ವಾಘಾ ಗಡಿಯಲ್ಲಿ ಭಾರತೀಯ ಸೇನಾಧಿಕಾರಿಗೆ ಖಡಕ್ ಸಲ್ಯೂಟ್ ನೀಡಿದ ಪಾಕಿಸ್ತಾನ ರೇಂಜರ್, ವಿಡಿಯೋ

Published : Aug 03, 2026, 12:09 PM IST
Pakistan Ranger Giving Smart Salute to Indian Army Officer

ಸಾರಾಂಶ

ಭಾರತೀಯ ಸೇನಾಧಿಕಾರಿಯನ್ನು ನೋಡುತ್ತಿದ್ದಂತೆ ಪಾಕಿಸ್ತಾನದ ರೇಂಜರ್ ಸಲ್ಯೂಟ್ ನೀಡಿದ ಘಟನೆ ಅಟ್ಟಾರಿ ವಾಘಾ ಗಡಿಯಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ವೃತ್ತಿಪರ ಗೌರವ ಎಂದು ಹಲವರು ಉಲ್ಲೇಖಿಸಿದ್ದಾರೆ.

ಅಟ್ಟಾರಿ (ಆ.03) ಭಾರತ ಹಾಗೂ ಪಾಕಿಸ್ತಾನ ನಡುವಿನ ವಾಘಾ ಗಡಿ ಹಲವು ಕಾರಣಗಳಿಂದ ವಿಶೇಷ. ಇಲ್ಲಿ ನಡೆಯು ಬೀಟಿಂಗ್ ರೀಟ್ರೀಟ್ ಗೌರವ ವೀಕ್ಷಿಸಲು ಹಲವರು ಆಗಮಿಸುತ್ತಾರೆ. ವಿಶೇಷ ಅಂದರೆ ಇದೀಗ ಇದೇ ಅಟ್ಟಾರಿ ವಾಘಾ ಗಡಿಯಲ್ಲಿ ಭಾರತೀಯ ಸೇನಾಧಿಕಾರಿಯನ್ನು ನೋಡುತ್ತಿದ್ದಂತೆ ಪಾಕಿಸ್ತಾನದ ರೇಂಜರ್ ಖಡಕ್ ಸಲ್ಯೂಟ್ ನೀಡಿದ ಘಟನೆ ನಡೆದಿದೆ. ಭಾರತ ಹಾಗೂ ಪಾಕಿಸ್ತಾನದ ಸಾಂಪ್ರದಾಯಕಿಗ ಹಾಗೂ ಸೆರೆಮೋನಿಯಲ್ ಪರೇಡ್ ವೇಳೆ ಭಾರತೀಯ ಸೇನಾಧಿಕಾರಿ ಕಾಣಿಸಿಕೊಂಡಿದ್ದರು. ತಕ್ಷವೇ ಪಾಕಿಸ್ತಾನದ ರೇಂಜರ್ ಖಡಕ್ ಸಲ್ಯೂಟ್ ನೀಡಿದ್ದಾರೆ. ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

ಸಲ್ಯೂಟ್ ಗೌರವ ನೀಡಿದ ಪಾಕ್ ರೇಂಜರ್

ವಾಘಾ ಗಡಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ಸೆರೆಮೋನಿಯಲ್ ಪರೇಡ್‌ಗಾಗಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಭಾರತ ಹಾಗೂ ಪಾಕಿಸ್ತಾನದ ಯೋಧರು ಜಂಟಿಯಾಗಿ ಡ್ರೀಲ್ ನಡೆಸುತ್ತಾರೆ. ಈ ವೇಳೆ ರೋಷ, ಆಕ್ರೋಶ, ಪ್ರತಿಷ್ಠೆಯನ್ನು ಯೋಧರ ಸೆರೆಮೋನಿಯಲ್ ಪರೇಡ್‌ನಲ್ಲಿ ಕಾಣಬಹುದು. ಉಭಯ ದೇಶಗಳ ಜನರು ತಮ್ಮ ತಮ್ಮ ಸೇನೆ ಪರವಾಗಿ ಜಯಘೋಷಗಳನ್ನು ಮೊಳಗಿಸುತ್ತಾರೆ. ಈ ಸೆರಮೋನಿಯಲ್ ಪರೇಡ್ ವೇಳೆ ಭಾರತೀಯ ಸೇನಾಧಿಕಾರಿ ಸ್ಥಳಕ್ಕೆ ಆಗಮಿಸಿದ್ದಾರೆ. ಗಡಿ ಭದ್ರತೆಗೆ ನಿಯೋಜನೆಗೊಂಡಿರುವ ಅಧಿಕಾರಿ ನೋಡುತ್ತಿದ್ದಂತೆ ಪಾಕಿಸ್ತಾ ಸೇನೆಯ ರೇಂಜರ್ ತಕ್ಷಣವೇ ಸಲ್ಯೂಟ್ ನೀಡಿದ್ದಾರೆ.

ಸಂಬಂಧ ಹಳಸಿದರೂ ವೃತ್ತಿಪರತೆ ಮರೆದೆ ಪಾಕ್ ರೇಂಜರ್

ಈ ವಿಡಿಯೋ ಭಾರಿ ವೈರಲ್ ಆಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹಳಸಿದೆ. ಪೆಹಲ್ಗಾಂ ಉಗ್ರ ದಾಳಿ, ಇದಕ್ಕೆ ಪ್ರತಿಯಾಗಿ ಭಾರತ ನಡೆಸಿದ ಆಪರೇಶನ್ ಸಿಂದೂರ್‌ನಿಂದ ಭಾರತ ಹಾಗೂ ಪಾಕಿಸ್ತಾನ ಸಂಬಂಧ ಸಂಪೂರ್ಣ ಕಡಿತಗೊಂಡಿದೆ. ಆದರೆ ಗಡಿಯಲ್ಲಿ ಹಿರಿಯ ಅಧಿಕಾರಿಯನ್ನು ನೋಡಿದಾಗ ತಕ್ಷಣ ಸಲ್ಯೂಟ್ ಮಾಡಿ ಗೌರವ ನೀಡಿದ ಪಾಕಿಸ್ತಾನ ರೇಂಜರ್ ವೃತ್ತಿಪರತೆಯನ್ನು ಹಲವರು ಕೊಂಡಾಡಿದ್ದಾರೆ.

ಗಡಿಯಲ್ಲಿನ ಪರಿಸ್ಥಿತಿ, ದ್ವಿಪಕ್ಷೀಯ ಸಂಬಂಧ, ರಾಜಕೀಯ ಪರಿಸ್ಥಿತಿಗಳು ಏನೇ ಇದ್ದರೂ ಮಿಲಿಟಿರಿಯಲ್ಲಿ ಪರಸ್ಪರ ಗೌರವ ನೀಡಲು ಸಲ್ಯೂಟ್ ಸಾಮಾನ್ಯವಾಗಿದೆ. ಉಭಯ ದೇಶಗಳ ಸೇನಾಧಿಕಾರಿಗಳ ಫ್ಲ್ಯಾಗ್ ಮೀಟಿಂಗ್ ವೇಳೆಯೂ ಪರಸ್ಪರ ಸೇನಾ ಗೌರವ ನೀಡಲಾಗುತ್ತದೆ. ವಿಶೇಷವಾಗಿ ಗಡಿಯಲ್ಲಿ ಉದ್ರಿಕ್ತ ಪರಿಸ್ಥಿತಿ, ಅಪ್ಪಚೋದಿತ ಗುಂಡಿನ ದಾಳಿಗಳ ನಡುವೆ ಫ್ಲ್ಯಾಗ್ ಮೀಟಿಂಗ್ ಮೂಲಕ ಶಾಂತಿ ಕಾಪಾಡುವ ಪ್ರಯತ್ನ ಮಾಡಲಾಗುತ್ತದೆ. ಈ ವೇಳೆ ಪರಿಸ್ಥಿತಿ ಎಷ್ಟೇ ಉದ್ವಿಘ್ನಗೊಂಡಿದ್ದರೂ, ಸೇನಾಧಿಕಾರಿಗಳಿಗೆ ಸಲ್ಯೂಟ್ ಸೇರಿದಂತೆ ಇತರ ಗೌರವ ನೀಡಲಾಗುತ್ತದೆ.

ಅಟ್ಟಾರಿ ವಾಘ ಗಡಿಯಲ್ಲಿ ಪ್ರತಿ ದಿನ ಸಂಜೆ ಬೀಟಿಂಗ್ ರೀಟ್ರೀಟ್ ಗೌರವ ಆಚರಿಸಲಾಗುತ್ತದೆ. ಭಾರತದ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (BSF) ಹಾಗೂ ಪಾಕಿಸ್ತಾನದ ರೇಂಜರ್ಸ್ ಈ ಬೀಟಿಂಗ್ ರೀಟ್ರೀಟ್ ನಡೆಸುತ್ತಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ. ಇದು ರಾಜಕೀಯ ಅಲ್ಲ, ಪರಸ್ಪರ ವೃತ್ತಿಪರ ಗೌರವ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

PREV
Read more Articles on
click me!

Recommended Stories

ಮತ್ತೆ ಅಪ್ಪಳಿಸಿದ ಸುನಾಮಿ.. 'ಸಬಾ ಆಜಾದ್‌ ಜೊತೆ ಚೆನ್ನಾಗಿರಿ'- ಹೃತಿಕ್ ರೋಶನ್ ವಿರುದ್ಧ ಕಿಡಿಕಿಡಿಯಾದ ಕಂಗನಾ ರಣಾವತ್!
ಸನಾತನ ಸಂಪ್ರದಾಯಕ್ಕೆ ಮನಸೋತ ಇಟಲಿ ಜೋಡಿ; ರಾಜಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ!