12 ಡಿಸೆಂಬರ್ 2021ರಿಂದ 18 ಡಿಸೆಂಬರ್‌ವರೆಗೆ ನಿಮ್ಮ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ? ಯಾವ ರಾಶಿಯ ಅದೃಷ್ಟ ಹೇಗಿರಲಿದೆ?
ಮೇಷ(Aries)
ಉದ್ಯೋಗದ ಕ್ಷೇತ್ರದಲ್ಲಿ ಶುಭ ಫಲಿತಾಂಶ ಪಡೆಯಬಹುದು. ಗೌರವ ಮತ್ತು ಪ್ರಶಸ್ತಿಯಿಂದ ನಿಮ್ಮ ಮನಸ್ಸಿಗೆ ಸಂತೋಷವಾಗುತ್ತದೆ. ಕಠಿಣ ಪರಿಶ್ರಮ(hard work) ಪಡುತ್ತೀರಿ. ಅದುವೇ ಯಶಸ್ಸಿನ ಕೀಲಿಯಾಗಿದೆ ಎಂದು ಸಾಬೀತುಪಡಿಸುತ್ತದೆ. ಸ್ನೇಹಿತರು ಮತ್ತು ಕುಟುಂಬ(family)ದಿಂದ ಸಾಕಷ್ಟು ಬೆಂಬಲವನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಸಮಯವು ಉನ್ನತ ಶಿಕ್ಷಣ ಪಡೆಯಲು ಉತ್ತಮ.
ವೃಷಭ(Taurus)
ಉದ್ಯೋಗ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಂವಹನ ನಡೆಸುವಾಗ ಹುಷಾರಾಗಿರಿ. ತಪ್ಪಿ ಆಡುವ ಸಣ್ಣ ಮಾತೂ ತೊಂದರೆಗೆ ಸಿಲುಕಿಸಬಹುದು. ಯಾವುದೇ ಕಾರ್ಯವಿದ್ದರೂ ಶಾಂತವಾಗಿ ಮತ್ತು ಕ್ರಮಬದ್ಧವಾಗಿ ಮಾಡಿ. ಮೊಂಡುತನ ಬೇಡ. ವ್ಯವಹಾರದಲ್ಲಿ ಕೆಲವು ಸಮಸ್ಯೆ(problems)ಗಳನ್ನು ಎದುರಿಸಬಹುದು. ಆರೋಗ್ಯ(health)ದ ವಿಷಯದಲ್ಲಿ ಕೊಂಚ ಏರುಪೇರು ಉಂಟಾಗಬಹುದು. ಚಾಲನೆಯಲ್ಲಿ ಜಾಗರೂಕತೆ ಇರಲಿ.
ಮಿಥುನ(Gemini)
ಆರ್ಥಿಕ ಅಭಿವೃದ್ಧಿ ಉತ್ತಮವಾಗಿರುತ್ತದೆ. ಈ ಸಮಯ ನಿಮಗೆ ಮಂಗಳಕರವಾಗಿರುತ್ತದೆ. ನಿಮ್ಮ ಜೀವನದಲ್ಲಿ ಒಳ್ಳೆಯ ಸಂಗತಿಗಳು ಸಂಭವಿಸುತ್ತವೆ. ಸಂಗಾತಿಯೊಂದಿಗೆ ಭಾವನಾತ್ಮಕವಾಗಿ ಒಡನಾಡುತ್ತೀರಿ. ಹವಾಮಾನದಲ್ಲಿನ ಬದಲಾವಣೆ(climate change) ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು, ಹೀಗಾಗಿ ಆರೋಗ್ಯದ ಬಗ್ಗೆ ಕಾಳಜಿ ಮಾಡಿ. ಉದ್ಯೋಗದ ಸ್ಥಳದಲ್ಲಿ ಹೆಚ್ಚಿನ ಪ್ರಗತಿ ನಿರೀಕ್ಷೆ ಬೇಡ.
ಕಟಕ(Cancer)
ಕೆಲಸದ ಸ್ಥಳದಲ್ಲಿ ನಿರ್ವಹಿಸಲಾಗದ ಒತ್ತಡವನ್ನು ಅನುಭವಿಸಬಹುದು. ನಿಗದಿತ ವೇಳಾಪಟ್ಟಿಯನ್ನು ಪೂರೈಸುವಲ್ಲಿ ಸ್ವಲ್ಪ ತೊಂದರೆಯಾಗುವ ಸಾಧ್ಯತೆಯೂ ಇರಬಹುದು. ವಿಶ್ರಾಂತಿ ಹೆಚ್ಚಿಸಿ ನಿಮ್ಮ ಒತ್ತಡ(stress)ವನ್ನು ನಿವಾರಿಸಿದರೆ ನಿಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಆದರೆ ನೀವು ದೃಢವಾಗಿ ಮತ್ತು ನಿರಂತರವಾಗಿ ಕೆಲಸ ಮಾಡಲು ಹಿರಿಯ ಸಲಹೆ ಪಡೆಯಿರಿ. ತಾಳ್ಮೆಯಿಂದ ಕೆಲಸ ಮಾಡಿ, ಎಲ್ಲವೂ ಸರಿ ಹೋಗುತ್ತದೆ.
ಸಿಂಹ(Leo)
ಬುದ್ಧಿವಂತಿಕೆ, ವಿವೇಕ, ಪ್ರೀತಿ ವ್ಯವಹಾರಗಳು, ಜೀವನ ಇತ್ಯಾದಿ ಸಂಗತಿಗಳಲ್ಲಿ ಅಂದುಕೊಂಡ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿವೆ. ನೀವು ಪ್ರಬಲ ವ್ಯಕ್ತಿಯಾಗಿ ಹೊರಹೊಮ್ಮುತ್ತೀರಿ. ನಿಮ್ಮ ಶತ್ರುಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ. ನಿಮ್ಮ ಬೆಳವಣಿಗೆಗೆ ಇದು ಸಕಾಲ. ಈ ಸಮಯವನ್ನು ಉತ್ತಮವಾಗಿ ಬಳಸಿಕೊಳ್ಳಿ. ಅನೇಕ ಮೂಲಗಳಿಂದ ಆರ್ಥಿಕ ಲಾಭ(monetary benefit) ಆಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮುನ್ನಡೆ.
Garuda Purana: ನೀವ್ ಮಾಡಿರೋ ತಪ್ಪಿಗೆ ನರಕದಲ್ಲೇನ್ ಶಿಕ್ಷೆ ಕಾದಿದೆ ನೋಡಿ..
ಕನ್ಯಾ(Virgo)
ಕುಟುಂಬ ಜೀವನದಲ್ಲಿ ಏರಿಳಿತ ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಕುಟುಂಬದಲ್ಲಿ ಪ್ರಮುಖ ವಿವಾದವನ್ನು ತಪ್ಪಿಸಲು ಪ್ರಯತ್ನಿಸಬೇಕು. ಜೀವನದಲ್ಲಿ ಹೆಚ್ಚಿನ ಸೌಕರ್ಯಗಳು ಮತ್ತು ಪ್ರಾಪಂಚಿಕ ಸಂತೋಷಗಳನ್ನು ನೀವು ಆನಂದಿಸುವಿರಿ. ಹಣಕಾಸಿನ ಆಸೆಗಳು ಈಡೇರುತ್ತವೆ. ಉತ್ತಮ ಜನರೊಂದಿಗೆ ಸಂಬಂಧ(relationship) ಹೊಂದುತ್ತೀರಿ. ನಿಮ್ಮ ವೈವಾಹಿಕ ಮತ್ತು ಪ್ರೇಮ ಸಮಸ್ಯೆಗಳು ನಿವಾರಣೆಯಾಗುತ್ತವೆ.
Trustworthy Zodiac Signs: ಈ ರಾಶಿಯವರನ್ನು ನೀವು ಕಣ್ಣು ಮುಚ್ಚಿ ನಂಬಬಹುದು
ತುಲಾ(Libra)
ನಿಮ್ಮ ಬುದ್ಧಿವಂತಿಕೆ ಮತ್ತು ಕೌಶಲ್ಯಗಳನ್ನು ಕ್ಷೇತ್ರದಲ್ಲಿ ಪ್ರಶಂಸಿಸಲಾಗುತ್ತದೆ. ನೀವು ಪ್ರತಿಫಲವನ್ನು ಸಹ ಪಡೆಯುತ್ತೀರಿ. ಈ ಅವಧಿಯಲ್ಲಿ ನೀವು ಪ್ರಯಾಣ(travel) ಮಾಡಬೇಕಾಗಿ ಬರಬಹುದು. ಈ ಸಣ್ಣ ಪ್ರವಾಸಗಳು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ನಿಮ್ಮ ಪರಿಶ್ರಮವು ನಿಮ್ಮ ವೃತ್ತಿಪರ ಜೀವನದಲ್ಲಿ ಮುಂದುವರಿಯಲು ಸಹಾಯ ಮಾಡುತ್ತದೆ. ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಪ್ರಗತಿ ಇದೆ.
ವೃಶ್ಚಿಕ(Scorpio)
ನಿಮ್ಮ ಆದಾಯ ಹೆಚ್ಚಾಗಬಹುದು. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಕುಟುಂಬದಲ್ಲಿನ ನಿಮ್ಮ ಪರಿಸ್ಥಿತಿ ಸಹ ಸಾಕಷ್ಟು ಸುಧಾರಿಸುತ್ತವೆ. ಹೊಸ ಚಟುವಟಿಕೆಗಳು ಮತ್ತು ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೀರಿ. ಜವಾಬ್ದಾರಿ(responsibility)ಗಳನ್ನು ನೀವು ಸುಲಭವಾಗಿ ಪೂರೈಸಲು ಸಾಧ್ಯವಾಗುತ್ತದೆ. ಅದ್ದೂರಿ ವಸ್ತುಗಳ ಮೇಲೆ ಖರ್ಚು ಮಾಡುವ ಸಾಧ್ಯತೆಯಿರುವುದರಿಂದ ನಿಮ್ಮ ಹೂಡಿಕೆಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ.
ಧನು(Sagittarius)
ಕೆಲಸದ ವಿಚಾರದಲ್ಲಿ ನಿಮ್ಮ ಮೇಲಾಧಿಕಾರಿಗಳಿಂದ ನೀವು ಗಮನಿಸಲ್ಪಡುತ್ತೀರಿ ಮತ್ತು ನೀವು ಮಾಡಿದ ಒಳ್ಳೆಯ ಕೆಲಸಕ್ಕಾಗಿ ನೀವು ಪ್ರಶಂಸೆಗೆ ಒಳಗಾಗಬಹುದು. ಕೈಲಾದಷ್ಟು ಶ್ರಮ ಪಡಿ, ಅದು ಖಂಡಿತವಾಗಿಯೂ ನಿಮ್ಮ ಪರವಾಗಿ ಮಾತ್ರ ಕೆಲಸ ಮಾಡುತ್ತದೆ. ಕುಟುಂಬ ಜೀವನವು ಆನಂದಮಯವಾಗಿರುತ್ತದೆ ಮತ್ತು ನೀವು ದೀರ್ಘ ಬಾಕಿ ಇರುವ ಕುಟುಂಬ ಪ್ರವಾಸವನ್ನು ಸಹ ಯೋಜಿಸಬಹುದು.
ಮಕರ ರಾಶಿ(Capricorn)
ನೀವು ಬಲಶಾಲಿಯಾಗುತ್ತೀರಿ ಮತ್ತು ನಿಮ್ಮ ವಿರೋಧಿಗಳು ನಿಮ್ಮನ್ನು ಕೆಳಕ್ಕೆ ಎಳೆಯಲು ಪ್ರಯತ್ನಿಸಿದರೂ ನೀವು ಹೆಚ್ಚು ಸಕ್ರಿಯರಾಗಿರುವುದರಿಂದ ಅವರನ್ನು ದೃಢವಾಗಿ ಎದುರಿಸುತ್ತೀರಿ. ಈ ಅವಧಿಯಲ್ಲಿ ತುಂಬಾ ಆತ್ಮವಿಶ್ವಾಸ, ಸಭ್ಯತೆಯಿಂದ ವರ್ತಿಸುತ್ತೀರಿ. ಹಣಕಾಸಿನ ಲಾಭವನ್ನು ಪಡೆಯುತ್ತೀರಿ. ಇದು ನಿಮ್ಮ ವೃತ್ತಿಜೀವನಕ್ಕೂ ಪ್ರಯೋಜನಕಾರಿಯಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ(competitive exams)ಗಳಲ್ಲಿ ಯಶಸ್ವಿಯಾಗಲು ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಾರೆ.
ಕುಂಭ(Aquarius)
ಸಂಪತ್ತನ್ನು ಹೆಚ್ಚಿಸಲು ಕಠಿಣ ಪರಿಶ್ರಮ ಮತ್ತು ಪ್ರಯತ್ನವನ್ನು ಮಾಡುತ್ತೀರಿ. ಸಂಪತ್ತಿನ ಕ್ರೋಢೀಕರಣದ ಬಗ್ಗೆ ಗಮನ ಹರಿಸುತ್ತೀರಿ, ಅದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ಸಂಪತ್ತು(wealth) ಮತ್ತು ಜ್ಞಾನ ಸಂಪತ್ತನ್ನು ಸಂಪಾದಿಸುವ ಸಮಯ ಇದು. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ತೃಪ್ತಿಪಡಿಸುತ್ತದೆ. ಈ ಸಮಯದಲ್ಲಿ ವೈಯಕ್ತಿಕ ಜೀವನವು ಅತ್ಯುತ್ತಮವಾಗಿರುತ್ತದೆ. ನಿಮ್ಮ ಮನಸ್ಸು ಹಗುರಾಗಿರುತ್ತದೆ.
ಮೀನ(Pisces)
ಯಶಸ್ಸನ್ನು ಪಡೆಯಲು ಕೇವಲ ನಿಮ್ಮ ಅದೃಷ್ಟವನ್ನು ಮಾತ್ರ ಅವಲಂಬಿಸಬಾರದು, ಆದರೆ ಅದಕ್ಕಾಗಿ ಕಠಿಣ ಪರಿಶ್ರಮ ಮತ್ತು ಪ್ರಯತ್ನ(effort)ವನ್ನು ಹಾಕಬೇಕು. ಮಾಡುವ ಕೆಲಸದಲ್ಲಿ ನಂಬಿಕೆಯನ್ನು ಹೊಂದಿರುವುದು ಬಹಳ ಮುಖ್ಯ. ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲು ಹೊಸ ಒಪ್ಪಂದವನ್ನು ನೀವು ಅಂತಿಮಗೊಳಿಸಬಹುದು. ಒಟ್ಟಾರೆಯಾಗಿ, ಹಣ ಮತ್ತು ಆರ್ಥಿಕ ಸ್ಥಿತಿಯ ವಿಷಯದಲ್ಲಿ ಸಮಯವು ತುಂಬಾ ಒಳ್ಳೆಯದು ಮತ್ತು ಮಂಗಳಕರವಾಗಿರುತ್ತದೆ.