ಅಂಗವಿಕಲ ಗಂಡನನ್ನ ನೋಡಿ ಗೇಲಿ ಮಾಡಿದ ಮಹಿಳೆ, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನೆಟ್ಟಿಗರು

Published : Aug 08, 2025, 01:05 PM ISTUpdated : Aug 08, 2025, 01:30 PM IST
viral video

ಸಾರಾಂಶ

ಕೆಲವು ವಿಡಿಯೋಗಳು ವೈರಲ್ ಆದರೂ ಜನರಿಗೆ ಇಷ್ಟ ಆಗೋದೆ ಇಲ್ಲ,  ವಿಡಿಯೋ ಮಾಡಿದವರು ಟೀಕೆಗೆ ಗುರಿಯಾಗುತ್ತಾರೆ. ಇದೀಗ ಇಂತಹುದೇ ವಿಡಿಯೋದ ವಿವರ ಇಲ್ಲಿದೆ ನೋಡಿ... 

ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಪಡೆಯಲು ಕೆಲವರು ಯಾವುದೇ ಲೆವೆಲ್‌ಗಾದರೂ ಇಳಿಯಲು ಸಿದ್ಧರಿರುತ್ತಾರೆ. ತಮ್ಮ ಪ್ರೀತಿಪಾತ್ರರನ್ನು ಅವಮಾನಿಸುವುದನ್ನೂ ಸಹ ಮಾಡುತ್ತಾರೆ. ಇತ್ತೀಚೆಗೆ ಇಂಟರ್‌ನೆಟ್‌ನಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಒರ್ವ ಮಹಿಳೆ ತನ್ನ ಅಂಗವಿಕಲ ಪತಿಯನ್ನು ಗೇಲಿ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಜನರನ್ನು ಅಚ್ಚರಿಗೊಳಿಸಿರುವುದಲ್ಲದೆ, ಕೋಪಕ್ಕೆ ಕಾರಣವಾಗುವಂತೆ ಮಾಡಿದೆ. ನಿಮಗೆಲ್ಲಾ ಗೊತ್ತಿರುವಂತೆ ಯಾವುದೇ ವಿಚಿತ್ರ ರೀಲ್ ಸಾಮಾಜಿಕ ಜಾಲತಾಣಗಳಲ್ಲಿ ಬಂದಾಗಲೆಲ್ಲಾ ಅದು ಖಂಡಿತವಾಗಿಯೂ ವೈರಲ್ ಆಗುತ್ತದೆ. ಜನರು ಕೂಡ ಇಷ್ಟಪಟ್ಟು ನೋಡುತ್ತಾರೆ. ಆದರೆ ಕೆಲವು ವಿಡಿಯೋಗಳು ವೈರಲ್ ಆದರೂ ಜನರಿಗೆ ಇಷ್ಟ ಆಗೋದೆ ಇಲ್ಲ, ನಂತರ ವಿಡಿಯೋ ಮಾಡಿದವರು ಟೀಕೆಗೆ ಗುರಿಯಾಗುತ್ತಾರೆ. ಇದೀಗ ಇಂತಹುದೇ ವಿಡಿಯೋದ ವಿವರ ಇಲ್ಲಿದೆ ನೋಡಿ...

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಈ ವಿಡಿಯೋದಲ್ಲಿ ಮಹಿಳೆಯ ಪತಿ ಊರುಗೋಲು ಸಹಾಯದಿಂದ ಹಾಸಿಗೆಯ ಮೇಲೆ ಹತ್ತಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಏತನ್ಮಧ್ಯೆ ಮಹಿಳೆ ಕ್ಯಾಮೆರಾ ನೋಡಿ, "ಗಂಡನ ಪಾದದಲ್ಲಿ ಸ್ವರ್ಗವಿದೆ. ಆದರೆ ನನ್ನ ಗಂಡನಿಗೆ ಪಾದಗಳೂ ಇಲ್ಲ" ಎಂದು ಅಪಹಾಸ್ಯ ಮಾಡುತ್ತಾಳೆ. ತನ್ನ ಹೆಂಡತಿಯ ಬಾಯಿಂದ ಅಂತಹ ಮಾತನ್ನು ಕೇಳಿ ಗಂಡನಿಗೆ ನೋವಾಗುತ್ತದೆ. "ನೀನು ತಮಾಷೆ ಮಾಡುತ್ತಿದ್ದೀಯಾ" ಎಂದು ಕೇಳುತ್ತಾನೆ. ಆದರೆ ಮಹಿಳೆ ಇದನ್ನು ನೋಡಿ ನಗುತ್ತಲೇ ಇರುತ್ತಾಳೆ. ಇದು ತನ್ನ ಗಂಡನ ಭಾವನೆಗೆ ಬೆಲೆ ಕೊಡುವುದಿಲ್ಲ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ 'ಥ್ರೆಡ್' ನಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ನೋಡಿದ ನಂತರ ಜನರು ಮಹಿಳೆಯನ್ನು ಟೀಕಿಸಲು ಪ್ರಾರಂಭಿಸಿದ್ದಾರೆ. ವಿಡಿಯೋ ಬಗ್ಗೆ ಕಾಮೆಂಟ್‌ಗಳ ಮಹಾಪೂರವೇ ಹರಿದುಬಂದಿದ್ದು, ಹೆಚ್ಚಿನ ಬಳಕೆದಾರರು ಮಹಿಳೆಯ ಮನಸ್ಥಿತಿ ಪ್ರಶ್ನಿಸುತ್ತಿದ್ದಾರೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ 

ಮಹಿಳೆಗೆ ನೆಟ್ಟಿಗರಿಂದ ತರಾಟೆ
@pavan_prajapat7 ಎಂಬ ಬಳಕೆದಾರರು ಈ ವಿಡಿಯೋ ಹಂಚಿಕೊಂಡು ಅದಕ್ಕೆ "ಅಶ್ಲೀಲತೆಯ ಎತ್ತರ" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಕೆಲವು ಬಳಕೆದಾರರು "ಕಾಲುಗಳಿವೆ, ಆದರೆ ನೀನು ಅವುಗಳನ್ನು ನೋಡಲು ಸಾಧ್ಯವಿಲ್ಲ" ಎಂದು ಕಾಮೆಂಟ್ ಮಾಡಿದರೆ, ಮತ್ತೆ ಕೆಲವು ಬಳಕೆದಾರರು ಆ ಮಹಿಳೆಯನ್ನು ಎಚ್ಚರಿಸಿ "ಕಾಲವು ತುಂಬಾ ನಿರ್ದಯವಾಗಿದೆ, ಒಂದು ದಿನ ನಿಮಗೂ ಇದು ಸಂಭವಿಸಬಹುದು", "ಸ್ವಲ್ಪ ನಾಚಿಕೆಪಡು, ಸಂಬಂಧಗಳ ಈ ಜೋಕ್ ಚೆನ್ನಾಗಿ ಕಾಣುವುದಿಲ್ಲ", "ಇಂತಹ ಅಸಭ್ಯ ವಿಷಯವನ್ನು ಸಮಾಜದಲ್ಲಿ ಸ್ವೀಕರಿಸಲು ಸಾಧ್ಯವಿಲ್ಲ" ಎಂದೆಲ್ಲಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಜನಪ್ರಿಯತೆಯ ಆಸೆಗೆ ಸಂಬಂಧಗಳ ಸೂಕ್ಷ್ಮತೆ ಮತ್ತು ಘನತೆಯನ್ನು ಬದಿಗಿಡುವುದು ಸರಿಯೇ? ಎಂದು ಪ್ರಶ್ನಿಸಲಾಗಿದೆ.

ಇದು ಒಂದು ಕಡೆಯಾದರೆ, ಮತ್ತೊಂದೆಡೆ ಉಪಯುಕ್ತವಾದ ಒಂದು ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಮಹಿಳೆಯೊಬ್ಬರು ರೊಟ್ಟಿಯನ್ನು ತಟ್ಟುವ ವಿಶಿಷ್ಟ ವಿಧಾನವನ್ನು (Roti-Making Method Earlier) ಕಂಡುಕೊಂಡಿದ್ದರು. ಅವರ ಈ ಟೆಕ್ನಿಕ್‌ನಿಂದ ಅವರು ಏಕಕಾಲದಲ್ಲಿ 4-5 ರೊಟ್ಟಿಗಳನ್ನು ತಟ್ಟಿ ಬೇಯಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ವಿಶಿಷ್ಟವಾಗಿ ಏಕಕಾಲದಲ್ಲಿ ಅನೇಕ ರೊಟ್ಟಿಗಳನ್ನು ತಯಾರಿಸುವುದನ್ನು ಕಾಣಬಹುದು. ಈ ವಿಧಾನವು ತುಂಬಾ ಪರಿಣಾಮಕಾರಿ ಮತ್ತು ಆಸಕ್ತಿದಾಯಕವಾಗಿದ್ದು, ಜನರು ಅದನ್ನು ನೋಡಿ ಬೆರಗಾಗುತ್ತಾರೆ ಮತ್ತು ಅನೇಕ ಜನರು ಇದನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಈ ಹೊಸ ಸ್ಟೈಲ್ ರೊಟ್ಟಿ ತಯಾರಿಕೆಗೆ ವಿಶೇಷವಾಗಿ ಕೆಲಸ ಮಾಡುವ ಮಹಿಳೆಯರು, ತಾಯಂದಿರು ಹೆಚ್ಚಿನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಅವರು ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸವನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ವಿಡಿಯೋದಲ್ಲಿ, ಹಿಟ್ಟಿನ ಉಂಡೆಗಳನ್ನು ಮಾಡುವ ಮೊದಲು, ಮಹಿಳೆ ಅವುಗಳನ್ನು ಉದ್ದವಾಗಿ ಮಾಡಿ ಸ್ವಲ್ಪ ಸ್ವಲ್ಪ ದೂರದಲ್ಲಿ ಚಪ್ಪಟೆಗೊಳಿಸುತ್ತಾ ಹೋದರು. ನಂತರ, ರೊಟ್ಟಿ ತಟ್ಟುವಾಗ ಒಂದಕ್ಕೊಂದು ಅಂಟಿಕೊಳ್ಳದಂತೆ ಸ್ವಲ್ಪ ಒಣ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಅವುಗಳ ಮೇಲೆ ಹಾಕಿದರು. ಈಗ ಉಂಡೆಗಳಾಗಿ ಬೇರ್ಪಡಿಸಿ, ಒಂದರ ಮೇಲೊಂದರಂತೆ ಇರಿಸಿದರು. ಆ ನಂತರ ಈ ಎಲ್ಲಾ ರೊಟ್ಟಿಗಳನ್ನು ಒಟ್ಟಿಗೆ ರೋಲಿಂಗ್ ಪಿನ್‌ (ಲಟ್ಟಣಿಗೆ) ತೆಗೆದುಕೊಂಡು ಲಟ್ಟಿಸಿ, ಒಂದಕ್ಕೊಂದು ಅಂಟಿಕೊಳ್ಳದಂತೆ ತೆಗೆದು ಬೇಯಿಸಿದರು. ಇದೇ ರೀತಿ 4-5 ರೊಟ್ಟಿಗಳನ್ನು ಒಟ್ಟಿಗೆ ಸುತ್ತಿ ರೆಡಿ ಮಾಡಲಾಯ್ತು. ಇದು ಒಂದು ರೊಟ್ಟಿ ತೆಗೆದುಕೊಂಡಷ್ಟೇ ಸಮಯವನ್ನು ಮಾತ್ರ ತೆಗೆದುಕೊಂಡಿತು. ಆದರೆ 4-5 ರೊಟ್ಟಿಗಳು ಸಿದ್ಧವಾದವು. ಮಹಿಳೆಯ ಈ ವಿಶಿಷ್ಟ ಟೆಕ್ನಿಕ್ ಸಮಯವನ್ನು ಉಳಿಸುವುದಲ್ಲದೆ, ಶ್ರಮವನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ.

PREV
Read more Articles on
click me!

Recommended Stories

ಮದುವೆ ಹತ್ತಿರ ಇರುವಾಗ್ಲೆ 25 ಲಕ್ಷ ಸ್ಯಾಲರಿ ಕೆಲ್ಸ ಬಿಟ್ಟು ಡೆಲಿವರಿ ಬಾಯ್ ಆದ, ಇಂಟರೆಸ್ಟಿಂಗ್ ಆಗಿದೆ ಕಾರಣ
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!