* ಈ ವಾರದ ಭವಿಷ್ಯ ಹೇಗಿದೆ?
* ಆಸ್ತಿ ವ್ಯವಹಾರಗಳು ಈ ರಾಶಿಯವರಿಗೆ ಭಾರೀ ಲಾಭ ತಂದುಕೊಡಲಿವೆ!
* ಇನ್ನುಳಿದ ರಾಶಿಗಳು ಹೇಗಿವೆ? ಹೀಗಿದೆ ಈ ವಾರದ ರಾಶಿಫಲ
ಮೇಷ(Aries): ನೀವು ಹೊರಜಗತ್ತಿಗೆ ಬಹಳ ಶಕ್ತಿಶಾಲಿ ಅಂತ ಕಂಡರೂ ಒಳಗೊಳಗೇ ಸಾಕಷ್ಟು ದೌರ್ಬಲ್ಯ ಹೊಂದಿದವರು ನೀವು. ಆ ದೌರ್ಬಲ್ಯಗಳೇ ನೀವು ಎತ್ತರಕ್ಕೆ ಏರಿದಾಗ ಸಹಾಯ ಮಾಡಿದವರನ್ನು ಕೊಂಚ ನಿರ್ಲಕ್ಷಿಸುವಂತೆಯೂ, ಕಷ್ಟ ಬಂದಾಗ ಅವರ ಕೈ ಕಾಲು ಹಿಡಿದು ಸಹಾಯ ಬೇಡುವಂತೆಯೂ ಮಾಡುತ್ತದೆ. ಮನಸ್ಸು ಮಾಡಿದರೆ ಇದನ್ನು ಮೀರೋದು ಕಷ್ಟ ಅಲ್ಲ. ಧನ ಲಾಭ ಇದೆ. ಮನೆಯಲ್ಲಿ ಕೊಂಚ ಅಶಾಂತಿ.
ವೃಷಭ(Taurus): ವ್ಯಾಪಾರಸ್ಥರು ತಮ್ಮ ಹಣವನ್ನು ಹೆಚ್ಚಿಸುವ ಹೊಸ ಪ್ರವೃತ್ತಿಗಳು ಮತ್ತು ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ನಿಮ್ಮ ಆರ್ಥಿಕ ಸ್ಥಿತಿ ಈ ವಾರ ತುಂಬಾ ಬಲವಾಗಿರುತ್ತದೆ ಮತ್ತು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ಉಳಿತಾಯವು ನಿಮ್ಮ ಕುಟುಂಬಕ್ಕೆ ಪ್ರಯೋಜನಕಾರಿಯಾಗಿದೆ. ಮನಸ್ಸಿಗೆ ಕಿರಿಕಿರಿ ಉಂಟುಮಾಡುವ ಸಂಗತಿಗಳಿಂದ ದೂರವಿರಿ.
ಮಿಥುನ(Gemini): ಮಿಥುನ ರಾಶಿಯ ಜನರು ತಮ್ಮ ಶತ್ರುಗಳಿಂದ ಸೃಷ್ಟಿಯಾಗುವ ಕೆಲವು ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ ನೀವು ಜಾಗರೂಕರಾಗಿರಬೇಕು ಮತ್ತು ಅವರ ಬಗ್ಗೆ ವಿರೋಧದ ಮಾತುಗಳನ್ನು ಆಡುವುದನ್ನು ತಪ್ಪಿಸಬೇಕು. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಸಮಸ್ಯೆ ತಲೆದೋರಬಹುದು. ಮನೆಯವರ ಬೆಲೆ ತಿಳಿಯಬಹುದು. ಪ್ರೀತಿ, ಪ್ರೇಮದ ಬಗ್ಗೆ ಯೋಚಿಸಿ ಮುಂದುವರಿಯಿರಿ.
ಕಟಕ(Cancer): ಆಸ್ತಿ ಸಂಬಂಧಿತ ವಿಷಯಗಳಲ್ಲಿ ಜಾಣ್ಮೆಯಿಂದ ವ್ಯವಹರಿಸಬೇಕು. ಆಸ್ತಿಯಲ್ಲಿ ಹೂಡಿಕೆ ಮಾಡಿದ ಬಂಡವಾಳ ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ಮೇಲಧಿಕಾರಿಗಳೊಂದಿಗೆ ದಕ್ಷತೆಯಿಂದ ವ್ಯವಹರಿಸುವ ಜನರಿಗೆ ಉದ್ಯೋಗದಲ್ಲಿ ಬೆಳೆಯುವ ಅವಕಾಶಗಳು ಸಿಗಲಿವೆ. ಪ್ರಮುಖ ವ್ಯಕ್ತಿಗಳಿಗೆ ಕಿರಿಕಿರಿ ಮಾಡಬೇಡಿ. ನಿಮ್ಮ ಕೆಲಸವನ್ನು ಪ್ರೀತಿಯಿಂದ ಮಾಡಿ, ಫಲಿತಾಂಶ ಚೆನ್ನಾಗಿಯೇ ಇರುತ್ತದೆ.
ಸಿಂಹ(Leo): ಈ ವಾರ ವಾದ ಮತ್ತು ಹಠಮಾರಿಗಳಾಗಿರಬಹುದು. ಕಷ್ಟಕರ ಸಂದರ್ಭಗಳಲ್ಲಿ ಸ್ವಲ್ಪ ತಾಳ್ಮೆಯಿಂದ ವರ್ತಿಸಿರಿ. ಆದಷ್ಟು ವಾದಗಳಿಂದ ದೂರವಿರಿ. ಕುಟುಂಬದ ಸದಸ್ಯರು ತೀರ್ಥಯಾತ್ರೆಗೆ ಹೋಗಬಹುದು. ನೀವು ಜೀವನ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಆರ್ಥಿಕ ದೃಷ್ಟಿಯಿಂದ ಈ ವಾರದ ಆರಂಭ ಅಷ್ಟು ಪರಿಣಾಮಕಾರಿಯಾಗಿಲ್ಲ. ಗುರು ಹಿರಿಯರ ಮಾರ್ಗದರ್ಶನದಲ್ಲೇ ಮುನ್ನಡೆಯಿರಿ
ಕನ್ಯಾ(Virgo): ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಉತ್ತಮ ಭವಿಷ್ಯಕ್ಕಾಗಿ ತಮ್ಮ ಯೋಜನೆಗಳನ್ನು ಮರು ಪರಿಶೀಲಿಸುವುದು ಉತ್ತಮ. ಪ್ರೀತಿ, ಪ್ರೇಮದ ವಿಚಾರದಲ್ಲಿ ಅತೃಪ್ತಿ, ಆತಂಕಗಳು ನಿವಾರಣೆ ಯಾಗುತ್ತವೆ. ಸಂಗಾತಿಯ ಭಾವನೆಗಳನ್ನು ಸಂಪೂರ್ಣವಾಗಿ ಅರಿಯಲು ಸಾಧ್ಯವಾಗುತ್ತದೆ. ಉದ್ಯೋಗಾಕಾಂಕ್ಷಿಗಳು ಯಶಸ್ವಿಯಾಗಲು ಹೆಚ್ಚುವರಿ ಪ್ರಯತ್ನಗಳನ್ನು ಮಾಡಬೇಕಾಗಬಹುದು. ಮನೆ ದೇವರನ್ನು ಪ್ರಾರ್ಥಿಸಿ.
ತುಲಾ(Libra): ಈ ವಾರ ನೀವು ಏನೇ ಮಾಡಿದರೂ ಉತ್ಸಾಹದಿಂದ ಇರುತ್ತೀರಿ. ಚೆನ್ನಾಗಿ ಯೋಚಿಸಿ ತೆಗೆದುಕೊಂಡ ನಿರ್ಧಾರಗಳು ದೀರ್ಘಕಾಲದ ವರೆಗೆ ಪರಿಣಾಮಕಾರಿಯಾಗುತ್ತವೆ. ನಿಮ್ಮ ಆರ್ಥಿಕ ಸ್ಥಿತಿ ಯಲ್ಲಿ ಸುಧಾರಣೆ ಸಾಧ್ಯ. ಆಸ್ತಿ ವ್ಯವಹಾರಗಳು ನಿಮಗೆ ಲಾಭವನ್ನು ನೀಡುತ್ತದೆ. ಉದ್ಯೋಗಸ್ಥರಿಗೆ ಪ್ರಗತಿಯ ಸಾಧ್ಯತೆಗಳಿವೆ. ಕೋರ್ಟ್ ವ್ಯವಹಾರಗಳು, ಆಸ್ತಿ ವಿಚಾರಗಳಲ್ಲಿ ನಿಮ್ಮ ಪರವಾಗಿ ಕೆಲಸಗಳಾಗಬಹುದು.
ವೃಶ್ಚಿಕ(Scorpio): ವ್ಯಾಪಾರ ವ್ಯವಹಾರಗಳಲ್ಲಿ ಗೆಲುವಿದೆ. ಈ ವಾರ ಹಣದ ವಹಿವಾಟಿನ ವಿಚಾರಗಳಲ್ಲಿ ನೀವು ಅದೃಷ್ಟಶಾಲಿಗಳು. ಜೊತೆಗೆ ಜನಪ್ರಿಯತೆಯನ್ನು ಗಳಿಸುವಿರಿ. ವ್ಯಾಪಾರದಿಂದ ನಿಮ್ಮ ಗಳಿಕೆಯೂ ಹೆಚ್ಚಾಗುತ್ತದೆ. ನೀವು ಅಧಿಕಾರಿಗಳಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಪ್ರೇಮಿಗಳಿಗೆ ಈ ಸಮಯವು ಶುಭವಲ್ಲ. ವಿವಾಹಿತರು ಸಂಗಾತಿಯೊಂದಿಗೆ ಸರಸದಿಂದ ಇರುವರು. ಒಳ್ಳೆಯ ಕಾರ್ಯಗಳು ಕೈಗೂಡುವ ಸಾಧ್ಯತೆ.
ಧನುಸ್ಸು(Sagittarius): ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಈ ವಾರ ಶುಭವಿದೆ. ಭವಿಷ್ಯದಲ್ಲಿ ಬಹಳ ಲಾಭದಾಯಕವೆಂದು ಸಾಬೀತುಪಡಿಸುವ ಹೊಸ ಒಪ್ಪಂದವನ್ನು ನೀವು ಅಂತಿಮಗೊಳಿಸಬಹುದು. ವೃತ್ತಿಪರ ಮತ್ತು ಸಾಮಾಜಿಕ ವಲಯಗಳಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯಲು ಈ ವಾರ ಅನುಕೂಲಕರವಾಗಿದೆ. ಒಡಹುಟ್ಟಿದವರೇ ನಿಮ್ಮ ವಿರುದ್ಧ ದನಿ ಎತ್ತಬಹುದು. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಮಕರ(Capricorn): ಈ ವಾರ ನೀವು ಅದೃಷ್ಟದ ಜೊತೆಗೆ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕವನ್ನು ಸ್ಥಾಪಿಸುತ್ತೀರಿ. ಹೊಸ ಪಾಲುದಾರಿಕೆಗೆ ಪ್ರವೇಶಿಸಬಹುದು ಮತ್ತು ನಿಮ್ಮ ಲಾಭವನ್ನು ಹೆಚ್ಚಿಸಬಹುದು. ಕೆಲಸಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದರೆ, ಪ್ರಯತ್ನ ಮುಂದುವರಿಸಿ. ಮಾನಸಿಕ ಶಾಂತಿಗಾಗಿ ಧ್ಯಾನ, ಪ್ರಾಣಾಯಾಮ ಮಾಡಿ. ಇತರರಿಗೆ ಗೌರವ ನೀಡಿ, ಒಳ್ಳೆಯದಾಗುತ್ತದೆ.
ಕುಂಭ(Aquarius): ನಿಮ್ಮ ಬುದ್ಧಿವಂತಿಕೆಯಿಂದ ಎಲ್ಲ ಕೆಲಸವನ್ನೂ ಉತ್ತಮ ರೀತಿಯಲ್ಲಿ ಮಾಡುವಿರಿ. ನಿಮ್ಮ ನಿಲುವು ಗಳಲ್ಲಿ ಗಟ್ಟಿತನ ಇರುವ ಕಾರಣ ಅಂದುಕೊಂಡ ವಿಚಾರಗಳನ್ನು ಜನರಿಗೆ ತಲುಪಿಸಲು ಸಾಧ್ಯವಾ ಗುತ್ತದೆ. ಈ ಕಾರಣಕ್ಕೇ ವ್ಯವಹಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ದೊಡ್ಡ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಪ್ರಯಾಣದಿಂದಲೂ ಲಾಭವಾಗಲಿದೆ. ಮಕ್ಕಳ ಬಗ್ಗೆ ಅವಜ್ಞೆ ಬೇಡ.
ಮೀನ(Pisces): ಈ ವಾರ ನಿಮ್ಮಲ್ಲಿ ಕೆಲವರು ಉತ್ತಮ ವ್ಯಕ್ತಿಗಳ ಸಂಪರ್ಕ ಬೆಳೆಸಿಕೊಳ್ಳುವಿರಿ ಮತ್ತು ಲಾಭದಾಯಕ ವ್ಯವಹಾರಗಳನ್ನು ಮಾಡುವಿರಿ. ವ್ಯಾಪಾರ ಪಾಲು ದಾರಿಕೆ ಅಥವಾ ಸಹಕಾರ ಕ್ಷೇತ್ರಕ್ಕೆ ಪ್ರವೇಶಿಸಲು ಅಥವಾ ವ್ಯಾಪಾರಕ್ಕೆ ಸಂಬಂಧಿಸಿದಂತೆ ದೂರ ಪ್ರಯಾಣ ಮಾಡಲು ಈ ವಾರ ಅನುಕೂಲಕರವಾಗಿದೆ. ಉದ್ಯೋಗಿ ಗಳಿಗೆ ಶ್ರೇಣಿ ಮತ್ತು ಸಂಭಾವನೆಯ ವಿಷಯದಲ್ಲಿ ಸುಧಾರಣೆ ಸಾಧ್ಯ. ಕುಲದೇವರನ್ನು ಪ್ರಾರ್ಥಿಸಿ.