ವಾರ ಭವಿಷ್ಯ: ಈ ರಾಶಿಯವರು ದೊಡ್ಡವರ ಗಮನ ಸೆಳೆಯಲು ವಿಫಲ!

By Kannadaprabha News  |  First Published Jul 12, 2020, 9:33 AM IST

ಈ ವಾರದ ಭವಿಷ್ಯ| ಯಾರಿಗೆ ಶುಭ? ಯಾರಿಗೆ ಶುಭ ವಾರ? ಇಲ್ಲಿದೆ ಈ ವಾರದ ರಾಶಿ ಫಲ


ಮೇಷ: ತಂದೆಯ ನೆರವಿನಿಂದ ಸಂಭವನೀಯ ಅಪಾಯಗಳು ತಪ್ಪಲಿವೆ. ಕೆಲಸದ ಸ್ಥಳದಲ್ಲಿ ಸಂತೋಷ ಹೆಚ್ಚಾಗಲಿದೆ. ಮನೆಗೆ ಬಂಧುಗಳು ಆಗಮಿಸುವರು. ವೈದ್ಯಕೀಯ ಖರ್ಚು-ವೆಚ್ಚಗಳಲ್ಲಿ ಇಳಿಕೆಯಾಗಲಿದೆ. ಆತ್ಮವಿಶ್ವಾಸ ಹಿಮ್ಮಡಿಯಾಗಲಿದೆ. ಸಹೋದರನ ಸಹಕಾರದ ಅಗತ್ಯ ಬರಬಹುದು. 

ವೃಷಭ: ಸಾಕಷ್ಟು ಸಮಯಾವಕಾಶ ಸಿಗಲಿದೆ. ಕೆಲಸದ ಒತ್ತಡದಿಂದ ಹೊರಗೆ ಬರಲಿದ್ದೀರಿ. ಸಾಧಕರ ಭೇಟಿಯಿಂದ ನಿಮ್ಮಲ್ಲಿ ಉತ್ಸಾಹ ಹೆಚ್ಚಾಗಲಿದೆ. ಭೂ ವ್ಯಾಜ್ಯದಲ್ಲಿ ಅನುಭವಸ್ಥರ ಮಾತನ್ನು ಕಡೆಗಣಿಸಬೇಡಿ. ಹೊಸ ಉದ್ಯಮಕ್ಕಾಗಿ ಕಚೇರಿಗಳ ಹುಡುಕಾಟ ನಡೆಸಲಿದ್ದೀರಿ. ಬಂಧುಗಳಿಂದ ಆರ್ಥಿಕ ಸಹಕಾರ ದೊರೆಯಲಿದೆ.

Tap to resize

Latest Videos

undefined

ಮಿಥುನ: ವಾರದ ಮೊದಲಾರ್ಧ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಹೆಚ್ಚಿನ ಜವಾಬ್ದಾರಿಗಳು ಬರಲಿವೆ. ಯಾವುದೇ ಕಾರಣಕ್ಕೂ ಆತುರದ ತೀರ್ಮಾನ ತೆಗೆದುಕೊಳ್ಳವುದು ಬೇಡ. ನಿಮ್ಮ ನೇರ ನಡೆ ನುಡಿಯಿಂದ ಕೆಲಸದಲ್ಲಿ ಬೇಗನೇ ಯಶ ಸಾಧಿಸುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಿರಲಿ.

ಕಟಕ:  ಮೆಶಿನ್‌ಗಳು, ಕಂಪ್ಯೂಟರ್ ಖರೀದಿಸಬೇಕು ಅಂದುಕೊಂಡಿದ್ದರೆ ಆ ಪ್ಲ್ಯಾನ್ ಮುಂದೂಡಿ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಖುಷಿ ಜಾಸ್ತಿ. ಲೈಫ್ ಇಂಟೆರೆಸ್ಟಿಂಗ್ ಆಗಿ ಕಾಣಬಹುದು. ಕೆಲಸದ ಹೊರೆ ಹೆಚ್ಚು. ತಾಳ್ಮೆ ಇರಲಿ. ಇನ್ನೊಬ್ಬರನ್ನು ಕಾಯೋದಕ್ಕಿಂತ ನಮ್ಮ ಕೆಲಸ ನಾವೇ ಮಾಡೋದು ಬೆಟರ್

ಸಿಂಹ: ಬದುಕಿನ ಬಗ್ಗೆ ಪ್ರೀತಿ ಹೆಚ್ಚಬಹುದು. ಸಂಬಂಧಗಳು ಹೆಚ್ಚು ತೀವ್ರವಾಗಬಹುದು. ಪ್ರೀತಿ ಫಲ ಕೊಡಬಹುದು. ಕಲಾವಿದರು ಹಾಗೂ ಲೇಖಕರಿಗೆ ಅದ್ಭುತ ಫಲವಿದೆ. ಸಾಹಸ ಚಟುವಟಿಕೆಗಳತ್ತ ಮನಸ್ಸು ಎಳೆಯುತ್ತದೆ. ಪ್ರವಾಸಕ್ಕೆ ಸಕಾಲ. ಸಹೋದ್ಯೋಗಿಗಳ ಸಹಕಾರವಿರುತ್ತೆ.

ಕನ್ಯಾ: ಕಠಿಣ ಪರಿಶ್ರಮ ಅನಿವಾರ್ಯ. ಆದರೆ ಕೆಲಸದಲ್ಲಿ ಖುಷಿ ಸಿಗುತ್ತೆ. ಉಳಿದುಕೊಂಡಿದ್ದ ಕಾರ್ಯಗಳೆಲ್ಲ ಈ ವಾರ ಪೂರ್ಣವಾಗುತ್ತೆ. ಆರ್ಥಿಕ ಸ್ಥಿರತೆ ಇರುತ್ತದೆ. ಸಾಮರ್ಥ್ಯ, ಅರ್ಹತೆ ಇದ್ದರೂ ದೊಡ್ಡವರ ಗಮನ ಸೆಳೆಯಲು ವಿಫಲವಾಗಬಹುದು.

ತುಲಾ: ನಿಮ್ಮ ಯೋಚನೆಗಳು ಇತರರಿಗೆ ಮನದಟ್ಟಾಗಬಹುದು. ಹಾಗಂತ ಹೆಚ್ಚಿನ ಫಲ ನಿರೀಕ್ಷಿಸುವಂತಿಲ್ಲ. ನಿಮಗಿದು ಪರೀಕ್ಷೆಯ ಕಾಲ. ಪರ್ಫಾಮೆನ್ಸ್ ಹೇಗಿರುತ್ತೆ ಅನ್ನುವುದರ ಮೇಲೆ ಫಲಿತಾಂಶ ನಿಂತಿರುತ್ತದೆ. ಕೆಲಸದ ಬಗ್ಗೆ ಜಾಗ್ರತೆ ಇರಲಿ.

ವೃಶ್ಚಿಕ:  ನಿಮ್ಮಉದ್ದೇಶ, ಗುರಿ ನಿಚ್ಚಳವಾಗಿರಲಿ. ಅದು ಈಡೇರುವ ವಾತಾವರಣ ನಿರ್ಮಾಣವಾಗುತ್ತೆ. ಹೊಸ ಕಾರ್ಯಕ್ಕೆ ಈಗ ಕೈ ಹಾಕಬೇಡಿ. ಮನೆ, ಮಕ್ಕಳು, ಸಂಬಂಧದ ಬಗ್ಗೆ ಕಾಳಜಿ ಮಾಡಿ. ನಿರ್ಲಕ್ಷಿಸಿದರೆ ಪಾಠ ಕಲಿಯಬೇಕಾಗುತ್ತದೆ. ಭಾನುವಾರ ಶುಭ, ಸೋಮವಾರ ಕೊಂಚ ಕಠಿಣ. ಎಚ್ಚರಿಕೆಯಿಂದಿರಿ.

ಧನುಸ್ಸು: ಸೌಂದರ್ಯದ ಬೆನ್ನತ್ತಿ ನಡೆದರೆ ಕಹಿ ಸಿಗಲಿದೆ. ಬೆಳ್ಳಗೆ ಇರುವುದೆಲ್ಲಾ ಹಾಲಲ್ಲ ಹಾಗೆ ಕಣ್ಣಿಗೆ ಕಂಡಿದ್ದೇಲ್ಲ ನಿಜವಲ್ಲ. ಸಮಾಲೋಚನೆ ನಡೆಸಿ ನಿಮ್ಮ ನಿರ್ಧಾರ ಕೈಗೊಂಡು ಮುನ್ನಡೆಯಿರಿ. ಉದ್ಯೋಗ ದಲ್ಲಿ ಉತ್ತಮ. ಮಹಿಳೆಯರು ಈ ವಾರ ಮನೆ ನಿರ್ವಹಣೆಯಲ್ಲಿ ಚೆನ್ನಾಗಿದ್ದು, ಎಲ್ಲರ ಪ್ರೀತಿಗೆ ಪಾತ್ರರಾಗಲಿದ್ದೀರಿ.

ಮಕರ: ಒಳ್ಳೆ ಕೆಲಸ ಮಾಡುವಾಗ ಹಲವು ಅಡೆತಡೆಗಳು ಬರುತ್ತವೆ. ಹಾಗೆ ಬಂದ ಕಷ್ಟಗಳನ್ನು ಸೂಕ್ತ ರೀತಿಯಲ್ಲಿ ಎದುರಿಸುವಿರಿ. ನಿಮ್ಮ ದೃಢ ಹಾಗೂ ಪ್ರಾಮಾಣಿಕ ಪ್ರಯತ್ನವೇ ನಿಮ್ಮನ್ನು ಮುನ್ನಡೆಸಲಿದೆ. ವಾರಾಂತ್ಯದಲ್ಲಿ ನೆಮ್ಮದಿ ನೆಲಸಲಿದ್ದು, ಕುಟುಂಬದೊಂದಿಗೆ ಸಮಯ ಕಳೆಯಲು ದೂರ ಪ್ರಯಾಣ ಸಾಧ್ಯ.

ಕುಂಭ: ವೃತ್ತಿಯಲ್ಲಿ ವಿದೇಶಿ ಪ್ರಯಾಣ ಬೆಳೆಸಬೇಕು, ಅಲ್ಲಿದ್ದು ಕೆಲಸ ಮಾಡಬೇಕು ಎಂಬ ನಿಮ್ಮ ಆಸೆ, ಆಕಾಂಕ್ಷೆ, ಕನಸುಗಳು ಈ ವಾರ ಈಡೇರುವ ಸಾಧ್ಯತೆ. ಅದಕ್ಕೆ ಸ್ವಲ್ಪ ನೀವು ಶ್ರಮ ಹಾಕಬೇಕಷ್ಟೆ. ಮಕ್ಕಳ ಓದಿನಲ್ಲಿ ಕೊಂಚ ನೆಮ್ಮದಿ. ಪರೀಕ್ಷೆ ಸಮಯವಾದ್ದರಿಂದ ಸ್ವಲ್ಪ ಹೆಚ್ಚು ಸಮಯ ಓದಿನಲ್ಲಿ ನೀಡುವುದು ಒಳಿತು.

ಮೀನ: ಹಳೆಯ ನೆನಪುಗಳನ್ನು ಕೆದಕಿಕೊಂಡು ಇಂದಿನ ಹಾಗೂ ಮುಂದಿನ ಸುಂದರ ದಿನಗಳನ್ನು ಹಾಳು ಮಾಡಿಕೊಳ್ಳದಿರಿ. ಹಳೆಯದ್ದನ್ನು ಮರೆತು ಮುನ್ನಡೆದರೆ ಮನೆಯಲ್ಲಿ ಸಂತೋಷ ನೆಮ್ಮದಿ ನೆಲಸಲಿದೆ. ವೃತ್ತಿಪರ ಮಹಿಳೆಯರಿಗೆ ಹೆಚ್ಚಿನ ಲಾಭ, ಕೆಲಸದಲ್ಲಿ ನೆಮ್ಮದಿ, ಮೇಲಧಿಕಾರಿಯಿಂದ ಪ್ರಶಂಸೆ ಸಿಗಲಿದೆ.

click me!