ಲಾಸ್ಟ್‌ಬೆಂಚ್‌ಗೆ ಜೀವ ಬಂದರೆ ಏನೇನು ಹೇಳಬಹುದು?

By Kannadaprabha News  |  First Published Nov 21, 2019, 10:35 AM IST

ಇನ್ನೇನು ನನ್ನ ಕೊನೆಯ ದಿನಗಳು ಹತ್ತಿರ ಬರುತ್ತಿದೆ. ಕೆಲವೇ ಕೆಲವು ದಿನಗಳಲ್ಲಿ ನಾನು ಮೂಲೆ ಸೇರುತ್ತೇನೆ. ನನ್ನ ಎದೆಯ ಮೇಲೆ ಗೀಚಿದ ಸಾಲುಗಳು ನನ್ನೊಂದಿಗೆ ಬಿಕ್ಕುತ್ತಿವೆ. ಪ್ರೇಮಿಗಳು ನನ್ನೊಂದಿಗೆ ಜೀವ ಹಂಚಿಕೊಂಡಿವೆ. ಪ್ರತಿ ಕ್ಷಣದ ಮಾತುಗಳು ಮುನಿಸುಗಳು, ಸಂತೋಷಗಳನ್ನು ಎಲ್ಲವೂ ಹಂಚಿಕೊಂಡ ಈ ಪ್ರೇಮಿಗಳು ಈವಾಗ ಬದುಕಿನ ಯಾವ ತಿರುವಿನಲ್ಲಿ ಇದ್ದಾರೂ ಯಾರಿಗ್ಗೊತ್ತು.


ಪ್ರವೀಣಕುಮಾರ ಸುಲಾಖೆ, ದಾಂಡೇಲಿ(ಉ.ಕ)

ನನ್ನ ಮಡಿಲಿನಲ್ಲಿ ಕಲೆತವರು ಅದೆಷ್ಟೋ ಜನರು ಅವರು ಈಗ ಬದುಕಿನ ಯಾವ ಮಾರ್ಗದಲ್ಲಿ ನಿಲ್ದಾಣದಲ್ಲಿದ್ದಾರೂ. ಅವರ ಕಾಲೇಜುದಿನಗಳ ನೆನಪಿನ ಗುಂಗಿನಲ್ಲಿಯೇ ನಾನು ನನ್ನ ಯೌವನಕ್ಕೆ ಜಾರಿಬಿಡುತ್ತೇನೆ.. ಕಾಲೇಜಿಗೆ ಆಗತಾನೇ ಬಂದು ಸೇರಿದ್ದೆ. ಯಾರೋ ದಾನಿಗಳು ಮಾಡಿಸಿಕೊಟ್ಟದಾನದ ರೂಪದಲ್ಲಿ. ಮೊದಲಿ ಸಾಲಿನಲ್ಲಿ ಇದ್ದ ನನ್ನನ್ನು ಯಾವುದೂ ಕಾರ್ಯಕ್ರಮದ ನೆಪದಲ್ಲಿ ಹಿಂದಕ್ಕೆ ತಳ್ಳಿದರು. ಅಂದಿನಿಂದನನ್ನ ಸ್ಥಾನ ಕೊನೆ ಸಾಲು ಅವತ್ತಿನಿಂದ ನಾನು ಕೊನೆಯ ಬೆಂಚಾದೆ.

Tap to resize

Latest Videos

undefined

ಅಜ್ಜ ಹೋದ ನಂತರ ಅಟ್ಟ ಸೇರಿದ ರೇಡಿಯೋ!

ಆ ಹಸಿ ಪ್ರೀತಿ ಪಿಸುಮಾತಿನ ವಿರಹ ವೇದನೆಯ ಕೆತ್ತನೆಯು ನನ್ನ ಕೆನ್ನೆಯ ಮೇಲಿದೆ. ಇಷ್ಟದ ಲೆಕ್ಚರ್‌ನ ಮುಖದ ವಕ್ರರೇಖಾ ಚಿತ್ರವಿದೆ, ಕಡು ದ್ವೇಷಿಸುವ ಲೆಕ್ಚರ್‌ ನಸೊಟ್ಟು ಮೂಗಿನ ವಕ್ರಾತೀತ ವಕ್ರ ಚಿತ್ರವಿದೆ. ಹೇಳಿಕೊಳ್ಳಲು ಆಗದ ಭಯದ ಮಾತುಗಳ ಅಕ್ಷರ ರೂಪಗಳಿವೆ. ಜೀವನದಲ್ಲಿ ಮೊದಲಬಾರಿಗೆ ಬರೆದ ಪ್ರೇಮ ಪತ್ರದ ಒಕ್ಕಣಿಕೆಗಳಿವೆ. ಕನಸಿನಲ್ಲಿ ಕಂಡ ಚೆಲುವೆಯ ಬಿಸಿ ಉಸಿರಿನ ಮಿಡಿತಗಳಿವೆ. ಅಚ್ಚು ಮೆಚ್ಚಿನ ಹುಡುಗಿಯ ಹೆಸರಿನ ಮೊದಲ ಅಕ್ಷರದ ಚಿತ್ತಾರವಿದೆ. ದಿನವು ಆ ಅಕ್ಷರದ ಮೇಲೆ ಕೈಯಾಡಿಸುವ ಮಧುರ ಮನಸಿನ ಹುಡುಗ, ಹುಡುಗಿಯ ಜೀವವಿದೆ. ಕಂಪಾಸು ಪಟ್ಟಿಗೆಯ ಸೊಜಿಯ ಮೊಳಯಿಂದ ಕೆತ್ತಿದ ನೆಚ್ಚಿನ ಸಾಲುಗಳಿವೆ. ಪರೀಕ್ಷೆ ಕಾಲದ ಆಪ್ತಬಾಂಧವನಂತಿರುವ ಗಣಿತದ ಸೂತ್ರಗಳು, ವಿಜ್ಞಾನದ ಫಾರ್ಮುಲಾಗಳಿವೆ, ಇತಿಹಾಸದ ದಂಡೆಯಾತ್ರಯ ದಿನಾಂಕಗಳಿವೆ, ಭೂಮಿ ಚಲನೆಯ ಒಳದಾರಿಗಳಿವೆ.

ಹಾಸ್ಟೆಲ್‌ನಲ್ಲೂ ಇರ್ತಾರೆ ಈ 7 ವಿಧದ ಹುಡುಗಿಯರು!

ಲೆಕ್ಚರರ್‌ ನೀಡುವ ಶಿಕ್ಷೆಯಲ್ಲಿ ನನ್ನನ್ನು ಪಾಲುದಾರನನ್ನಾಗಿಸಿದವರಿದ್ದಾರೆ. ಅವಳಿಗಾಗಿ ತಂದ ಗುಲಾಬಿ ಹೂವನ್ನು ಅವಳ ಕುಡಿ ನೋಟವನ್ನು ಎದುರಿಸಲಾಗದೆ ನನ್ನೊಳಗೆ ಇಟ್ಟು ಮರೆತವರಿದ್ದಾರೆ. ಕಾಲೇಜು ದಿನಗಳ ನೋವು, ಹತಾಶೆ, ಭಯ, ನಗು, ನಲಿವು ಎಲ್ಲವೂ ನನ್ನೂಳಗಿನ ಭಾವಕೋಶದಲ್ಲಿ ಬಂಧಿಯಾಗಿವೆ. ಕಾಲೇಜು ಬಿಟ್ಟು ಹೋಗುವಾಗ ಕೊನೆಯದಿನ ತಾಸಿಗೂ ಅಧಿಕ ನನ್ನ ಮೈಯ ಮೇಲೆ ಕೈಯಾಡಿಸಿ ಕಣ್ಣ ಹನಿ ಹಂಚಿದವರಿದ್ದಾರೆ.

ಕೋಪದಿಂದ ಸಿಡುಕಿ, ಮತ್ತೊಂದು ಕ್ಷಣ ಅಮ್ಮಾ ಅಂದರೆ ಮುಗುಳ್ನಗುತ್ತಾಳೆ!

ಜೀವನದ ಅತಿ ಮಧುರ ನೆನಪಾಗಿ ತಮ್ಮ ಖಾಸಗಿ ನೆನಪಿನ ಖಜಾನೆಯಲ್ಲಿ ನನಗೂ ಒಂದು ಸ್ಥಾನ ಕಲ್ಪಿಸಿದ್ದಾರೆ. ಈ ಕೊನೆಯ ಬೆಂಚಿನಲ್ಲಿ ಕುಳಿತು ಕಲಿತವರು ಇಂದು ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದಾರೆ. ಇಷ್ಟೆಲ್ಲಾ ನೆನಪು ಕಟ್ಟಿಕೊಟ್ಟನನಗೂ ಇಂದು ವಿದಾಯದ ದಿನ. ಈ ಎಲ್ಲ ನೆನಪುಗಳನ್ನು ಹೊತ್ತು ಕೊಂಡು ನಾನೀಗ ಅಟ್ಟಸೇರುತ್ತಿದ್ದೇನೆ. ಇಲ್ಲವೇ ಸುಟ್ಟು ಹೋಗುತ್ತೇನೆ, ಇಲ್ಲವೇ ಗೆದ್ದಲು ಹಿಡಿದು ನಾಶವಾಗುತ್ತೇನೆ. ಆದರೆ ಯಾರ ಗುಟ್ಟನ್ನೂ ನಾನು ಬೇರೆಯವರಿಗೆ ಹೇಳಲಾರೆ.

click me!