3,999 ರೂ. ಏರ್ಟೆಲ್ ಎಕ್ಸ್‌ಟ್ರೀಮ್ ಪ್ಲ್ಯಾನ್‌ನಲ್ಲಿ 1 ಜಿಬಿಪಿಎಸ್ ವೈ ಫೈ ರೂಟರ್!

By Suvarna NewsFirst Published Jan 18, 2021, 4:03 PM IST
Highlights

ಭಾರತೀಯ ಟೆಲಿಕಾಂ ವಲಯದ ಪ್ರಮುಖ ಕಂಪನಿಯಾಗಿರುವ ಏರ್‌ಟೆಲ್ ಇದೀಗ ತನ್ನ ಏರ್ಟೆಲ್ ಎಕ್ಸ್‌ಟ್ರೀಮ್ ಫೈಬರ್ 3,999 ರೂ. ಪ್ಲ್ಯಾನ್‌ನಲ್ಲಿ ಬಳಕೆದಾರರಿಗೆ ಕಾಂಪ್ಲಿಮೆಂಟರಿಯಾಗಿ 1 ಜಿಬಿಪಿಎಸ್ ವೈ ಫೈ ರೂಟರ್ ನೀಡುವ ಆಫರ್ ಮಾಡಿದೆ. ಇದರಿಂದ ಸಣ್ಣ ಕಚೇರಿಗಳು ಮತ್ತು ಮನೆಯ  ಇಂಟರ್ನೆಟ್‌ ಬಳಕೆಗೆ ಹೆಚ್ಚು ಅನುಕೂಲವಾಗಲಿದೆ.

ನೀವು ಏರ್‌ಟೆಲ್ ಎಕ್ಸ್‌ಟ್ರೀಮ್ ಫೈಬರ್ ಬಳಕೆದಾರರೇ? ಹೌದು ಎಂದಾದರೆ ನಿಮಗಿದು ಖುಷಿಯ ಸುದ್ದಿ. ಏನೆಂದರೆ, ಏರ್‌ಟೆಲ್ ಎಕ್ಸ್‌ಟ್ರೀಮ್ ಫೈಬರ್ 3,999 ರೂ. ಪ್ಲ್ಯಾನ್ ಆಯ್ಕೆ ಮಾಡಿಕೊಂಡ ಗ್ರಾಹಕರಿಗೆ, 1 ಜಿಬಿಪಿಎಸ್ ವೈ ಫೈ ರೂಟರ್‌ ಕಾಂಪ್ಲಿಮೆಂಟರಿಯಾಗಿ ಸಿಗುತ್ತಿದೆ.

ಈ ಪ್ಲ್ಯಾನ್ ಅನ್ವಯ ಏರ್‌ಟೆಲ್ ಎಕ್ಸ್‌ಟ್ರೀಮ್ ಬಳಕೆದಾರರು ವೈಫೈ ಮೂಲಕ 1 ಜಿಬಿಪಿಎಸ್  ಡೇಟಾವನ್ನು ಪಡೆದುಕೊಳ್ಳಬಹುದು. ಅಂದರೆ, ತಡೆರಹಿತ ವೇಗದ ಡೇಟಾಗಾಗಿ ಬಳಕೆದಾರರು ಲ್ಯಾನ್ ಕೇಬಲ್‌ಗೆ ಮೊರೆ ಹೋಗಬೇಕಾದ ಅಗತ್ಯ ಬೀಳುವುದಿಲ್ಲ.

Latest Videos

ಕೈಗೆಟುಕುವ ದರದ ಒನ್‌ಪ್ಲಸ್‌ 9 ಲೈಟ್ ಸ್ಮಾರ್ಟ್‌ಫೋನ್ ಶೀಘ್ರ ಮಾರುಕಟ್ಟೆಗೆ

ಅತ್ಯಾಧುನಿಕ 4×4 Wi-Fi router ಮನೆಗಳು ಮತ್ತು ಸಣ್ಣ ಕಚೇರಿಗಳಲ್ಲಿ 1ಜಿಬಿಪಿಎಸ್‌ ವೈಫೈ ಪೂರೈಸಲು ನೆರವಾಗುತ್ತದೆ. ಆನ್‌ಲೈನ್ ಗೇಮಿಂಗ್, ಆನಿಮೇಷನ್ ಮತ್ತು ಕಚೇರಿ ಕೆಲಸ, ಮನೆಯಲ್ಲಿ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ಅಂದರೆ, ಹೆಚ್ಚಿನ ಸಂಖ್ಯೆಯಲ್ಲಿ ಸಂಪರ್ಕಗಳು ಇದ್ದಲ್ಲಿ ಬಳಕೆದಾರರಿಗೆ ತಡೆರಹಿತ ಕನೆಕ್ಷನ್ ಒದಗಿಸಲು ನೆರವಾಗುತ್ತದೆ.

ವಿಶ್ವಾಸಾರ್ಹ ಮತ್ತು ವೇಗದ ಸಂಪರ್ಕದ ಅಗತ್ಯವಿರುವ ಸ್ಟಾಕ್ ಟ್ರೇಡಿಂಗ್ ಮತ್ತು ಆನ್‌ಲೈನ್ ಸಹಯೋಗದಂತಹ ಅಪ್ಲಿಕೇಶನ್‌ಗಳಿಗಾಗಿ ಅನೇಕ ಹೈಸ್ಪೀಡ್ ಸಂಪರ್ಕಗಳನ್ನು ಪಡೆಯಲು ಸಣ್ಣ ಕಚೇರಿಗಳು ಈ ರೂಟರ್‌ನಿಂದ ಸಾಧ್ಯವಾಗಲಿದೆ. ಜೊತೆಗೆ ಹೆಚ್ಚಿನ ವೇಗದ ಸಂಪರ್ಕವನ್ನು ಪಡೆಯಲು ಸಾಧ್ಯವಾಗುತ್ತದೆ.

ಏರ್‌ಟೆಲ್ ಎಕ್ಸ್‌ಟ್ರೀಮ್ ಫೈಬಲ್ ವಿಐಪಿ ತಿಂಗಳ ಪ್ಲ್ಯಾನ್(3,999 ರೂ.) ಅನಿಯಂತ್ರಿತ ಇಂಟರ್ನೆಟ್, 1ಜಿಬಿಪಿಎಸ್ ಸ್ಪೀಡ್, ಅನ್‌ಲಿಮಿಟೆಡ್ ಕಾಲ್ಸ್/ಎಸ್‌ಟಿಡಿ ಕಾಲ್ಸ್‌ಗಳನ್ನು ಆಫರ್‌ ಆಗಿ ನೀಡುತ್ತದೆ. ಹೊಸ ವೈಫೈ ರೂಟರ್ ಮಾತ್ರವಲ್ಲದೇ, ಕಾಂಪ್ಲಿಮೆಂಟರಿ ಏರ್ಟೆಲ್ ಎಕ್ಸ್‌ಟ್ರೀಮ್ ಬಾಕ್ಸ್‌ನೊಂದಿಗೆ ಏರ್‌ಟೆಲ್ ಎಕ್ಸ್‌ಟ್ರೀಮ್ ಫೈಬರ್ 3,999 ರೂ. ಪ್ಲ್ಯಾನ್ ನಿಮಗೆ ಸಿಗುತ್ತದೆ. ಈ ಬಾಕ್ಸ್ ನಿಮಗೆ 550 ಚಾನೆಲ್‌ಗಳು ಓಟಿಟೆ ಕಂಟೆಂಟ್ ಸಿಗುವಂತೆ ಮಾಡುತ್ತದೆ. ಏರ್ಟೆಲ್ ಎಕ್ಸ್‌ಟ್ರೀಮ್ ಆಪ್ ಲೈಬ್ರರಿಯಲ್ಲಿ 10 ಸಾವಿರ ಸಿನಿಮಾಗಳಿವೆ, ಈ ವೇದಿಕೆಯಲ್ಲಿ ಆರು ಒಟಿಟಿ ಆಪ್‌ಗಳು ಮತ್ತು ಐದು ಸ್ಟೂಡಿಯೋಗಳ ಕಂಟೆಂಟ್ ಗ್ರಾಹಕರಿಗೆಸಿಗುತ್ತದೆ. ಈ ಪ್ಲ್ಯಾನ್‌ನಲ್ಲಿ ನಿಮಗೆ ಅಮಜಾನ್ ಪ್ರೈಮ್ ವಿಡಿಯೋ ಮತ್ತು ಝೀ5 ಚಂದಾದಾರಿಕೆಯನ್ನು ನೀಡುತ್ತದೆ. ಒಟ್ಟಿನಲ್ಲಿ ಈ ಪ್ಲ್ಯಾನ್ ನಿಮಗೆ ಅತ್ಯುತ್ತಮವಾದುದನ್ನೇ ಒದಗಿಸುತ್ತದೆ.

ನಿತ್ಯ 1.5 ಜಿಬಿ ಡೇಟಾ!
ಏರ್‌ಟೆಲ್ 199 ರೂ. ಪ್ಲ್ಯಾನ್‌ ಅನ್ನು ಪರಿಷ್ಕರಿಸಿದ್ದು, ಇದೀಗ ದಿನಕ್ಕೆ 1.5 ಜಿಬಿ ಇಂಟರ್ನೆಟ್‌ ನೀಡಲು ಮುಂದಾಗಿದೆ. ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಮೊದಲು 199 ರೂ. ಪ್ಲ್ಯಾನ್‌ನಲ್ಲಿ ಕಂಪನಿ 1 ಜಿಬಿ ಡೇಟಾ ನೀಡುತ್ತಿತ್ತು, ಇದೀಗ ಅದನ್ನು ಪರಿಷ್ಕರಿಸಿ 1.5 ಜಿಬಿಗೆ ಏರಿಕೆ ಮಾಡಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ ರಿಲೀಸ್; ಚಾರ್ಜರ್, ಇಯರ್‌ಫೋನ್ ಫ್ರೀ ಸಿಗಲ್ಲ!

ಈ ಪರಿಷ್ಕೃತ ಪ್ಲ್ಯಾನ್‌ನಲ್ಲಿ ಅನಿಯಂತ್ರಿತ ಕರೆಗಳು, ದಿನಕ್ಕೆ 100 ಎಸ್‌ಎಂಎಸ್‌ಗಳು, ಉಚಿತ ಹೆಲೋಟೂನ್ಸ್, ವ್ಯಾಂಕ್ ಮ್ಯೂಸಿಕ್, ಏರ್‌ಟೆಲ್ ಎಕ್ಸ್‌ಟ್ರೀಮ್ ಆಪ್ ಸಬ್ಸಕ್ರಿಪ್ಷನ್ ಕೂಡ ದೊರೆಯಲಿದೆ. ಈ ಏರ್‌ಟೆಲ್ ಎಕ್ಸ್‌ಟ್ರೀಮ್‌ನಲ್ಲಿ 350 ಅಧಿಕೂ ಲೈವ್ ಚಾನಲ್‌ಗಳಿವೆ. ಈ ಪ್ಲ್ಯಾನ್ ವ್ಯಾಲಿಡಿಟಿ 24 ದಿನಗಳವರೆಗೆ ಇರುತ್ತದೆ. ಆದರೆ, ಈ ಪ್ಯಾಕ್ ಕೇವಲ ಕೆಲವು ಸಬ್ಸ್‌ಕ್ರೈಬರ್‌ರಿಗೆ ಮಾತ್ರ ಕಾಣುತ್ತಿದೆ ಎಂದು ಟೆಲಿಕಾಮ್‌ಟಾಕ್ ರಿಪೋರ್ಟ್ ಮಾಡಿದೆ ಎಂದು ಹಲವು ವೆಬ್‌ಸೈಟ್‌ಗಳು ವರದಿ ಮಾಡಿವೆ.

ಈಗಾಗಲೇ ಏರ್‌ಟೆಲ್ ತನ್ನ 249 ರೂ. ಪ್ರಿಪೇಡ್ ಪ್ಲ್ಯಾನ್‌ನಲ್ಲಿ ದಿನಕ್ಕೆ 1.5 ಜಿಬಿ ಡೇಟಾ ನೀಡುತ್ತಿದೆ. ಈ ಪ್ಲ್ಯಾನ್ ವ್ಯಾಲಿಡಿಟಿ 28 ದಿನಗಳವರೆಗೆ ಇದೆ. ಏರ್‌ಟೆಲ್‌ನ ಎಲ್ಲ ಟೆಲಿಕಾಂ ಸರ್ಕಲ್‌ಗಳಲ್ಲಿ ಈ ಸೇವೆ ಲಭ್ಯವಿದೆ. ಆದರೆ, ಪರಿಷ್ಕೃತ ಪ್ಲ್ಯಾನ್ ಮಾತ್ರ ಸದ್ಯಕ್ಕೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಟೆಲಿಕಾಂ ಸರ್ಕಲ್‌ಗಳಲ್ಲಿ ಲಭ್ಯವಿದೆ.

ಸ್ಮಾರ್ಟ್ ಮಾಸ್ಕ್ ಗೊತ್ತಾ ನಿಮಗೆ? ಗೊತ್ತಿಲ್ಲ ಎಂದರೆ ಓದಿ...

click me!