30 ವರ್ಷಗಳ ಗೆಳೆತನ, DNA ಟೆಸ್ಟ್ ಬಳಿಕ ಅಚ್ಚರಿಯ ಸತ್ಯ - ಇವರು ಕೇವಲ ಸ್ನೇಹಿತೆಯರಲ್ಲ, ಸ್ವಂತ ಅಕ್ಕ-ತಂಗಿ!

Published : Aug 14, 2026, 08:16 PM IST
2 Childhood Friends Discover They Are Sisters

ಸಾರಾಂಶ

ಭಾರತದ ಅನಾಥಾಶ್ರಮಗಳಿಂದ ದತ್ತು ಹೋಗಿ ನೆದರ್ಲ್ಯಾಂಡ್ಸ್‌ನಲ್ಲಿ ಬೆಳೆದ ಇಬ್ಬರು ಬಾಲ್ಯದ ಸ್ನೇಹಿತೆಯರು, 30 ವರ್ಷಗಳ ನಂತರ DNA ಪರೀಕ್ಷೆಯ ಮೂಲಕ ತಾವು ಸ್ವಂತ ಅಕ್ಕ-ತಂಗಿಯರು ಎಂಬ ಸತ್ಯವನ್ನು ಪತ್ತೆಹಚ್ಚಿದ್ದಾರೆ.

ಬದುಕು ಒಮ್ಮೊಮ್ಮೆ ಸಿನಿಮಾಗಿಂತಲೂ ಅಚ್ಚರಿ ನೀಡುತ್ತದೆ ಎಂಬುದಕ್ಕೆ ನೆದರ್ಲ್ಯಾಂಡ್ಸ್‌ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕಳೆದ 30 ವರ್ಷಗಳಿಂದ ಪ್ರಾಣ ಸ್ನೇಹಿತೆಯರಾಗಿದ್ದ ಇಬ್ಬರು ಮಹಿಳೆಯರು ತಾವು ಕೇವಲ ಗೆಳತಿಯರಲ್ಲ, ಬದಲಿಗೆ ರಕ್ತಸಂಬಂಧಿ ಅಕ್ಕ-ತಂಗಿಯರು ಎಂಬ ಸತ್ಯವನ್ನು ಡಿಎನ್‌ಎ (DNA) ಪರೀಕ್ಷೆಯ ಮೂಲಕ ತಿಳಿದುಕೊಂಡಿದ್ದಾರೆ. ಈ ಅಪರೂಪದ ಕಥೆ ಈಗ ಸೋಶಿಯಲ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ..

ಭಾರತದ ಅನಾಥಾಶ್ರಮದಿಂದ ದತ್ತು ಹೋಗಿದ್ದ ಮಕ್ಕಳು

ಈ ಕಥೆಯ ನಾಯಕಿಯರಾದ ಮೀನಾ ಜೆಲ್ಟಿಂಕ್ (43) ಮತ್ತು ಮಿನಲ್ ಟಿಜ್ಸೆನ್ (44) ಮೂಲತಃ ಭಾರತದವರು. ಇವರಿಬ್ಬರು ಶಿಶುಗಳಾಗಿದ್ದಾಗ ಭಾರತದ ಬೇರೆ ಬೇರೆ ಅನಾಥಾಶ್ರಮಗಳಿಂದ ನೆದರ್ಲ್ಯಾಂಡ್ಸ್‌ನ ಎರಡು ಬೇರೆ ಬೇರೆ ಡಚ್ ಕುಟುಂಬಗಳಿಗೆ ದತ್ತು ಹೋಗಿದ್ದರು. ಇಬ್ಬರೂ ನೆದರ್ಲ್ಯಾಂಡ್ಸ್‌ನ ಹತ್ತಿರದ ಪ್ರದೇಶಗಳಲ್ಲೇ ಬೆಳೆದರೂ, ಒಬ್ಬರಿಗೊಬ್ಬರು ಸಂಬಂಧಿಕರು ಎಂಬ ವಿಷಯ ಅವರಿಗೆ ತಿಳಿದಿರಲಿಲ್ಲ.

ದತ್ತು ಪಡೆದ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಸಮಾವೇಶವೊಂದರಲ್ಲಿ 1996ರಲ್ಲಿ ಇವರಿಬ್ಬರು ಮೊದಲ ಬಾರಿಗೆ ಭೇಟಿಯಾದರು. ನೋಡಲು ಅಚ್ಚರಿ ಎನ್ನುವಂತೆ ಒಂದೇ ತರಹ ಇದ್ದ ಇವರ ಮುಖಲಕ್ಷಣಗಳನ್ನು ಕಂಡು ಗೆಳೆಯರೆಲ್ಲರೂ ನೀವಿಬ್ಬರು ಅಕ್ಕ-ತಂಗಿಯರಂತೆ ಕಾಣುತ್ತೀರಿ ಎಂದು ತಮಾಷೆ ಮಾಡುತ್ತಿದ್ದರು. ಇದನ್ನು ಕೇಳಿ ಮೀನಾ ಮತ್ತು ಮಿನಲ್ ಕೂಡ ನಕ್ಕು ಸುಮ್ಮನಾಗುತ್ತಿದ್ದರು. ಇಬ್ಬರ ನಡುವೆ ಗಾಢವಾದ ಸ್ನೇಹ ಬೆಳೆಯಿತು ಮತ್ತು ಒಬ್ಬರಿಗೊಬ್ಬರು ತಮಾಷೆಯಾಗಿ ಸಿಸ್ (Siss) ಎಂದು ಕರೆದುಕೊಳ್ಳುತ್ತಿದ್ದರು. ಆ ತಮಾಷೆ ಒಂದು ದಿನ ನಿಜವಾಗುತ್ತದೆ ಎಂದು ಅವರು ಕನಸಿನಲ್ಲೂ ಯೋಚಿಸಿರಲಿಲ್ಲ.

DNA ಪರೀಕ್ಷೆ ಮತ್ತು ಬಯಲಾದ ರಹಸ್ಯ

ಸುಮಾರು 30 ವರ್ಷಗಳ ಸ್ನೇಹದ ನಂತರ 2026ರ ಏಪ್ರಿಲ್‌ನಲ್ಲಿ (ವರದಿಗಳ ಪ್ರಕಾರ) ಮಿನಲ್ ಟಿಜ್ಸೆನ್ ಅವರು ಕುತೂಹಲಕ್ಕಾಗಿ 'ಮೈ ಹೆರಿಟೇಜ್' (MyHeritage) ಎಂಬ ಡಿಎನ್‌ಎ ಪರೀಕ್ಷೆ ಮಾಡಿಸಿಕೊಂಡರು. ಪರೀಕ್ಷೆಯ ಫಲಿತಾಂಶ ಬಂದಾಗ ಅವರ ಮೊಬೈಲ್‌ಗೆ ಮೀನಾ - ನಿಮ್ಮ ಸಹೋದರಿ ಎಂಬ ನೋಟಿಫಿಕೇಶನ್ ಬಂದಿತು! ಮೊದಲು ಇದನ್ನು ನಂಬಲು ಮಿನಲ್ ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಹಳೆಯ ಫೋಟೋಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದಾಗ ತಾವು ಚಿಕ್ಕಂದಿನಿಂದಲೂ ಜೊತೆಗಿದ್ದ ಗೆಳತಿ ಮೀನಾ ಬೇರೆ ಯಾರೂ ಅಲ್ಲ ತನ್ನ ಸ್ವಂತ ತಂಗಿ ಎಂಬುದು ಖಚಿತವಾಯಿತು.

ಈ ಸತ್ಯ ತಿಳಿದ ಮೇಲೆ 2026ರ ಆಗಸ್ಟ್ 11ರಂದು ಇಬ್ಬರೂ ಭೇಟಿಯಾದರು. ಈ ಬಾರಿ ಅವರು ಭೇಟಿಯಾದಾಗ ಗೆಳತಿಯರಾಗಿ ಅಲ್ಲ, ಅಕ್ಕ-ತಂಗಿಯರಾಗಿ ಪರಸ್ಪರ ಅಪ್ಪಿಕೊಂಡರು. ಈ ಬಗ್ಗೆ ಮಾತನಾಡಿದ ಮೀನಾ, ಇಷ್ಟು ವರ್ಷಗಳಿಂದ ನನ್ನ ಹೃದಯದಲ್ಲಿ ಏನೋ ಒಂದು ಖಾಲಿತನ ಕಾಡುತ್ತಿತ್ತು. ಈಗ ಜೀವನದ ಕಳೆದುಹೋಗಿದ್ದ ಪಜಲ್ ಪೂರ್ಣಗೊಂಡಂತಿದೆ ಎಂದು ಕಣ್ಣೀರಿಟ್ಟರು. ಮಿನಲ್ ಪ್ರತಿಕ್ರಿಯಿಸಿ, ನಾವು ಅಕ್ಕ-ತಂಗಿಯರು ಎಂದು ತಿಳಿಯುವ ಮೊದಲೇ ಸ್ನೇಹಿತೆಯಾಗಿದ್ದೆವು. ವಿಧಿ ನಮ್ಮನ್ನು ಮೊದಲೇ ಒಂದು ಮಾಡಿತ್ತು ಎಂದು ಸಂತಸ ಹಂಚಿಕೊಂಡರು.

ಪ್ರಸ್ತುತ ಮಿನಲ್ ತಮ್ಮ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಫ್ರಾನ್ಸ್‌ನಲ್ಲಿ ವಾಸಿಸುತ್ತಿದ್ದರೆ, ಮೀನಾ ನೆದರ್ಲ್ಯಾಂಡ್ಸ್‌ನಲ್ಲಿ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. 30 ವರ್ಷಗಳ ಕಾಲ ದೂರವಿದ್ದ ಆ ಕೊರಗನ್ನು ನೀಗಿಸಲು ಇಬ್ಬರೂ ಈಗ ಪ್ರತಿದಿನ ಗಂಟೆಗಟ್ಟಲೆ ಫೋನ್‌ನಲ್ಲಿ ಮಾತನಾಡುತ್ತಾರೆ, ಮೆಸೇಜ್ ಮಾಡುತ್ತಾ ತಮ್ಮ ಹೊಸ ಬದುಕನ್ನು ಸಂಭ್ರಮಿಸುತ್ತಿದ್ದಾರೆ.

PREV
Read more Articles on
click me!

Recommended Stories

ಕೋಣೆಯಲ್ಲಿ ರಾಕ್ಷಸನಿದ್ದಾನೆ ಎಂದು ಮಗು ಹೇಳಿದ್ರೂ ಕೇರ್​ ಮಾಡದ ಅಪ್ಪ-ಅಮ್ಮ: ಆಮೇಲೆ ಆಗಿದ್ದು ಮಹಾ ದುರಂತ
ಅವಮಾನಿಸಿದ್ದಕ್ಕೆ ಡ್ರೈವಿಂಗ್ ಕಲಿತು, ಜಮ್ಮು ಬೀದಿಗಳಲ್ಲಿ ಕಾರು ಓಡಿಸ್ತಿರೋ 72ರ ನಿವೃತ್ತ ಶಿಕ್ಷಕಿಯ ಸ್ಪೂರ್ತಿಯ ಕಥೆ!