ಮೃತ ಮಗನ ರೂಮ್ ಕ್ಲೀನ್ ಮಾಡುವಾಗ ಅಲ್ಲಿದ್ದ ವಸ್ತು ನೋಡಿ ಬಿಕ್ಕಿ ಬಿಕ್ಕಿ ಅತ್ತ ಅಮ್ಮ

Published : Aug 15, 2026, 06:03 PM IST
Mother

ಸಾರಾಂಶ

ಮೃತ ಮಗನ ಕೋಣೆಯನ್ನು ಸ್ವಚ್ಛಗೊಳಿಸಲು ಹೋದ ತಾಯಿಯೊಬ್ಬರು, ಅಲ್ಲಿನ ವಸ್ತುವೊಂದನ್ನು ನೋಡಿ ಕಣ್ಣೀರು ಹಾಕಿದ್ದಾರೆ. ಮಗನೇ ತನ್ನೊಂದಿಗೆ ಮಾತನಾಡಿದ ಭಾವನೆ ಮೂಡಿಸಿದ ಆ ವಸ್ತುವಿನ ಹೃದಯ ವಿದ್ರಾವಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Video: ಮೃತ ಮಗನ ಕೋಣೆಯನ್ನು ಸ್ವಚ್ಛಗೊಳಿಸಲು ಹೋದ ತಾಯಿ ಅಲ್ಲಿಯ ವಸ್ತುವೊಂದನ್ನು ನೋಡಿ ಕಣ್ಣೀರು ಹಾಕಿರುವ ಹೃದಯ ವಿದ್ರಾವಕ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ತಮ್ಮ ಅಭಿಪ್ರಾಯವನ್ನು ಕಮೆಂಟ್ ರೂಪದಲ್ಲಿ ಹಂಚಿಕೊಂಡಿದ್ದಾರೆ. @SULTAN_SS05 ಹೆಸರಿನ ಎಕ್ಸ್ ಖಾತೆಯಲ್ಲಿಂದು ಈ ವಿಡಿಯೋವನ್ನು ಪೋಸ್ಟ್ ಮಾಡಿಕೊಳ್ಳಲಾಗಿದ್ದು, ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ತಾಯಿಯ ಕಣ್ಣೀರಿಗೆ ಕಾರಣವಾದ ವಸ್ತು ಏನು ಎಂಬುದನ್ನು ನೋಡೋಣ ಬನ್ನಿ.

ವಿಡಿಯೋ ಶೀರ್ಷಿಕೆ ಈ ರೀತಿಯಾಗಿದೆ

ವಿಡಿಯೋ ಹಂಚಿಕೊಂಡಿರುವ ಎಕ್ಸ್ ಬಳಕೆದಾರ, ಮಗನ ಮರಣದ ನಂತರ ಅವನ ಕೋಣೆಯನ್ನು ಸ್ವಚ್ಛಗೊಳಿಸಲು ತಾಯಿ ಹೋಗಿದ್ದರು. ಅಲ್ಲಿ ಕೇವಲ ನೆನಪುಗಳು ಮತ್ತು ಹಳೆಯ ವಸ್ತುಗಳು ಸಿಗುತ್ತವೆ ಎಂದು ನಂಬಿದ್ದಳು. ಆದರೆ ಕೋಣೆಯೊಳಗೆ ತಾಯಿ ಆ ವಸ್ತು ನೋಡಿದ ಕೂಡಲೇ ಆಘಾತದಿಂದ ಕುಸಿದು ಕಣ್ಣೀರು ಹಾಕಿದ್ದಾರೆ. ತಾಯಿ ಕಣ್ಣೀರಿಗೆ ಕಾರಣವಾದ ವಸ್ತು ಏನು ಗೊತ್ತಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ವಿಡಿಯೋದಲ್ಲಿ ಏನಿದೆ?

ಅಸ್ತವ್ಯಸ್ಥವಾದ ಕೋಣೆಯೊಂದನ್ನು ಮಹಿಳೆಯೊಬ್ಬರು ಸ್ವಚ್ಛ ಮಾಡುತ್ತಿರುತ್ತಾರೆ. ಈ ವೇಳೆ ಅಲ್ಲಿದ್ದ ಮ್ಯಾಟ್‌ ತೆಗೆದು ನೆಲದ ಮೇಲೆ ಹಾಸುತ್ತಾರೆ. ಈ ಮ್ಯಾಟ್‌ ಮೇಲಿರುವ ಅಕ್ಷರಗಳು ಮಹಿಳೆಗೆ ಕಾರಣವಾಗುತ್ತದೆ. ಈ ಮ್ಯಾಟ್ ಮೇಲ್ಗಡೆ "Hello Mom" (ಹೆಲೋ ಅಮ್ಮಾ) ಎಂದು ಬರೆಯಲಾಗಿರುತ್ತದೆ. ಮಗನೇ ತನ್ನೊಂದಿಗೆ ಮಾತನಾಡಿದ ಭಾವನೆ ಆ ತಾಯಿಗೆ ಉಂಟಾಗಿರಬಹುದು. ಹಾಗಾಗಿ ಮಹಿಳೆ ಕಣ್ಣೀರು ಹಾಕಿದ್ದಾರೆ ಎಂದು ಬಳಕೆದಾರರು ಊಹಿಸಿದ್ದಾರೆ.

ಇದು ಆಕೆಯ ಮೃತ ಮಗನ ಕೋಣೆಯಾಗಿದ್ರೆ, ಇದನ್ನು ಸ್ವಚ್ಛಗೊಳಿಸೋದು ದೊಡ್ಡ ಸವಾಲಿನ ಕೆಲಸ ಆಗುತ್ತದೆ. ಅಲ್ಲಿರುವ ಪ್ರತಿಯೊಂದು ವಸ್ತುವಿನಲ್ಲಿಯೂ ಮಗನ ನೆನಪು ಇರುತ್ತದೆ. ಪ್ರತಿ ವಸ್ತು ನೋಡಿದಾಗಲೂ ಮಗನ ನೆನಪು ಬರೋದು ಸಹಜ. ಈ ರೀತಿಯ ಕಷ್ಟ ಯಾರಿಗೂ ಬೇಡ ಎಂದು ಬಳಕೆದಾರರು ಮರುಗಿದ್ದಾರೆ.

ಈ ವಿಡಿಯೋದಲ್ಲಿ Hello Mom ಎಂದು ಬರೆದಿರೋದು ಸ್ಪಷ್ಟವಾಗಿ ಕಾಣಿಸಿಲ್ಲ. ಈ ಬಗ್ಗೆ ಜನರು ಪ್ರಶ್ನೆ ಮಾಡಿದಾಗ ಬಳಕೆದಾರರು ಅದು Hello Mom ಎಂದು ಉತ್ತರಿಸಿದ್ದಾರೆ. ಇಲ್ಲಿಯವರೆಗೆ ಈ ವಿಡಿಯೋಗೆ 40 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದ್ದು, ಪಾದರಸದಂತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದ್ರೆ ಈ ವಿಡಿಯೋ ಎಲ್ಲಿಯದ್ದು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

PREV
Read more Articles on
click me!

Recommended Stories

ಸತತ ಸೋಲು, ಕಂಪನಿಗಳಿಂದ ರಿಜೆಕ್ಟ್, ಸಂಕಷ್ಟದಲ್ಲೇ ಬೆಳೆದ ಸ್ಲಂ ಯುವಕನಿಗೆ ಸಿಕ್ತು 33 ಲಕ್ಷ ರೂ ಜಾಬ್
'ವಿಲನ್ ರೋಲ್'ನ ಲೀಸ್ ತೆಗೆದುಕೊಂಡಿದ್ದಾರಾ ಯಶ್? ಈ ಪ್ರಶ್ನೆಗೆ ಮಾರ್ಮಿಕ ಉತ್ತರ ಇಲ್ಲಿದೆ ನೋಡಿ!