ಬೆತ್ತಲೆ ಹುಡುಗಿ ವಿಡಿಯೋ ಕಾಲ್ ಬಂದರೆ ಹುಷಾರ್‌!

By Suvarna NewsFirst Published May 23, 2021, 4:55 PM IST
Highlights

ಹೊಸ ಬಗೆಯ ವಿಡಿಯೋ ಕಾಲ್‌ ಮೂಲಕ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ನಡೆಯುತ್ತಿದೆ. ಅಪರಿಚಿತ ವಿಡಿಯೋ ಕರೆಗಳ ಬಗ್ಗೆ ಎಚ್ಚರ ವಹಿಸಿ.

ಇನ್ನು ಮುಂದೆ ನಿಮ್ಮ ಮೊಬೈಲ್‌ಗೆ, ಯಾವುದಾದರೂ ಅಜ್ಞಾತ ನಂಬರ್‌ನಿಂದ ವಿಡಿಯೋ ಕಾಲ್ ಬಂದರೆ ಹುಷಾರಾಗಿರಿ. ಅದು ನಿಮ್ಮನ್ನು ವಂಚಿಸಿ, ನಿಮ್ಮ ಹಣ ಸೆಳೆಯುವ ದೊಡ್ಡದೊಂದು ವಂಚನೆಯ ಜಾಲ ಇರಬಹುದು. ಇದು ಹೇಗೆ ಕಾರ್ಯಾಚರಿಸುತ್ತದೆ ಅಂತೀರಾ? ಇಲ್ಲಿದೆ ಕೆಲವು ಘಟನೆ ನೋಡಿ.

ಭೋಪಾಲ್‌ನ ಒಬ್ಬ ಯುವಕನಿಗೆ, ಫೇಸ್‌ಬುಕ್‌ನಲ್ಲಿ ಒಬ್ಬಾಕೆಯ ಪರಿಚಯ ಆಯಿತು. ಫೇಸ್‌ಬುಕ್‌ನಲ್ಲಿ ಆದ ಪರಿಚಯ, ಮೆಸೆಂಜರ್‌ಗೆ ಬಂತು. ಅಲ್ಲಿ ಆಕೆ ಆತನ ಫೋನ್ ನಂಬರ್‌ ಕೇಳಿದಳು. ನಂತರ ಫೋನ್‌ನಲ್ಲಿ ಚಾಟಿಂಗ್‌ ಶುರುವಾಯಿತು. ನಂತರ ಆಕೆ ಅವಳ ಬೆತ್ತಲೆ ದೇಹದ ಚಿತ್ರಗಳನ್ನು ಕಳಿಸತೊಡಗಿದಳು. ಈ ಯುವಕನಿಗೋ ಭಯಂಕರ ಖುಷಿ. ಒಂದು ದಿನ, ಇಂದು ರಾತ್ರಿ ನಾನು ವಿಡಿಯೋ ಕಾಲ್ ಮಾಡಿ ನನ್ನ ನಗ್ನ ದೇಹವನ್ನಿಡೀ ತೋರಿಸ್ತೀನಿ ಅಂದಳು ಆಕೆ. ಈ ಬ್ರಹ್ಮಚಾರಿ ರಾತ್ರಿಯ ಹೊತ್ತಿಗೆ ಕಾದು ಕೆಂಡವಾಗಿಬಿಟ್ಟ. ರಾತ್ರಿ ವಿಡಿಯೋ ಕಾಲ್ ಬಂತು. ಅದನ್ನು ತೆಗೆದಾಗ ನಿಜಕ್ಕೂ ಅವನಿಗೆ ಅವನ ಕಂಗಳನ್ನೇ ನಂಬಲಾಗಲಿಲ್ಲ! ನಿಜಕ್ಕೂ ಒಬ್ಬಳು ಮಾದಕ ಯುವತಿ!

ಭಾರತಕ್ಕೆ 8 ಲಕ್ಷ ಕೋಟಿ ರೂಪಾಯಿ ಸಹಾಯ ಮಾಡಿದ ಈ ಹುಡುಗ ನಿಮಗೆ ಗೊತ್ತೆ? ...

ನಿಧಾನವಾಗಿ ಒಂದೊಂದೇ ಬಟ್ಟೆ ಸರಿಸು ಮೈಯ ಸೌಂದರ್ಯವನ್ನು ಸ್ವಲ್ಪ ಸ್ವಲ್ಪವೇ ತೋರಿಸುತ್ತಿದ್ದಾಳೆ. ಈ ಮಧ್ಯೆ ಅವಳೂ ಒಂದು ಶರತ್ತು ಹಾಕಿದಳು- ನಾನು ಪೂರ್ತಿ ನಗ್ನ ಆಗಬೇಕಿದ್ದರೆ ನೀನೂ ನಗ್ನವಾಗಬೇಕು ಅಂತ. ಸರಿ, ಅದರಲ್ಲೇನು ಆಗೋದಿದೆ ಅಂತ ಇವನೂ ಬಟ್ಟೆ ಕಳಚಿ ಧಿಂ ರಂಗ ಅಂತ ನಿಂತುಬಿಟ್ಟ.

ಕೂಡಲೇ ಅತ್ತಲಿಂದ ಕಾಲ್ ಕಟ್ ಆಯ್ತು. ಒಂದೇ ನಿಮಿಷದಲ್ಲಿ ಅತ್ತಲಿಂದ ಇನ್ನೊಂದು ಕರೆ. ಈ ಬಾರಿ ಗಂಡು ಸ್ವರ. ''ನೀನು ಬೆತ್ತಲೆಯಾಗಿರೋ ವಿಡಿಯೋವನ್ನು ನಾವು ರೆಕಾರ್ಡ್ ಮಾಡಿಕೊಂಡಿದ್ದೇವೆ. ನಮಗೆ ಐವತ್ತು ಸಾವಿರ ರೂಪಾಯಿ ಕಳಿಸಿಕೊಡು. ಇಲ್ಲ ಅಂದರೆ ಆ ವಿಡಿಯೋವನ್ನು ನಿನ್ನ ಫೇಸ್‌ಬುಕ್, ಬೇರೆ ಎಲ್ಲಾ ಕಡೆ ಹಾಕಿ ನಿನ್ನ ಮರ್ಯಾದೆ ಹರಾಜು ಹಾಕುತ್ತೀವಿ.'' ಬೆಚ್ಚಿ ಹೋದ ಈ ಯುವಕ ಅವರು ಕೇಳಿದಷ್ಟು ಹಣ ಕಳಿಸಿಕೊಟ್ಟ. ಇದು ಹೊಸ ಬಗೆಯ ವಂಚನೆಯ ಪರಿ. 

ಟೆಸ್ಲಾ ಕಾಯಿಲ್ ಮರು ಸೃಷ್ಟಿಸಿದ ತಿರುವಂಥಪುರದ ಹವ್ಯಾಸಿ ವಿಜ್ಞಾನಿ! ...

ಗಂಡಸರು ಇಂಥ ವಂಚನೆಗೆ ಬಲು ಬೇಗ ಬಲಿಯಾಗುತ್ತಾರೆ ಎಂಬುದನ್ನು ವಂಚಕರು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಈ ಬಗೆಯ ವಂಚನೆಯ ಜಾಲಗಳು ದಿಲ್ಲಿ. ಗುರುಗಾಂವ್, ಲಖನೌ ಮುಂತಾದ ಕಡೆಗಳಿಂದ ಕಾರ್ಯಾಚರಿಸುತ್ತಿವೆ. ಪ್ರಾಕ್ಸಿ ಸರ್ವರ್‌ನಿಂದ ಇವರು ಕಾರ್ಯಾಚರಿಸುವುದರಿಂದ ಇವುಗಳನ್ನು ಸುಲಭವಾಗಿ ಪತ್ತೆ ಹಚ್ಚಲೂ ಸಾಧ್ಯವಿಲ್ಲ. 

ಕೆಲವರು ಮತ್ತೆ ಮತ್ತೆ ಹಣ ನೀಡಿ ಮೋಸ  ಹೋಗುತ್ತಲೇ ಇರುತ್ತಾರೆ. ಈ ಕೇಡಿಗಳು ಒಮ್ಮೆ ಇಂಥ ವಂಚನೆಗೊಳಗಾದ ಗಂಡಸರಿಂದ ಹಣ ವಸೂಲಿ ಮಾಡಿ ಸುಮ್ಮನಾಗುವುದಿಲ್ಲ. ಈ ಮಿಕ ಹೆದರುತ್ತದೆ ಎಂದು ಖಾತ್ರಿಯಾಗುವುದರಿಂದ, ಮತ್ತೊಮ್ಮೆ ಮಗದೊಮ್ಮೆ ಫೋನ್ ಮಾಡಿ ಹಣ ಕೇಳುತ್ತಾರೆ. ಹೀಗೆ ಲಕ್ಷಾಂತರ ರೂಪಾಯಿ ಕಳೆದುಕೊಂಡವರು ಇದ್ದಾರೆ. ಕೆಲವರು ಒಂದೆರಡು ಬಾರಿ ಹೀಗೆ ಹಣ ಕೊಟ್ಟು, ಇವರ ಬ್ಲ್ಯಾಕ್‌ಮೇಲ್ ಇನ್ನು ತಡೆಯಲು ಸಾಧ್ಯವಿಲ್ಲ ಎನಿಸಿದಾಗ ಪೊಲೀಸರ ಮೊರೆ ಹೋಗುತ್ತಾರೆ.

ಮೇ 15ರ ನಂತರ ವಾಟ್ಸಾಪ್ ಚಾಟ್‌ಗೆ ಸಿಗಲಿಕ್ಕಿಲ್ಲ! ಗೊಂದಲಕ್ಕೆ ಇಲ್ಲಿವೆ ಉತ್ತರ ...

ಕೆಲವರು ಮಾತ್ರ ಒಂದೇ ಒಂದು ಕರೆಗೆ ಕಾಲ್ ಕಟ್ ಮಾಡಿ ಸೈಬರ್‌ ಕ್ರೈಮ್‌ ಪೊಲೀಸರತ್ತ ಹೋಗುವ ಧೈರ್ಯ ತೋರಿಸುತ್ತಾರೆ.
ವಂಚನೆಗೊಳಗಾಗುವವರನ್ನು ಹಣ ನೀಡುವಂತೆ ಮಾಡುವುದು ಮಾನ- ಮರ್ಯಾದೆಯ ಪ್ರಶ್ನೆ. ತಾನು ಹೆಣ್ಣು ಕಂಡರೆ ಜೊಲ್ಲು ಸುರಿಸುವವನು ಅಂತ ಎಲ್ಲರಿಗೂ ಗೊತ್ತಾಗಿ ಬಿಡುತ್ತದಲ್ಲ, ತನ್ನ ನಗ್ನ ವಿಡಿಯೋಗಳು ಪರಿಚಿತ ವಲಯದಲ್ಲಿ ತನ್ನ ಮಾನ ತೆಗೆಯುತ್ತದಲ್ಲ ಎಂಬುದು  ಇಂಥವರಿಗೆ ಸಾವಿಗಿಂತಲೂ ಘೋರವಾಗಿ ಕಾಣುತ್ತದೆ. ಆದ್ದರಿಂದ ಹಣ ಕೊಟ್ಟು ಸುಮ್ಮನಾಗಿಸಲು ಯತ್ನಿಸುತ್ತಾರೆ. ಆದರೆ ಅವರ ಹಣದ ದಾಹ ತಣಿಯುವುದೇ ಇಲ್ಲ.

ಇದಕ್ಕೆ ಬಲಿಯಾಗದಿರಲು ಏನು ಮಾಡಬೇಕು?

ಆನ್‌ಲೈನ್‌ನಲ್ಲಿ ಎಲ್ಲರೂ ಮೊದಲು ಪಾಲಿಸಬೇಕಾದ ಒಂದು ಥಂಬ್ ರೂಲ್‌ ಎಂದರೆ, ಯಾರೇ ಅಪರಿಚಿತರನ್ನೂ ನಂಬದೆ ಇರುವುದು. ಯಾವುದೇ ಅಪರಿಚಿತ ನಂಬರ್‌ನಿಂದ ವಿಡಿಯೋ ಕರೆ ಬಂದರೂ ಸ್ವೀಕರಿಸದೆ ಇರುವುದು. ಸಾಮಾನ್ಯ ಕರೆಗಳನ್ನು ಸ್ವೀಕರಿಸುವಾಗಲೂ ಎಚ್ಚರ ಬೇಕು. ವಾಟ್ಸ್ಯಾಪ್ ಅಥವಾ ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ಗಳನ್ನು ಸ್ವೀಕರಿಸುವಾಗ ಎಚ್ಚರ. ಯುವತಿಯರು ಸುಮ್ಮಸುಮ್ಮನೇ ಯಾರಿಗೂ ಫ್ರೆಂಡ್‌ ರಿಕ್ವೆಸ್ಟ್ ಕಳಿಸುವುದೇ ಇಲ್ಲ ಎಂಬುದನ್ನು ಅರಿತರೆ ಪುರುಷರು ಕ್ಷೇಮ. ಹಾಗೆಯೇ ಯುವತಿಯರೂ ಯಾವುದೇ ಸುಂದರಾಂಗ ಚೆಲುವ ಕಂಡನೆಂದು ಆತನಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸುವುದಾಗಲೀ ಅಂಥವರ ರಿಕ್ವೆಸ್ಟ್ ಸ್ವೀಕರಿಸುವುದಾಗಲೀ, ಅವರೊಡನೆ ಚಾಟ್ ಮುಂದುವರಿಸುವುದಾಗಲೀ, ವಿಡಿಯೋ ಕಾಲ್ ಅಟೆಂಡ್‌ ಮಾಡುವುದಾಗಲೀ ಮಾಡಬೇಡಿ. 

click me!