Weekly Horoscope: ಈ ವಾರ ಮಕರಕ್ಕೆ ಅದೃಷ್ಟ ಖುಲಾಯಿಸಲಿದೆ, ಉಳಿದ ರಾಶಿಗಳ ಫಲವೇನಿದೆ ಗೊತ್ತಾ?

By Suvarna News  |  First Published Dec 26, 2021, 2:06 PM IST

26 ಡಿಸೆಂಬರ್‌ನಿಂದ ಜನವರಿ 1 2022ರವರೆಗಿನ ವಾರ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ? ಯಾವ ರಾಶಿಗೆ ಎಚ್ಚರ ಅಗತ್ಯ? ಯಾವ ರಾಶಿ ಬದಲಾವಣೆ ಕಾಣುತ್ತದೆ?


ಮೇಷ(Aries): ನಿಮ್ಮ ಬಹು ದಿನಗಳ ಯೋಜನೆಯೊಂದು ಅನುಷ್ಠಾನಗೊಳ್ಳಲಿದೆ. ಆರಂಭದಲ್ಲಿ ಕೊಂಚ ಏರಿಳಿತಗಳಾಗಬಹುದು. ಪೂರ್ವ ತಯಾರಿಯಿಲ್ಲದೇ ಏನನ್ನಾದರೂ ಮಾಡಲು ಮುನ್ನುಗ್ಗಬೇಡಿ. ಇದರಿಂದ ಮುಖಭಂಗ ಉಂಟಾಗಬಹುದು. ಇತರರ ಬಗ್ಗೆ ಕೆಟ್ಟ ಯೋಚನೆಗಳು ನಿಮ್ಮ ಮನಸ್ಸನ್ನು ಕಂಗೆಡಿಸಬಹುದು. ಧ್ಯಾನ, ಪ್ರಾರ್ಥನೆ ಇದರಿಂದ ಹೊರಬರಲು ಸಹಕಾರಿ. ಸ್ನೇಹಿತರಿಂದ ಸಹಕಾರ ಸಿಗಲಿದೆ.

ವೃಷಭ(Taurus): ಹಣಕಾಸಿನ ವಿಚಾರಗಳಲ್ಲಿ ಇರಿಸುಮುರಿಸು ಉಂಟಾಗಬಹುದು. ಆದರೆ ಇಂಥದ್ದನ್ನೆಲ್ಲ ಜಾಣ್ಮೆಯಿಂದ ನಿಭಾಯಿಸುವ ಛಾತಿ ನಿಮಗಿದೆ. ಆ ಬಗ್ಗೆ ಹಿಂಜರಿಕೆ ಬೇಡ. ಮಾನಸಿಕ ದೃಢತೆ ಕಾಯ್ದುಕೊಳ್ಳಿ. ನಿಮ್ಮ ಮೇಲೆ ಹಕ್ಕು ಚಲಾಯಿಸುವವರನ್ನು ನಿಷ್ಠುರವಿಲ್ಲದೇ ನಿಭಾಯಿಸಿ. ವಿವಾದ ಮೈಮೇಲೆ ಎಳೆದುಕೊಳ್ಳಬೇಡಿ. ಅನಿರೀಕ್ಷಿತ ಉಡುಗೊರೆ ಉಲ್ಲಾಸ ಹೆಚ್ಚಿಸಬಹುದು. ಸಂಗಾತಿಯ ಜೊತೆ ಸರಸ.

Tap to resize

Latest Videos

undefined

ಮಿಥುನ(Gemini): ತಂದೆ ತಾಯಿಯ ಸಹಕಾರದಿಂದ ಬದುಕಿನಲ್ಲಿ ಕೊಂಚ ಮುನ್ನಡೆ ಸಾಧಿಸುವಿರಿ. ಆದರೆ ಹೆಚ್ಚುತ್ತಿರುವ ಜವಾಬ್ದಾರಿ, ಹೊಸ ಹೊಸ ಸಮಸ್ಯೆಗಳು ನಿಮ್ಮನ್ನು ಹೈರಾಣಾಗಿಸಬಹುದು.ಅನಗತ್ಯವಾಗಿ ಇತರರ ವಿಚಾರದಲ್ಲಿ ಮೂಗು ತೂರಿಸಬೇಡಿ. ಆ ಸಮಯದಲ್ಲಿ ನಿಮ್ಮದೇ ಸಮಸ್ಯೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿ. ಓದು, ಗೆಳೆಯರ ಒಡನಾಡ ಭಾರವನ್ನು ಕೊಂಚ ತಗ್ಗಿಸುವುದು.

Baba Vanga predictions: 2022ರಲ್ಲಿ ಮತ್ತೊಂದು ವೈರಸ್ ದಾಳಿ, ಬಾಬಾ ವಾಂಗಾ ಭವಿಷ್ಯ

ಕಟಕ(Cancer): ನಿಮ್ಮ ಹಿಂಜರಿಕೆಯ ಗುಣದಿಂದ ಅನಾನುಕೂಲಗಳೇ ಜಾಸ್ತಿ. ಕೆಲವೆಡೆ ಹಿಂಜರಿಕೆಯಿಂದ ಹಿಂದೆ ಸರಿಯುವ ನೀವು, ಇನ್ನೂ ಕೆಲವೆಡೆ ಹಿಂದೆ ಮುಂದೆ ನೋಡದೇ ಮುನ್ನುಗ್ಗುತ್ತೀರಿ. ಇವರಡಕ್ಕಿಂತ ಯಾವುದೇ ಕಾರ್ಯದಲ್ಲಿ ಸಾವಧಾನವಾಗಿ ಮುಂದುವರಿಯುವುದು ಉತ್ತಮ. ವ್ಯಕ್ತಿಯ ಮನಸ್ಥಿತಿಗೆ ತಕ್ಕಂತೆ ಮಾತನಾಡುವುದು ನಿಮ್ಮ ಸ್ವಭಾವವಾದರೂ ಇದರಿಂದ ಅಡಿಯಾಳಾಗುವ ಅಪಾಯವಿದೆ. ಸ್ನೇಹಿತರ ಭೇಟಿಯಿಂದ ಸಂತಸ.

ಸಿಂಹ(Leo): ನಿಮ್ಮದು ಇತರರನ್ನು ಆಳುವ ಸ್ವಭಾವವಾದರೂ ಕೆಲವೊಂದು ವಿಚಾರಗಳಲ್ಲಿ ಹೊಂದಾಣಿಕೆ ಬೇಕು. ಇಲ್ಲವಾದರೆ ಶತೃಗಳು ಹೆಚ್ಚಾಗಬಹುದು. ನೀವು ಅಂದುಕೊಂಡ ಕಾರ್ಯ ಸಾಧಿಸಲು ಪ್ರಯಾಸವಾಗಬಹುದು. ವೈಯುಕ್ತಿಕವಾಗಿ ಕೆಲವು ಸಮಸ್ಯೆಗಳು ಉಂಟಾಗಬಹುದು. ನಿಮ್ಮ ಸಂಗಾತಿಯ ಆಲೋಚನೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ ಉತ್ತಮ. ತಂದೆ ತಾಯಿ ಆಶೀರ್ವಾದ ನಿಮ್ಮ ಮೇಲೆ ಇರಲಿದೆ.

Vastu Tips : ಹಣದ ಸುರಿಮಳೆಯಾಗ್ಬೇಕಂದ್ರೆ ಹೊಸ ವರ್ಷ ಮಾಡಿ ಈ ಕೆಲಸ

ಕನ್ಯಾ(Virgo): ಆಲೋಚಿಸಿ ಮಾಡುವ ಕೆಲಸದಲ್ಲಿ ಯಶಸ್ಸು ಇರುತ್ತದೆ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಕೋಪವು ನಿಮ್ಮನ್ನು ಮೀರಿಸಲು ಬಿಡಬೇಡಿ, ಆಗ ದಿನ ಉತ್ತಮವಾಗಿರುತ್ತದೆ. ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ಕೆಲಸದ ಸ್ಥಳದಲ್ಲಿ ಒಳ್ಳೆಯ ದಿನವನ್ನು ಕಳೆಯುವಿರಿ. ಹೊಸ ಪ್ರೇಮ ಹುಟ್ಟುವ ಸಾಧ್ಯತೆ ಇದೆ.

ತುಲಾ(Libra): ಏಕಾಗ್ರತೆಯಿಂದ ಕೆಲಸ ಮಾಡುತ್ತಾ ಹೆಚ್ಚು ಬುದಿವಂತಿಕೆಯಿಂದ ವರ್ತಿಸುವ ಮೂಲಕ ಉದ್ಯೋಗದಲ್ಲಿ ಯಶಸ್ವಿಯಾಗುತ್ತೀರಿ, ಉನ್ನತಿ ಸಾಧಿಸುತ್ತೀರಿ. ಆದರೆ ಅತಿಯಾದ ಕೋಪ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಕೋಪ ನಿಯಂತ್ರಿಸಲು ಪ್ರಯತ್ನಿಸಿ. ಮಕ್ಕಳ ಸಹಾಯ ಸಂತೋಷವನ್ನು ಹೆಚ್ಚಿಸುತ್ತದೆ. ದೇವರ ಧ್ಯಾನ ಮಾನಸಿಕ ಶಾಂತಿಯನ್ನು ನೀಡುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರ ಪ್ರಯತ್ನ ಮಾಡುವಿರಿ.

ವೃಶ್ಚಿಕ(Scorpio): ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ. ಕುಟುಂಬ ಅಥವಾ ಪ್ರೀತಿ ಪಾತ್ರರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ಮಂಗಳ ಕಾರ್ಯಗಳಲ್ಲಿ ಭಾಗವಹಿಸುವಿರಿ. ಈ ಕಾರಣದಿಂದಾಗಿ ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರನ್ನು ಭೇಟಿ ಮಾಡುವ ಅವಕಾಶವೂ ನಿಮಗೆ ಸಿಗುತ್ತದೆ. ಆರ್ಥಿಕವಾಗಿ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ಕೆಲಸದ ಕ್ಷೇತ್ರದಲ್ಲಿ ನಿಮ್ಮ ಪ್ರಾಮಾಣಿಕತೆ ಸಾಬೀತಾಗುತ್ತದೆ.

ಧನುಸ್ಸು(Sagittarius): ಉದ್ಯೋಗದಲ್ಲಿ ಪ್ರತಿಷ್ಠಿತರ ನಡುವೆ ಗುರುತಿಸಿಕೊಳ್ಳುವಿರಿ. ಈ ಮೂಲಕ ಯಶಸ್ಸನ್ನು ಪಡೆಯುತ್ತೀರಿ. ಪ್ರಚಾರ ಅಥವಾ ಸಂಬಂಧಿಸಿದ ಮಾತುಕತೆ ಇರುತ್ತದೆ. ಮಕ್ಕಳು ಮಾಡುವ ಒಳ್ಳೆಯ ಕೆಲಸ ನಿಮಗೆ ಸಂತೋಷ ಇರಲಿದೆ. ಸ್ನೇಹಿತರು ಅಥವಾ ಕುಟುಂಬದೊಂದಿಗೆ ದೂರ ಪ್ರಯಾಣ ಮಾಡುವಿರಿ. ಕೆಲಸದ ಸ್ಥಳದಲ್ಲಿ ಸೌಹಾರ್ದಯುತ ವಾತಾವರಣ ಇರುತ್ತದೆ. ಜನರ ಪ್ರೀತಿ, ವಿಶ್ವಾಸ ಗಳಿಸುವಿರಿ.

ಮಕರ(Capricorn): ನಿಮ್ಮ ಅದೃಷ್ಟ ಖುಲಾಯಿಸುವ ಸಮಯವಿದು. ಈಗ ನೀವು ಕೈಗೆತ್ತಿಕೊಳ್ಳುವ ಎಲ್ಲ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಪ್ರೀತಿಯ ಸಂಬಂಧಗಳಲ್ಲಿ ಸೂಕ್ಷ್ಮವಾಗಿ ವರ್ತಿಸಿ. ಚಿಂತನಶೀಲತೆಯಿಂದ ಮಾತನಾಡುವಿರಿ. ನಿಮ್ಮ ಮಾತು ಇತರರನ್ನು ಪ್ರಭಾವಿಸುವುದು. ನಿಮ್ಮ ಸಂಗಾತಿಯೊಂದಿಗೆ ಪ್ರಮುಖ ವಿಷಯಗಳನ್ನು ಹಂಚಿಕೊಳ್ಳಿ. ನಿಮ್ಮ ಹಿರಿಯರು ಮತ್ತು ಸಜ್ಜನರನ್ನು ಗೌರವದಿಂದ ಕಾಣುವಿರಿ. ಸ್ನೇಹಿತರೊಂದಿಗೆ ಸಣ್ಣಪುಟ್ಟ ಜಗಳ, ಮನಸ್ತಾಪ ಉಂಟಾಗಬಹುದು.

ಕುಂಭ(Aquarius): ಸಂತೋಷವನ್ನು ಬೇರೆಡೆ ಹುಡುಕುವ ಪ್ರಯತ್ನ ಮಾಡುತ್ತಿರುವಿರಿ. ಇದೇ ಕಾರಣಕ್ಕೆ ಎಲ್ಲ ಇದ್ದೂ ಏನೂ ಇಲ್ಲದಂತೆ ಹಲುಬುವ ಸ್ಥಿತಿ ನಿಮ್ಮದು. ಇನ್ನಾದರೂ ಸಂತೋಷದಿಂದ ಇರುವುದನ್ನು ರೂಢಿಸಿಕೊಳ್ಳಿ. ಕುಟುಂಬದಲ್ಲಿ ನಿಮ್ಮಿಂದಾಗಿ ಉತ್ತಮ ಕಾರ್ಯಗಳು ಜರುಗಬಹುದು. ಬಹಳ ದಿನಗಳಿಂದ ಬರದಿದ್ದ ಸಾಲ ಈ ವಾರ ಕೈ ಸೇರಬಹುದು. ನೀವು ಹೂಡಿಕೆಯಲ್ಲಿ ತೊಡಗಿಸಿಕೊಳ್ಳುವಿರಿ.

ಮೀನ(Pisces): ಶ್ರಮದ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಳ್ಳುವಿರಿ. ಓದು ನಿಮಗೆ ಹೆಚ್ಚಿನ ಮನರಂಜನೆಯನ್ನು ನೀಡುತ್ತದೆ. ಕೆಲಸದಲ್ಲಿ ಸಂಪೂರ್ಣ ಸಹಕಾರ ನೀಡುತ್ತೀರಿ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ತಿರುಗಾಟ ಹೆಚ್ಚಬಹುದು. ಇದರಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಹೊಸ ಹೊಸ ಅವಕಾಶಗಳು ಸಿಗುತ್ತವೆ. ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ. ಯೋಚಿಸದೇ ನಿರ್ಧಾರ ತೆಗೆದುಕೊಳ್ಳಬೇಡಿ. 

click me!