44,900 ರೂ. ಖರೀದಿಸಿ 5000 ರೂಪಾಯಿ ಕ್ಯಾಶ್‌ಬ್ಯಾಕ್ ಪಡೆಯಿರಿ

By Suvarna News  |  First Published Jan 18, 2021, 4:21 PM IST

ಕಳೆದ ವರ್ಷವಷ್ಟೇ ಚಾಲನೆಗೊಳಗಾಗಿರುವ ಆಪಲ್ ಸ್ಟೋರ್ ಇಂಡಿಯಾ ಕೂಡ ಹೊಸ ಗ್ರಾಹಕರನ್ನು ಸೆಳೆಯಲು ಆಫರ್‌ಗಳಿಗೆ ಶರಣಾಗಿದೆ. ಆಪಲ್ ಸ್ಟೋರ್‌ನಲ್ಲಿ ಖರೀದಿಸುವ ಗ್ರಾಹಕರಿಗೆ 5000 ರೂಪಾಯಿವರೆಗೂ ಆಫರ್ ನೀಡಲು ಮುಂದಾಗಿದೆ. ಇದು ಸೀಮಿತ ಅವಧಿಯ ಆಫರ್ ಆಗಿದೆ. ಜೊತೆಗೆ ಈ ಮೂಲಕ ಎದುರಾಳಿ ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ ಕಂಪನಿ.


ಆನ್‌ಲೈನ್‌ ಶಾಪಿಂಗ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಆಪಲ್ ಸ್ಟೋರ್ ಇಂಡಿಯಾ ಬೊಂಬಾಟ್ ಕ್ಯಾಶ್ ಬ್ಯಾಕ್‌ ಆಫರ್ ಘೋಷಿಸಿದೆ. ಆದರೆ, ಈ ಕ್ಯಾಶ್‌ಬ್ಯಾಕ್ ಆಫರ್ ಸೀಮಿತ ಅವಧಿಗೆ ಮಾತ್ರವೇ ಲಭ್ಯವಿದೆ.

ಕಳೆದ ವರ್ಷವಷ್ಟೇ ಆಪಲ್ ಆನ್‌ಲೈನ್ ಶಾಪ್ ಕಾರ್ಯಾರಂಭ ಮಾಡಿದೆ. ಈ ಹಿನ್ನೆಲೆಯಲ್ಲಿ ಹೊಸ ಗ್ರಾಹಕರನ್ನು ಸೆಳೆಯುವುದಕ್ಕಾಗಿ ಆಫರ್‌ಗಳನ್ನು ಘೋಷಿಸುತ್ತಿದೆ ಮತ್ತು ಆ ಮೂಲಕ ಪ್ರತಿಸ್ಪರ್ಧಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗೆ ಪೈಪೋಟಿಯೊಡ್ಡುವ ಪ್ರಯತ್ನ ಮಾಡುತ್ತಿದೆ. ಆಪಲ್ ಸ್ಟೋರ್‌ನಲ್ಲಿ ಗ್ರಾಹಕರು 44,900 ರೂ.ವರೆಗೂ ಖರೀದಿಸಿದರೆ ಅಂಥ ಗ್ರಾಹಕರಿಗೆ 5000 ರೂಪಾಯಿವರೆಗೂ ಕ್ಯಾಶ್‌ಬ್ಯಾಕ್ ದೊರೆಯಲಿದೆ. ಈ ಕ್ಯಾಶ್‌ಬ್ಯಾಕ್ ಆಫರ್ ಸೀಮಿತ ಅವಧಿಯದ್ದಾಗಿದೆ.

Tap to resize

Latest Videos

undefined

ಕೈಗೆಟುಕುವ ದರದ ಒನ್‌ಪ್ಲಸ್‌ 9 ಲೈಟ್ ಸ್ಮಾರ್ಟ್‌ಫೋನ್ ಶೀಘ್ರ ಮಾರುಕಟ್ಟೆಗೆ

5000 ರೂಪಾಯಿವರೆಗಿನ ಕ್ಯಾಶ್‌ಬ್ಯಾಕ್ ಆಫರ್ ಇದೇ ಜನವರಿ 21ರಿಂದ ಆರಂಭವಾಗಿ 28ಕ್ಕೆ ಮುಕ್ತಾಯವಾಗಲಿದೆ. ಹಾಗಾಗಿ, ಗ್ರಾಹಕರು ಈ ಕ್ಯಾಶ್‌ಬ್ಯಾಕ್ ಆಫರ್‌ ಸೀಮಿತ ಅವಧಿಯಲ್ಲಿ ಪಡೆದುಕೊಳ್ಳಬೇಕಾಗುತ್ತದೆ. ಈ ಅವಧಿಯಲ್ಲಿ ಆಪಲ್ ಸ್ಟೋರ್‌ನಲ್ಲಿ 44,900 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿ ಮಾಡಿದರೆ 5000 ರೂ. ಕ್ಯಾಶ್‌ಬ್ಯಾಕ್ ದೊರೆಯಲಿದೆ. ಆಯ್ದ ಬ್ಯಾಂಕು ಕಾರ್ಡ್‌ಗಳ ಮೇಲೂ ಆರು ತಿಂಗಳವರೆಗೆ ನೋ ಕಾಸ್ಟ್ ಇಎಂಐ ಆಫರ್ ಸಿಗಲಿದೆ. ಈ ಮೊದಲೇ ಹೇಳಿದಂತೆ ಈ ಆಫರ್ ಸಿಮೀತ ಅವಧಿಯದ್ದಾಗಿದ್ದು, ಜನವರಿ 28ಕ್ಕೆ ಮುಕ್ತಾಯವಾಗಲಿದೆ.

ಇನ್ನು ಆಪಲ್ ಸ್ಟೋರ್ ಜಾಲತಾಣದ ಪ್ರಕಾರ, ಕ್ಯಾಶ್‌ಬ್ಯಾಕ್ ಆಫರ್ ಅರ್ಹ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ಸ್ ಮಾತ್ರ ಲಭ್ಯವಿದದ್ದು ಇಎಂಐ ಆಫರ್ ಕೂಡ ಇದೇ ಬ್ಯಾಂಕಿನ ಕಾರ್ಡುಗಳಿಗೆ ಅಪ್ಲೈ ಆಗಲಿದೆ. ಅಂದರೆ, ಗ್ರಾಹಕರು ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ ಮೂಲಕ ಆಪಲ್‌ ಸ್ಟೋರ್‌ನಲ್ಲಿ ಖರೀದಿಸಿದರೆ 5000 ರೂ. ಕ್ಯಾಶ್‌ಬ್ಯಾಕ್ ಸಿಗಲಿದೆ. ಹಾಗೆಯೇ ಎಚ್‌ಡಿಎಫ್‌ಸಿ ಕಾರ್ಡುಗಳ ಮೇಲೆ ಇಎಂಐ ಆಫರ್ ಅನ್ನು ಕಂಪನಿ ನೀಡಲಿದೆ. ಆಪಲ್ ಸ್ಟೋರ್ ಫಾರ್ ಎಜುಕೇಷನ್ ಪ್ರೈಸಿಂಗ್‌ಗೆ ಈ ಆಫರ್ ಅಪ್ಲೈ ಆಗುವುದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.

ಗ್ರಾಹಕರು ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೊಂದಿದೆ. ಏನೆಂದರೆ, ಆಪಲ್ ಸ್ಟೋರ್‌ನಲ್ಲಿ ಗ್ರಾಹಕರು 44,900 ಮತ್ತು ಅದಕ್ಕಿಂತ ಮೇಲಿನ ಒಂದೇ ಖರೀದಿಗೆ ಮಾತ್ರವೇ ಈ ಕ್ಯಾಶ್‌ಬ್ಯಾಕ್ ಆಫರ್ ಅಪ್ಲೈ ಆಗುವುದಿಲ್ಲ. ಅಂದರೆ, ಗ್ರಾಹಕರು ಬಹು ಆರ್ಡರ್‌ಗಳನ್ನು ಸಂಯೋಜಿಸಿದರೆ ಈ ಆಫರ್ ದೊರೆಯುವುದಿಲ್ಲ.

ಸ್ಯಾಮ್ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ ರಿಲೀಸ್; ಚಾರ್ಜರ್, ಇಯರ್‌ಫೋನ್ ಫ್ರೀ ಸಿಗಲ್ಲ!

ಇಷ್ಟು ಮಾತ್ರವಲ್ಲದೇ, ಎಲ್ಲಾ ಉತ್ಪನ್ನ ವಿತರಿಸಿದ ನಂತರ ಕ್ಯಾಶ್‌ಬ್ಯಾಕ್ ಪಾವತಿ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ. ಒಮ್ಮೆ ಈ ಪ್ರಕ್ರಿಯೆ ಆರಂಭವಾದರೆ ಕ್ಯಾಶ್‌ಬ್ಯಾಕ್ ಉತ್ತಮ ಪ್ರಯತ್ನದ ಆಧಾರದ ಮೇಲೆ ನಿಮ್ಮ ಖಾತೆಗೆ  ಕ್ಯಾಶ್ ಬ್ಯಾಕ್ ಏಳು ದಿನಗಳೊಳಗೆ ಜಮೆಯಾಗುತ್ತದೆ. ವಹಿವಾಟು ಆದೇಶ ಹೊಂದಾಣಿಕೆಗಳು ಕ್ಯಾಶ್‌ಬ್ಯಾಕ್ ಅನ್ನು ಮರು ಲೆಕ್ಕಾಚಾರಕ್ಕೆ ಕಾರಣವಾಗುತ್ತವೆ. ಯಾವುದೇ ಪೂರ್ವ ಸೂಚನೆ ಇಲ್ಲದೆ ಆಫರ್ ಅನ್ನು ಪರಿಷ್ಕರಿಸಬಹುದು ಅಥವಾ ಹಿಂಪಡೆಯಬಹುದು. ಸೀಮಿತ ಅವಧಿಗೆ ಆಫರ್ ಮಾನ್ಯವಾಗಿರುತ್ತದೆ ಎಂದು ಕಂಪನಿ ಇದೇ ವೇಳೆ ಸ್ಪಷ್ಟಪಡಿಸಿದೆ. ಹಾಗಾಗಿ, ಈ ಆಫರ್ ಪಡೆಯುವ ಮುನ್ನ ಗ್ರಾಹಕರು ಎಲ್ಲವನ್ನು ತಿಳಿದುಕೊಂಡೇ ಮುಂದುವರಿಯಬೇಕು.

2021ರ ಜನವರಿ  21ರಿಂದ 28ವರೆಗೆ ಮಾತ್ರವೇ ಲಭ್ಯವಿರುವ ಆಪಲ್ ಸ್ಟೋರ್‌ನ ಈ ಆಫರ್‌ ಬಳಸಿಕೊಳ್ಳಬಹುದು. ಆನ್‌ಲೈನ್ ಶಾಪಿಂಗ್‌ನಲ್ಲಿ ಈಗ ಪೈಪೋಟಿ ಹೆಚ್ಚು ಈ ಹಿನ್ನೆಲೆಯಲ್ಲಿ ಸ್ಮಾರ್ಟ್‌ಫೋನ್‌ ವಲಯದ ದೈತ್ಯ ಕಂಪನಿ ತನ್ನ ಆಪಲ್ ಸ್ಟೋರ್ ಮೂಲಕ ಹೊಸ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.

ಸ್ಮಾರ್ಟ್ ಮಾಸ್ಕ್ ಗೊತ್ತಾ ನಿಮಗೆ? ಗೊತ್ತಿಲ್ಲ ಎಂದರೆ ಓದಿ...

click me!