ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ ತರಕಾರಿ ಮಾರುವವನು ವಿಶಿಷ್ಟ ಧ್ವನಿಯಿಂದ ಅಂತರ್ಜಾಲದಲ್ಲಿ ಪ್ರಸಿದ್ಧನಾಗಿದ್ದಾನೆ. ಅವನು ಬೀದಿಯಿಂದ ಬೀದಿಗೆ ಬಂಡಿಯಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾನೆ. ಆದರೆ ಅವನ ಸ್ಟೈಲ್ ಹೇಗಿದೆಯೆಂದರೆ ಜನರು ಅವನ ಬಳಿಗೆ ಓಡಿ ಬರುತ್ತಾರೆ. ಅವನ ಧ್ವನಿಯನ್ನು ಕೇಳಿದರೆ ನಿಮಗೆ ರಾಮಲೀಲಾದ 'ರಾವಣ' ನೆನಪಾಗುತ್ತಾನೆ. ಈ ವಿಡಿಯೋದಲ್ಲಿ ಅಂಥದ್ದೇನಿದೆ ವಿಶೇಷ ಎಂದು ನೋಡೋಣ ಬನ್ನಿ...
ವೈರಲ್ ಆಗಿರುವ ವಿಡಿಯೋದಲ್ಲಿ, ತರಕಾರಿ ಮಾರುವವನು ಮೈಕ್ ಮತ್ತು ಸ್ಪೀಕರ್‌ನೊಂದಿಗೆ ತರಕಾರಿಗಳನ್ನು ಮಾರುತ್ತಿರುವುದು ಕಂಡುಬರುತ್ತದೆ. ಅಷ್ಟೇ ಅಲ್ಲ, ಅವನು ರಾಮಲೀಲಾ ಪ್ರದರ್ಶನ ನೀಡುತ್ತಿರುವಂತೆ ಭಾಸವಾಗುತ್ತದೆ. ಮೊದಲು ಅವನು ರಾವಣನಂತೆ ಜೋರಾಗಿ ನಗುತ್ತಾನೆ, ನಂತರ "ಹೇ ನಾರಿ... ಹೊರಗೆ ಬಾ, ತರಕಾರಿಗಳು ಮುಗಿದಿವೆ" ಎಂದು ಹೇಳುತ್ತಾನೆ. ಜನರು ಅವನ ಧ್ವನಿ ಮತ್ತು ಸ್ಟೈಲ್ ನೋಡಿ ಆಶ್ಚರ್ಯಚಕಿತರಾಗುತ್ತಾರೆ. ಕೊನೆಗೆ ಸಂತೋಷಪಡುತ್ತಾರೆ.
ಜನ ಏನಂದ್ರು?
ತರಕಾರಿ ಮಾರುವವನ ಧ್ವನಿ ತುಂಬಾ ಜೋರಾಗಿ ಪ್ರತಿಧ್ವನಿಸುತ್ತಿದೆ. ಧ್ವನಿಯನ್ನು ಕೇಳಿದಾಗ, ಜನರು ಜಾತ್ರೆ ಅಥವಾ ರಾಮಲೀಲಾದಲ್ಲಿ ಯಾರದ್ದೋ ಪ್ರದರ್ಶನವನ್ನು ನೋಡುತ್ತಿರುವಂತೆ ಭಾಸವಾಗುತ್ತದೆ. ಈ ವಿಡಿಯೋವನ್ನ ನೆಟ್ಟಿಗರು ಹೆಚ್ಚು ಇಷ್ಟಪಡುತ್ತಿದ್ದಾರೆ. ಜೊತೆಗೆ ಎಂಜಾಯ್ ಮಾಡ್ತಿದ್ದಾರೆ. ಈ ತಮಾಷೆಯ ವಿಡಿಯೋವನ್ನು @actor_rakesh_sahani ಹೆಸರಿನ ಖಾತೆಯಿಂದ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ನೋಡಿದ ಬಳಕೆದಾರರು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಅವರು ಪಾತಾಳ ಲೋಕದಿಂದ ತರಕಾರಿಗಳನ್ನು ಮಾರಾಟ ಮಾಡಲು ಬಂದಿದ್ದಾರೆಯೇ?" "ಸಹೋದರ, ನೀವು ತರಕಾರಿಗಳನ್ನು ಮಾರುತ್ತಿದ್ದೀರಾ ಅಥವಾ ಹೆಣ್ಮಕ್ಕಳನ್ನು ಹೆದರಿಸುತ್ತಿದ್ದೀರಾ?" ಎಂದು ಕೇಳುತ್ತಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ
ಫ್ಯಾನ್ಸಿ ಡ್ರೆಸ್ ಸ್ಪರ್ಧೆಯ ವಿಡಿಯೋ
ಇತ್ತೀಚೆಗಷ್ಟೇ ಕೇರಳದಲ್ಲಿ ನಡೆದ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ವೈರಲ್ ವಿಡಿಯೋದಲ್ಲಿ, ಒರ್ವ ವಿದ್ಯಾರ್ಥಿ ತನ್ನ ಅದ್ಭುತ ಮತ್ತು ವಿಶಿಷ್ಟ ಪ್ರದರ್ಶನದಿಂದ ಎಲ್ಲರ ಹೃದಯ ಗೆದ್ದಿದ್ದಾನೆ. ವಿಡಿಯೋವನ್ನು @kailash_mannady ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಹಂಚಿಕೊಂಡಿದ್ದಾರೆ. ಶಾಲೆಯಲ್ಲಿ ಮಕ್ಕಳಿಗಾಗಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ಇದನ್ನು ಚಿತ್ರೀಕರಿಸಲಾಗಿದೆ. ಆದ್ದರಿಂದ ಇಂದಿನ ಸುದ್ದಿಯಲ್ಲಿ ಈ ವಿಡಿಯೋದ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ..
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಈ ವಿಡಿಯೋದಲ್ಲಿ ವಿದ್ಯಾರ್ಥಿಯನ್ನು ಆಸ್ಟ್ರಿಚ್ ನಂತೆ ಡ್ರೆಸ್ ಮಾಡಲಾಗಿದೆ. ತಲೆಯಿಂದ ಪಾದದವರೆಗೆ ದೊಡ್ಡ ಕೊಕ್ಕು, ಉದ್ದವಾದ ಗರಿಗಳು ಮತ್ತು ತೆಳುವಾದ ಉದ್ದ ಕಾಲುಗಳನ್ನು ಹೊಂದಿರುವ ವೇಷಭೂಷಣವನ್ನು ಧರಿಸಲಾಗಿದೆ. ಥಟ್ ಅಂತ ನೋಡಿದರೆ, ನಿಜವಾದ ಆಸ್ಟ್ರಿಚ್ ವೇದಿಕೆಯ ಮೇಲೆ ಬಂದಂತೆ ತೋರುತ್ತದೆ. ಆದರೆ ಸ್ವಲ್ಪ ಸಮಯದ ನಂತರ ಈ ಉಡುಪಿನಲ್ಲಿ ಅವನಿಗೆ ಸ್ವಲ್ಪ ತೊಂದರೆಯಾಗುತ್ತಿರುವಂತೆ ಕಂಡುಬರುತ್ತದೆ. ಆದ್ದರಿಂದ ಇಬ್ಬರು ಶಿಕ್ಷಕರು ಅವನನ್ನು ವೇದಿಕೆಯ ಮೇಲೆ ಕರೆತಂದು ಪ್ರದರ್ಶನದ ಉದ್ದಕ್ಕೂ ಸಹಾಯ ಮಾಡುತ್ತಲೇ ಇದ್ದರು.
ಕೊನೆಯಲ್ಲಿ ಕಂಡುಬಂದ ಟ್ವಿಸ್ಟ್
ಈ ಪುಟ್ಟ ಆಸ್ಟ್ರಿಚ್ ವೇದಿಕೆಗೆ ಬಂದ ತಕ್ಷಣ ಅಲ್ಲಿದ್ದ ಜನರೆಲ್ಲರೂ ಸಂತೋಷದಿಂದ ಚಪ್ಪಾಳೆ ತಟ್ಟಲು ಪ್ರಾರಂಭಿಸಿದರು. ವಿದ್ಯಾರ್ಥಿಯ ಸ್ಟೆಪ್ಸ್ ಮತ್ತು ವೇಷಭೂಷಣವು ವಾತಾವರಣವನ್ನು ಇನ್ನಷ್ಟು ಮೋಜಿನಿಂದ ಕೂಡಿಸಿತು. ಪ್ರೇಕ್ಷಕರ ಮುಖದಲ್ಲಿ ನಗು ಇತ್ತು ಮತ್ತು ಅವನ ಮುದ್ದಾದ ವರ್ತನೆಗಳನ್ನು ನೋಡಿ ಎಲ್ಲರೂ ಮಂತ್ರಮುಗ್ಧರಾದರು. ಶೋನ ಅತ್ಯಂತ ತಮಾಷೆಯ ಕ್ಷಣವು ಕೊನೆಯಲ್ಲಿ ಕಂಡುಬಂದಿತು. ಅದೇನಪ್ಪಾ ಅಂದ್ರೆ ಈ ಆಸ್ಟ್ರಿಚ್ ಮೊಟ್ಟೆ ಇಟ್ಟಿತು. ಇದನ್ನು ನೋಡಿ ಅಲ್ಲಿದ್ದ ಜನರೆಲ್ಲರೂ ನಗಲು ಪ್ರಾರಂಭಿಸಿದರು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ, ಈ ವಿಶಿಷ್ಟ ನಟನೆಯನ್ನು ನೋಡಿ ಎಲ್ಲರೂ ನಕ್ಕರು.