ಚಿಕ್ಕ ಕಣ್ಣಿನಿಂದ ಕೆವೈಸಿ ಆಗದೇ ಪರದಾಡಿದ ನಾಗಾ ವ್ಯಕ್ತಿ, ಸ್ನೇಹಿತರ ಐಡಿಯಾಗೆ ಅಧಿಕಾರಿಗಳು ದಂಗು

Published : Aug 14, 2026, 09:51 PM IST
Man Faces KYC Problem Because of His Small Eyes

ಸಾರಾಂಶ

ನಾಗಾಲ್ಯಾಂಡ್ ವ್ಯಕ್ತಿಯ ಚಿಕ್ಕ ಕಣ್ಣುಗಳಿಂದ ಕೆವೈಸಿ ವೆರಿಫಿಕೇಶನ್‌ನಲ್ಲಿ ಪರದಾಡಿದ್ದಾರೆ. ಕೊನೆಗೆ ಸ್ನೇಹಿತರ ಐಡಿಯಾಗೆ ಹಲವರು ದಂಗಾಗಿದ್ದಾರೆ. ಚಿಕ್ಕ ಕಣ್ಣುಗಳ ರೆಪ್ಪೆ ಅರಳಿಸಿ ಹಿಡಿದ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.

ಗ್ಯಾಸ್ ಕೆವೈಸಿ, ಬ್ಯಾಂಕ್ ಕೆವೈಸಿ ಸೇರಿದಂತೆ ಎಲ್ಲೇ ಹೋದರು ಇದೀಗ ಕೆವೈಸಿ ಕಡ್ಡಾಯ. ಹಲವರು ಕೆವೈಸಿ ಮಾಡಿಸಲು ಪರದಾಡುತ್ತಿದ್ದಾರೆ. ಎಲ್ಲವೂ ಒಕೆ ಆಗಿ ಇನ್ನೇನು ಮುಗಿತು ಅನ್ನೋವಷ್ಟರಲ್ಲೇ ಒಟಿಪಿ ಬರದೇ ಪರದಾಡಿದ ಘಟನೆಗಳು ಇವೆ. ಇದೀಗ ನಾಗಲ್ಯಾಂಡ್ ವ್ಯಕ್ತಿಯೊಬ್ಬರು ತಮ್ಮ ಸಣ್ಣ ಕಣ್ಣುಗಳಿಂದ ಕೆವೈಸಿ ಆಗದೆ ಪರದಾಡಿದ ಘಟನೆ ನಡೆದಿದೆ. ನಾಗಾಲ್ಯಾಂಡ್ ಸೇರಿದಂತೆ ಈಶಾನ್ಯ ಭಾರತೀಯರ ಕಣ್ಣುಗಳ ಸಣ್ಣದು. ಎಷ್ಟೇ ಪ್ರಯತ್ನ ಮಾಡಿದರೂ ಕೈವೆಸಿ ಆಗಲೇ ಇಲ್ಲ. ಹೀಗಾಗಿ ಸ್ನೇಹಿತರು ವ್ಯಕ್ತಿಯ ಕಣ್ಣ ರೆಪ್ಪೆಗಳನ್ನು ಅರಳಿಸಿ ಹಿಡಿದ ಕೆವೈಸಿ ವೆರಿಫಿಕೇಶನ್ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

ಫೇಸ್ ವೆರಿಫಿಕೇಶನ್ ಸಂಕಷ್ಟ

ನಾಗಾಲ್ಯಾಂಡ್ ಉನ್ನತ ಶಿಕ್ಷಣ ಸಚಿವ ತೇಮ್‌ಜೆನ್ ಇಮ್ನಾ ಅಲಾಂಗ್ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಈ ಸಂಕಷ್ಟ ನಿಜ ಎಂದು ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಯುವಕನೊಬ್ಬ ಮೊಬೈಲ್ ಮೂಲಕ ಕೈವೆಸಿ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಎಷ್ಟೇ ಪ್ರಯತ್ನಿಸಿದರೂ ವ್ಯಕ್ತಿಯ ಫೇಸ್ ವೆರಿಫಿಕೇಶನ್ ಮಾತ್ರ ಆಗುತ್ತಲೇ ಇಲ್ಲ. ಸಣ್ಣ ಕಣ್ಣುಗಳಿಂದ ಕೆವೈಸಿ ಪೂರ್ಣಗೊಳ್ಳುತ್ತಿಲ್ಲ. ಅದೆಷ್ಟೇ ಕಣ್ಣರಳಿಸಿದರೂ ವೆರಿಫಿಕೇಶನ್ ಮಾತ್ರ ಪೂರ್ಣವಾಗುತ್ತಿಲ್ಲ.

ಪಕ್ಕದಲ್ಲೇ ಇದ್ದ ಸ್ನೇಹಿತರು ಆಗಮಿಸಿ ನಾಗಾ ವ್ಯಾಕ್ತಿಯ ಕಣ್ಣುು ರೆಪ್ಪೆಗಳನ್ನು ಅರಳಿಸಿ ಹಿಡಿದಿದ್ದಾರೆ. ಐರಿಕ್ಸ್ ಸ್ಕ್ಯಾನ್‌ನಲ್ಲಿ ಕ್ಯಾಮೆರಾ ವ್ಯಕ್ತಿಯ ಕಣ್ಣು ಪತ್ತೆಹಚ್ಚಲು ವೆರಿಫೈ ಮಾಡಲು ಸಾಧ್ಯವಾಗಿಲ್ಲ. ಇಬ್ಬರು ಸ್ನೇಹಿತರು ಎರಡು ಕಣ್ಣುಗಳ ರೆಪ್ಪೆಗಳನ್ನು ಅಗಲಿಸಿ ಹಿಡಿದು ಸ್ಕ್ಯಾನ್ ಮಾಡುವಂತೆ ಸೂಚಿಸಿದ್ದಾರೆ. ಆದರೂ ಸಾಧ್ಯವಾಗಿಲ್ಲ. ಸ್ನೇಹಿತರ ಪ್ರಯತ್ನ, ವೆರಿಫಿಕೇಶನ್ ಪರದಾಟ ನೋಡಿ ಪಕ್ಕದಲ್ಲಿದ್ದ ಎಲ್ಲರೂ ನಕ್ಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಲೈಕ್ಸ್ ಪಡೆದಿದೆ.

ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಚರ್ಚೆಗಳು ಶುರುವಾಗಿದೆ. ಈಶಾನ್ಯ ಭಾರತೀಯರ ಕಣ್ಣಗಳು ಸ್ವಾಭಾವಿಕವಾಗಿ ಚಿಕ್ಕದು. ಬಯೋಮೆಟ್ರಿಕ್ ಹಾಗೂ ಫೆಶಿಯಲ್ ರೆಕಗ್ನಿಶನ್ ತಂತ್ರಜ್ಞಾನಗಳಲ್ಲಿ ಸಮಸ್ಯೆಗಳಿವೆ ಎಂದಿದ್ದಾರೆ. ಜನಾಂಗೀಯ ವಿನ್ಯಾಸ,ಭೌಗೋಳಿಕ ಹಾಗೂ ನೈಸರ್ಗಿಕ ವಿನ್ಯಾಸಗಳನ್ನು ಈ ತಂತ್ರಜ್ಞಾನ ಯಾಕೆ ಒಳಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಈಶಾನ್ಯ ಭಾರತದ ಶೇಕಡಾ 80ರಷ್ಟು ಜನರ ಕಣ್ಣು ಚಿಕ್ಕದು. ಕೆವೈಸಿ ಫೇಶಿಯಲ್ ವೆರಿಫಿಕೇಶನ್‌ನಲ್ಲಿ ಶೇಕಡಾ 80ರಷ್ಟು ಮಂದಿ ಫೇಲ್ ಆಗುತ್ತಾರೆ. ಹೀಗಾಗಿ ಈ ತಂತ್ರಜ್ಞಾನ ಸುಧಾರಿಸಬೇಕಿದೆ ಎಂದು ಹಲವರು ಸಲಹೆ ನೀಡಿದ್ದಾರೆ.

PREV
Read more Articles on
click me!

Recommended Stories

ಯಾರ‍್ಯಾರೋ ಮನೆ ಮುಂದೆ ಪಾರ್ಕ್​ ಮಾಡ್ತಾರಾ? ಚಿಂತೆ ಬಿಡಿ, ಸಿಕ್ಕಾಪಟ್ಟೆ ವೈರಲ್​ ಆಗಿರೋ ಈ ಉಪಾಯ ಮಾಡಿ
30 ವರ್ಷಗಳ ಗೆಳೆತನ, DNA ಟೆಸ್ಟ್ ಬಳಿಕ ಅಚ್ಚರಿಯ ಸತ್ಯ - ಇವರು ಕೇವಲ ಸ್ನೇಹಿತೆಯರಲ್ಲ, ಸ್ವಂತ ಅಕ್ಕ-ತಂಗಿ!