BSNL 197 Prepaid Plan: 150 ದಿನ ವ್ಯಾಲಿಡಿಟಿ, 2 ಜಿಬಿ ಡೇಟಾ ಪ್ಲ್ಯಾನ್ ಪರಿಚಯಿಸಿದ ಬಿಎಸ್‌ಎನ್‌ಎಲ್!

Suvarna News   | Asianet News
Published : Feb 08, 2022, 10:53 AM IST
BSNL 197 Prepaid Plan: 150 ದಿನ ವ್ಯಾಲಿಡಿಟಿ, 2 ಜಿಬಿ ಡೇಟಾ ಪ್ಲ್ಯಾನ್ ಪರಿಚಯಿಸಿದ ಬಿಎಸ್‌ಎನ್‌ಎಲ್!

ಸಾರಾಂಶ

* ಅತ್ಯಾಕರ್ಷಕ ಪ್ರಿಪೇಡ್ ಪ್ಲ್ಯಾನ್ ಪರಿಚಯಿಸಿದ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ * 197 ರೂ. ಪ್ಲ್ಯಾನ್‌ಗೆ 150 ದಿನಗಳವರೆಗೆ ವ್ಯಾಲಿಡಿಟಿ, ನಿತ್ಯ 2ಜಿಬಿ ಡೇಟಾ  * ಅನಿಯಂತ್ರಿತ ಕರೆಗಳು ಹಾಗೂ ಎಸ್ಮೆಮ್ಮೆಸ್ ಸಂದೇಶ ಸೌಲಭ್ಯ

Tech Desk: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಯಾಗಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ –ಬಿಎಸ್‌ಎನ್‌ಎಲ್ (Bharat Sanchar Nigam Limited-BSNL) ಪ್ರಿಪೇಡ್ ಗ್ರಾಹಕರಿಗೆ ಹೊಸ ಪ್ಲ್ಯಾನ್ ಪರಿಚಯಿಸುತ್ತಿದೆ. ಈ ಹೊಸ ಪ್ರಿಪೇಡ್ ಪ್ಲ್ಯಾನ್‌ನಲ್ಲಿ ಗ್ರಾಹಕರು 197 ರೂಪಾಯಿ ಮೊತ್ತದ  ಪ್ಲ್ಯಾನ್ ಖರೀದಿಸಬೇಕಾಗುತ್ತದೆ. ಈ ಪ್ಲ್ಯಾನ್ ವ್ಯಾಲಿಡಿಟಿ 150 ದಿನಗಳವರೆಗಿದ್ದು, ಗ್ರಾಹಕರು ನಿತ್ಯ 2 ಜಿಬಿ ಹೈ ಸ್ಪೀಡ್ ಡೇಟಾ ಪಡೆಯಬಹುದು. ಹಾಗೆಯೇ, ಹೈಸ್ಪೀಡ್ ಡೇಟಾ ಮಾತ್ರವಲ್ಲದೇ, ಅನಿಯಂತ್ರಿತ ಕರೆಗಳ ಸೌಲಭ್ಯ ಮತ್ತು ಉಚಿತ ಎಸ್‌ಎಮ್ಎಸ್ ಸಂದೇಶಗಳನ್ನು ಕಳುಹಿಸುವ ಸೌಲಭ್ಯವನ್ನು ಗ್ರಾಹಕರು ಪಡೆದುಕೊಳ್ಳುತ್ತಾರೆ.

ಹಾಗಿದ್ದೂ, ಈ ಹೊಸ 197 ರೂ. ಪ್ಲ್ಯಾನ್‌ಗೆ ಸಂಬಂಧಿಸಿದಂತೆ ಅನಿಯಂತ್ರಿತ ಕರೆ ಹಾಗೂ ನಿತ್ಯದ ಡೇಟಾ ಬಳಕೆಗೆ ಸಂಬಂಧಿಸಿದಂತೆ ಮಿತಿಗಳಿವೆ. ಸದ್ಯಕ್ಕೆ  ಬಿಎಸ್ಎನ್ಎಲ್ ಪರಿಚಯಿಸುತ್ತಿರುವ ಈ ಹೊಸ ಪ್ಲ್ಯಾನ್ ಅತ್ಯಂತ ಅತ್ಯಾಕರ್ಷಕ ಪ್ರಿಪೇಡ್ ಪ್ಲ್ಯಾನ್ ಆಗಿದೆ ಎಂದು ಹೇಳಬಹುದು. ಖಾಸಗಿ ಟೆಲಿಕಾಂ ಸಂಸ್ಥೆಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿರುವ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎನ್ಎಲ್ ಹೊಸ ಗ್ರಾಹಕರನ್ನು ಸೆಳೆಯಲು ಅತ್ಯಾಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯ ಮಾಡುತ್ತಿದೆ ಎಂದು ಹೇಳಬಹುದು.

ಇದನ್ನೂ ಓದಿ: Samsung Galaxy A53: ಬಿಡುಗಡೆ ಮುನ್ನವೇ ಸ್ಮಾರ್ಟ್‌ಫೋನ್ ಇಮೇಜ್, ವಿಶೇಷತೆಗಳ ಮಾಹಿತಿ ಸೋರಿಕೆ!

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್  (BSNL) ಪರಿಚಯಿಸಿರುವ ಈ ಪ್ಲ್ಯಾನ್ ಅತ್ಯಾಕರ್ಷಕವಾಗಿರುವುದಂತೂ ಸತ್ಯ. ಆದರೆ, ಅದರಲ್ಲಿ ಮಿತಿಗಳೂ ಕೂಡ ಇವೆ. ವಿಷಯ ಏನೆಂದರೆ, 197 ರೂ. ಪ್ಲ್ಯಾನ್‌ ರಿಚಾರ್ಜ್ ಮಾಡುವ ಗ್ರಾಹಕರು ಆರಂಭದ 18 ದಿನಗಳವರೆಗೆ ಮಾತ್ರ ಅನಿಯಂತ್ರಿತ ಕರೆಗಳ ಸೌಲಭ್ಯ ಮತ್ತು 2 ಜಿಬಿ ಹೈಸ್ಪೀಡ್ ಡೇಟಾ ಸೌಲಭ್ಯವನ್ನು ಪಡೆದುಕೊಳ್ಳಲಿದ್ದಾರೆ! 

18 ದಿನಗಳು ಆದ ಬಳಿಕ ಹೈಸ್ಪೀಡ್ ಡೇಟಾ ಸ್ಪೀಡ್ 40Kbpsಗೆ ಇಳಿಕೆಯಾಗಲಿದೆ. ಇದೇ ಸ್ಪೀಡ್ ಡೇಟಾ ವ್ಯಾಲಿಡಿಟಿ ಮುಗಿಯುವರೆಗೂ ಇರಲಿದೆ. ಈ ಸಮಯದಲ್ಲಿ ಬಳಕೆದಾರರಿಗೆ ಇನ್‌ಕಮಿಂಗ್ ಕರೆಗಳು ಬರುತ್ತಿವೆಯಾದರೂ, ಔಟ್‌ ಗೋಯಿಂಗ್ ಕಾಲ್ ಸೌಲಭ್ಯವಿರುವುದಿಲ್ಲ. ಒಂದೊಮ್ಮೆ ಔಟ್ ಗೋಯಿಂಗ್ ಕಾಲ್ ಸೌಲಭ್ಯ ಬೇಕಾದರೆ ಗ್ರಾಹಕರು, ಕರೆಗಳನ್ನು ಮಾಡಲು ಬೇಕಾಗುವಷ್ಟು ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಾಗುತ್ತದೆ. ಅದಕ್ಕಾ ಟಾಪ್ ಅಪ್ ರಿಚಾರ್ಜ್ (Top Up Recharge) ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ, 197 ರೂ. ಪ್ಲ್ಯಾನ್ ವ್ಯಾಲಿಡಿಟಿ ಮುಗಿಯುವರೆಗೂ ಅಂದರೆ, 150 ದಿನಗಳವರೆಗೂ ಎಸ್ಸೆಮ್ಮೆಸ್ (SMS) ಸಂದೇಶಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆ. 

ಇದನ್ನೂ ಓದಿ: Smartphone Security: ಸೈಬರ್ ದಾಳಿಗೆ ಈಡಾಗದಂತೆ ಫೋನ್ ರಕ್ಷಿಸಿಕೊಳ್ಳುವುದು ಹೇಗೆ?

ಬಿಎಸ್ಎನ್ಎಲ್‌ನ ಈ ಪ್ಲ್ಯಾನ್ ಎಲ್ಲ ಸರ್ಕಲ್‌ಗಳಲ್ಲೂ ಪ್ಲ್ಯಾನ್ ಎಕ್ಸ್‌ಟೆನ್ಷನ್ ಅಡಿ ಗ್ರಾಹಕರಿಗೆ ಸಿಗಲಿದೆ. ಬಿಎಸ್ಎನ್ಎಲ್ ಪ್ರಿಪೇಡ್ ರಿಚಾರ್ಜ್ ಜಾಲತಾಣದಲ್ಲಿ ಈ ಪ್ಲ್ಯಾನ್ ಪಟ್ಟಿ ಮಾಡಲಾಗಿದೆ. ಜತೆಗೆ, ಈ ಬಗ್ಗೆ ಹಲವು ಸುದ್ದಿತಾಣಗಳೂ ವರದಿ ಮಾಡಿವೆ. ಬಿಎಸ್ಎನ್ಎಲ್ (BSNL) ಮುಂಬರುವ ಹಣಕಾಸು ವರ್ಷದಲ್ಲಿ ಸರ್ಕಾರದಿಂದ ಬಂಡವಾಳ ಹೂಡಿಕೆಯಾಗಿ 44,720 ಕೋಟಿ ರೂ. ಪಡೆದುಕೊಳ್ಳಲಿದೆ ಎಂದು ಈ ತಿಂಗಳ ಮೊದಲು ವರದಿಯಾಗಿತ್ತು.  ಸರ್ಕಾರಿ ಸ್ವಾಮ್ಯದ ಟೆಲಿಕಾಂ ಪೂರೈಕೆದಾರ ಕಂಪನಿಯಾಗಿರುವ ಬಿಎಸ್ಸೆನ್ನೆಲ್, ಉದ್ಯೋಗಿಗಳ ಸ್ವಯಂ ನಿವೃತ್ತಿ ಯೋಜನೆಗೆ ಹೆಚ್ಚುವರಿಯಾಗಿ 7,443.57 ಕೋಟಿ ರೂ., ಜಿಎಸ್‌ಟಿ ಪಾವತಿಗೆ 3,550 ಕೋಟಿ ಅನುದಾನ ಪಡೆದುಕೊಳ್ಳಲಿದೆ ಎಂದು ಹೇಳಲಾಗಿತ್ತು. ಈ ಹೊಸ ಪ್ಲ್ಯಾನ್ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ರಿಲಯನ್ಸ್‌ನ ಜಿಯೋ, ಏರ್ಟೆಲ್ ಹಾಗೂ ವಿಐಗಳಂಥ ಖಾಸಗಿ ಟೆಲಿಕಾಂ ಪೂರೈಕೆದಾರ ಕಂಪನಿಗಳಿಂದ ಬಿಸ್ಸೆನ್ನೆಲ್ ಭಾರೀ ಸ್ಪರ್ಧೆಯನ್ನು ಎದುರಿಸುತ್ತಿದೆ. ಹಾಗಾಗಿ, ತನ್ನ ಗ್ರಾಹಕರನ್ನು ಕಾಯ್ದುಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳಲು ಅತ್ಯಾಕರ್ಷಕ ಪ್ಲ್ಯಾನ್‌ಗಳನ್ನು ಪ್ರಕಟಿಸುತ್ತಿರುತ್ತದೆ. ಆ ಮೂಲಕ ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡುವ ಪ್ರಯತ್ನವನ್ನು ಸರ್ಕಾರಿ ಸ್ವಾಮ್ಯದ ಭಾರತೀಯ ಸಂಚಾರ್ ನಿಗಮ ಲಿಮಿಟೆಡ್ ಕಂಪನಿ ಮಾಡುತ್ತಿದೆ ಎಂದು ಹೇಳಬಹುದು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?