iPhone Tap to Pay: ಕಾಂಟ್ಯಾಕ್ಟ್‌ಲೆಸ್ ಪೇಮೆಂಟ್‌ ವೈಶಿಷ್ಟ್ಯ ಘೋಷಿಸಿದ ಆ್ಯಪಲ್‌!

By Suvarna News  |  First Published Feb 9, 2022, 11:10 AM IST

ಟ್ಯಾಪ್ ಟು ಪೇ ವೈಶಿಷ್ಟ್ಯವು ಚಿಲ್ಲರೆ ವ್ಯಾಪಾರಿಗಳು ತಮ್ಮ ಐಫೋನನ್ನು ಸರಳ ಟ್ಯಾಪ್ ಮಾಡುವ ಮೂಲಕ ಆ್ಯಪಲ್‌ ಪೇ, ಸಂಪರ್ಕವಿಲ್ಲದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಮತ್ತು ಇತರ ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ಪಾವತಿಗಳನ್ನು ಸ್ವೀಕರಿಸಲು ಅನುಮತಿಸುತ್ತದೆ.


Tech Desk: ಆ್ಯಪಲ್‌ ಐಫೋನ್‌ನಲ್ಲಿ ಹೊಸ ಟ್ಯಾಪ್‌ ಟು ಪೇ (Tap to Pay) ವೈಶಿಷ್ಟ್ಯವನ್ನು ಪರಿಚಯಿಸಿದೆ. ಹೊಸ ವೈಶಿಷ್ಟ್ಯವು ಸಣ್ಣ ವ್ಯಾಪಾರಗಳು, ದೊಡ್ಡ ಚಿಲ್ಲರೆ ವ್ಯಾಪಾರಿಗಳು ತಮ್ಮ ತಮ್ಮ ಐಫೋನನ್ನು ಸರಳವಾಗಿ ಟ್ಯಾಪ್ ಮಾಡುವ ಮೂಲಕ ಆ್ಯಪಲ್‌ ಪೇ (Apple Pay), ಸಂಪರ್ಕವಿಲ್ಲದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಮತ್ತು ಇತರ ಡಿಜಿಟಲ್ ವ್ಯಾಲೆಟ್‌ಗಳ  ಮೂಲಕ ಪಾವತಿಗಳನ್ನು ಸ್ವೀಕರಿಸಲು ಅನುಮತಿಸುತ್ತದೆ. ಹೀಗಾಗಿ ಹೊಸ ವೈಶಿಷ್ಟ್ಯದಲ್ಲಿ ಸಂಪರ್ಕರಹಿತ ಪಾವತಿಗಳನ್ನು ಮಾಡಲು ಯಾವುದೇ ಹೆಚ್ಚುವರಿ ಹಾರ್ಡ್‌ವೇರ್ ಅಗತ್ಯವಿರುವುದಿಲ್ಲ. 

ಐಫೋನ್‌ನಲ್ಲಿ ಟ್ಯಾಪ್ ಟು ಪೇ ವೈಶಿಷ್ಟ್ಯವು ಪಾವತಿ ಪ್ಲಾಟ್‌ಫಾರ್ಮ್‌ಗಳು, ಅಪ್ಲಿಕೇಶನ್ ಡೆವಲಪರ್‌ಗಳಿಗೆ ತಮ್ಮ ಅಪ್ಲಿಕೇಶನ್‌ಗಳಲ್ಲಿ ಸಂಯೋಜಿಸಲು ಲಭ್ಯವಿರುತ್ತದೆ ಎಂದು ಆಪಲ್ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ. ಸಂಪರ್ಕರಹಿತ ಪಾವತಿ ವೈಶಿಷ್ಟ್ಯಕ್ಕಾಗಿ ವೀಸಾ, ಮಾಸ್ಟರ್‌ಕಾರ್ಡ್, ಅಮೇರಿಕನ್ ಎಕ್ಸ್‌ಪ್ರೆಸ್ ಮತ್ತು ಡಿಸ್ಕವರ್ ಸೇರಿದಂತೆ ಪ್ರಮುಖ ಪಾವತಿ ನೆಟ್‌ವರ್ಕ್‌ಗಳೊಂದಿಗೆ ಆ್ಯಪಲ್‌ ಪಾಲುದಾರಿಕೆ ಹೊಂದಿದೆ.

Tap to resize

Latest Videos

undefined

ಇದನ್ನೂ ಓದಿ: Unlock iPhone with Mask: ಮಾಸ್ಕ್‌ ಧರಿಸಿಯೂ ಮುಖ ಗುರುತಿಸುವ ಫೀಚರ್ ಬಿಡುಗಡೆ!

ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿರುವ ಈ ವೈಶಿಷ್ಟ್ಯವು, ಐಫೋನ್‌ಗಳ ನಡುವೆ ಸೇರಿದಂತೆ ಎಲ್ಲಾ ರೀತಿಯ ಪಾವತಿಗಳನ್ನು ಮಾಡಲು ಕಡಿಮೆ ಶ್ರೇಣಿಯ ವೈರ್‌ಲೆಸ್ ಸಂಪರ್ಕ ತಂತ್ರಜ್ಞಾನ (Near Field Communications) ಬಳಸುತ್ತದೆ ಎಂದು ಆಪಲ್ ಮಂಗಳವಾರ ತಿಳಿಸಿದೆ. ಮೊದಲು ಫಿನ್‌ಟೆಕ್ ಸೇವೆ ನೀಡುವ ಸ್ಟ್ರೈಪ್ (Stripe) ಮತ್ತು ಶಾಪಿಫಾಯ್ (Shopify) ಪಾಯಿಂಟ್‌ಗಳಿಗೆ ಯುಎಸ್ನಲ್ಲಿ 2022ರ ಕೊನೆಯಲ್ಲಿ ವ್ಯಾಪಾರ ಗ್ರಾಹಕರಿಗೆ "ಟ್ಯಾಪ್ ಟು ಪೇ" ವೈಶಿಷ್ಟ್ಯವನ್ನು ನೀಡಲಾಗುವುದು ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಫಿನ್‌ಟೆಕ್ ಸೇವೆ ಹೆಚ್ಚಿಸುತ್ತಿರುವ  ಆ್ಯಪಲ್‌: "ನೀವು ಇಂಟರ್ನೆಟ್ ಬಳಸುವ ಚಿಲ್ಲರೆ ಮಾರಾಟಗಾರರಾಗಿರಲಿ ಅಥವಾ ವೈಯಕ್ತಿಕ ಉದ್ಯಮಿಯಾಗಿರಲಿ, ನಿಮ್ಮ ಜೇಬಿನಲ್ಲಿರುವ ನಿಮ್ಮ ಐಫೋನ್ ಸಾಧನದ ಮೂಲಕ ನೀವು ಶೀಘ್ರದಲ್ಲೇ ಸಂಪರ್ಕರಹಿತ ಪಾವತಿಗಳನ್ನು ಸ್ವೀಕರಿಸಬಹುದು" ಎಂದು  ಸ್ಟ್ರೈಪ್‌ನ ಮುಖ್ಯ ವ್ಯಾಪಾರ ಅಧಿಕಾರಿ ಬಿಲ್ಲಿ ಅಲ್ವಾರಾಡೊ ಹೇಳಿದ್ದಾರೆ.  ಆಪಲ್ ತನ್ನ ಫಿನ್‌ಟೆಕ್ ಸೇವೆಗಳ ವ್ಯಾಪ್ತಿಯನ್ನು ಹೆಚ್ಚಿಸುತ್ತಿದ್ದು ಇದು 2019 ರಲ್ಲಿ ಗೋಲ್ಡ್‌ಮನ್ ಸ್ಯಾಚ್ಸ್‌ನೊಂದಿಗೆ ತನ್ನದೇ ಆದ ಕ್ರೆಡಿಟ್ ಕಾರ್ಡನ್ನು ಪ್ರಾರಂಭಿಸಿತು ಮತ್ತು "ಈಗ ಖರೀದಿಸಿ, ನಂತರ ಪಾವತಿಸಿ" (buy now, pay later) ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: No.1 Smartpone ಒಪ್ಪೋ, ವಿವೋ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಆ್ಯಪಲ್, 6 ವರ್ಷದ ಬಳಿಕ ಚೀನಾದಲ್ಲಿ ಮೋಡಿ!

"ಆಪಲ್ ಪಾವತಿ ಮಾರುಕಟ್ಟೆಯನ್ನು ಅತ್ಯಂತ ಉದ್ಯಮವಾಗಿ ಪರಿಗಣಿಸಿದೆ ಮತ್ತು ಇದನ್ನು ಹತೋಟಿಗೆ ತರಲು ಎದುರು ನೋಡುತ್ತಿದೆ" ಎಂದು ಕ್ರಾಸ್ ರಿಸರ್ಚ್‌ನ ವಿಶ್ಲೇಷಕ ಶಾನನ್ ಕ್ರಾಸ್ ಹೇಳಿದ್ದಾರೆ. "ಆ್ಯಪಲ್‌ ಸಂಪರ್ಕರಹಿತ ಪಾವತಿಗಳಲ್ಲಿ ತೊಡಗಿಸಿಕೊಳ್ಳುವುದು ಕಂಪನಿಯ ವ್ಯವಹಾರವಾಗಿ  ಪಾವತಿಗಳು ಉದ್ಯಮವು ಎಷ್ಟು ಪ್ರಮುಖ ಎಂಬುದರ ಸೂಚನೆಯಾಗಿದೆ." ಎಂದು ಕ್ರಾಸ್ ಹೇಳಿದ್ದಾರೆ. 

Samsung Point of Sale: 2019 ರಲ್ಲಿ, ಸ್ಯಾಮ್‌ಸಂಗ್ ಈ ಸಂಸ್ಥೆಯೊಂದಿಗೆ ಕೆಲಸ ಮಾಡಿತ್ತು ಮತ್ತು ವ್ಯಾಪಾರಿಗಳಿಗೆ ಇದೇ ರೀತಿಯ ಸೇವೆಯನ್ನು ನೀಡಿತ್ತು. ಇದು Mobewave ನೊಂದಿಗೆ ಪಾಲುದಾರಿಕೆ ಜತೆಗೆ  Samsung POS (Samsung Point of Sale) ಅನ್ನು ಪರಿಚಯಿಸಿತ್ತು. ಈ ಸೇವೆಯು ಸ್ಯಾಮ್‌ಸಂಗ್ ಫೋನ್‌ಗಳನ್ನು ಬಳಸಿಕೊಂಡು ಸಂಪರ್ಕವಿಲ್ಲದ ಪಾವತಿಗಳನ್ನು ಸ್ವೀಕರಿಸಲು ಸಣ್ಣ ವ್ಯಾಪಾರಗಳಿಗೆ ಅನುವು ಮಾಡಿಕೊಟ್ಟಿತ್ತು. ಈ ಮೂಲಕ ವ್ಯಾಪಾರಿಗಳು ತಮ್ಮ NFC-ಸಾಮರ್ಥ್ಯದ Samsung ಸಾಧನಗಳನ್ನು ಹೆಚ್ಚುವರಿ ಯಂತ್ರಾಂಶವಿಲ್ಲದೆಯೇ mPOS (ಮೊಬೈಲ್ ಪಾಯಿಂಟ್ ಆಫ್ ಸೇಲ್) ಟರ್ಮಿನಲ್‌ಗಳಾಗಿ ಪರಿವರ್ತಿಸಲು ಸಾಧ್ಯವಾಯಿತು.

ಸ್ಯಾಮ್‌ಸಂಗ್ ಪಿಒಎಸ್ ಅಪ್ಲಿಕೇಶನನ್ನು ಗ್ಯಾಲಕ್ಸಿ ಸ್ಟೋರ್ ಅಥವಾ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ ನೋಂದಾಯಿಸಿಕೊಳ್ಳಬಹುದು. ನೋಂದಣಿ ಪೂರ್ಣಗೊಂಡ ನಂತರ, ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರ ಮಾಲೀಕರು Apple Pay, Google Pay, Samsung Pay ಅಥವಾ Visa ಮತ್ತು Mastercard ನಿಂದ ಸಂಪರ್ಕವಿಲ್ಲದ ಕಾರ್ಡ್‌ಗಳನ್ನು ಬಳಸಿಕೊಂಡು ಸಂಪರ್ಕರಹಿತ ಪಾವತಿಗಳನ್ನು ಸ್ವೀಕರಿಸಲು ಪ್ರಾರಂಭಿಸಬಹುದು

click me!