Gorilla's Romantic Interest: ಫ್ಲರ್ಟ್ ಮಾಡಿದ ಗಂಡನಿಗೆ ಒದೆ ಬಿತ್ತು ! ಮನುಷ್ಯ ಆಗ್ಲಿ ಪ್ರಾಣಿ ಆಗ್ಲಿ ಹೆಂಡತಿ ಹೆಂಡತಿನೇ

Published : Jul 11, 2025, 01:13 PM ISTUpdated : Jul 11, 2025, 01:15 PM IST
Gorilla couple

ಸಾರಾಂಶ

ನಮ್ ಹುಡ್ಗ ಬೇರೆಯವರಿಗೆ ಫ್ಲರ್ಟ್ ಮಾಡಿದ್ರೆ ಸುಮ್ಮನಿರೋದಕ್ಕೆ ಆಗುತ್ತಾ? ನಮ್ಮವರು ದಾರಿ ತಪ್ಪಿದ್ರೆ ಬುದ್ದಿ ಕಲಿಸ್ಲೇಬೇಕು. ಬರಿ ಮನುಷ್ಯ ಮಾತ್ರವಲ್ಲ ಗೋರಿಲ್ಲಾ ಕೂಡ ಈಗ ಆಕ್ಷನ್ಗೆ ಇಳಿದಿದೆ. 

ಗಂಡ (husband)ನ ಕಡೆ, ಯಾವ್ದೆ ಹುಡುಗಿ ಇಲ್ಲ ಆಂಟಿ ಕಣ್ಣು ಹಾಯಿಸಿದ್ರೂ ಹೆಂಡ್ತಿ ಮೈ ಉರಿದು ಹೋಗುತ್ತೆ. ಇನ್ನು ಗಂಡ, ಯಾವುದಾದ್ರೂ ಹುಡುಗಿಯನ್ನು ಮಾತನಾಡಿಸಿದ್ರೆ ಕಥೆ ಮುಗೀತು. ಗಂಡನನ್ನು ಸಂಪೂರ್ಣ ನನ್ನವನು ಅಂದ್ಕೊಳ್ಳುವ ಪತ್ನಿ (Wife), ಅವನನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡೋದಿಲ್ಲ. ಬೇರೆ ಹುಡುಗಿಯರು ಅವನನ್ನು ನೋಡಿದ್ರೂ ಅವನಿಗೆ ಒದೆ ಬೀಳುತ್ತೆ. ಅಪ್ಪಿ ತಪ್ಪಿ ಅವನೇ ನೋಡಿ, ಮಾತನಾಡಿಸಿದ್ರೆ ಕೈಕಾಲು ಮುರಿಯೋದು ಗ್ಯಾರಂಟಿ. ಹೆಣ್ಮಕ್ಕಳು ಹೆಚ್ಚು ಪೊಸೆಸಿವ್ ಆಗಿರ್ತಾರೆ. ಅವರ ವಸ್ತು, ಅವರ ಪ್ರೀತಿ, ಅವರ ಕುಟುಂಬಕ್ಕೆ ಬೇರೆಯವರು ಹತ್ತಿರವಾದ್ರೆ ಸಹಿಸೋದು ಬಹಳ ಕಷ್ಟ. ಇಷ್ಟು ದಿನ ಬರೀ ನಮ್ಮ ಹುಡುಗಿಯರು ಮಾತ್ರ ಹೀಗೆ ಅಂದ್ಕೊಂಡಿದ್ವಿ. ಆದ್ರೀಗ ಪ್ರಾಣಿಗಳಲ್ಲೂ ಈ ಸ್ವಭಾವ ಇದೆ ಅನ್ನೋದು ಸ್ಪಷ್ಟವಾಗಿದೆ. ತಮ್ಮ ಹಿರಿ ತಲೆ ಗೋರಿಲ್ಲಾಗಳಿಂದ್ಲೇ ಮೋಸ್ಟಿ ನಮಗೂ ಈ ಸ್ವಭಾವ ಬಂದಿರಬೇಕು. ಗಂಡು ಗೋರಿಲ್ಲಾ ಕೆಲ್ಸಕ್ಕೆ ಕೋಪಗೊಂಡ ಹೆಣ್ಣು ಗೋರಲ್ಲ ಫೈಟ್ ಗೆ ಇಳಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದೆ.

ಸೋಶಿಯಲ್ ಮೀಡಿಯಾ (Social Media )ದಲ್ಲಿ ಸದ್ಯ ಒಂದು ವಿಡಿಯೋ ವೇಗವಾಗಿ ವೈರಲ್ ಆಗ್ತಿದೆ. Gyanclasss ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಗಂಡು ಗೋರಿಲ್ಲಾ, ಪ್ರವಾಸಕ್ಕೆ ಬಂದ ಹುಡುಗಿಯೊಬ್ಬಳ ಕೂದಲನ್ನು ಎಳೆಯುತ್ತಿದೆ. ಹುಡುಗಿ, ಕೂದಲನ್ನು ಬಿಡಿಸಿಕೊಳ್ಳುವ ಪ್ರಯತ್ನ ಮಾಡ್ತಿದೆ. ಈ ವೇಳೆ ಮೇಲಿದ್ದ ಹೆಣ್ಣು ಗೋರಿಲ್ಲ ಜಂಪ್ ಮಾಡ್ತಾ ಅಲ್ಲಿಗೆ ಬರೋದನ್ನು ನಾವು ಕಾಣಬಹುದು. ಹೆಣ್ಣು ಗೋರಿಲ್ಲಾ ಅಲ್ಲಿಗೆ ಬರ್ತಿದ್ದಂತೆ, ಗಂಡು ಗೋರಿಲ್ಲಾ ಕೂದಲನ್ನು ಬಿಡುತ್ತೆ. ಗಂಡನ ವರ್ತನೆ ನೋಡಿ ಕೋಪಗೊಂಡ ಹೆಣ್ಣು ಗೋರಿಲ್ಲ, ಗಂಡನಿಗೆ ಸರಿಯಾಗಿ ಬಾರಿಸ್ತಿದೆ. ನೀವು ಮನುಷ್ಯರಾಗಿರಲಿ ಇಲ್ಲ ಪ್ರಾಣಿಯಾಗಿರಲಿ, ಹೆಂಡ್ತಿ ಹೆಂಡ್ತಿನೇ ಅಂತ ಈ ವಿಡಿಯೋಕ್ಕೆ ಶೀರ್ಷಿಕೆ ಹಾಕಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 6 ಲಕ್ಷಕ್ಕಿಂತಲೂ ಹೆಚ್ಚು ವೀವ್ಸ್ ಪಡೆದಿದೆ. ನೂರಾರು ಮಂದಿ ಇದಕ್ಕೆ ಕಮೆಂಟ್ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾ ಬಳಕೆದಾರರ ಕಮೆಂಟ್ ಏನು? : ಈ ವಿಡಿಯೋವನ್ನು ಬಳಕೆದಾರರು ಎಂಜಾಯ್ ಮಾಡಿದ್ದಾರೆ. ಮೇಲಿನಿಂದ ಜಂಪ್ ಮಾಡ್ತಾ ಕೆಳಗೆ ಬಂದ ಹೆಣ್ಣು ಗೋರಿಲ್ಲಾ ಸ್ಟೈಲ್ ಬಳಕೆದಾರರಿಗೆ ಇಷ್ಟವಾಗಿದೆ. ಗಂಡು ಗೋರಿಲ್ಲಾಗೆ ಸರಿಯಾಯ್ತು ಅಂತ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇದು ಯೂನಿವರ್ಸಲ್ ಟ್ರುಥ್ ಅಂತ ಮತ್ತೆ ಕೆಲವರು ಬರೆದುಕೊಂಡಿದ್ದಾರೆ. ಪೊದೆಯಲ್ಲಿ ಕುಳಿತು ಮೊದಲು ಎಲ್ಲವನ್ನೂ ಹೆಣ್ಣು ಗೋರಿಲ್ಲಾ ನೋಡಿದೆ. ನನ್ನ ಗಂಡ ಬೇರೆ ಹುಡುಗಿ ಜೊತೆ ಫ್ಲರ್ಟ್ ಮಾಡ್ತಿದ್ದಾನೆ ಎಂಬುದು ಗೊತ್ತಾಗ್ತಿದ್ದಂತೆ ಆಕ್ಷನ್ ಗೆ ಇಳಿದಿದೆ ಎಂದು ಜನರು ಕಮೆಂಟ್ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಗೋರಿಲ್ಲಾದ ಇನ್ನೊಂದು ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಹೆಣ್ಣು ಗೊರಿಲ್ಲಾ ನೆಲದ ಮೇಲೆ ಮಲಗಿದ್ರೆ ಗಂಡು ಗೊರಿಲ್ಲಾ ಗೋಡೆಯ ಹತ್ತಿರ ಕುಳಿತು ಹೆಣ್ಣು ಗೋರಿಲ್ಲಾ ಪಾದಗಳನ್ನು ಒತ್ತುತ್ತಿತ್ತು, ಇದ್ದಕ್ಕಿದ್ದಂತೆ ಗಂಡು, ಕಿಡಿಗೇಡಿತನ ಮಾಡಿ ಹೆಣ್ಣು ಗೋರಿಲ್ಲಾ ಕಾಲನ್ನು ಕಚ್ಚಿತ್ತು. ಇದರಿಂದ ಕೋಪಗೊಳ್ಳುವ ಹೆಣ್ಣು ಗೋರಿಲ್ಲಾ, ಗಂಡು ಗೋರಿಲ್ಲಾ ತಲೆಗೆ ಹೊಡೀತು. ಅಲ್ಲಿಂದ ಇಬ್ಬರ ಜಗಳ ಶುರುವಾಗುತ್ತೆ. ಈ ವಿಡಿಯೋ ನೋಡಿದ ಜನರು, ಗಂಡ ಹೆಂಡತಿ ಸಂಬಂಧ ಸಾರ್ವತ್ರಿಕ ಅಂತ ಕಮೆಂಟ್ ಮಾಡಿದ್ದರು.

 

 

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್