ಯಾರ‍್ಯಾರೋ ಮನೆ ಮುಂದೆ ಪಾರ್ಕ್​ ಮಾಡ್ತಾರಾ? ಚಿಂತೆ ಬಿಡಿ, ಸಿಕ್ಕಾಪಟ್ಟೆ ವೈರಲ್​ ಆಗಿರೋ ಈ ಉಪಾಯ ಮಾಡಿ

Published : Aug 14, 2026, 08:33 PM IST
Parking Problem

ಸಾರಾಂಶ

ಮಹಾನಗರಗಳಲ್ಲಿನ ಪಾರ್ಕಿಂಗ್ ಸಮಸ್ಯೆಗೆ ಬೇಸತ್ತ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ, ತನ್ನ ಮನೆಯ ಗೇಟ್ ಮುಂದೆ ಅಪರಿಚಿತರು ವಾಹನ ನಿಲ್ಲಿಸುವುದನ್ನು ತಡೆಯಲು ವಿನೂತನ ಉಪಾಯ ಕಂಡುಕೊಂಡಿದ್ದಾನೆ. ಆತ ಅಳವಡಿಸಿದ ಸೆನ್ಸರ್ ಆಧಾರಿತ ಸ್ಪ್ರಿಂಕ್ಲರ್, ಪಾರ್ಕ್ ಮಾಡಲು ಬಂದವರನ್ನು ನೀರಿನಿಂದ ಒದ್ದೆ ಮಾಡಿ ಓಡಿಸುತ್ತಿದ್ದು, ಈ ವಿಡಿಯೋ ವೈರಲ್ ಆಗಿದೆ.

ಪಾರ್ಕಿಂಗ್​ ಸಮಸ್ಯೆ ಎನ್ನೋದು ಭಾರತದಲ್ಲಿ ಮಾತ್ರವಲ್ಲ, ವಿಶ್ವಾದ್ಯಂತ ಎಲ್ಲೆಡೆಯ ಸಮಸ್ಯೆಯೇ. ಅದರಲ್ಲಿಯೂ ಮಹಾನಗರಗಳಲ್ಲಂತೂ ಪಾರ್ಕಿಂಗ್​ನಷ್ಟು ದೊಡ್ಡ ಸಮಸ್ಯೆ ಮತ್ತೊಂದಿಲ್ಲ. ಒಬ್ಬೊಬ್ಬರ ಮನೆಯಲ್ಲಿ 3-4 ಕಾರು, 3-4 ಬೈಕು ಇದ್ದರೆ ಪಾರ್ಕ್​ ಮಾಡೋದು ಎಲ್ಲಿ ಮತ್ತೆ? ಇದು ಒಂದಾದರೆ, ಎಷ್ಟೋ ಸಂದರ್ಭಗಳಲ್ಲಿ ಮನೆಯ ಎದುರು ಸ್ವಲ್ಪ ಜಾಗ ಸಿಕ್ತು ಎಂದರೆ ಸಾಕು, ವಾಹನ ಮಾಲೀಕರಿಗೆ ಖುಷಿಯೋ ಖುಷಿ. ಮನೆಯ ಗೇಟ್​ ಮೇಲೆ No Parking In front of gate ಎಂದು ಬರೆದಿದ್ದರೂ, ಅವರು ಬಂದ ಮೇಲೆ ನೋಡಿಕೊಂಡ್ರಾಯ್ತು ಎಂದು ಪಾರ್ಕ್​ ಮಾಡಿ ಹೋಗುವವರೇ ಎಲ್ಲಾ.

ಎಷ್ಟೋ ಸಂದರ್ಭಗಳಲ್ಲಿ, ಮನೆಯ ಎದುರು ಯಾರಾದರೂ ಪಾರ್ಕ್​ ಮಾಡಿದರೆ, ಆ ಮನೆಯಲ್ಲಿ ಇರುವವರಿಗೇ ಪಾರ್ಕಿಂಗ್​ ಜಾಗ ಸಿಗಲ್ಲ, ಇಲ್ಲದೇ ಹೋದರೆ, ಮನೆಯ ಒಳಗಿನಿಂದ ಅವರ ಕಾರನ್ನು ಹೊರಗೆ ತರಲು ಅಲ್ಲಿ ಜಾಗವೇ ಇರಲ್ಲ. ಆದ್ದರಿಂದ ಬೆಂಗಳೂರಿನಂಥ ಮಹಾನಗರಗಳಲ್ಲಿ ಪಾರ್ಕಿಂಗ್​ಗಾಗಿ ಆಗುವ ಗಲಾಟೆ, ಗುದ್ದಾಟ ಅಷ್ಟಿಷ್ಟಲ್ಲ. ಆದರೆ, ಇಲ್ಲೊಬ್ಬ ಪುಣ್ಯಾತ್ಮರು ಅದಕ್ಕೊಂದು ಸಕತ್​ ಐಡಿಯಾ ಕಂಡುಹಿಡಿದಿದ್ದು, ಇದೀಗ ಜಾಲತಾಣದ ಮೂಲಕ ಸಕತ್​ ಟ್ರೆಂಡ್​ ಆಗಿದೆ. ಹಳೆಯ ವಿಡಿಯೋ ಮತ್ತೆ ಮತ್ತೆ ವೈರಲ್​ ಆಗುತ್ತಿದೆ.

ಈ ಪ್ಲ್ಯಾನ್​ ಸಕತ್​ ವೈರಲ್​

ಅಂದಹಾಗೆ, ಇದು ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ಮಾಡಿರುವ ಪ್ಲ್ಯಾನ್​. ತಮ್ಮ ಮನೆ ಮುಂದೆ ವಾಹನವನ್ನು ಪಾರ್ಕಿಂಗ್ ಮಾಡುವುದನ್ನು ತಪ್ಪಿಸಲು ವಿನೂತನ ಐಡಿಯಾ ಮಾಡಿದ್ದು, ಈತನ ಕ್ರಿಯೇಟಿವಿಟಿಗೆ ಎಲ್ಲರೂ ತಲೆಬಾಗಿದ್ದಾರೆ. ತನ್ನ ಮನೆಯ ಗೇಟ್ ಮುಂದೆ ಅಪರಿಚಿತರು ವಾಹನ ಪಾರ್ಕಿಂಗ್ ಮಾಡುವುದನ್ನು ನೋಡಿ ನೋಡಿ ಬೇಸತ್ತ ಆತ ಇದನ್ನು ತಡೆಯಲು ಮನೆ ಮುಂದೆ ಮೋಷನ್-ಆಕ್ಟಿವೇಟೆಡ್ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಿದ್ದಾನೆ. ಅಪರಿಚಿತ ವಾಹನ ಚಾಲಕರು ವಾಹನವನ್ನು ಈ ವ್ಯಕ್ತಿಯ ಮನೆ ಗೇಟ್ ಮುಂದೆ ನಿಲ್ಲಿಸಿ ವಾಹನದಿಂದ ಇಳಿಯಲು ಮುಂದಾಗುತ್ತಿದ್ದಂತೆ ಸ್ಪಿಂಕ್ಲರ್ ಹಾರಲು ಶುರುವಾಗಿ ಅವರು ಒದ್ದೆಯಾಗುತ್ತಾರೆ. ಕೂಡಲೇ ವಾಹನ ಸವಾರರು ವಾಹನದಿಂದ ಇಳಿಯುವ ಬದಲು ಡೋರ್ ಹಾಕಿಕೊಳ್ಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಮೈ ಮೇಲೇ ನೀರು ಹಾರುತ್ತಿದ್ದಂತೆ ಅವರು ಗಾಬರಿಗೊಳ್ಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ವೀಡಿಯೋ ನೋಡಿದ ಅನೇಕರು ವ್ಯಕ್ತಿಯ ಈ ಕ್ರಿಯೇಟಿವ್ ಐಡಿಯಾಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಸೆನ್ಸರ್ ಆಧರಿತ ಸ್ಪಿಂಕ್ಲರ್

ಮನೆಗೆ ಹೋಗುವ ಗೇಟ್‌ನಲ್ಲೇ ಯಾರೋ ಅಪರಿಚಿತರು ತಮ್ಮ ವಾಹನವನ್ನು ಪಾರ್ಕಿಂಗ್ ಮಾಡುತ್ತಿದ್ದಿದ್ದರಿಂದ ಮನೆ ಮಾಲೀಕನಿಗೆ ಬಹಳ ಕಿರಿಕಿರಿಯಾಗಿತ್ತು. ವಾಹನ ಸವಾರರಿಗೆ ಹೇಳಿ ಹೇಳಿ ಸುಸ್ತಾದ ಅವರು ಸೆನ್ಸರ್ ಆಧರಿತ ಸ್ಪಿಂಕ್ಲರ್ ಅಳವಡಿಸಿದ್ದರು. ಹೀಗಾಗಿ ಅಲ್ಲಿ ಅನಧಿಕೃತವಾದ ವಾಹನಗಳು ಬಂದು ಪಾರ್ಕಿಂಗ್ ಮಾಡಲು ಮುಂದಾದಗಲೆಲ್ಲಾ ವಾಹನ ಸವಾರರಿಗೆ ಹಠಾತ್ ಆಗಿ ನೀರಿನ ಸಿಂಚನವಾಗುತ್ತಿತ್ತು.ಇದರಿಂದ ಏನಾಗುತ್ತಿದೆ ಎಂಬುದನ್ನು ತಿಳಿಯದೇ ವಾಹನ ಸವಾರರು ಗಾಬರಿಯಾಗುತ್ತಿದ್ದರು. ಅವರು ಅಳವಡಿಸಿದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆ ಆಗಿದ್ದು ಅನೇಕರು ಮಾಲೀಕನ ಈ ಸೃಜನಶೀಲ ತಂತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

30 ವರ್ಷಗಳ ಗೆಳೆತನ, DNA ಟೆಸ್ಟ್ ಬಳಿಕ ಅಚ್ಚರಿಯ ಸತ್ಯ - ಇವರು ಕೇವಲ ಸ್ನೇಹಿತೆಯರಲ್ಲ, ಸ್ವಂತ ಅಕ್ಕ-ತಂಗಿ!
ಕೋಣೆಯಲ್ಲಿ ರಾಕ್ಷಸನಿದ್ದಾನೆ ಎಂದು ಮಗು ಹೇಳಿದ್ರೂ ಕೇರ್​ ಮಾಡದ ಅಪ್ಪ-ಅಮ್ಮ: ಆಮೇಲೆ ಆಗಿದ್ದು ಮಹಾ ದುರಂತ