ಗದ್ದೆ ಅಂಚಲ್ಲಿ uniform ಹಾಕ್ಕೊಂಡು ಎಣ್ಣೆ ಹೊಡೀತಾ ಇರೋ ಹೈಸ್ಕೂಲ್ ಹುಡ್ಗೀರು, parents shock! ವಿಡಿಯೋ ವೈರಲ್

Published : Feb 04, 2026, 12:43 PM IST
School Girls

ಸಾರಾಂಶ

ಶಾಲಾ ಸಮವಸ್ತ್ರದಲ್ಲಿದ್ದ ವಿದ್ಯಾರ್ಥಿನಿಯರು ಗದ್ದೆ ಬದಿಯಲ್ಲಿ ಮದ್ಯಪಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಮಕ್ಕಳಿಗೆ ಶಿಕ್ಷೆಯ ಬದಲು ಆಪ್ತ ಸಮಾಲೋಚನೆ ಮತ್ತು ಪೋಷಕರ ಜವಾಬ್ದಾರಿಯ ಅಗತ್ಯವನ್ನು ತಜ್ಞರು ಒತ್ತಿಹೇಳಿದ್ದಾರೆ.

ಒಂದು ಕಾಲದಲ್ಲಿ ಶಿಕ್ಷಣ ಪಡೆಯಲು ಮಕ್ಕಳು ಕಿಲೋಮೀಟರ್‌ಗಟ್ಟಲೇ ಕಾಲು ನಡಿಗೆ ಮೂಲಕ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ ಈಗ ಎಲ್ಲಾ ಸೌಕರ್ಯಗಳು ಮಕ್ಕಳಿಗೆ ಸಿಕ್ಕರೂ ಕೆಲವು ಮಕ್ಕಳು, ವಿದ್ಯಾಭ್ಯಾಸ ಬಿಟ್ಟು ಉಳಿದೆಲ್ಲಾ ಕೆಟ್ಟ ಚಟುವಟಿಕೆ ಮಾಡುವ ಮೂಲಕ ಹಾದಿ ತಪ್ಪುತ್ತಿದ್ದಾರೆ. ಇದೀಗ ಅಂತಹದ್ದೇ ಒಂದು ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೇ ವೈರಲ್ ಆಗುತ್ತಿದ್ದು, ಹೆಣ್ಣು ಮಕ್ಕಳು ಶಾಲಾ ಯೂನಿಫಾರಂನಲ್ಲಿಯೇ ಗದ್ದೆಬದಿಯಲ್ಲಿ ಕೂತು ಎಣ್ಣೆ ಹೊಡೆಯುತ್ತಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೌದು, ನಮ್ಮ ಹೆಣ್ಣು ಮಕ್ಕಳು ಶಾಲೆಗೆ ಹೋಗಿ ಚೆನ್ನಾಗಿ ಓದುತ್ತಿದ್ದಾರೆ ಎಂದು ಪೋಷಕರು ನೆಮ್ಮದಿಯಾಗಿ ಮನೆಯಲ್ಲಿರುತ್ತಾರೆ. ಆದರೆ ತಮ್ಮ ಮಕ್ಕಳ ಮೇಲೆ ಕೊಂಚ ಜವಾಬ್ದಾರಿ ತಪ್ಪಿದರೂ ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಹೀಗೆ ಹಾದಿ ತಪ್ಪುವ ಕೆಲಸ ಮಾಡುತ್ತಾರೆ. ಮನೆಯಲ್ಲಿ ಸೂಕ್ತ ಮೌಲ್ಯ ಶಿಕ್ಷಣ ನೀಡಿದ್ದರೇ ಬಹುಶಃ ಹೀಗಾಗುತ್ತಿರಲಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

 

ನೆಟ್ಟಿಗರ ಆಕ್ರೋಶ:

ಇದು ಶಾಲೆಯ ರೂಲ್ಸ್ ಬ್ರೇಕ್ ಮಾಡಿರುವುದಷ್ಟೇ ಅಲ್ಲ, ಅದಕ್ಕೆ ಬದಲಾಗಿ ಇಷ್ಟು ಸಣ್ಣ ವಯಸ್ಸಿನಲ್ಲಿ ಆಲ್ಕೋಹಾಲ್ ಕುಡಿಯುವುದರಿಂದ ಮುಂದಾಗುವ ಅನಾಹುತದ ಮಾಹಿತಿಯೇ ಇಲ್ಲದೇ ಹೀಗೆ ಮಾಡುತ್ತಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದಷ್ಟೇ ಅಲ್ಲದೇ ಶಿಕ್ಷಣ ತಜ್ಞರು ಹಾಗೂ ಮಕ್ಕಳ ಸುರಕ್ಷತಾ ತಜ್ಞರು, ಮಕ್ಕಳಿಗೆ ಶಿಕ್ಷೆ ಕೊಡುವುದೊಂದೇ ಇದಕ್ಕೆ ಪರಿಹಾರವಲ್ಲ. ಶಾಲೆಯ ಶಿಕ್ಷಕರು ಹಾಗೂ ಪೋಷಕರು ಒಟ್ಟಾಗಿ ಸೇರಿ ಮಕ್ಕಳ ಜತೆ ಆಪ್ತ ಸಮಾಲೋಚನೆ ಮಾಡಿಸಬೇಕು. ಆಲ್ಕೋಹಾಲ್ ಸೇವಿಸುವುದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಇದಷ್ಟೇ ಅಲ್ಲದೇ ಬೇರು ಮಟ್ಟದಲ್ಲೇ ಸಮುದಾಯದ ಹಂತದಲ್ಲಿ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಆಗ್ರಹಿಸಿದ್ದಾರೆ.

ಈ ವಿಡಿಯೋ ಹೆಚ್ಚು ವೈರಲ್ ಆದಷ್ಟು ಆ ಶಾಲೆಯ ಆಡಳಿತ ಮಂಡಳಿಯ ಮೇಲೆ ಹೆಚ್ಚು ಹೆಚ್ಚು ಒತ್ತಡ ಬೀಳಲಿದೆ. ಆಗ ಆ ಶಾಲೆಯವರು ಇನ್ನಷ್ಟು ಜವಾಬ್ದಾರಿಯಿಂದ ವರ್ತಿಸಲಿದ್ದಾರೆ. ಇದು ನಮ್ಮ ಮಕ್ಕಳ ಮೇಲೆ ನಿಗಾಯಿಡಲು ಎಚ್ಚರಿಯ ಕರೆಗಂಟೆಯಾಗಿದೆ.

ವಿಡಿಯೋ ನೋಡಿ ಕಾಲೆಳೆದ ನೆಟ್ಟಿಗರು!

ಈ ವಿಡಿಯೋ ನೋಡಿದ ನೆಟ್ಟಿಗರೊಬ್ಬರು, ನಮ್ಮ ಹುಡುಗಿಯರು, ಹುಡುಗರಿಗಿಂತ ಕಮ್ಮಿಯೇನಿಲ್ಲ ಎನ್ನುವ ದಂಗಲ್ ಸಿನಿಮಾದ ಡೈಲಾಗ್ ಕಮೆಂಟ್ ಮಾಡಿದ್ದಾರೆ. ಅವರು ಮೊಸರು ಕುಡಿಯುತ್ತಿರಬಹುದು ಎಂದು ಮತ್ತೋರ್ವ ನೆಟ್ಟಿಗ ಕಮೆಂಟ್ ಮಾಡಿದ್ದಾರೆ.

ಎಲ್ಲಾ ಮಕ್ಕಳು ಹೀಗೆ ಮಾಡುತ್ತಾರೆ ಅಂತಲ್ಲ. ಆದರೆ ಸಣ್ಣ ವಯಸ್ಸಿನಲ್ಲಿ ಮಕ್ಕಳ ಚಲನ-ವಲನಗಳ ಮೇಲೆ ಒಂದು ಕಣ್ಣಿಟ್ಟಿರಬೇಕು. ಒಟ್ಟಿನಲ್ಲಿ ಈ ಒಂದು ಘಟನೆಯು ಪ್ರತಿಯೊಬ್ಬ ತಂದೆ ತಾಯಿಯೂ ಮಕ್ಕಳ ಬಗ್ಗೆ ಯೋಚಿಸುವಂತೆ ಮಾಡಿರುವುದಂತೂ ಸುಳ್ಳಲ್ಲ.

PREV
Read more Articles on
click me!

Recommended Stories

ಫೆ. 26ಕ್ಕೇ ಮದುವೆ ಪಕ್ಕಾ.. ಕೊನೆಗೂ ಏರ್‌ಪೋರ್ಟ್‌ನಲ್ಲಿ ಗುಟ್ಟು ರಟ್ಟುಮಾಡಿದ ರಶ್ಮಿಕಾ ಮಂದಣ್ಣ!
ಪ್ರಿಯಾಂಕಾ ಚೋಪ್ರಾ ಬೇಡಿಕೆಗೆ ಅಸ್ತು ಎಂದ ರಾಜಮೌಳಿ; ಮಹೇಶ್ ಬಾಬುಗೆ ಭಾರೀ ಸಂಕಷ್ಟ, ಅಳೋದೊಂದೇ ಬಾಕಿ!