ಬಳಕೆದಾರರ ಭದ್ರತೆಗೆ 3 ಹೊಸ ಫೀಚರ್‌ ಬಿಡುಗಡೆ ಮಾಡಿದ ವಾಟ್ಸಾಪ್‌

By Anusha KbFirst Published Apr 14, 2023, 12:43 PM IST
Highlights

ವಾಟ್ಸಾಪ್‌ ಬಳಕೆದಾರರ ಸುರಕ್ಷತೆಗೆ ಕಂಪನಿ 3 ಹೊಸ ಫೀಚರ್‌ ಬಿಡುಗಡೆ ಮಾಡಿದೆ. ಇದು ಮೊಬೈಲ್‌ ಸಾಮಾಜಿಕ ತಾಣವನ್ನು ಮತ್ತಷ್ಟು ಸುರಕ್ಷಿತ ಮಾಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ನವದೆಹಲಿ: ವಾಟ್ಸಾಪ್‌ ಬಳಕೆದಾರರ ಸುರಕ್ಷತೆಗೆ ಕಂಪನಿ 3 ಹೊಸ ಫೀಚರ್‌ ಬಿಡುಗಡೆ ಮಾಡಿದೆ. ಇದು ಮೊಬೈಲ್‌ ಸಾಮಾಜಿಕ ತಾಣವನ್ನು ಮತ್ತಷ್ಟು ಸುರಕ್ಷಿತ ಮಾಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಅಕೌಂಟ್‌ ರಕ್ಷಣೆಗೆ ಈ ಕ್ರಮ: ಇನ್ನು ಹೊಸ ಡಿವೈಸ್‌ನಲ್ಲಿ ವಾಟ್ಸಾಪ್‌ ಇನ್‌ಸ್ಟಾಲ್‌ ಮಾಡುವಾಗ ಹಳೆಯ ಫೋನ್‌ಗೂ ವೆರಿಫಿಕೇಶನ್‌ ಕೋಡ್‌ ರವಾನೆಯಾಗಲಿದೆ. ಬಳಕೆದಾರರು ಇಲ್ಲಿ ಒಪ್ಪಿಗೆ ಸೂಚಿಸಿದ ಬಳಿಕ ಹೊಸ ಡಿವೈಸ್‌ನಲ್ಲಿ ವಾಟ್ಸಾಪ್‌ ಬಳಕೆಗೆ ಲಭ್ಯವಾಗಲಿದೆ.

ಡಿವೈಸ್‌ ದೃಢೀಕರಣ: ಇನ್ನೊಂದು ಕ್ರಮದಲ್ಲಿ, ಹಳೆಯ ಡಿವೈಸ್‌ನ ಮಾಲ್ವೇರ್‌ ಬಳಸಿ ಆಗಬಹುದಾದ ವಾಟ್ಸಾಪ್‌ ದುರ್ಬಳಕೆ ತಪ್ಪಿಸಲು ಡಿವೈಸ್‌ ವೆರಿಫಿಕೇಶನ್‌ ಫೀಚರ್‌ ತರಲಾಗಿದೆ. ಮಾಲ್ವೇರ್‌ (ವೈರಸ್‌) ಸೇರಿಸುವ ಮೂಲಕ ಬಳಕೆದಾರರಿಗೆ ತಿಳಿಯದಂತೆ ಫೋಟೋ ಹಂಚುವುದನ್ನು ತಪ್ಪಿಸಬಹುದಾಗಿದೆ.

ಸ್ವಯಂಚಾಲಿತ ಭದ್ರತಾ ಕೋಡ್‌: ಇದೇ ವೇಳೆ, ಸ್ವಯಂಚಾಲಿತವಾಗಿ ಸೆಕ್ಯುರಿಟಿ ಕೋಡ್‌ (security code) ಕಳಿಸಿ ಖಾತೆಯು ಸುಭದ್ರ ಆಗಿರುವಂತೆ ನೋಡಿಕೊಳ್ಳುವ ಮತ್ತೊಂದು ಫೀಚರ್‌ ಅನ್ನು ಆರಂಭಿಸಿದೆ. ಇದು ಡಿವೈಸ್‌ ದೃಢೀಕರಣ ರೀತಿಯೇ ಇರುತ್ತದ್ದು, ಬಳಕೆದಾರರು ಹೆಚ್ಚಿನ ಕ್ರಮ ಜರುಗಿಸಬೇಕಿಲ್ಲ.

ವಾಟ್ಸಾಪ್‌ ಗ್ರೂಪಲ್ಲಿ ಮತ ಕೇಳಿದ್ರೆ ಅಡ್ಮಿನ್‌ ಮೇಲೆ ಕ್ರಮ: ಚುನಾವಣಾ ಆಯೋಗ


 

click me!