ಮೂತ್ರದಿಂದ ಕಣ್ಣು ತೊಳೆದ ಮಹಿಳೆ: ವೈರಲ್ ಆಗ್ಬೇಕೆಂದು ಹೀಗ್ ಮಾಡ್ತಾರೋ, ಹೀಗಿ ಮಾಡಿದ್ದಕ್ಕೆ ವೈರಲ್ ಆಗುತ್ತೋ?

Published : Jun 26, 2025, 03:04 PM ISTUpdated : Jun 26, 2025, 03:13 PM IST
Urine Therapy

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ಜನರು, ವಿಡಿಯೋಗಳು ಕಾಣ ಸಿಗ್ತಿವೆ. ಕೆಲ ವಿಡಿಯೋಗಳು ಜನರಿಗೆ ತಪ್ಪು ಸಂದೇಶ ನೀಡ್ತಿವೆ. ಈಗ ಮಹಿಳೆಯೊಬ್ಬಳ ಮೂತ್ರ ಥೆರಫಿ ಸದ್ದು ಮಾಡಿದೆ. 

ಸೋಶಿಯಲ್ ಮೀಡಿಯಾ (social media) ಜನರ ಹುಚ್ಚನ್ನ ಹೆಚ್ಚು ಮಾಡ್ದಂಗಿದೆ. ಪಬ್ಲಿಸಿಟಿಗಾಗಿ ಜನರು ಏನೇನೋ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆದ ಕೆಲ ವಿಚಿತ್ರ ಸಾಹಸ, ಹವ್ಯಾಸಗಳು ನೋಡುಗರಿಗೆ ವಾಕರಿಕೆ ತರಿಸೋದಿದೆ. ಈಗ ಮಹಿಳೆಯೊಬ್ಬಳು ಅಂಥದ್ದೇ ಕೆಲ್ಸ ಮಾಡಿ ಸುದ್ದಿಗೆ ಬಂದಿದ್ದಾಳೆ. ಅವಳು ಪ್ರಚಾರಕ್ಕೆ ಹೀಗೆ ಮಾಡಿದ್ಲಾ ಅಥವಾ ಹೀಗೆ ಮಾಡಿದ್ಮೇಲೆ ಪ್ರಚಾರಕ್ಕೆ ಬಂದ್ಲಾ ಗೊತ್ತಿಲ್ಲ. ಆದ್ರೆ ಅವಳ ಕೆಲ್ಸ ಮಾತ್ರ, ಹೀಗೂ ಇರ್ತಾರಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಪುಣೆಯ , ನೂಪುರ್ ಪಿಟ್ಟಿ ತನ್ನ ಮೂತ್ರ (urine)ದಿಂದ ಕಣ್ಣನ್ನು ಕ್ಲೀನ್ ಮಾಡಿದ್ದಾಳೆ. ಪ್ರತಿ ದಿನ ಬೆಳಿಗ್ಗೆ ಮೂತ್ರದಿಂದ ಕಣ್ಣನ್ನು ಕ್ಲೀನ್ ಮಾಡ್ತೇನೆ ಅಂತ ವಿಡಿಯೋದಲ್ಲಿ ಹೇಳಿದ್ದಾಳೆ. ಹೇಗೆ ಮೂತ್ರದಿಂದ ಕಣ್ಣನ್ನು ಸ್ವಚ್ಛಗೊಳಿಸ್ಬೇಕು, ಅದ್ರಿಂದ ಆಗೋ ಲಾಭ ಏನು ಅನ್ನೋದನ್ನು ಕೂಡ ನೂಪುರ್ ಪಿಟ್ಟಿ ಹೇಳಿದ್ದಾಳೆ. ಈ ವಿಡಿಯೋಕ್ಕೆ ಸಾವಿರಾರು ಲೈಕ್ಸ್, ನೂರಾರು ಕಮೆಂಟ್ ಬಂದಿದೆ.

ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಾಕಿರುವ ಮಹಿಳೆ, ನಿನ್ನೆ ತ್ರಿಫಲದಿಂದ ಕಣ್ಣನು ವಾಶ್ ಮಾಡಿದ್ದೇವೆ. ನೀವು ಮುಕ್ತ ಮನಸ್ಸಿನವರಾಗಿದ್ದರೆ ಈಗ ಹೇಳೋ ಚಿಕಿತ್ಸೆ ತ್ರಿಫಲಗಿಂತ ಒಂದು ಹೆಜ್ಜೆ ಮುಂದಿದೆ. ತಾಜಾ ಬೆಳಗಿನ ಮೂತ್ರ . ಯಸ್. ಇದು ನಿಮ್ಮ ಸ್ವಂತ ದೇಹದ ಸೃಷ್ಟಿ. ಶತಮಾನಗಳಿಂದ ನೈಸರ್ಗಿಕ ಪರಿಹಾರಗಳಲ್ಲಿ ಪ್ರಬಲವಾದ ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ ಮತ್ತು ನಿರ್ವಿಶೀಕರಣ ಏಜೆಂಟ್ ಆಗಿ ಇದನ್ನು ಬಳಸಲಾಗುತ್ತಿದೆ ಎಂದು ಬರೆದಿದ್ದಾರೆ. ವಿಡಿಯೋದಲ್ಲಿ ಯೂರಿನ್ ನಿಂದ ಕಣ್ಣು ಸ್ವಚ್ಛಗೊಳಿಸಿರೋದನ್ನು ತೋರಿಸಿದ್ದಾರೆ. ಎರಡು ಸಣ್ಣ ಗ್ಲಾಸ್ ಗೆ ಯೂರಿನ್ ಹಾಕುವ ನೂಪುರ್, ಆ ನೀರಿನಲ್ಲಿ ಕಣ್ಣನ್ನು ಅದ್ದುತ್ತಾರೆ. ಕಣ್ಣಿನ ರೆಪ್ಪೆಗಳನ್ನು ಮೇಲೆ ಕೆಳಗೆ ಮಾಡ್ತಾರೆ. ಕಣ್ಣಿನ ಒಳಗೆ ಮೂತ್ರ ಹೋಗ್ಬೇಕು ಎನ್ನುವ ನೂಪುರ್, ನಂತ್ರ ಕಣ್ಣನ್ನು ಶುದ್ಧ ಟವೆಲ್ ನಿಂದ ಒರೆಸಿಕೊಳ್ತಾರೆ. ಆ ನಂತ್ರ ಕೈನಿಂದ ಕಣ್ಣನ್ನು ನಿಧಾನವಾಗಿ ಪ್ರೆಸ್ ಮಾಡ್ತಾರೆ.

ಇನ್ಸ್ಟಾಗ್ರಾಮ್ ನಲ್ಲಿ ಸದ್ಯ ಈ ವಿಡಿಯೋ ಡಿಲಿಟ್ ಆಗಿದೆ. ಆದ್ರೆ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇದನ್ನು 1.5 ಲಕ್ಷಕ್ಕೂ ಹೆಚ್ಚು ಬಾರಿ ನೋಡಲಾಗಿದೆ. ಅನೇಕರು ನೂಪುರ್ ಕೆಲ್ಸವನ್ನು ಖಂಡಿಸಿದ್ದಾರೆ. ಮೂತ್ರ ನಮ್ಮ ದೇಹದಿಂದ ಹೊರ ಬರುವ ತ್ಯಾಜ್ಯವಾಗಿದ್ದು, ಅದು ಅನೈರ್ಮಲ್ಯ, ಅದ್ರಿಂದ ಕಣ್ಣಿಗೆ ಅಪಾಯವಾಗುವ ಸಾಧ್ಯತೆ ಇದೆ. ಪ್ರಸಿದ್ಧಿಗಾಗಿ, ಹೆಚ್ಚು ಲೈಕ್ಸ್ ಹಾಗು ಫಾಲೋವರ್ಸ್ ಗಾಗಿ ಇಂಥ ಕೆಲ್ಸ ಮಾಡೋದು ತಪ್ಪು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

ಕಣ್ಣಿಗೆ ಮೂತ್ರ ಹೋದ್ರೆ ಏನಾಗುತ್ತದೆ? : ಮೂತ್ರ ನಿಮ್ಮ ಕಣ್ಣಿಗೆ ಹೋದ್ರೆ ಕಣ್ಣಿಗೆ ಸೋಂಕು ತಗಲುವ ಅಪಾಯವಿದೆ. ನೀವು ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದರೆ ಕಣ್ಣಿಗೆ ಸೋಂಕಿನ ಅಪಾಯ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. ಕಾಂಜಂಕ್ಟಿವಿಟಿಸ್ ಎಂದೂ ಕರೆಯಲ್ಪಡುವ ಗುಲಾಬಿ ಕಣ್ಣು ಸಾಮಾನ್ಯವಾಗಿ ವೈರಸ್ನಿಂದ ಉಂಟಾಗುತ್ತದೆ. ಕೆಲವೊಮ್ಮೆ ಇದು ಬ್ಯಾಕ್ಟೀರಿಯಾದಿಂದ ಉಂಟಾಗಬಹುದು. ಹಾಗಾಗಿ ಕಣ್ಣನ್ನು ಮೂತ್ರ ಸೇರಿದಂತೆ ಯಾವುದೇ ವಿಶೇಷ ಪದಾರ್ಥದಿಂದ ಸ್ವಚ್ಛಗೊಳಿಸಬಾರದು. ಶುದ್ಧ ನೀರಿನಿಂದ ಕಣ್ಣನ್ನು ಸ್ವಚ್ಛಗೊಳಿಸುವಂತೆ ವೈದ್ಯರು ಸಲಹೆ ನೀಡ್ತಾರೆ.

ಮೂತ್ರವನ್ನು ಕುಡಿಯುವುದು, ಗಾಯಕ್ಕೆ ಹಚ್ಚುವುದು ಅಪಾಯಕಾರಿ ಎನ್ನಲಾಗಿದೆ. ಆದ್ರೆ ಈ ಮೂತ್ರದ ಮೇಲೆ ಹೊಸ ಪ್ರಯೋಗ ನಡೆಯುತ್ತಿದೆ. ದಂತ ಮತ್ತು ಮೂಳೆ ಇಂಪ್ಲಾಂಟ್ ತಯಾರಿಸುವ ಹೊಸ ಸಂಶೋಧನೆ ನಡೆಯುತ್ತಿದೆ. ಕೃತಕ ಯೀಸ್ಟ್ ಬಳಸಿ ಮೂತ್ರವನ್ನು ಹೈಡ್ರಾಕ್ಸಿಅಪಟೈಟ್ ಆಗಿ ಪರಿವರ್ತಿಸಿ ಇಂಪ್ಲಾಂಟ್ಗಳನ್ನು ರೂಪಿಸಲಾಗುತ್ತಿದೆ.

 

 

 

PREV
Read more Articles on
click me!

Recommended Stories

ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!