ಮೆಟ್ರೋ ಸ್ಟೇಷನ್‌ನಲ್ಲಿ ನಿಮ್ಗೆ ಯಾರಾದ್ರೂ ಈ ರೀತಿ ಮಾಡಿದ್ರೆ ನೀವೇನ್ ಮಾಡ್ತೀರಿ?

Published : Sep 21, 2025, 05:16 PM IST
Viral Video

ಸಾರಾಂಶ

What did he do metro video: ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋ ಮೆಟ್ರೋ ನಿಲ್ದಾಣದ ಪ್ರವೇಶದ್ವಾರದ ಬಳಿ ರೆಕಾರ್ಡ್ ಆಗಿದೆ. ವಿಡಿಯೋದಲ್ಲಿ ಒಬ್ಬ ಹುಡುಗಿ ತನ್ನ ಟಿಕೆಟ್ ಅನ್ನು ಸ್ಕ್ಯಾನ್ ಮಾಡಿ ಒಳಗೆ ಹೋಗಲು ಹೊರಟಾಗ ಹುಡುಗನೊಬ್ಬ ಅದೇ ಸಮಯಕ್ಕೆ ಬಂದು…

ಜನರು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಲೆಕ್ಕವಿಲ್ಲದಷ್ಟು ವಿಡಿಯೋ ಮತ್ತು ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ. ನೀವೂ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದರೆ ಪ್ರತಿದಿನ ಸ್ವಲ್ಪ ಸಮಯದವರೆಗಾದರೂ ಸಕ್ರಿಯರಾಗಿರುತ್ತೀರಿ ಅಲ್ಲವೇ, ನಿಮ್ಮ ಟೈಮ್‌ಲೈನ್‌ನಲ್ಲಿ ಎಲ್ಲಾ ರೀತಿಯ ಪೋಸ್ಟ್‌ಗಳನ್ನು ವೀಕ್ಷಿಸುತ್ತೀರಿ. ಆ ಎಲ್ಲಾ ಪೋಸ್ಟ್‌ಗಳಲ್ಲಿ ಕೆಲವು ವೈರಲ್ ವಿಷಯವನ್ನು ನೋಡುವ ಸಾಧ್ಯತೆಯಿದೆ. ಕೆಲವೊಮ್ಮೆ ಜುಗಾಡ್ ನ ವಿಡಿಯೋ ವೈರಲ್ ಆಗುತ್ತದೆ. ಮತ್ತೆ ಕೆಲವೊಮ್ಮೆ ಸ್ಟಂಟ್‌ಮೆನ್ ಸ್ಟಂಟ್‌ಗಳನ್ನು ಪ್ರದರ್ಶಿಸುವ ವಿಡಿಯೋ. ಹಾಗೆಯೇ ಜನರ ವಿಚಿತ್ರ ವರ್ತನೆಯ ವಿಡಿಯೋ ಕೂಡ ವೈರಲ್ ಆಗುತ್ತದೆ. ನಾವೇನೂ ಕಮ್ಮಿ ಇಲ್ಲ ಎಂಬಂತೆ ಮಕ್ಕಳ ಮುದ್ದಾದ ವಿಡಿಯೋ ಸಹ ವೈರಲ್ ಆಗುತ್ತದೆ. ಸದ್ಯ ಒಂದು ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅದೇನೆಂದು ನೋಡೋಣ ಬನ್ನಿ..

ವೈರಲ್ ವಿಡಿಯೋದಲ್ಲಿ ಏನಿದೆ?
 

ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋ ಮೆಟ್ರೋ ನಿಲ್ದಾಣದ ಪ್ರವೇಶದ್ವಾರದ ಬಳಿ ರೆಕಾರ್ಡ್ ಆಗಿದೆ. ಆದರೆ ಘಟನೆ ನಡೆದ ಸ್ಥಳ ಎಲ್ಲಿಯದು ಎಂಬುದು ತಿಳಿದುಬಂದಿಲ್ಲ. ವಿಡಿಯೋದಲ್ಲಿ ಒಬ್ಬ ಹುಡುಗಿ ತನ್ನ ಟಿಕೆಟ್ ಅನ್ನು ಸ್ಕ್ಯಾನ್ ಮಾಡಿ ಒಳಗೆ ಹೋಗಲು ಹೊರಟಾಗ ಇನ್ನೊಬ್ಬ ಹುಡುಗ ಅದರಲ್ಲಿ ಹೋಗುವುದನ್ನು ತೋರಿಸಲಾಗಿದೆ. ಬೇರೆ ಯಾರಾದರೂ ನಮ್ಮ ಟಿಕೆಟ್ ಬಳಸಿ ಅವರು ಒಳಗೆ ಹೋಗುವುದನ್ನು ನೋಡಿದರೆ ಬಯ್ಯೋದೆ ಸರಿ. ಆಕೆಯೇನೂ ಕಮ್ಮಿಯಿಲ್ಲ. ಕೋಪಗೊಂಡು ನೀನು ಮೆಂಟಲ್ಲಾ ಎಂದು ಪ್ರಶ್ನಿಸುತ್ತಾಳೆ. ಆರಂಭದಲ್ಲಿ, ಏನೂ ಆಗಿಲ್ಲ ಎಂಬಂತೆ ಪ್ರತಿಕ್ರಿಯಿಸುವ ಹುಡುಗ ಕೊನೆಗೆ ಅವಳಿಗೆ ತನ್ನ ಟಿಕೆಟ್ ನೀಡಿ ಒಳಗೆ ಬರಲು ಅವಕಾಶ ನೀಡುತ್ತಾನೆ. ಹುಡುಗ ಇದನ್ನು ತಮಾಷೆಯಾಗಿ ಮಾಡಿದ್ದಾನೆ, ಅದಕ್ಕಾಗಿಯೇ ವಿಡಿಯೋ ವೈರಲ್ ಆಗುತ್ತಿದೆ.

ನೀವು ಈಗಷ್ಟೇ ವೀಕ್ಷಿಸಿದ ವಿಡಿಯೋವನ್ನು @RuchiAdarsh47 ಎಂಬ ಖಾತೆಯಿಂದ X ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋದ ಜೊತೆಗೆ ಶೀರ್ಷಿಕೆ ಹೀಗಿದೆ, "ದೀದಿ ಕೆ ಸಾಥ್ ಪ್ರಾಂಕ್ ಹೋ ಗಯಾ." ಈ ಲೇಖನ ಬರೆಯುವ ಹೊತ್ತಿಗೆ, ವಿಡಿಯೋವನ್ನು 495.1ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವೀಕ್ಷಿಸಿದ ನಂತರ "ನನ್ನ ಕ್ಷಣ, ನನ್ನ ಕ್ಷಣ" ಎಂದು ಕಾಮೆಂಟ್ ಮಾಡಿದರೆ, ಮತ್ತೆ ಕೆಲವರು "ಬುದ್ಧಿವಂತ ಹುಡುಗ" ಎಂದು ಬರೆದಿದ್ದಾರೆ. ಹಾಗೆಯೇ "ಅವನು ಮುಂದಿನ ನಿಲ್ದಾಣದಲ್ಲಿ ಸಿಕ್ಕಿಬೀಳುತ್ತಾನೆ" ಎಂದೆಲ್ಲಾ ತಿಳಿಸಿದ್ದಾರೆ. ಹಾಗಾದ್ರೆ ವಿಡಿಯೋ ನೋಡಿ ನಿಮಗನಿಸಿದ್ದೇನು ಕಾಮೆಂಟ್ ಸೆಕ್ಷನ್‌ನಲ್ಲಿ ತಿಳಿಸಿ.

ಪಾಪ ಇಬ್ಬರೂ ಕೆಳಗೆ ಬೀಳ್ತಾರೆ!
 

ತಮಾಷೆಯ ವಿಡಿಯೋವೊಂದು ಮೊನ್ನೆಯಷ್ಟೇ ವೈರಲ್ ಆಗಿತ್ತು. ಅದರಲ್ಲಿ ಜೋಡಿಯೊಂದುಬೀಚ್‌ನಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡುತ್ತಿದೆ. ಫೋಟೋಶೂಟ್ ಮಾಡುವಾಗ ಏನಾಯ್ತು ಅಂದ್ರೆ ಹುಡುಗ ಹುಡುಗಿಯನ್ನು ಎತ್ತಿಕೊಂಡು ಇನ್ನೇನು ನಡೆಯಬೇಕು ಅನ್ನೋವಷ್ಟರಲ್ಲಿ ಅಯ್ಯಯ್ಯೋ...ಎನ್ನುವಂತಹ ಘಟನೆಯೊಂದು ನಡೆದಿದೆ. ಸದ್ಯ ಇದು ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಹಾಗಾದ್ರೆ ವಿಡಿಯೋದಲ್ಲೇನಿದೆ ಅಂತೀರಾ?, ಮುಂದೆ ಓದಿ...

ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಜೋಡಿಯೊಂದು ಬೀಚ್‌ನಲ್ಲಿ ಪ್ರಿ-ವೆಡ್ಡಿಂಗ್ ಫೋಟೋಶೂಟ್ ನಡೆಸುತ್ತಿರುವುದು ಕಂಡುಬರುತ್ತದೆ. ಇಬ್ಬರೂ ಈ ಕ್ಷಣ ಸದಾ ನೆನಪಿನಲ್ಲಿರುವಂತೆ ಫುಲ್ ಜೂಮ್‌ನಲ್ಲಿ ಈ ಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಆ ಹುಡುಗ ತಾನು ಮದುವೆಯಾಗಬೇಕೆಂದುಕೊಂಡಿರುವ ಹುಡುಗಿಯ ಹಿಂದೆ ಬೀಚ್‌ನಲ್ಲಿ ಓಡುತ್ತಿರುವುದು ಕಂಡುಬರುತ್ತದೆ. ನಂತರ ಅವನು ಅವಳನ್ನು ಎತ್ತಿಕೊಳ್ಳಲು ಪ್ರಯತ್ನಿಸುತ್ತಾನೆ, ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಅವನ ಕಾಲು ಕಡಲತೀರದ ಒದ್ದೆಯಾದ ಮಣ್ಣಿನ ಮೇಲೆ ಜಾರುತ್ತದೆ. ಇಬ್ಬರೂ ಕೆಳಗೆ ಬೀಳುತ್ತಾರೆ.

ಈ ವೈರಲ್ ವಿಡಿಯೋವನ್ನು @JeetN25 ಖಾತೆಯಿಂದ X ನಲ್ಲಿ ಶೇರ್ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. "ಪ್ರಿ-ವೆಡ್ಡಿಂಗ್ ಫೋಟೋಶೂಟ್ WWE ಆಗಿ ಟರ್ನ್ ಆಯ್ತು" ಎಂದು ಶೀರ್ಷಿಕೆ ಸಹ ಕೊಡಲಾಗಿದೆ. ಸದ್ಯ ವಿಡಿಯೋ ಲಕ್ಷಾಂತರ ವೀಕ್ಷಣೆಯನ್ನೂ ಪಡೆದುಕೊಂಡಿದ್ದು, ಹಲವಾರು ಇಂಟರ್ನೆಟ್ ಬಳಕೆದಾರರು ಕಾಮೆಂಟ್ ಮಾಡುತ್ತಾ ಆನಂದಿಸುತ್ತಿರುವುದು ಕಂಡುಬಂದಿದೆ.

PREV
Read more Articles on
click me!

Recommended Stories

ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!
ಮದುವೆ ಹತ್ತಿರ ಇರುವಾಗ್ಲೆ 25 ಲಕ್ಷ ಸ್ಯಾಲರಿ ಕೆಲ್ಸ ಬಿಟ್ಟು ಡೆಲಿವರಿ ಬಾಯ್ ಆದ, ಇಂಟರೆಸ್ಟಿಂಗ್ ಆಗಿದೆ ಕಾರಣ