ಆನ್‌ಲೈನ್ ಗೇಮಿಂಗ್ ಆ್ಯಪ್‌ಗೆ ಹೊಸ ನಿಯಮ ಜಾರಿ, ಬೆಟ್ಟಿಂಗ್ ನಿಷೇಧಿಸಿದ ಕೇಂದ್ರ ಸರ್ಕಾರ!

By Suvarna News  |  First Published Apr 6, 2023, 8:00 PM IST

ಆನ್‌ಲೈನ್ ಗೇಮಿಂಗ್ ಆ್ಯಪ್ ಮೂಲಕ ಬೆಟ್ಟಿಂಗ್ ದಂಧೆ ಹುಟ್ಟಿಕೊಂಡಿದೆ. ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಆನ್‌ಲೈನ್ ಜೂಜು ನಿಷೇಧಿಸಿದೆ. ಈ ಕುರಿತು ಹೊಸ ನಿಯಮ ಜಾರಿಗೊಳಿಸಿದೆ.


ನವದೆಹಲಿ(ಏ.06): ಆನ್‌ಲೈನ್ ಜೂಜು, ಆನ್‌ಲೈನ್ ಗೇಮಿಂಗ್ ಆ್ಯಪ್ ಮೂಲಕ ಬೆಟ್ಟಿಂಗ್ ಸೇರಿದಂತೆ ಹಲವು ನಿಯಮ ಮೀರಿದ ಚಟುವಟಿಕೆಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಇದೀಗ ಕೇಂದ್ರ ಸರ್ಕಾರ ಆನ್‌ಲೈನ್ ಗೇಮಿಂಗ್ ಕುರಿತು ಹೊಸ ನಿಯಮ ಜಾರಿಗೊಳಿಸಿದೆ. ಹೊಸ ನಿಯಮದ ಪ್ರಕಾರ, ಆನ್‌ಲೈನ್ ಜೂಜು, ಬೆಟ್ಟಿಂಗ್ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ.  ಈ ಕುರಿತು ಯಾವ ಆನ್‌ಲೈನ್ ಗೇಮಿಂಗ್ ಅನುಮತಿ ನೀಡಬೇಕು, ಯಾವುದಕ್ಕೆ ನಿರ್ಬಂಧ ವಿಧಿಸಬೇಕು ಅನ್ನೋದನ್ನು ಕಾನೂನು ಚಕೌಟ್ಟಿನಲ್ಲಿ ವ್ಯವಹಿಸುತ್ತೇವೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. 

ಸೆಲ್ಫಿ ರೆಗ್ಯೂಲೇಟಿಂಗ್ ಆರ್ಗನೈಜೇಶನ್(SRO) ಚೌಕಟ್ಟಿನೊಳಗೆ ಈ ಗೇಮಿಂಗ್ ಆ್ಯಪ್ ಕಾರ್ಯನಿರ್ವಹಣೆ ವಿವರ ನೀಡಲಾಗುತ್ತದೆ. ಈ ಕುರಿತು ಸಾಕಷ್ಟು ದೂರುಗಳು ಬಂದಿದೆ. ಆನ್‌ಲೈನ್ ಬೆಟ್ಟಿಂಗ್ ನಿಷೇಧ ಕುರಿತು ಇದೀಗ ಕೇಂದ್ರ ಸರ್ಕಾರ ಮಹತ್ವದ ನಿಯಮ ಜಾರಿಗೆ ತಂದಿದೆ. 

Tap to resize

Latest Videos

undefined

 

ಡ್ರ್ಯಾಗನ್ ರಾಷ್ಟ್ರದ ಮೇಲೆ ಮತ್ತೆ ಬ್ರಹ್ಮಾಸ್ತ್ರ: ಚೀನಾ ಲಿಂಕ್ ಹೊಂದಿರುವ 138 ಬೆಟ್ಟಿಂಗ್, 94 ಲೋನ್‌ ಆ್ಯಪ್‌ ನಿಷೇಧ..!

ಫೆಬ್ರವರಿ ತಿಂಗಳಲ್ಲಿ ಬೆಟ್ಟಿಂಗ್ ಹಾಗೂ ಸಾಲ ನೀಡುತ್ತಿದ್ದ ಆನ್‌ಲೈನ್ ಆ್ಯಪ್‌ಗಳಿಂದ ಜಾರಿ ನಿರ್ದೇಶನಾಲಯ 859.15 ಕೋಟಿ ರೂಪಾಯಿ ಅಕ್ರಮ ಹಣ ವಶಪಡಿಸಿಕೊಂಡಿತ್ತು.  1999ರ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆಯಡಿ 289.28 ಕೋಟಿ ರು. ಮೌಲ್ಯದ ಅಕ್ರಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಆ್ಯಪ್‌ಗಳಿಗೆ ಕಡಿವಾಣ ಹಾಕಲು ಆರ್‌ಬಿಐನ ನಿಯಂತ್ರಿತ ಘಟಕಗಳು ಬಳಸುತ್ತಿರುವ ಡಿಜಿಟಲ್‌ ಲೆಂಡಿಂಗ್‌ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿರುವ ಪಟ್ಟಿಯಲ್ಲಿರುವ ಆ್ಯಪ್‌ಗಳನ್ನು ಮಾತ್ರ ತಮ್ಮ ಆ್ಯಪ್‌ ಸ್ಟೋರ್‌ಗಳಲ್ಲಿ ಬಳಸುವಂತೆ ಮಧ್ಯವರ್ತಿಗಳಿಗೆ ಸೂಚಿಸಲಾಗಿದೆ ಎಂದಿದ್ದರು. 

ತಮಿಳುನಾಡಿನಲ್ಲಿ ಆನ್‌ಲೈನ್ ಜೂಜು ನಿಷೇಧ ಮಸೂದೆ ಪಾಸ್: ರಾಜ್ಯಪಾಲರು ಅಂಕಿತ ಹಾಕದೆ ಮಾಸಾರಂಭದಲ್ಲಿ ವಾಪಸ್‌ ಕಳುಹಿಸಿದ್ದ ಆನ್‌ಲೈನ್‌ ಜೂಜು ನಿಷೇಧಿಸುವ ವಿಧೇಯಕವನ್ನು ತಮಿಳುನಾಡು ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿತ್ತು.  ಆನ್‌ಲೈನ್‌ ಜೂಜಿನಲ್ಲಿ ಹಣ ಕಳೆದುಕೊಂಡು ಹಲವಾರು ವ್ಯಕ್ತಿಗಳು ತಮಿಳುನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ‘ಭಾರವಾದ ಹೃದಯದೊಂದಿಗೆ ಮಸೂದೆ ಮಂಡಿಸುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹೇಳಿದ್ದರು. ಬಳಿಕ ಸ್ಪೀಕರ್‌ ಅವರು ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದೆ ಎಂದು ಘೋಷಿಸಿದರು.

ಬೆಟ್ಟಿಂಗ್‌ ಜಾಹೀರಾತು ಪ್ರಸಾರ ಬೇಡ: ಮಾಧ್ಯಮಗಳಿಗೆ ಕೇಂದ್ರದ ಸೂಚನೆ

ಸೈಬರ್‌ ಲೋಕದಲ್ಲಿ ಬಾಜಿ ಅಥವಾ ಬೆಟ್ಟಿಂಗ್‌ ಕಟ್ಟುವುದನ್ನು ನಿಷೇಧಿಸಿ ‘ತಮಿಳುನಾಡು ಗೇಮಿಂಗ್‌ ಮತ್ತು ಪೊಲೀಸ್‌ ಕಾನೂನುಗಳು (ತಿದ್ದುಪಡಿ) ಕಾಯ್ದೆ 2021’ ಅನ್ನು ಜಾರಿಗೆ ತರಲಾಗಿತ್ತು. ಅದನ್ನು 2021ರ ಆಗಸ್ಟ್‌ನಲ್ಲಿ ಮದ್ರಾಸ್‌ ಹೈಕೋರ್ಚ್‌ ರದ್ದುಗೊಳಿಸಿತ್ತು. ಹೀಗಾಗಿ 2022ರ ಅ.1ರಂದು ರಾಜ್ಯ ಸರ್ಕಾರ ಆನ್‌ಲೈನ್‌ ಜೂಜು, ಬಾಜಿ ಕಟ್ಟಿಆಡುವ ರಮ್ಮಿ ಮತ್ತು ಪೋಕರ್‌ನಂತಹ ಗೇಮ್‌ಗಳನ್ನು ನಿಷೇಧಿಸಿ ಸುಗ್ರೀವಾಜ್ಞೆ ಹೊರಡಿಸಿತ್ತು. ಅದಕ್ಕೆ ರಾಜ್ಯಪಾಲರು ಅ.3ರಂದು ಅಂಕಿತ ಹಾಕಿದ್ದರು. ಅ.17ರಂದು ತಮಿಳುನಾಡು ವಿಧಾನಸಭೆ ವಿಧೇಯಕ ಅಂಗೀಕರಿಸಿತ್ತು. ಅದನ್ನು ಮರುಪರಿಶೀಲಿಸುವಂತೆ ಸೂಚಿಸಿ ರಾಜ್ಯಪಾಲರು ಮಾಸಾರಂಭದಲ್ಲಿ ವಾಪಸ್‌ ಕಳುಹಿಸಿದ್ದರು. ಇದೀಗ ಅದನ್ನು ಮತ್ತೆ ಅಂಗೀಕರಿಸಿದೆ.

click me!