ಪ್ರವಾಸಿಗರಿಂದ 500ರ ನೋಟಿನ ಬಂಡಲ್ ಕಿತ್ತು ಮರದ ಮೇಲೇರಿ ಹಣದ ಮಳೆ ಸುರಿಸಿದ ಕೋತಿ

Published : Jun 19, 2025, 03:23 PM ISTUpdated : Jun 19, 2025, 03:41 PM IST
monkey

ಸಾರಾಂಶ

ಪ್ರವಾಸಿಗರೊಬ್ಬರ ಕೈನಲ್ಲಿದ್ದ 500 ರೂಪಾಯಿಯ ನೋಟುಗಳ ಬಂಡಲನ್ನು ಕಸಿದುಕೊಂಡು ಹೋದ ಕೋತಿಯೊಂದು ಸೀದಾ ಮರವೇರಿದ್ದು, ಬಳಿಕ ಅಲ್ಲಿ ನೋಟಿನ ಬಂಡಲನ್ನು ಬಿಚ್ಚಿ ಒಂದೊಂದೇ ನೋಟುಗಳನ್ನು ಕೆಳಕ್ಕೆಸೆಯುವ ಮೂಲಕ ಹಣದ ಮಳೆ ಸುರಿಸಿದೆ.

ಹಲವು ತೀರ್ಥಕ್ಷೇತ್ರಗಳು, ಪ್ರವಾಸಿ ತಾಣಗಳಲ್ಲಿ ಕೋತಿಗಳ ಹಾವಳಿ ಸಾಮಾನ್ಯ ಎನಿಸಿದೆ. ಕೆಲ ದಿನಗಳ ಹಿಂದಷ್ಟೇ ಹಿಂದೂ ತೀರ್ಥಕ್ಷೇತ್ರವಾದ ವೃಂದಾವನದಲ್ಲಿ ಕೋತಿಯೊಂದು ಮಹಿಳೆಯೊಬ್ಬರ 20 ಲಕ್ಷ ಮೌಲ್ಯದ ವಜ್ರದ ಆಭರಣವನ್ನು ಕಸಿದುಕೊಂಡು ಹೋದ ಘಟನೆ ನಡೆದಿತ್ತು. ನಂತರ ಅದ್ಹೇಗೋ ಹಲವು ಗಂಟೆಗಳ ಪ್ರಯತ್ನದ ನಂತರ ಆ ಆಭರಣ ಮಹಿಳೆಯ ಕುಟುಂಬದ ಕೈ ಸೇರಿತ್ತು. ಈ ಘಟನೆ ಮಾಸುವ ಮೊದಲೇ ತಮಿಳುನಾಡಿನ ಪ್ರವಾಸಿ ತಾಣವಾದ ಕೋಡೈಕೆನಾಲ್‌ನಲ್ಲಿ ಅಂತಹದ್ದೇ ಘಟನೆಯೊಂದು ನಡೆದಿದೆ.

ಪ್ರವಾಸಿಗರೊಬ್ಬರ ಕೈನಲ್ಲಿದ್ದ 500 ರೂಪಾಯಿಯ ನೋಟುಗಳ ಬಂಡಲನ್ನು ಕಸಿದುಕೊಂಡು ಹೋದ ಕೋತಿಯೊಂದು ಸೀದಾ ಮರವೇರಿದ್ದು, ಬಳಿಕ ಅಲ್ಲಿ ನೋಟಿನ ಬಂಡಲನ್ನು ಬಿಚ್ಚಿ ಒಂದೊಂದೇ ನೋಟುಗಳನ್ನು ಕೆಳಕ್ಕೆಸೆಯುವ ಮೂಲಕ ಹಣದ ಮಳೆ ಸುರಿಸಿದೆ. ಈ ದೃಶ್ಯವನ್ನು ಪ್ರವಾಸಿಗರು ಯಾರೋ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣವಾದ ಕೋಡೈಕೆನಾಲ್‌ನ ಗುಣ ಗುಹೆಯ ಸಮೀಪ ಈ ಘಟನೆ ನಡೆದಿದೆ. ಮಲಯಾಳಂನ 'ಮಂಜುಮ್ಮೆಲ್ ಬಾಯ್ಸ್' ಸಿನಿಮಾದ ನಂತರ ಈ ಸ್ಥಳವೂ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ. ಪ್ರವಾಸಿಗರು ಹೆಚ್ಚಾಗುತ್ತಿದ್ದಂತೆ ಇಲ್ಲಿ ಕೋತಿಗಳ ಹಾವಳಿಯೂ ಹೆಚ್ಚಾಗಿದೆ. ವರದಿಯ ಪ್ರಕಾರ, 500 ರೂಪಾಯಿ ನೋಟುಗಳ ಹಲವಾರು ಬಂಡಲ್‌ಗಳನ್ನು ಹೊತ್ತೊಯ್ಯುತ್ತಿದ್ದ ಕರ್ನಾಟಕ ಮೂಲದ ಪ್ರವಾಸಿಗನೊಬ್ಬನನ್ನು ಕೋತಿ ಗುರಿಯಾಗಿಸಿಕೊಂಡಿದ್ದು,. ಆ ಮಂಗ ಇದ್ದಕ್ಕಿದ್ದಂತೆ ಆತನ ಕೈನಲ್ಲಿದ್ದ ನೋಟಿನ ಬಂಡಲನ್ನು ತೆಗೆದುಕೊಂಡು ಮೇಲೆ ಹಾರಿ ಮರವೇರಿದೆ.

ಅಶೀಶ್‌ ಎಂಬುವವರು ಟ್ವಿಟ್ಟರ್‌ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ತಮಿಳುನಾಡಿನ ಪ್ರಸಿದ್ಧ ಗಿರಿಧಾಮವಾದ ಕೊಡೈಕೆನಾಲ್‌ನಲ್ಲಿ, ಗುಣ ಗುಹೆಗಳು ಪ್ರದೇಶದಲ್ಲಿ ಪ್ರವಾಸಿಗರೊಬ್ಬರಿಂದ 500 ಬೆಲೆಬಾಳುವ ಮೂಟೆಯನ್ನು ಕದ್ದ ಕೋತಿಯೊಂದು, ನಂತರ ನಾಟಕೀಯವಾಗಿ ಮರವನ್ನು ಹತ್ತಿ ಪ್ರತಿಯೊಂದು ನೋಟನ್ನು ಗಾಳಿಯಲ್ಲಿ ಎಸೆದು, ಅಸ್ತವ್ಯಸ್ತವಾಗಿರುವ ನಗದು ಹಿಡಿಯುವ ಉನ್ಮಾದವನ್ನು ಸೃಷ್ಟಿಸಿತು ಎಂದು ಅವರು ಬರೆದುಕೊಂಡಿದ್ದಾರೆ.

 

 

 

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್