Viral video: ಅಪ್ಪನ ಅಡುಗೆ ಮಳೆಗೆ ನೆನೆಯದಿರಲು ಫುಟ್‌ಪಾತ್‌ನಲ್ಲೇ ಹಲಗೆ ಹಿಡಿದು ನಿಂತ ಮಕ್ಕಳು

Published : Aug 07, 2025, 12:22 PM IST
vial video

ಸಾರಾಂಶ

ಬಡತನದ ನೋವು ಅನುಭವಿಸಿದವರರಿಗೆ ಮಾತ್ರ ಗೊತ್ತಿರುತ್ತದೆ. ಬಹುಶಃ ಈ ವಿಡಿಯೋ ನೋಡಿದ ನಂತ್ರ ನಿಮ್ಮ ಕಣ್ಣುಗಳಲ್ಲಿ ನೀರು ಬಂದ್ರೆ ಆಶ್ಚರ್ಯವೇನಿಲ್ಲ ಬಿಡಿ.

ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ತಮಾಷೆಯ ವಿಡಿಯೋಗಳು ವೈರಲ್ ಆಗಿರುವುದನ್ನ ನಾವು ನೋಡಿದ್ದೇವೆ. ಈ ವಿಡಿಯೋಗಳನ್ನ ನೋಡಿ ನಾವೆಲ್ಲಾ ನಕ್ಕಿ ನಕ್ಕಿ ಸುಸ್ತಾಗಿರುವುದು ಉಂಟು. ಆದರೆ ಕೆಲವು ವಿಡಿಯೋ ನೋಡಿದಾಗ ಜನರ ಕಣ್ಣುಗಳು ತೇವವಾಗುವುದರಲ್ಲಿ ಸಂಶಯವೇ ಇಲ್ಲ. ಹೌದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ಖಂಡಿತವಾಗಿಯೂ ನಿಮ್ಮ ಕಣ್ಣುಗಳಲ್ಲಿ ನೀರು ತರಿಸುವುದು ಮಾತ್ರವಲ್ಲ, ಹೃದಯವನ್ನೂ ಗೆಲ್ಲುತ್ತದೆ. ಇದನ್ನು ನೋಡಿದಾಗ ಯಾರಿಗೂ ಇಂತಹ ಬಡತನ ಬರಬಾರದು ಅಂತೆನಿಸುತ್ತದೆ.

ವೈರಲ್ ವಿಡಿಯೋದಲ್ಲಿ ಏನಿದೆ?
ಇದೀಗ ವೈರಲ್ ಆಗುತ್ತಿರುವ ವಿಡಿಯೋ ಮಳೆಯ ನಂತರದ ವಿಡಿಯೋ ಅನಿಸುತ್ತದೆ. ಸ್ವಲ್ಪ ತುಂತುರು ಹನಿ ಅಲ್ಲಲ್ಲಿ ಕಾಣಿಸುತ್ತದೆ. ಬಹುಶಃ ಮಳೆ ನಿಂತ ನಂತರ ಈ ವಿಡಿಯೋ ತೆಗೆಯಲಾಗಿದೆ. ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಓಪನ್ ಪ್ಲೇಸ್‌ನಲ್ಲಿ ಅಂದ್ರೆ ಫುಟ್‌ಪಾತ್‌ನಲ್ಲಿ ಅಡುಗೆ ಮಾಡುತ್ತಿರುವುದು ಕಂಡುಬರುತ್ತದೆ. ಅವನ ಇಬ್ಬರು ಮಕ್ಕಳು ಮಳೆಯಿಂದ ಒಲೆಯನ್ನು ರಕ್ಷಿಸಲು ಮತ್ತು ಅಪ್ಪ ಮಾಡುತ್ತಿರುವ ಅಡುಗೆ ಹಾಳಾಗಬಾರದೆಂದು ದೊಡ್ಡ ಮರದ ಹಲಗೆ ಹಿಡಿದು ನಿಂತಿದ್ದಾರೆ. ಇಂತಹ ದೃಶ್ಯ ನೋಡಿದಾಗ ಅವರ ಜೀವನ ಎಷ್ಟು ಕಷ್ಟ ಎಂಬುದು ಅರ್ಥವಾಗುತ್ತದೆ. ಜೊತೆಗೆ ಚಿಕ್ಕ ಪುಟ್ಟಕ್ಕೂ ಸಮಸ್ಯೆ ಅಂದುಕೊಳ್ಳುವ ನಾವು ಇಂತಹವರನ್ನು ನೋಡಿ ಕಲಿಯುವುದು ಸಾಕಷ್ಟಿದೆ ಅಂತೆನಿಸುತ್ತದೆ.

ವೈರಲ್ ವಿಡಿಯೋ ಇಲ್ಲಿ ವೀಕ್ಷಿಸಿ

ನೀವು ಈಗಷ್ಟೇ ನೋಡಿದ ವಿಡಿಯೋ @Babaxwale ಹೆಸರಿನ ಖಾತೆಯಿಂದ X ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ಪೋಸ್ಟ್ ಮಾಡುವಾಗ, 'ಮಳೆ ಎಲ್ಲರಿಗೂ ರೋಮ್ಯಾಂಟಿಕ್ ಅಲ್ಲ' ಎಂದು ಶೀರ್ಷಿಕೆ ಬರೆಯಲಾಗಿದೆ. ಸುದ್ದಿ ಬರೆಯುವವರೆಗೂ ಸಾಕಷ್ಟು ಜನರು ವಿಡಿಯೋ ನೋಡಿದ್ದಾರೆ. ಈ ವಿಡಿಯೋ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬುದು ಮಾತ್ರ ತಿಳಿದಿಲ್ಲ.

ನೆಟ್ಟಿಗರ ಮನಗೆದ್ದ ಮತ್ತೊಂದು ವಿಡಿಯೋ
ಇಂತಹುದೇ ಒಂದು ವಿಡಿಯೋ ಕೆಲವು ದಿನಗಳ ಹಿಂದೆಯಷ್ಟೇ ವೈರಲ್ ಆಗಿತ್ತು. ಅದರಲ್ಲಿ ಶಾಲಾ ವಾರ್ಷಿಕೋತ್ಸವ ಸಮಾರಂಭ ನಡೆಯುತ್ತಿರುತ್ತದೆ. ಓರ್ವ ಹುಡುಗನಿಗೆ ಪ್ರಶಸ್ತಿ ಅಥವಾ ಸರ್ಟಿಫಿಕೇಟ್ ಕೊಡಲು ಅಲ್ಲಿದ್ದ ಶಿಕ್ಷಕರು, ಗೆಸ್ಟ್ ಮುಂದಾಗುತ್ತಾರೆ. ಒಂದು ಕ್ಷಣ ಅದನ್ನು ತಡೆದ ಹುಡುಗ ಓಡಿ ಹೋಗಿ ತನ್ನ ತಾಯಿಯನ್ನು ಕರೆದುಕೊಂಡು ಬರಲು ಮುಂದಾಗುತ್ತಾನೆ. ಆತನ ತಾಯಿ ಶಾಲಾ ವಿದ್ಯಾರ್ಥಿಗಳ ಮಧ್ಯೆ ವ್ಹೀಲ್ ಚೇರ್‌ನಲ್ಲಿ ಕುಳಿತಿರುತ್ತಾಳೆ. ಎಲ್ಲರೂ ನೋಡನೋಡುತ್ತಿದ್ದಂತೆ ಆತ ತಾಯಿಯನ್ನು ಚೇರ್‌ನಿಂದ ಎತ್ತಿಕೊಂಡು ವೇದಿಕೆ ಮೇಲೆ ಕರೆತಂದು ಪ್ರಶಸ್ತಿಯನ್ನು ತೆಗೆದುಕೊಳ್ಳುತ್ತಾನೆ. ಸದ್ಯ ಈ ವಿಡಿಯೋ ನೆಟ್ಟಿಗರ ಮನಗೆದ್ದಿದ್ದು, ವೈರಲ್ ಆಗುತ್ತಿದೆ. ಈ ದೃಶ್ಯ ನೋಡಿದ ನಂತರ ನಿಮ್ಮ ಹೃದಯವು ತುಂಬಿ ಬರದೆ ಇರಲಾರದು. ಕಾಮೆಂಟ್‌ ವಿಭಾಗವಂತೂ ಹುಡುಗನ ಮನೋಭಾವ ಮೆಚ್ಚಿಕೊಂಡಿದ್ದು, ಎಲ್ಲರಿಗೂ ಈತ ಮಾದರಿಯಾಗಿದ್ದಾನೆ ಎಂದು ಪ್ರಶಂಸಿಸಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ 

ಸದ್ಯ ಈ ಘಟನೆ ನಡೆದ ಸ್ಥಳ ಎಲ್ಲಿಯದೂ ಎಂದು ತಿಳಿದುಬಂದಿಲ್ಲ. ಆದರೆ ಬಹುಶಃ ವಿದೇಶದ್ದು ಇರಬಹುದು ಎಂಬುದು ಜನರ ಮುಖ ನೋಡಿದರೆ ತಿಳಿಯುತ್ತದೆ. ವಿಡಿಯೋ ಎಲ್ಲಿಯದೇ ಆಗಿದ್ದರೂ ಹುಡುಗನ ನಡವಳಿಕೆ ಎಲ್ಲರ ಮನ ಗೆದ್ದಿದೆ. ವಿಡಿಯೋ ನೋಡಿದ ಬಳಕೆದಾರರು "ಆ ಹುಡುಗನಿಗೆ ದೇವರು ಒಳ್ಳೆಯದು ಮಾಡಲಿ", "ತಾಯಿಯೂ ಎಂದಿಗೂ ಭಾರವಲ್ಲ", "ಈ ವಿಡಿಯೋ ನೋಡಿದ ನಂತರ ನನಗನಿಸಿದ್ದು ಮಗಳನ್ನು ತುಂಬಾ ಚೆನ್ನಾಗಿ ಬೆಳೆಸಬೇಕು, ಆಗ ನಾನು ದೊಡ್ಡವಳಾದಾಗ ಅವಳು ನನ್ನ ಬಗ್ಗೆ ಹೆಮ್ಮೆ ಪಡುತ್ತಾಳೆ ಎಂದು ಅರ್ಥಮಾಡಿಕೊಂಡೆ", "ವಿಡಿಯೋ ನನಗೆ ನಿಜಕ್ಕೂ ಅಳು ತರಿಸಿತು", "ನಿನ್ನ ಬಗ್ಗೆ ಹೆಮ್ಮೆಯಾಗುತ್ತದೆ" ಎಂದು ಹೃದಯದ ಇಮೋಜಿ ಹಾಕುವ ಮೂಲಕ ಹಾಡಿ ಹೊಗಳಿದ್ದಾರೆ.

PREV
Read more Articles on
click me!

Recommended Stories

ಮದುವೆ ಹತ್ತಿರ ಇರುವಾಗ್ಲೆ 25 ಲಕ್ಷ ಸ್ಯಾಲರಿ ಕೆಲ್ಸ ಬಿಟ್ಟು ಡೆಲಿವರಿ ಬಾಯ್ ಆದ, ಇಂಟರೆಸ್ಟಿಂಗ್ ಆಗಿದೆ ಕಾರಣ
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!