
ಗಂಡ-ಹೆಂಡತಿ ಮತ್ತು ಇನ್ನೊಬ್ಬಳ ಕಥೆಗಳನ್ನು ನೀವು ನೋಡಿರುತ್ತೀರಿ ಮತ್ತು ಕೇಳಿರುತ್ತೀರಿ. ಆದರೆ ಈ ಬಾರಿ ನಾವು ನಿಮಗೆ ಹೇಳಲಿರುವ ಕಥೆ ಸ್ವಲ್ಪ ವಿಭಿನ್ನವಾಗಿದೆ. ಈ ಬಾರಿ ಪ್ರಕರಣ ಭಾರತದ ಯಾವುದೇ ರಾಜ್ಯ ಅಥವಾ ನಗರದ್ದಲ್ಲ, ಬದಲಾಗಿ ನೇರವಾಗಿ ಪಾಕಿಸ್ತಾನದಿಂದ ಬಂದಿದೆ. ಅಲ್ಲಿ ಒಬ್ಬ ಪೊಲೀಸ್ ಅಧಿಕಾರಿಗೆ ಬೇರೆಯವರೊಂದಿಗೆ ಅಕ್ರಮ ಸಂಬಂಧವಿತ್ತು. ಇದರ ಸುಳಿವು ಅವರ ಪತ್ನಿಗೆ ಸಿಕ್ಕಿದ ತಕ್ಷಣ, ಆಕೆ ರಸ್ತೆಯಲ್ಲಿ ದೊಡ್ಡ ಗಲಾಟೆ ಮಾಡಿದ್ದಾಳೆ. ಅಲ್ಲಿ ಮಹಿಳೆ ಸ್ಪಷ್ಟವಾಗಿ ಹೇಳುವುದನ್ನು ಕೇಳಬಹುದು. ಇಬ್ಬರೂ ಪರಸ್ಪರ ಪರಿಚಯವಿಲ್ಲದಿದ್ದರೆ ಒಟ್ಟಿಗೆ ಏನು ಮಾಡುತ್ತಿದ್ದೀರಿ ಎಂದು ಆತನ ಹೆಂಡತಿ ಕೇಳುತ್ತಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಪೊಲೀಸ್ ಅಧಿಕಾರಿಗೆ ಪತ್ನಿಯಿಂದ ಕ್ಲಾಸ್:
ಘಟನೆ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ವಿಡಿಯೋ ಪೋಸ್ಟ್ ಮಾಡಿದವರ ಪ್ರಕಾರ, ಮಹಿಳೆಯ ಪತಿ ಲಾಹೋರ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಡಿಯೋವನ್ನು ಘರ್ ಕೆ ಕಾಲೇಶ್ (Ghar Ke Kalesh) ಎಂಬ ಹೆಸರಿನ ಖಾತೆಯಿಂದ ಎಕ್ಸ್‌ನಲ್ಲಿ ಟ್ವೀಟ್ ಮಾಡಲಾಗಿದೆ. ಮಹಿಳೆ ರಸ್ತೆಯಲ್ಲಿ ಒಂದು ಕಾರನ್ನು ತಡೆದಿದ್ದಾಳೆ ಮತ್ತು ಸುತ್ತಲೂ ಜನಸಂದಣಿ ಇದೆ. ಅವಳು ಹತ್ತಿರ ಹೋಗಿ ಕಾರಿನ ಬಾಗಿಲು ತೆರೆದಾಗ, ಅವಳ ಗಂಡನ ಜೊತೆ ಇನ್ನೊಬ್ಬ ಮಹಿಳೆ ಕೂತಿರುತ್ತಾಳೆ. ಅವಳು ತನ್ನ ಗಂಡನನ್ನು ಪ್ರಶ್ನಿಸಲು ಪ್ರಾರಂಭಿಸುತ್ತಾಳೆ. ಆಗ ಪೊಲೀಸ್ ಅಧಿಕಾರಿ ತನ್ನ ಹೆಂಡತಿಯನ್ನು ಜೊತೆಗೆ ಬರುವಂತೆ ಹೇಳುತ್ತಾನೆ. ಆದರೆ ಮಹಿಳೆ ನಿರಾಕರಿಸುತ್ತಾಳೆ. ಅಷ್ಟೇ ಅಲ್ಲ, ಅವಳು ಪೊಲೀಸರಿಗೆ ಕರೆ ಮಾಡುತ್ತಾಳೆ. ಪ್ರಕರಣ ಇನ್ನೂ ದೊಡ್ಡದಾಗುತ್ತದೆ ಎಂದು ಗೊತ್ತಾದಾಗ ಇಬ್ಬರು ಪೊಲೀಸರು ಬಂದು ಕಾರಿನಲ್ಲಿದ್ದ ಪೊಲೀಸ್‌ನನ್ನು ಕರೆದುಕೊಂಡು ಹೋಗುತ್ತಾರೆ.
ನೆಟ್ಟಿಗರಿಂದ ತಮಾಷೆಯ ಪ್ರತಿಕ್ರಿಯೆಗಳು
ಈ ವಿಡಿಯೋವನ್ನು 86 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಒಬ್ಬ ಬಳಕೆದಾರರು 'ಪ್ರೀತಿ-ಪ್ರೇಮದಲ್ಲಿ ಅಕ್ರಮ ಸಂಬಂಧಗಳು ತುಂಬಾ ಸುಲಭವಾಗಿದೆ. ನನಗೆ ಅರ್ಥವಾಗುತ್ತಿಲ್ಲ, ಅವರಿಗೆ ಹೀಗೆ ಮಾಡುವುದರಿಂದ ಏನು ಸಿಗುತ್ತದೆ. ಅವರು ಇನ್ನೊಬ್ಬರ ಜೀವನವನ್ನು ಏಕೆ ಹಾಳುಮಾಡುತ್ತಾರೆ' ಎಂದು ಹೇಳುತ್ತಾರೆ. ಇನ್ನೊಬ್ಬರು 'ಪಾಕಿಸ್ತಾನ ಏಕೆ, ಇಂತಹ ಪ್ರಕರಣಗಳು ಇಲ್ಲೂ ನಡೆಯುತ್ತಿವೆ. ವಂಚನೆ ಮಾಡುವುದು ಈಗ ಜಗತ್ತಿನಲ್ಲಿ ಅತ್ಯಂತ ಸುಲಭದ ಕೆಲಸ' ಕಾಮೆಂಟ್ ಮಾಡಿದ್ದಾರೆ.