ಮುಂಬೈ(ಸೆ.17): ಮುಂಬರುವ ಹಬ್ಬದ ಋತುವಿಗೆ ಮನೆ ಅಥವಾ ಕಚೇರಿಗಳಿಂದಲೇ ಸುರಕ್ಷಿತವಾಗಿ ಆನ್ ಲೈನ್ ಖರೀದಿ ಮಾಡಲು ಅತ್ಯುತ್ತಮ ಅವಕಾಶ ಇಲ್ಲಿದೆ. ಇದು ರೀಟೇಲ್ ಮಾರಾಟಗಾರರಿಗೆ ಮಾತ್ರ ಆಯೋಜಿಸಲಿರುವ ಟ್ರೇಡ್ ಶೋ. ಕೊರೊನಾವನ್ನು ಗಮನದಲ್ಲಿಟ್ಟುಕೊಂಡು, AJIO ಬಿಜಿನೆಸ್ ನಿಂದ ವಾರ್ಷಿಕ ಮೆಗಾ ಟ್ರೇಡ್ ಶೋ ನಡೆಸಲಿದೆ.
ಅನ್‌ಲಿಮಿಟೆಡ್ ಡಾಟಾ, 30 ದಿನ ಉಚಿತ ಟ್ರಯಲ್; ಭರ್ಜರಿ ಆಫರ್ ಘೋಷಿಸಿದ ಜಿಯೋಫೈಬರ್!
ವರ್ಚುವಲ್ ಆಗಿ 'ಸಂಬಂಧಂ' ಚಾಲನೆ ನೀಡಲಾಗುವುದು. ಸಂಬಂಧಂ- ಡಿಜಿಟಲ್ ಫೆಸ್ಟಿವಲ್ 2020 ಆರಂಭಿಸಲಿದ್ದು, ಇದೇ ಮೊದಲ ಬಾರಿಗೆ ಇಂಥದ್ದೊಂದು ಆನ್ ಲೈನ್ ಟ್ರೇಡ್ ಶೋಗೆ ಚಾಲನೆ ಸಿಕ್ಕಲಿದೆ. ಈ ಮೂಲಕ ಭಾರತದಲ್ಲಿನ ಚಿಲ್ಲರೆ ಮಾರಾಟಗಾರರು (ರೀಟೇಲ್ ಮಾರಾಟಗಾರರು) ಹಬ್ಬಕ್ಕೆ ಬಟ್ಟೆ, ಪಾದರಕ್ಷೆ ಸೇರಿ ವಿವಿಧ ವಸ್ತುಗಳನ್ನು ಖರೀದಿಸಬಹುದು. ದಸರಾ, ದುರ್ಗಾ ಪೂಜೆಗೆ ಮನೆ ಮತ್ತು ಕಚೇರಿಗಳಿಂದಲೇ ಬೇಕಾದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದೇ ಸೆಪ್ಟೆಂಬರ್ 17ರಿಂದ 19ರ ತನಕ ಅಧೀಕೃತ ವೆಬ್‌ಸೈಟ್‌ನಲ್ಲಿ ಟ್ರೇಡ್ ಶೋ ನಡೆಯಲಿದೆ.
ಜಿಯೋ ರಿಚಾರ್ಜ್ ಮಾಡಿ ಉಚಿತವಾಗಿ ಐಪಿಎಲ್ ನೋಡಿ..!.
ಹೆಸರಾಂತ ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ನಟಿ ಜಾಹ್ನವಿ ಕಪೂರ್ 2020ಕ್ಕೆ ಚಾಲನೆ ನೀಡಲಿದ್ದಾರೆ. ಕೊರೊನಾದಿಂದ ಉದ್ಭವವಾಗಿರುವ ಹಣಕಾಸಿನ ಸಮಸ್ಯೆ, ಸಾಗಾಟದ ಸವಾಲು ಮತ್ತಿತರ ಕಾರಣಗಳಿಂದ ಚಿಲ್ಲರೆ ಮಾರಾಟಗಾರರು ಕಷ್ಟದ ಸನ್ನಿವೇಶ ಎದುರಿಸುತ್ತಿದ್ದಾರೆ.
ಮುಂಬರುವ ದಸರಾ, ದುರ್ಗಾಪೂಜೆ ಹಾಗೂ ನವರಾತ್ರಿ ಹೀಗೆ ಭಾರತೀಯರ ಪಾಲಿಗೆ ಅತಿ ದೊಡ್ಡ ಹಬ್ಬಗಳ ಸಾಲು ಕಣ್ಣೆದುರಿಗೆ ಇದೆ. ರೀಟೇಲ್ ಮಾರಾಟಗಾರರಿಗೆ AJIO ಬಿಜಿನೆಸ್ ಸಂಬಂಧಂ ಡಿಜಿಟಲ್ ಪ್ಲಾಟ್ ಫಾರ್ಮ್ ಒದಗಿಸಲಿದೆ. ಮನೆಗೆ ಹಾಗೂ ಕಚೇರಿಯಲ್ಲಿ ಕುಳಿತು, ಹಬ್ಬದ ಸಂದರ್ಭದಲ್ಲಿ ವಿಪರೀತ ಬೇಡಿಕೆ ಇರುವಂಥ ವಸ್ತುಗಳನ್ನು ಖರೀದಿಸಬಹುದು. ಸುರಕ್ಷಿತವಾಗಿಯೂ ವ್ಯವಹಾರ ನಡೆಸಬಹುದು.
ಈ ಡಿಜಿಟಲ್ ಟ್ರೇಡ್ ಶೋನಲ್ಲಿ ಎಲ್ಲವೂ ಒಂದೇ ಕಡೆ ಸಿಗುತ್ತದೆ. ಡಿಜಿಟಲ್ ಕ್ಯಾಟಲಾಗ್ ಬಳಸಿ ತಮಗೆ ಬೇಕಾದದ್ದನ್ನು ಆರಿಸಿಕೊಳ್ಳಬಹುದು. ಆರಿಸಿಕೊಳ್ಳುವುದಕ್ಕೆ 1300ಕ್ಕೂ ಹೆಚ್ಚು ಬ್ರ್ಯಾಂಡ್ ಗಳ ಒಂದು ಲಕ್ಷಕ್ಕೂ ಹೆಚ್ಚು ಸ್ಟೈಲ್ ಗಳನ್ನು ಹೊಂದಿದೆ. ಹಬ್ಬಕ್ಕಾಗಿಯೇ 50+ ಟಾಪ್ ಬಟ್ಟೆ ಬ್ರ್ಯಾಂಡ್ ಗಳು ಅತ್ಯುತ್ತಮ ಬೆಲೆಗೆ ದೊರೆಯುತ್ತವೆ.
ಇನ್ನು ರೀಟೇಲರ್ ಗಳು ಮಾರ್ಕೆಟ್ ಟ್ರೆಂಡ್ ಗಳ ಅನುಕೂಲ ಪಡೆಯಬಹುದು. ಇದೇ ಕ್ಷೇತ್ರದ ತಜ್ಞರು ನೀಡುವ ಸಲಹೆಗಳನ್ನು ಟ್ರೇಡ್ ಶೋ ವಿಡಿಯೋಗಳ ಮೂಲಕ ವೀಕ್ಷಿಸಿ ಲಾಭ ಪಡೆಯಬಹುದು. ಈ ಟ್ರೇಡ್ ಶೋಗೆ ನೋಂದಣಿ ಮಾಡಿಕೊಳ್ಳುತ್ತಲೇ ಟಾಪ್ ಬ್ರ್ಯಾಂಡ್ ಗಳಿಗೆ ಆಕರ್ಷಕ ಕೊಡುಗೆಗಳು ಸಿಗುತ್ತವೆ. ಈ ಪ್ಲಾಟ್ ಫಾರ್ಮ್ ಬ್ರೌಸಿಂಗ್ ಮಾಡಿ, ವಿಡಿಯೋಗಳನ್ನು ನೋಡಿ, ಬೇಕಾದ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ರಿವಾರ್ಡ್ ಪಾಯಿಂಟ್ ಗಳು ಮತ್ತು ಕ್ಯಾಶ್ ಬ್ಯಾಕ್ ಪಡೆಯಬಹುದು.
ಈ ಎಕ್ಸ್ ಕ್ಲೂಸಿವ್ ರೀಟೇಲರ್ ಗಳಿಗಾಗಿ ಮಾತ್ರ ಇರುವ ಮಾರಾಟ ಮೇಳದಲ್ಲಿ ಭಾರತದ ಟಾಪ್ 70,000+ ಬಟ್ಟೆ ಹಾಗೂ ಪಾದರಕ್ಷೆ ಮಾರಾಟಗಾರರು ಭಾಗವಹಿಸುವ ನಿರೀಕ್ಷೆ ಇದೆ. ಸಾಗಾಟ ಸಮಸ್ಯೆ ಬಗೆಹರಿಸುವುದರಿಂದ ಮೊದಲುಗೊಂಡು ಆನ್ ಲೈನ್ ಖರೀದಿ ಚಾನೆಲ್ ತನಕ ಸಂಬಂಧಂ ಡಿಜಿಟಲ್ ನಿಂದ ಖರೀದಿದಾರರು ಮತ್ತು ಮಾರಾಟಗಾರರ ಮಧ್ಯೆ ಡಿಜಿಟಲ್ ಬಾಂಧವ್ಯ ಬೆಳೆಸುತ್ತದೆ.