮತ್ತು 500 ಜಿಬಿಯ ಎಫ್‌ಯುಪಿ ಮಿತಿಗಳೊಂದಿಗೆ ಬರುತ್ತವೆ, ನಂತರ ಬಳಕೆದಾರರು, ಕಡಿಮೆ ವೇಗದ ಇಂಟರ್ನೆಟ್‌ನಲ್ಲಿ ಬಳಕೆದಾರರು ವೆಬ್‌ಬ್ರೌಸಿಂಗ್ ಮಾಡಬಹುದು.
ಇತ್ತೀಚಿನ ವರ್ಷಗಳಲ್ಲಿ ಬಿಎಸ್ಸೆನ್ನೆಲ್ ರಿಲಯನ್ಸ್ ಜಿಯೋ, ಏರ್‌ಟೆಲ್, ವೋಡಾಫೋನ್-ಐಡಿಯಾ ಕಂಪನಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ. ನಷ್ಟದಲ್ಲೂ ಇದೆ. ಹಾಗಾಗಿ ಸರ್ಕಾರಿ ಸ್ವಾಮ್ಯದ ಈ ಕಂಪನಿ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಲೇ ಇದೆ.