ಎಲ್ಲಾ ಮೀಮ್ಸ್​ ಕೊನೆಯಲ್ಲಿ ಕಾಣೋ ಹುಡುಗ ಕೊನೆಗೂ ಪತ್ತೆ! ನಕ್ಕರೆ ಬರತ್ತೆ ಮಿಲಿಯನ್ಸ್​ ವ್ಯೂವ್ಸ್​- ಯಾರೀತ?

Published : Feb 04, 2026, 06:22 PM IST
Meems Viral Boy

ಸಾರಾಂಶ

ಮೀಮ್ಸ್ ಮತ್ತು ರೀಲ್ಸ್‌ಗಳಲ್ಲಿ ಕಾಣಿಸುವ ವೈರಲ್ ನಗುವಿನ ಹುಡುಗನ ಹೆಸರು ರಾಜಾ. ಹೈದರಾಬಾದ್​ನ ಈತ ಡ್ರೈವರ್​ ಆಗಿ ಕೆಲಸ ಮಾಡುತ್ತಿದ್ದು, ಆಕಸ್ಮಿಕವಾಗಿ ವೈರಲ್ ಆದ ನಂತರ 'ಮಿಸ್ಟರ್ ಲಡ್ಡು 0009' ಎಂಬ ಹೆಸರಿನಲ್ಲಿ ಸ್ವತಃ ಕಂಟೆಂಟ್ ಕ್ರಿಯೇಟರ್ ಆಗಿದ್ದಾನೆ.

ಒಂದು ಯಾವುದೇ ಮೀಮ್ಸ್​ ಫೇಮಸ್​ ಆಯ್ತು ಅಂದರೆ ಸಾಕು, ಅದನ್ನೇ ಎಲ್ಲಾ ಭಾಷೆಗಳಲ್ಲಿಯೂ ಮಾಡಿ ಬೋರ್​ ಹೊಡೆಸಲಾಗುತ್ತದೆ. ಅದೇ ರೀತಿ ರೀಲ್ಸ್​, ಮೀಮ್ಸ್​ ಮುಗಿದ ಮೇಲೆ ಕೆಲವೊಂದಿಷ್ಟು ನಗುಗಳನ್ನು ಶೇರ್​ ಮಾಡಲಾಗುತ್ತದೆ. ಅದರಲ್ಲಿಯೂ ಕೂಡ ಸ್ವಂತಿಕೆಯೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಎಲ್ಲರೂ ಅದನ್ನೇ ಬಳಸುವುದು, ಅದೇ ನಗುವಿನ ಸೌಂಡ್​, ಅದೇ ಅಳುವಿನ ಸೌಂಡ್​... ಆರಂಭದಲ್ಲಿ ನೋಡಲು ಚೆನ್ನಾಗಿದ್ದರೂ ಇದೀಗ ಲಕ್ಷ ಲಕ್ಷ ಮೀಮ್ಸ್​, ರೀಲ್ಸ್​ ಮಾಡುವವರು ಅದೇ ರೀತಿಯದ್ದನ್ನೇ ಉಪಯೋಗಿಸುವ ಕಾರಣ, ಅದೊಂದು ರೀತಿಯಲ್ಲಿ ಕಿರಿಕಿರಿ ಎನ್ನಿಸುವುದೂ ಉಂಟು. ಆದರೆ ಸಿನಿಮಾಗಳ ರೀತಿಯಲ್ಲಿಯೇ ಇದು ಕೂಡ. ಒಂದು ಸಿನಿಮಾ ಹಿಟ್​ ಆಯಿತು ಎಂದರೆ, ಅದೇ ರೀತಿಯ ದೃಶ್ಯಗಳು, ಹಾಡುಗಳು, ಸನ್ನಿವೇಶಗಳು, ಅದೇ ಭಾಷೆ... ಹೀಗೆ ಅದನ್ನೇ ಕಾಪಿ ಮಾಡಿ ಒಂದರ ಮೇಲೊಂದು ಸಿನಿಮಾ ತಯಾರಿಸುವಂತೆ ಮೀಮ್ಸ್​, ರೀಲ್ಸ್​ಗಳಲ್ಲಿಯೂ ಅದದೇ ಇರುವುದು ಇದೆ.

ಮೀಮ್ಸ್​ ಕೊನೆಯ ನಗುಗಳು

ಅದೇ ರೀತಿ, ಯಾವುದೇ ಮೀಮ್ಸ್​ ನೋಡಿದರೂ ರೀಲ್ಸ್​ ಮುಗಿದ ಮೇಲೆ ನೀವೂ ನಗಲಿ ಎನ್ನುವ ಕಾರಣಕ್ಕೋ ಅಥವಾ ಇದೊಂದು ಜೋಕ್ಸ್​ ನಕ್ಕುಬಿಡಿ ಎನ್ನುವ ಕಾರಣಕ್ಕೋ ಗೊತ್ತಿಲ್ಲ, ಒಟ್ಟಿನಲ್ಲಿ ನಾನಾ ಪಾಟೇಕರ್, ಸಾಧು ಕೋಕಿಲ​ ನಗು ಸೇರಿದಂತೆ ಒಂದಿಷ್ಟು ಜನರ ನಗುವನ್ನು ನೋಡಬಹುದು. ಎಲ್ಲಾ ರೀಲ್ಸ್​ಗಳಲ್ಲಿಯೂ ಇವರದ್ದೇ ಒಂದಿಷ್ಟು ನಗುಗಳು, ಕೈಯಲ್ಲಿ ಟೀ ಹಿಡಿದಿರುವುದು, ಬಾಯಿಯಿಂದ ಉಗುಳುವುದು, ಪುರ್​ ಎನ್ನುವುದು... ಎಲ್ಲವನ್ನೂ ನೋಡುವಾಗ ಒಂದು ಬಾಲಕ ಕೈಯಲ್ಲಿ ಟೀ ಹಿಡಿದು ಬರುವವನು ಕಾಣಿಸುತ್ತಾನೆ. ಅವನಂತೂ ಸಕತ್​ ಫೇಮಸ್​. ಅವನ ನಗುವಿದ್ದರೆ ಮೀಮ್ಸ್​ಗಳು ಚೆನ್ನ ಎನ್ನವಷ್ಟರ ಮಟ್ಟಿಗೆ ಆತನ ಮುಖ ಕಾಣಿಸುತ್ತದೆ.

ಡ್ರೈವರ್​ ಆಗಿದ್ದಾನೆ ಈತ

ಆ ಬಾಲಕ ಯಾರು ಎನ್ನುವ ಬಗ್ಗೆ ಮೀಮ್ಸ್ ಮಾಡುವವರೂ ಹೆಚ್ಚಿನ ಮಂದಿ ತಲೆ ಕೆಡಿಸಿಕೊಂಡಂತಿಲ್ಲ. ಆದರೆ ಅವನನ್ನು ಪದೇ ಪದೇ ನೋಡುವವರು ಮಾತ್ರ ಈತ ಯಾರು, ಯಾಕಿಷ್ಟು ಫೇಮಸ್ಸು ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈತನ ಹೆಸರು ರಾಜಾ. ಹೈದರಾಬಾದ್​ನವನು. ಡ್ರೈವರ್​ ಆಗಿ ಕೆಲಸ ಮಾಡುತ್ತಿದ್ದಾನೆ. ಈಗ ಹೀಗೆ ಒಮ್ಮೆ ಚಹ ಕುಡಿದು ನಗುತ್ತಿರುವಾಗ ಕಂಟೆಂಟ್​ ಕ್ರಿಯೇಟರ್​ ಒಬ್ಬರು ಈತನ ಫೋಟೋ ತೆಗೆದು ಹಾಕಿದರಂತೆ. ಅದಕ್ಕೆ ನಾಲ್ಕೈದು ಮಿಲಿಯನ್ಸ್​ ವ್ಯೂವ್ಸ್​ ಬಂದಿತು.

ಲಡ್ಡು ಹೆಸರಿನ ಖಾತೆ

ಇದನ್ನು ನೋಡಿದ ಅವರು, ಈ ಬಾಲಕನಿಗೆ ಅವನದ್ದೇ ಆದ ಸೋಷಿಯಲ್​ ಮೀಡಿಯಾ ಖಾತೆ ಓಪನ್​ ಮಾಡಿಕೊಟ್ಟಿದ್ದಾರೆ. ಅದರಲ್ಲಿ ಇದೇ ವಿಡಿಯೋ ಅನ್ನು ಅವನು ಶೇರ್​ ಮಾಡಿದ್ದಾನೆ. ಅದಕ್ಕೆ ಎರಡೂವರೆ ಮಿಲಿಯನ್​ ವ್ಯೂವ್ಸ್​ ಬಂದಿದೆ. ಇದರಿಂದ ಫೇಮಸ್​ ಆಗಿರೋ ಅವನು ಖುದ್ದು ಕಂಟೆಂಟ್​ ಕ್ರಿಯೇಟರ್​ ಆಗಿದ್ದು, ವಿಡಿಯೋಗಳನ್ನು ಅಪ್​ಲೋಡ್​ ಮಾಡುತ್ತಿದ್ದಾನೆ. ಮಿಸ್ಟರ್​ ಲಡ್ಡು 0009 ಎನ್ನುವ ಇನ್​ಸ್ಟಾಗ್ರಾಮ್​ ಪುಟವನ್ನು ಅವನು ಹೊಂದಿದ್ದಾನೆ. ಲಡ್ಡು ನಾಯಕ್​ ಎಂದು ಹೆಸರು ಬರೆದುಕೊಂಡಿದ್ದಾರೆ. ವರ್ಷದ ಹಿಂದೆ ಅಪ್​ಲೋಡ್​ ಮಾಡಿರುವ ಈ ನಗುವಿನ ವಿಡಿಯೋಗೆ ಇಂದಿಗೂ ಕಮೆಂಟ್ಸ್​ ಬರುತ್ತಲೇ ಇವೆ. ಒಟ್ಟಿನಲ್ಲಿ ಯಾರು ಯಾವಾಗ, ಹೇಗೆ ಬೇಕಾದ್ರೂ ವೈರಲ್​ ಆಗ್ತಾರೆ ಎನ್ನೋದಕ್ಕೆ ಇದುವೇ ಸಾಕ್ಷಿ. ಕೆಲವರು ಯಾರು ಎಂದು ತಿಳಿಯದೇ ಒಟ್ಟಿನಲ್ಲಿ ವೈರಲ್​ ಮಾಡುತ್ತಲೇ ಇರುತ್ತಾರೆ ಜನರು. ಅಂಥವರಲ್ಲಿ ಒಬ್ಬ ಈ ರಾಜ.

 

 

PREV
Read more Articles on
click me!

Recommended Stories

ಚೀನಾಕ್ಕೆ ಬೇಕಿರೋದು ಮಕ್ಕಳೇ ಹೊರತು ಕಾಂಡೋಮ್‌ಗಳಲ್ಲ! ವಿಶ್ವದ ನಂ.1 ಬ್ರ್ಯಾಂಡ್ 'ಡ್ಯುರೆಕ್ಸ್'ಗೆ ಸರ್ಕಾರದ ಬ್ರೇಕ್!
ಕುರಿ ಮೇಯಿಸೋ ಕೆಲಸಕ್ಕೆ ಪದವೀಧರರು, ವೈಟ್ ಕಾಲರ್ ಉದ್ಯೋಗಿಗಳು ಸೇರಿ 700ಕ್ಕೂ ಹೆಚ್ಚು ಜನ ಅರ್ಜಿ!