ಭಕ್ತಿಯಲ್ಲಿ ತೇಲಾಡ್ತಿದ್ದಾರೆ Gen-Z … ವೈರಲ್ ಆಗ್ತಿದೆ Bhajan Clubbing ಏನಿದು ಹೊಸ ಟ್ರೆಂಡ್?

Published : Feb 04, 2026, 10:03 AM IST
Bhajan Clubbing

ಸಾರಾಂಶ

Bhajan Clubbing: Gen-Z ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ಕ್ಲಬ್ಬಿಂಗ್ ಟ್ರೆಂಡಿಂಗ್ ನಲ್ಲಿದೆ. ಇಲ್ಲಿ ಯಾವುದೇ ಲೌಡ್ ಮ್ಯೂಸಿಕ್, ಮದ್ಯ ಯಾವುದೂ ಇಲ್ಲ. ಬದಲಾಗಿ ಭಜನೆ ಹೇಳಿಕೊಂಡು, ಮಂತ್ರ ಹೇಳಿ ಭಕ್ತಿಯಲ್ಲಿ ತಮ್ಮನ್ನು ತಾವು ಮೈಮರೆಯುತ್ತಿದ್ದಾರೆ. ಏನಿದು ಟ್ರೆಂಡ್ ಇಲ್ಲಿದೆ ಮಾಹಿತಿ. 

ಭಜನ್ ಕ್ಲಬ್ಬಿಂಗ್

ಹಿಂದೆ, ಪಾರ್ಟಿ ಮಾಡುವುದು ಹೆಚ್ಚಾಗಿ ಲೌಡ್ ಮ್ಯೂಸಿಕ್, ನೈಟ್‌ಕ್ಲಬ್‌ಗಳು ಮತ್ತು ಮದ್ಯದೊಂದಿಗೆ ಸಂಬಂಧ ಹೊಂದಿತ್ತು, ಆದರೆ ಚಿತ್ರಣ ಬದಲಾಗುತ್ತಿದೆ. ಭಜನ್ ಕ್ಲಬ್ಬಿಂಗ್ (Bhajan Clubbing) ಎಂಬ ಹೊಸ ಟ್ರೆಂಡ್ Gen-Z ಗಳಲ್ಲಿ ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಈ ಟ್ರೆಂಡ್ ನಲ್ಲಿ ಡಿಜೆ ಬೀಟ್‌ಗಳನ್ನು ಲೌಡ್ ಪಾಪ್ ಮ್ಯೂಸಿಕ್ ಬದಲಾಗಿ, ಭಕ್ತಿ ಸಂಗೀತ, ಢೋಲಕ್, ಮತ್ತು ಮಂತ್ರಗಳ ಧ್ವನಿಯೊಂದಿಗೆ ಬದಲಾಯಿಸಲಾಗಿದೆ. ಅನೇಕ ಯುವಕರು ಇದನ್ನು ಹೀಲಿಂಗ್ ಪಾರ್ಟಿ ಎಂದು ಕರೆಯುತ್ತಿದ್ದರೆ, ಇತರರು ಇದನ್ನು ಭಕ್ತಿಯೊಂದಿಗೆ ಸಂಯೋಜಿಸುತ್ತಿದ್ದಾರೆ.

ಭಕ್ತಿಯಲ್ಲಿ ತಮ್ಮನ್ನು ತಾವು ಮೈಮರೆಯುತ್ತಿದ್ದಾರೆ Gen-Z

ಭಜನ್ ಕ್ಲಬ್ಬಿಂಗ್ ಒಂದು ಹೊಸ ಸಂಸ್ಕೃತಿಯಾಗಿದ್ದು ಅದು ಮನರಂಜನೆ ಮತ್ತು ಆಧ್ಯಾತ್ಮಿಕತೆಯ ವಿಶಿಷ್ಟ ಮಿಶ್ರಣವನ್ನು ನೀಡುತ್ತದೆ. ಇಂದಿನ Gen-Z ಇದನ್ನು ಒತ್ತಡ-ಮುಕ್ತ ಮಾರ್ಗ ಎನ್ನುತ್ತಿದೆ. ಗದ್ದಲ ಮತ್ತು ಹ್ಯಾಂಗೊವರ್‌ಗಳಿಂದ ದೂರವಾಗಿ, ಈ ಟ್ರೆಂಡ್ ಯುವಜನರಿಗೆ ಮಾನಸಿಕ ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಒದಗಿಸುತ್ತಿದೆ. ಒಂದು ಕಾಲದಲ್ಲಿ ಪಾರ್ಟಿ ಅಂದ್ರೆ ಕೇವಲ ಲೌಡ್ ಮ್ಯೂಸಿಕ್ ಮತ್ತು ಮದ್ಯ, ಹುಚ್ಚೆದ್ದು ಕುಣಿಯುವುದು ಮಾತ್ರ ಆಗಿರ್ತಿತ್ತು, ಆದರೆ ಭಜನ್ ಕ್ಲಬ್ಬಿಂಗ್ ಈಗ ಅವರನ್ನು ವಿಭಿನ್ನ ರೀತಿಯ ನೆಮ್ಮದಿಗೆ ಕರೆದೊಯ್ಯುತ್ತಿದೆ ಎಂದು ಹಲವರು ನಂಬುತ್ತಾರೆ. ಭಜನ್ ಕ್ಲಬ್ಬಿಂಗ್ ಒಂದು ಮ್ಯೂಸಿಕಲ್ ಮೀಟಿಂಗ್, ಅಲ್ಲಿ ಜನರು ಭಜನೆಗಳು, ಕೀರ್ತನೆಗಳು ಮತ್ತು ಮಂತ್ರಗಳಿಗೆ ನೃತ್ಯ ಮಾಡಲು ಒಟ್ಟಿಗೆ ಸೇರುತ್ತಾರೆ. ಯಾವುದೇ ಮಾದಕತೆ ಅಥವಾ ಜೋರಾದ ಶಬ್ದವಿಲ್ಲ, ಬದಲಿಗೆ, ಸಕಾರಾತ್ಮಕ ಮತ್ತು ಶಾಂತ ವಾತಾವರಣವನ್ನು ಸೃಷ್ಟಿಸಲಾಗುತ್ತದೆ.

ಅನೇಕ ಸ್ಥಳಗಳಲ್ಲಿ, ಇದನ್ನು ನೈಟ್‌ಕ್ಲಬ್‌ನಂತೆ ವಿನ್ಯಾಸಗೊಳಿಸಲಾಗಿದೆ, ದೀಪಗಳು ಮತ್ತು ಸೌಂಡ್ ಜೊತೆ, ಆದರೆ ಸಂಗೀತವು ಸಂಪೂರ್ಣವಾಗಿ ಭಕ್ತಿಯಿಂದ ಕೂಡಿದೆ. Gen-Z ಯಲ್ಲಿ ಈ ಟ್ರೆಂಡ್ ಹೆಚ್ಚಾಗಲು ದೊಡ್ಡ ಕಾರಣ ಹೆಚ್ಚುತ್ತಿರುವ ಒತ್ತಡ ಮತ್ತು ಮಾನಸಿಕ ಶಾಂತಿ ಇಲ್ಲದೇ ಇರುವುದು. ಅಧ್ಯಯನ, ವೃತ್ತಿ ಮತ್ತು ಸಾಮಾಜಿಕ ಮಾಧ್ಯಮದ ಒತ್ತಡಗಳು ಯುವಜನರನ್ನು ದಣಿಯುವಂತೆ ಮಾಡಿದೆ, ಭಜನ್ ಕ್ಲಬ್ಬಿಂಗ್ ಅವರಿಗೆ ಶಾಂತಿ ಮತ್ತು ವಿಶ್ರಾಂತಿಯನ್ನು ನೀಡುತ್ತದೆ. ಭಜನ್ ಕ್ಲಬ್ಬಿಂಗ್ ಜನರು ತಮ್ಮನ್ನು ತಾವು ನಿರ್ಣಯಿಸದೆ ವ್ಯಕ್ತಪಡಿಸಲು ಮತ್ತು ಪಾರ್ಟಿಯಲ್ಲಿ ಶಾಂತಿಯನ್ನು ಕಂಡುಕೊಳ್ಳಲು (finding peace) ಅನುವು ಮಾಡಿಕೊಡುತ್ತದೆ.

ಭಜನೆ ಕ್ಲಬ್ಬಿಂಗ್‌ನ ವೀಡಿಯೊಗಳು, ರೀಲ್‌ಗಳು ಮತ್ತು ಕಿರುಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ವೈರಲ್ ಆಗುತ್ತಿವೆ, ಅಲ್ಲಿ ಯುವಕರು ಕಣ್ಣು ಮುಚ್ಚಿ ಭಕ್ತಿಯಲ್ಲಿ ಮುಳುಗಿರುವುದನ್ನು ಕಾಣಬಹುದು. ಅನೇಕರು ಇದನ್ನು ಸೋಲ್ ಪಾರ್ಟಿ ಅಥವಾ ಹೀಲಿಂಗ್ ಎಂದು ಕರೆಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮವು ಈ ಟ್ರೆಂಡ್ ನ್ನು ಮತ್ತಷ್ಟು ಹೈಪ್ ಮಾಡಿದೆ. ಈ ಟ್ರೆಂಡ್ ನ ಒಂದು ದೊಡ್ಡ ಪಾಸಿಟಿವ್ ವಿಷಯ ಅಂದ್ರೆ, ಬಟ್ಟೆ ಬಗ್ಗೆ ಯಾವುದೇ ಕಾಮೆಂಟ್ ಬರೋದಿಲ್ಲ, ಸ್ಥಾನಮಾನದ ಬಗ್ಗೆ ಯಾರೂ ಕೇಳೋದು ಇಲ್ಲ; ಪ್ರತಿಯೊಬ್ಬರೂ ಸಂಗೀತ ಮತ್ತು ಶಕ್ತಿಯೊಂದಿಗೆ ಸಂಪರ್ಕ ಸಾಧಿಸುತ್ತಾರೆ, ಅದಕ್ಕಾಗಿಯೇ Gen Z ಇದನ್ನು ಹೀಲಿಂಗ್ ಕ್ಲಬ್ ಎಂದು ಕರೆಯುತ್ತಾರೆ.

PREV
Read more Articles on
click me!

Recommended Stories

ಹಳೇ ಸಿಮ್‌ ಕಾರ್ಡ್‌ನಲ್ಲಿದ್ಯಾ ಚಿನ್ನ? ಇ-ವೇಸ್ಟ್‌ನಿಂದ 26 ಲಕ್ಷ ಮೌಲ್ಯದ ಚಿನ್ನ ಹೊರತೆಗೆದ ಯುವಕ!
ಮಧ್ಯರಾತ್ರಿ ಸ್ಮಶಾನದೊಳಗಿಂದ ಬಿರಿಯಾನಿ ಆರ್ಡರ್ ಮಾಡಿದ ಲೇಡಿ! ಸ್ಮಶಾನದ ಬಳಿ ಡೆಲಿವರಿ ಬಾಯ್ ಬಂದಾಗ, ಆಗಿದ್ದೇನು? ನೀವೇ ನೋಡಿ