
ಹೈದರಾಬಾದ್ (ಆ.09) ಉದ್ಯೋಗ ಕಳೆದುಕೊಳ್ಳವ ಭೀತಿ ಒಂದೆಡೆಯಾದರೆ, ಮತ್ತೊಂದೆಡೆ ಮಹಿಳಾ ಉದ್ಯೋಗಿಗಳಿಗೆ ನೀಡುವ ಕಿರುಕುಳ ಕುರಿತು ಮತ್ತೊಂದು ಘಟನೆ ಬೆಳೆಕಿಗೆ ಬಂದಿದೆ. ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ರೆಸ್ಯೂಮ್ ಕಳುಹಿಸಿದ್ದ ಮಹಿಳೆಗೆ ಕೆಲಸಕ್ಕೆ ಸೇರೋ ಮೊದಲೇ ವಿಚಿತ್ರ ಬೇಡಿಕೆಯೊಂದನ್ನು ಮುಂದಿಡಲಾಗಿತ್ತು. ಈ ಕಂಪನಿಯಲ್ಲಿ ಕೆಲಸ ಬೇಕಿದ್ದರೆ, ಬಾಸ್ ಜೊತೆ ಎಲ್ಲವನ್ನು ಹಂಚಿಕೊಳ್ಳಬೇಕು. ಅವರಿಗೆ ಸುಖ ನೀಡಬೇಕು ಎಂಬ ಸಂದೇಶ ಮಹಿಳೆಗೆ ಆಘಾತ ನೀಡಿದೆ. ಇದೀಗ ಈ ಘಟನೆಯನ್ನು ದಕ್ಷಿಣ ಭಾರತದ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ್ ಹಂಚಿಕೊಂಡಿದ್ದಾರೆ.
ಹೈದರಾಬಾದ್‌ನ ಖಾಸಗಿ ಕಂಪನಿಯ ಕೆಲಸಕ್ಕಾಗಿ ಮಹಿಳೆ ರೆಸ್ಯೂಮ್ ಕಳುಹಿಸಿದ್ದರು. ರಿಕ್ರೂಟರ್ ಎಜೆನ್ಸಿಗೆ ರೆಸ್ಯೂಮ್ ಸೆಂಡ್ ಮಾಡಲಾಗಿತ್ತು. ಉದ್ಯೋಗ ಕೊಡಿಸುವ ಎಜೆನ್ಸಿಗಳು ನೇರವಾಗಿ ಮಹಿಳೆಗೆ ಸಂದೇಶ ಕಳುಹಿಸಿದೆ. ನಿಮಗೆ ಹೈದರಾಬಾದ್‌ನಲ್ಲಿ ಕೆಲಸ ಬೇಕಿದ್ದರೆ, ಬಾಸ್‌ಗೆ ಸುಖ ನೀಡಬೇಕು. ಹಾಗಿದ್ದಲ್ಲಿ ನಿಮ್ಮ ಕೆಲಸ ಖಚಿತ, ಸ್ಯಾಲರಿ ಸೇರಿದಂತ ಇತರ ಹಲವು ಸೌಲಭ್ಯಗಳು ಉತ್ತಮವಾಗಿ ಸಿಗಲಿದೆ ಎಂದು ರಿಕ್ರೂಟರ್ ಮೆಸೇಜ್ ಮಾಡಿದ್ದಾರೆ. ಈ ಘಟನೆಯನ್ನು ಚಿನ್ಮಯಿ ಶ್ರೀಪಾದ್ ಹಂಚಿಕೊಂಡು, ಮಹಿಳೆಯರು ಉದ್ಯೋಗ ಕೇಳಿದರೆ ಹೀಗೆ ಕಿರುಕುಳ ನೀಡಲಾಗುತ್ತಿದೆ. ಇದು ಕೇವಲ ಹೈದರಾಬಾದ್ ಅಲ್ಲ, ದೇಶದ ಹಲವು ಭಾಗದಲ್ಲಿ ಸೈಲೆಂಟ್ ಆಗಿ ಕಿರುಕುಳ ನಡೆಯುತ್ತಿದೆ ಎಂದು ಶ್ರೀಪಾದ ಹೇಳಿದ್ದಾರೆ.
ಗಾಯಕಿ ಚಿನ್ಮಯಿ ಶ್ರೀಪಾದ್, ಯುವತಿ ಹಾಗೂ ರಿಕ್ರೂಟರ್ ನಡುವೆ ನಡೆದಿರುವ ವ್ಯಾಟ್ಸಾಪ್ ಚಾಟ್ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಈ ಚಾಟ್‌ನಲ್ಲಿ ಕೆಲ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. ರಿಕ್ರೂಟಿಂಗ್ ಎಜೆನ್ಸಿಗಳು ಹೇಗೆ ಕೆಲಸ ಕೊಡಿಸುತ್ತಿದೆ ಅನ್ನೋ ನೈತ ಚಿತ್ರಣ ಬಯಲಾಗಿದೆ. ಕೆಲಸಕ್ಕಾಗಿ ಅಲೆಯುವ ಮಹಿಳೆಯರು, ಅವರ ಆರ್ಥಿಕ ಸಂಕಷ್ಟಗಳನ್ನೇ ಬಂಡವಾಳ ಮಾಡಿಕೊಂಡು ಈ ರೀತಿ ಬೇಡಿಕೆ ಇಡಲಾಗುತ್ತದೆ. ಕೆಲಸದ ಅನಿವಾರ್ಯತೆ, ಆರ್ಥಿಕ ಸಂಕಷ್ಟಗಳ ಕಾರಣ ಹಲವು ಯುವತಿಯರು ಅನಿವಾರ್ಯವಾಗಿ ಈ ಟ್ರಾಪ್‌ಗೆ ಬೀಳುತ್ತಾರೆ ಎಂದು ಶ್ರೀಪಾದ ಹೇಳಿದ್ದಾರೆ. ಕೆಲಸ ಸಿಗಬೇಕಾದರೆ ಬಾಸ್ ಜೊತೆ ಲೈ0ಗಿಕ ಸಹಕಾರ ನೀಡಬೇಕು ಅನ್ನೋದ ಸಂದೇಶವನ್ನು ರಿಕ್ರೂಟರ್ ನೇರವಾಗಿ ಅಂಜಿಕೆ ಇಲ್ಲದೆ ಕಳುಹಿಸಿದ್ದಾನೆ. ಹೀಗಾಗಿ ಇದು ನಿರಂತರವಾಗಿ ಹಾಗೂ ಪ್ರತಿ ದಿನ ನಡೆಯುವ ಪದ್ದತಿ ಅನ್ನೋದು ಈ ಮೂಲಕ ಬಹಿರಂಗವಾಗಿದೆ.
ಗೆಳತಿಯರೆ ನೀವು ಫ್ರೆಶರ್ ಆಗಿದ್ದೀರಾ, ಹೈದರಾಬಾದ್ ಸೇರಿದಂತೆ ಯಾವುದೇ ಭಾಗದಲ್ಲಿ ಕೆಲಸ ಹುಡುಕುತ್ತಿದ್ದರೆ ಎಚ್ಚರವಿರಬೇಕು. ಕೆಲಸ ಬೇಕಿದ್ದರೆ ಬಾಸ್ ಜೊತೆ ರಿಲೇಶನ್‌ಶಿಪ್‌ನಲ್ಲಿರಬೇಕು, ಸೇರಿದಂತೆ ಹಲವು ಬೇಡಿಕೆ ಮುಂದಿಡುತ್ತಾರೆ. ಈ ಸ್ಕ್ರೀನ್‌ಶಾಟ್ ಸೇರಿದಂತೆ ದಾಖಲೆ ನೀವು ಇಟ್ಟುಕೊಂಡು ಪೊಲೀಸರಿಗೆ ದೂರು ನೀಡಿದೆ. ಈ ತಂತ್ರ, ಟ್ರಾಪ್‌ಗೆ ಬಲಿಯಾಗಬೇಡಿ ಎಂದು ಚಿನ್ಮಯಿ ಶ್ರೀಪಾದ್ ಸೂಚನೆ ನೀಡಿದ್ದಾರೆ.
ರಿಕ್ರೂಟರ್ ಹೆಸರಿನಲ್ಲಿ ಮಹಿಳೆಯ ಕಳ್ಳಸಾಗಾಣಿಕೆ, ಬಾಸ್, ಮ್ಯಾನೇಜರ್‌ಗಳ ಸುಖಕ್ಕೆ ಪೂರೈಕೆ ಮಾಡುವ ಕೆಲಸಗಳು ನಡೆಯುತ್ತಿದೆ. ಈ ಮೋಸದ ಬಲೆಗೆ ಬೀಳಬೇಡಿ, ಧೈರ್ಯವಾಗಿ ಪೊಲೀಸರಿಗೆ ದೂರು ನೀಡಿ ಎಂದು ಚಿನ್ಮಯಿ ಶ್ರೀಪಾದ್ ಸಲಹೆ ನೀಡಿದ್ದಾರೆ.
ಈ ಪೋಸ್ಟ್ ಭಾರಿ ಸದ್ದು ಮಾಡುತ್ತಿದೆ. ಹೈದಾರಾಬಾದ್ ಪೊಲೀಸ್ ಹಾಗೂ ಮಹಿಳಾ ಹಕ್ಕುಗಳ ಆಯೋಗ ತಕ್ಷಣವೇ ದೂರು ದಾಖಲಿಸಿ ಈತನ ಪತ್ತೆ ಹಚ್ಚಬೇಕು. ಕಠಿಣ ಶಿಕ್ಷೆ ನೀಡದಿದ್ದರೆ ಎಗ್ಗಿಲ್ಲದೆ ಈ ಮೋಸ ನಡೆಯಲಿದೆ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.