Weekly Horoscope: ವೃಷಭಕ್ಕೆ ಉತ್ತಮ ಹಣದ ಹರಿವು, ಧನುವಿಗೆ ಭೂಮಿಯಿಂದ ಲಾಭ

By Suvarna News  |  First Published Feb 13, 2022, 9:00 AM IST

ತಾರೀಖು 13ರಿಂದ 19 ಫೆಬ್ರವರಿ 2022ರವರೆಗೆ ನಿಮ್ಮ ಭವಿಷ್ಯ ಹೇಗಿದೆ?
ಸಿಂಹ, ಕನ್ಯಾಗೆ ಶತ್ರುಬಾಧೆ, ಉಳಿದವರಿಗೆ ಈ ವಾರದ ಫಲ ಏನಿದೆ ನೋಡಿ


ಮೇಷ(Aries)
ಉದ್ಯೋಗದಲ್ಲಿ ಯಾವುದೇ ರೀತಿಯ ತೊಂದರೆಯಿಲ್ಲ. ಚುರುಕಿನಿಂದ ಕೆಲಸಗಳು ಸಾಗುತ್ತಾ ಹೋಗುತ್ತವೆ. ಸುಲಭವಾಗಿ ಕೆಲಸ ಮಾಡುವುದು ಸಾಧ್ಯವಾಗುತ್ತದೆ. ಜ್ಞಾನ(Knowledge) ವೃದ್ಧಿಸಿಕೊಳ್ಳುವಿರಿ. ಇದು ನಿಮ್ಮ ಭಾಗ್ಯೋದಯ ಕಾಲ ಎಂದು ಹೇಳಬಹುದು. ಸರ್ಕಾರಿ ಅಥವಾ ಖಾಸಗಿ ಕೆಲಸದಲ್ಲೂ ಲಾಭವನ್ನೇ ಗಳಿಸುತ್ತೀರಿ. ಆದರೆ ಇದನ್ನು ಸದುಪಯೋಗ ಪಡಿಸಿಕೊಳ್ಳಿ. ಮುಂದಿನ ದಿನಗಳಲ್ಲಿ ಸಮಸ್ಯೆ ಬರುವುದರಿಂದ ಎಚ್ಚರಿಕೆ ಅತ್ಯಗತ್ಯ.

ವೃಷಭ(Taurus)
ಮನೆ ಕಟ್ಟುವ ಬಗ್ಗೆ ಯೋಜನೆ ರೂಪಿಸಿಕೊಂಡಿದ್ದರೆ ಅದರಲ್ಲಿ ಯಶಸ್ವಿ ಆಗುತ್ತೀರಿ. ಹಣಕಾಸಿನ ಹರಿವು ಈ ವಾರ ಚೆನ್ನಾಗಿರುತ್ತೆ. ಆರೋಗ್ಯ(Health)ದಲ್ಲಿ ಕೊಂಚ ವ್ಯತ್ಯಾಸ ಉಂಟಾಗಬಹುದು. ಆದರೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ನೀವು ಅದರಿಂದ ಬೇಗ ಚೇತರಿಸಿಕೊಳ್ಳುವಿರಿ. ಹಣಕಾಸಿನ ಹರಿವು ಚೆನ್ನಾಗಿರುತ್ತದೆ. ಹಿಂದೆ ಯಾರಿಗೂ ನೀಡಿದ ಹಣ(money) ವಾಪಾಸ್ ಬರಬಹುದು. ಉದ್ಯೋಗದಲ್ಲಿ ಶುಭ ಫಲವಿದೆ.

Tap to resize

Latest Videos

undefined

ಮಿಥುನ(Gemini)
ಸಂಗಾತಿ ಜೊತೆಗೆ ವಾದ ಮಾಡುತ್ತೀರಿ. ಗಂಡ ಹೆಂಡತಿ ನಡುವೆ ಕಲಹ ಉಂಟಾಗಬಹುದು. ನಿಮ್ಮ ಕೆಲವು ಮಾತುಗಳು ಮನೆಯಲ್ಲಿದ್ದವರಿಗೆ ನೋವು ತರಬಹುದು. ನಿಮ್ಮ ಉದ್ವೇಗ, ಮಾತಿನ ಮೇಲೆ ಹತೋಟಿ ಸಾಧಿಸಲಾಗದೇ ಮನಃಶಾಂತಿ ಹಾಳಾಗುವುದು. ನಿದ್ರಾಹೀನತೆಯಿಂದ ತಲೆನೋವು(Headache) ಬರಬಹುದು. ಧ್ಯಾನ ಮಾಡಿ. ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಇರಲ್ಲ. ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ.

ಕಟಕ(Cancer)
ನೂರೆಂಟು ಯೋಚನೆಗಳು ತಲೆಗೆ ಬರಬಹುದು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಹೆಚ್ಚಿನ ಹಣ ಹೂಡಿಕೆ(Investment) ಮಾಡುವಾಗ ಎಚ್ಚರದಿಂದಿರಿ. ನಿಮ್ಮ ಹಣ ಪರರ ಸೊತ್ತಾಗುವ ಸಾಧ್ಯತೆ ಈ ವಾರ ಹೆಚ್ಚಿದೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಆಗಬಹುದು. ಮನೆ, ಆಸ್ತಿ, ಭೂಮಿ ವಿಚಾರದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳುವಿರಿ. ಆದರೆ ಇದೆಲ್ಲ ಅನವಶ್ಯಕ. ಸದ್ಯ ಯಾರಿಗೂ ಹಣ ಕೊಡೋದು ಉತ್ತಮ.

ಸಿಂಹ(Leo)
ಉತ್ತಮ ಫಲ ಬಯಸೋದು ಕಷ್ಟ. ಶತ್ರುಗಳಿಂದ ಕೊಂಚ ಬಾಧೆ ಇರುತ್ತದೆ. ಸಾಲ ಬಾಧೆ ಬಹಳ ಕಾಡಬಹುದು. ಬುಧವಾರ(Wednesday) ಹೆಸರು ಕಾಳು ದಾನ ಮಾಡಿ, ರಾಯರ ಆರಾಧನೆ ಮಾಡಿ. ಸಮಸ್ಯೆಗಳು ನಿವಾರಣೆ ಆಗುತ್ತದೆ. ಸಂಗಾತಿಯ ಜೊತೆಗೆ ವಾದ ವಿವಾದಗಳು ನಡೆಯಬಹುದು. ಉದ್ಯೋಗದಲ್ಲಿ ಇರುವ ಅಡೆತಡೆಗಳು ನಿವಾರಣೆ ಆಗುತ್ತದೆ. ಅಂದುಕೊಂಡ ಕೆಲಸಗಳು ವೇಗ ಗತಿಯಲ್ಲಿ ನಡೆಯುತ್ತದೆ.

Zodiac Style: ರಾಶಿಗನುಗುಣವಾಗಿ ಉಡುಗೆ ತೊಟ್ಟು, ಅದೃಷ್ಟ ನಿಮ್ಮದಾಗಿಸಿಕೊಳ್ಳಿ

ಕನ್ಯಾ(Virgo)
ನಿಮ್ಮ ಶತ್ರುಗಳಿಂದ ನಿಮಗೆ ನಷ್ಟವಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಯಾವುದೇ ರೀತಿ ತೊಂದರೆ ಇರುವುದಿಲ್ಲ. ಸ್ವಂತ ಉದ್ಯೋಗದಲ್ಲಿ ಕೆಲಸಗಳು ನಿಧಾನವಾದರೂ ಫಲ ಚೆನ್ನಾಗಿದೆ. ಅಭಿವೃದ್ಧಿ ಕಾಣುವಿರಿ. ಉದ್ಯೋಗಿಗಳಿಗೂ ಉತ್ತಮ ಫಲ ನಿರೀಕ್ಷಿಸಬಹುದು. ಸರ್ಕಾರಿ ಕೆಲಸ ಮಾಡುವವರು ಕೊಂಚ ಎಚ್ಚರಿಕೆಯಿಂದಿರಿ. ಮೇಲಾಧಿಕಾರಿಗಳಿಂದ ಒತ್ತಡ(Stress) ಹೆಚ್ಚಾಗಬಹುದು. ಮನಸ್ಸಿಗೆ ಬೇಸರ ಆಗಬಹುದು. ಧನಲಾಭವಿದೆ.

ತುಲಾ(Libra)
ಕೋಪದಿಂದ ಪರಿಸ್ಥಿತಿ ಕೈ ಮೀರಿ ಹೋಗುವಂಥಾ ಸ್ಥಿತಿ ಮೈ ಮೇಲೆ ಎಳೆದುಕೊಳ್ಳಬೇಡಿ. ತಾಳ್ಮೆಯಿಂದ ವ್ಯವಹರಿಸಿ. ಉದ್ಯೋಗದಲ್ಲಿ ಉತ್ತಮ ಅಭಿವೃದ್ಧಿ ಕಾಣುವಿರಿ. ಬುದ್ಧಿವಂತಿಕೆ, ಪ್ರತಿಭೆ(Talent), ಹೊಸ ಐಡಿಯಾಗಳು, ಶ್ರಮಪಟ್ಟು ಕೆಲಸ ಮಾಡುವ ಕ್ರಮ ಇತ್ಯಾದಿಗಳಿಂದ ನೀವು ಉದ್ಯೋಗದಲ್ಲಿ ಉತ್ತಮ ಫಲ ಅನುಭವಿಸುವಿರಿ. ವಿದ್ಯಾರ್ಥಿಗಳಿಗೆ ಕೊಂಚ ಬೇಸರ. ಹಣಕಾಸಿನ ಪರಿಸ್ಥಿತಿ ಸುಧಾರಿಸುವುದು.

ವೃಶ್ಚಿಕ(Scorpio)
ಹಣಕಾಸಿನ ಅಭಿವೃದ್ಧಿ ಚೆನ್ನಾಗಿರುತ್ತೆ. ನಿಮ್ಮ ಧೈರ್ಯ(Courage) ಇನ್ನೂ ಜಾಸ್ತಿಯಾಗುತ್ತೆ. ಆದರೆ ಆತುರಪಟ್ಟು ಕೆಲವೊಂದು ಮಾತು ಕೊಡುತ್ತೀರಿ. ಆ ಥರದ ಒಪ್ಪಂದದಿಂದ ಸಮಸ್ಯೆ ಆಗಬಹುದು. ನಿಮ್ಮ ಮಾತನ್ನು ಕೊಂಚ ಕಡಿಮೆ ಮಾಡಿ. ಮಾತು ಕೊಂಚ ಒರಟಾಗಿರುವುದರಿಂದ ಇತರರಿಗೆ ನೋವಾಗಬಹುದು. ಕೆಲಸದಲ್ಲಿ ನಿರ್ಧಾರ ಯಶಸ್ವಿಯಾಗಬಹುದು. ಉದ್ಯೋಗದಲ್ಲಿ ಅತ್ಯುತ್ತಮ ಫಲ, ಗೌರವ ಸಿಗುತ್ತದೆ.

Chanakya Neeti: ಈ ನಾಲ್ಕು ವಿಷಯಗಳಿಗೆ ಎಂದಿಗೂ ಸಂಕೋಚ ಸಲ್ಲದು!

ಧನು(Sagittarius)
ಓಡಾಟ ಹೆಚ್ಚಾಗಬಹುದು. ಹೊಸ ಹೊಸ ಮಾರ್ಗಗಳನ್ನು ಹುಡುಕಿಕೊಂಡು ಹೊರಡುವಿರಿ. ಹೊಸ ಬದಲಾವಣೆ ಮಾಡಿಕೊಳ್ಳುವಿರಿ. ಭೂಮಿಯಿಂದ ಲಾಭ ಪಡೆಯುವಿರಿ. ಹಣಕಾಸಿನ ವಿಚಾರದಲ್ಲಿ ಉತ್ತಮ ಫಲವಿದೆ. ಬಡ್ತಿ, ಸಂಬಳ ಹೆಚ್ಚು, ಸ್ಥಾನ ಬದಲಾವಣೆ ಇತ್ಯಾದಿಗಳಿಂದ ಧನಲಾಭ ಹೆಚ್ಚಬಹುದು. ಧೈರ್ಯ ಹೆಚ್ಚಾಗಬಹುದು. ಹೋರಾಟದ ಮನೋಭಾವ ಹೆಚ್ಚಬಹುದು. ಸಮಸ್ಯೆಗಳು ಪರಿಹಾರ ಕಾಣುವವು.

ಮಕರ(Capricorn)
ತಾಳ್ಮೆಯಿಂದ ಇರುವುದು ಉತ್ತಮ. ಇತರರ ಮಾತಿಗೆ ಎಷ್ಟು ಬೆಲೆ ಕೊಡಬೇಕೋ ಅಷ್ಟೇ ಕೊಡಿ. ಇಲ್ಲವಾದರೆ ಮನಸ್ಸು ಕುಗ್ಗಿ ಹೋಗಬಹುದು. ನಿಮ್ಮ ಕೆಲಸವನ್ನಷ್ಟೇ ಶ್ರದ್ಧೆ, ಪ್ರೀತಿಯಿಂದ ಮಾಡುತ್ತಾ ಹೋಗಿ. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿದೆ. ನೀವು ಈ ವಾರ ಹಣವನ್ನು ವೃಥಾ ಖರ್ಚು ಮಾಡುವ ಸಾಧ್ಯತೆ ಇದೆ. ಬರಬೇಕಾದ ಹಣ ಬರದೇ ಹೋಗಬಹುದು. ಉದ್ಯೋಗ, ವ್ಯಾಪಾರದಲ್ಲೂ ಹಣದ ಹರಿವು ನಿಧಾನವಾಗಬಹುದು.

ಕುಂಭ(Aquarius)
ಸಹೋದರ ಅಥವಾ ಸಹೋದರಿಯಿಂದ ನಿಮಗೆ ಹೆಚ್ಚಿನ ಸಹಾಯ ಒದಗಿ ಬರಬಹುದು. ತಂದೆಯಿಂದ ಅನುಕೂಲಗಳು ಸಿಗಬಹುದು. ಸ್ವಂತ ಉದ್ಯೋಗ ಮಾಡುವವರಿಗೆ ಅತ್ಯುತ್ತಮ ಲಾಭ ಪಡೆಯುವಿರಿ. ಉದ್ಯೋಗದಲ್ಲಿ ಸ್ಥಾನ ಬದಲಾವಣೆ, ವೇತನ ಹೆಚ್ಚಾಗಬಹುದು. ಕಾಲು ನೋವು, ನರಗಳ ಸೆಳೆತ ಇತ್ಯಾದಿ ಸಮಸ್ಯೆಗಳಿಗೆ ಸಿಲುಕುವಿರಿ. ಉದ್ಯೋಗ, ವ್ಯಾಪಾರ, ವಹಿವಾಟು ಇತ್ಯಾದಿಗಳಲ್ಲಿ ಶುಭ ಫಲವಿದೆ.

ಎಂಟು ಮಂದಿ ಚಿರಂಜೀವಿಗಳನ್ನು ನಿತ್ಯ ಸ್ಮರಿಸಿದರೆ ದೀರ್ಘಾಯುಷ್ಯ!

ಮೀನ(Pieces)
ಕೆಲಸದ ಸ್ಥಳದಲ್ಲಿ ಕೆಲಸಗಳು ನಿಧಾನ ಗತಿಯಲ್ಲಿ ಸಾಗಬಹುದು. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಒತ್ತಡ ಹೆಚ್ಚಾಗಬಹುದು. ಕೆಲಸ ಹೊರೆ ಅನಿಸಬಹುದು. ಸ್ವಂತ ಉದ್ಯೋಗ ಮಾಡುವವರಿಗೆ ತುಂಬ ಚೆನ್ನಾದ ಫಲವಿದೆ. ಸಂಗಾತಿಯಿಂದ ನಿಮ್ಮ ಕೆಲಸಕ್ಕೆ ಸಹಾಯ ಸಿಗುತ್ತದೆ. ಪಾಲುದಾರಿಕೆಯ ಕೆಲಸದಲ್ಲಿ ಉತ್ತಮ ಲಾಭ ಗಳಿಸುತ್ತೀರಿ. ಸ್ವಂತ ಉದ್ಯೋಗದಿಂದ ಧನಲಾಭ ಪಡೆಯುತ್ತೀರಿ. ಆತುರದ ನಿರ್ಧಾರ ಬೇಡ.

click me!