
Ananya Bhat Devotional Song at Huligemma Temple in Koppal viral:: ಕೊಪ್ಪಳ ತಾಲೂಕಿನ ಪುರಾಣ ಪ್ರಸಿದ್ಧ ಹುಲಗಿ ಗ್ರಾಮದ ಹುಲಿಗೇಮ್ಮ ದೇವಿಯ ಕ್ಷೇತ್ರಕ್ಕೆ ಖ್ಯಾತ ಗಾಯಕಿ ಅನನ್ಯ ಭಟ್ ಭೇಟಿ ನೀಡಿದ್ದಾರೆ. ಈ ವೇಳೆ ದೇವಿಯ ದರ್ಶನ ಪಡೆದ ಅನನ್ಯ ಭಟ್, ಹುಲಿಗೇಮ್ಮ ದೇವಿಯ ಮುಂದೆ ಕುಳಿತು ಭಕ್ತಿಯಿಂದ ಭಾವಪರವಶರಾಗಿ ಭಕ್ತಿಗೀತೆಯೊಂದನ್ನು ಹಾಡಿದ್ದಾರೆ. ಈ ಕ್ಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ವ್ಯಾಪಕ ಮೆಚ್ಚುಗೆ ಪಡೆದಿದೆ.
ಅನನ್ಯ ಭಟ್‌ರ ಮಧುರ ಕಂಠ ಮತ್ತು ಭಕ್ತಿಯ ಭಾವ ಎಲ್ಲರ ಮನಸ್ಸನ್ನು ಆಕರ್ಷಿಸಿದೆ. ಅನನ್ಯ ಭಟ್ ಬಹುಭಾಷೆಯಲ್ಲಿ ಹಾಡುವ ಪ್ರಸಿದ್ಧ ಹಿನ್ನೆಲೆ ಗಾಯಕಿಯಾಗಿದ್ದಾರೆ. ತಮ್ಮ ಗಾಯನದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಅನನ್ಯ, ಈಗ ತಮ್ಮ ಭಕ್ತಿಗೀತೆಯ ಮೂಲಕವೂ ಜನರ ಹೃದಯವನ್ನು ಗೆದ್ದಿದ್ದಾರೆ. ಹುಲಿಗೇಮ್ಮ ದೇವಿಯ ದಿವ್ಯ ಸಾನಿಧ್ಯದಲ್ಲಿ ಅನನ್ಯ ಭಟ್ ಹಾಡು ಕೇಳಿ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹಾಡಿನ ಲಿಂಕ್ ಕೆಳಗೆ ಕೊಡಲಾಗಿದೆ ಆಲಿಸಿ..