ಕುಂಭಮೇಳ ಮೊನಾಲಿಸಾ ಜೊತೆ ಹೋಲಿಕೆ ಬೇಡ, ಕನ್ವರ್ ಯಾತ್ರೆ ವೈರಲ್ ಬೆಡಗಿಯ ಖಡಕ್ ಮಾತು

Published : Aug 15, 2026, 06:28 PM IST
Kanwar Yatra Viral Sensation Mansi rajput

ಸಾರಾಂಶ

ಕುಂಭಮೇಳದ ಮೊನಾಲಿಸಾ ಜೊತೆ ಹೋಲಿಕೆ ಮಾಡಬೇಡಿ. ನಾನು ಶಿವನ ಭಕ್ತೆ. ಧಾರ್ಮಿಕ ಹಿನ್ನಲೆ ಹಾಗೂ ಭಕ್ತಿಯಿಂದ ಕನ್ವರ್ ಯಾತ್ರೆ ಮಾಡಿದ್ದೇನೆ. ನೆಗಟೀವ್ ಕಮೆಂಟ್ಸ್‌ಗೆ ಖಡಕ್ ಉತ್ತರ ನೀಡಿದ್ದಾರೆ. ಯಾರು ಈ ಮಾನಸಿ ಠಾಕೂರ್?

ಲಖನೌ (ಆ.15) ಕನ್ವರ್ ಯಾತ್ರೆಯಲ್ಲಿ ಕಾಣಿಸಿಕೊಂಡ ಬೆಡಗಿ ಭಾರಿ ವೈರಲ್ ಆಗಿ ಎಲ್ಲರ ಗಮನಸೆಳೆದಿದ್ದಾರೆ. ಕನ್ವರ್ ಯಾತ್ರೆಯಲ್ಲಿ ಸಾಗುತ್ತಿದ್ದ ಬೆಡಗಿಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಆಕರ್ಷಕ ಕಣ್ಣುಗಳನ್ನು ಹೊಂದಿರುವ ಈ ಬೆಡಗಿ ಮಾನಸಿ ರಜಪೂತ್. ಈಕೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಕುಂಭಮೇಳ ವೈರಲ್ ಬೆಡಗಿ ಮೊನಾಲಿಸಾ ಜೊತೆ ಹೋಲಿಕೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಮಾನಸಿ ರಜಪೂತ್ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದು, ತನ್ನನ್ನು ಮೊನಾಲಿಸಾ ಜೊತೆ ಹೋಲಿಕೆ ಬೇಡ ಎಂದಿದ್ದಾರೆ.

ಕಣ್ಣುಗಳಿಂದ ಗಮನಸೆಳೆದ ಮಾನಸಿ ರಜಪೂತ್

ಉತ್ತರ ಭಾರತದಲ್ಲಿ ಕನ್ವರ್ ಯಾತ್ರೆ ಅಥವಾ ಕಾವಡ್ ಯಾತ್ರೆ ಅತ್ಯಂತ ಪವಿತ್ರ ಹಾಗೂ ವಿಶೇಷ ಧಾರ್ಮಿಕ ಹಿನ್ನಲೆಯ ಉತ್ಸವವಾಗಿದೆ. ಶಿವಭಕ್ತರ ಜೊತೆ ಧಾರ್ಮಿನ ನಂಬಿಕೆ ಹಾಗೂ ಭಕ್ತಿಯಿಂದ ಸಾಗುತ್ತಿದ್ದ ಮಾನಸಿ ರಜಪೂತ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋಗೆ ಭರ್ಜರಿ ಲೈಕ್ಸ್ ಹಾಗೂ ಪ್ರತಿಕ್ರಿಯೆಗಳು ಬಂದಿತ್ತು. ಹೀಗಾಗಿ ಮಾಧ್ಯಮಗಳು, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಈಕೆಯ ಸಂದರ್ಶನ ನಡೆಸಿದ್ದಾರೆ.ಈ ವೇಳೆ ಈಕೆಯ ಕಣ್ಣುಗಳು ಎಲ್ಲರ ಗಮನಸೆಳೆದಿದೆ.

ಮಾನಸಿ ರಜಪೂತ್ ಆಕರ್ಷಕ ನೋಟ, ಸರಳತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಹೀಗಾಗಿ ಮಾನಸಿ ರಜಪೂತ್ ವಿಡಿಯೋ ಭರ್ಜರಿ ಲೈಕ್ಸ್ ಪಡೆದುಕೊಂಡಿದೆ. ಮಾನಸಿ ರಜಪೂತ್ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾತ್ರೋರಾತ್ರಿ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಎಲ್ಲರೂ ಕುಂಭಮೇಳ ವೈರಲ್ ಹುಡುಗಿ ಮೊನಲಿಸಾ ಜೊತೆ ಹೋಲಿಕೆಯನ್ನು ಮಾಡಿದ್ದಾರೆ. ಮೊನಾಲಿಸಾ ತನ್ನ ಆಕರ್ಷಕ ಕಣ್ಣು, ಸೌಂದರ್ಯದಿಂದ ಗಮನಸೆಳೆದಿದ್ದರು. ಇದೀಗ ಮಾನಸಿ ರಜಪೂತ್ ಕೂಡ ಇದೇ ರೀತಿ ಗಮನಸೆಳೆದಿದ್ದಾರೆ ಎಂದು ಮೊನಾಲಿಸಾ ಜೊತೆ ಹೋಲಿಕೆಗಳು ಹೆಚ್ಚಾಗಿದೆ.

ಮೊನಾಲಿಸಾ ಜೊತೆ ಹೋಲಿಕೆ, ನೆಗಟೀವ್ ಕಮೆಂಟ್ಸ್‌ಗೆ ಗರಂ

ಪ್ರತಿಯೊಬ್ಬರ ವ್ಯಕ್ತಿತ್ವ, ಹಾದಿ ಭಿನ್ನ. ನನ್ನನ್ನು ಮೊನಾಲಿಸಾ ಜೊತೆ ಹೋಲಿಕೆ ಮಾಡಬೇಡಿ. ನಾನು ಕನ್ವರ್ ಯಾತ್ರೆ ಮಾಡಿರುವುದು ನನ್ನ ಭಕ್ತಿ ಹಾಗೂ ಧರ್ಮದ ಮೇಲಿನ ನಂಬಿಕೆಯಿಂದ. ನನ್ನ ಭಕ್ತಿಯನ್ನು ಗ್ಲಾಮರ್ ಜೊತೆ ಥಳುಕು ಹಾಕಬೇಡಿ. ನನಗೆ ಸ್ವಂತ ಗುರುತು ಇದೆ. ನನ್ನದೇ ಆದ ವ್ಯಕ್ತಿತ್ವವಿದೆ ಎಂದು ಮೊನಾಲಿಸಾ ಜೊತೆಗಿನ ಹೋಲಿಕೆಗೆ ಮಾನಸಿ ರಜಪೂತ್ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತ ಹಲವರು ಕನ್ವರ್ ಯಾತ್ರೆ ಮೂಲಕ ಮಾನಸಿ ರಜಪೂತ್ ಪ್ರಚಾರ ಗಿಟ್ಟಿಸಿದ್ದಾರೆ. ಕನ್ವರ್ ಯಾತ್ರೆಯನ್ನು ಪ್ರಚಾರಕ್ಕಾಗಿ , ವಿಡಿಯೋಗಾಗಿ ಬಳಸಿಕೊಂಡಿದ್ದಾರೆ ಅನ್ನೋ ಆರೋಪಗಳನ್ನು ಮಾಡಿದ್ದಾರೆ. ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಮಾನಸಿ ಮಾಡಿದ ತಂತ್ರ ಎಂಬ ಕಮೆಂಟ್ಸ್ ಕೂಡ ವ್ಯಕ್ತವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಮಾನಸಿಕ ರಜಪೂತ್, ನಾನು ಶಿವನ ಭಕ್ತೆ. ಶಿವನ ಆರಾಧಿಸುವ ಕುಟುಂಬದಿಂದ ಬಂದಿದ್ದೇನೆ. ನನ್ನ ಕುಟುಂಬ ಧಾರ್ಮಿಕ ನಂಬಿಕೆಗಳನ್ನು ಅತ್ಯಂತ ಭಕ್ತಿಯಿಂದ, ಗೌರವಿಂದ ನೋಡುತ್ತಿದೆ. ಇದನ್ನೇ ನಾನು ಅನುಸರಿಸುತ್ತಿದ್ದೇನೆ. ನೆಗಟೀವ್ ಕಮೆಂಟ್ಸ್‌ಗಳಿಗೆ ಕಿವಿಗೊಡುವುದಿಲ್ಲ. ಸ್ಪಷ್ಟನೆ ನೀಡಲು ಪ್ರತಿಕ್ರಿಯಿಸಿದ್ದೇನೆ ಎಂದು ಮಾನಸಿ ರಜಪೂತ್ ಹೇಳಿದ್ದಾರೆ.

PREV
Read more Articles on
click me!

Recommended Stories

ಧರೆಯ ದೊರೆ ಯಶ್ ಹೇಳಲಿದ್ದಾರೆ 'ಅಜ್ಜಿಯ ಕಥೆ'.. ರಾಕಿಂಗ್ ಸ್ಟಾರ್ ಆ 'ಫೇರಿ ಟೇಲ್'ನಲ್ಲಿ ಏನೆಲ್ಲಾ ಇದೆ?
ಮೃತ ಮಗನ ರೂಮ್ ಕ್ಲೀನ್ ಮಾಡುವಾಗ ಅಲ್ಲಿದ್ದ ವಸ್ತು ನೋಡಿ ಬಿಕ್ಕಿ ಬಿಕ್ಕಿ ಅತ್ತ ಅಮ್ಮ