ಬೆಳಗಿನ ಜಾವ 3 ಗಂಟೆಗೆ ಆಟೋ ಓಡಿಸುವ ಮಹಿಳೆ.. ಕಾರಣ ಏನೆಂದು ಗೊತ್ತಾದ್ರೆ ಸಲಾಂ ಅಂತೀರಾ

Published : Aug 08, 2026, 06:31 PM IST
Woman auto driver

ಸಾರಾಂಶ

Woman auto driver: ಮುಂಜಾನೆ 3 ಗಂಟೆಗೆ ಜನರು ನಿದ್ರಿಸುತ್ತಿದ್ದರೆ, ಈ ಮಹಿಳೆ ಆಟೋ ಓಡಿಸುತ್ತಾ ರಸ್ತೆಯಲ್ಲಿರುತ್ತಾರೆ. ಆದರೆ ಹಣಕ್ಕಾಗಿ ಅಲ್ಲ, ಅಂದಹಾಗೆ ವಡೋದರಾದ ಈ ಮಹಿಳೆಯ ಸ್ಫೂರ್ತಿದಾಯಕ ಕಥೆ ಇಲ್ಲಿದೆ.

ಸಾಮಾನ್ಯವಾಗಿ ಮುಂಜಾನೆ 3 ಗಂಟೆಯ ಸಮಯವೆಂದರೆ ಇಡೀ ದೇಶವೇ ಗಾಢ ನಿದ್ರೆಯಲ್ಲಿರುತ್ತದೆ. ರಸ್ತೆಗಳು ನಿರ್ಜನವಾಗಿರುತ್ತವೆ. ಅಂತಹ ಸಮಯದಲ್ಲಿ ಒರ್ವ ಮಹಿಳೆ ಆಟೋರಿಕ್ಷಾ ಓಡಿಸುತ್ತಿರುವುದು ಕಂಡರೆ ಎಂಥವರು ಕೂಡ ಒಂದು ಕ್ಷಣ ಅಚ್ಚರಿಯಿಂದ ನೋಡುವುದು ಸಹಜ. ಇದೀಗ ಇನ್‌ಸ್ಟಾಗ್ರಾಂ ಬಳಕೆದಾರರಾದ ಸನ್ಯಮ್ ಗಾರ್ಗ್ ಎಂಬುವವರಿಗೂ ಇತ್ತೀಚೆಗೆ ಇಂತಹದ್ದೇ ಒಂದು ಅನುಭವವಾಗಿದೆ. ಅವರು ಮುಂಜಾನೆ 3 ಗಂಟೆಗೆ ಮನೆಗೆ ಹಿಂದಿರುಗುತ್ತಿದ್ದಾಗ ಒರ್ವ ಮಹಿಳೆ ತನ್ನ ಪತಿಯೊಂದಿಗೆ ಆಟೋ ಓಡಿಸುತ್ತಿರುವುದು ಕಂಡುಬಂದಿದೆ. ಕುತೂಹಲದಿಂದ ಸನ್ಯಮ್ ಅವರು ಆಕೆಯನ್ನು ಮಾತನಾಡಿಸಿದಾಗ ತಿಳಿದ ವಿಷಯಗಳು ಆಕೆಗೆ ಎಂಥವರು ಒಮ್ಮೆ ಸಲಾಂ ಹೊಡೆಯುವಂತಿದೆ.

ಹಣಕ್ಕಾಗಿ ಮಾತ್ರ ಆಟೋ ಓಡಿಸುತ್ತಿಲ್ಲ

ಗುಜರಾತ್‌ನ ವಡೋದರಾ ನಗರದ ಈ ಮಹಿಳೆ ಮಾನವೀಯತೆಯ ಪ್ರತಿರೂಪದಂತೆ ಇದ್ದಾರೆ. ಈಕೆಯ ಪತಿ ಕೂಡ ಒಬ್ಬ ಆಟೋ ಚಾಲಕ. ತನ್ನ ಪತ್ನಿ ಆರ್ಥಿಕವಾಗಿ ಯಾರ ಮೇಲೂ ಅವಲಂಬಿತಳಾಗಬಾರದು, ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎಂಬ ಉದ್ದೇಶದಿಂದ ಪತಿಯೇ ಆಕೆಗೆ ಆಟೋ ಡ್ರೈವಿಂಗ್ ಕಲಿಸಿದ್ದಾರೆ. ಈಗ ಈ ದಂಪತಿ ಹಗಲಿರುಳು ಕಷ್ಟಪಟ್ಟು ಕೆಲಸ ಮಾಡುತ್ತಾ ತಮ್ಮ ಇಬ್ಬರು ಮಕ್ಕಳ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಆದರೆ, ಇವರು ಕೇವಲ ಹಣಕ್ಕಾಗಿ ಮಾತ್ರ ಆಟೋ ಓಡಿಸುತ್ತಿಲ್ಲ.

ಗರ್ಭಿಣಿಯರು, ರೋಗಿಗಳು, ಒಬ್ಬಂಟಿ ಮಹಿಳೆಯರಿಂದ ದುಡ್ಡು ಕೇಳಲ್ಲ

ನಗರಗಳಲ್ಲಿ ಹಗಲಿನಲ್ಲಿ ವಾಹನಗಳು ಸುಲಭವಾಗಿ ಸಿಗುತ್ತವೆ. ಆದರೆ ಅರ್ಧರಾತ್ರಿಯ ಸಮಯದಲ್ಲಿ ಮಹಿಳೆಯರು, ಮಕ್ಕಳು ಅಥವಾ ವೃದ್ಧರಿಗೆ ತುರ್ತು ಆರೋಗ್ಯ ಸಮಸ್ಯೆ ಎದುರಾದಾಗ ಆಸ್ಪತ್ರೆಗೆ ಹೋಗಲು ವಾಹನ ಸಿಗದೆ ಪರದಾಡುತ್ತಾರೆ. ಈ ಕಷ್ಟವನ್ನು ಅರ್ಥಮಾಡಿಕೊಂಡಿರುವ ಈ ಮಹಿಳಾ ಆಟೋ ಚಾಲಕಿ, ರಾತ್ರಿ 3 ಗಂಟೆಯಾದರೂ ಸರಿ, ಯಾರಾದರೂ ಆಪತ್ತಿನಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕರೆ ತಕ್ಷಣ ಅಲ್ಲಿಗೆ ಧಾವಿಸುತ್ತಾರೆ. ವಿಶೇಷವೆಂದರೆ, ಆಸ್ಪತ್ರೆಗೆ ಹೋಗಬೇಕಾದ ಗರ್ಭಿಣಿಯರು, ರೋಗಿಗಳು ಅಥವಾ ಒಬ್ಬಂಟಿ ಮಹಿಳೆಯರಿಂದ ಈಕೆ ಒಂದು ರೂಪಾಯಿಯನ್ನೂ ಪಡೆಯದೆ ಉಚಿತವಾಗಿ ಸೇವೆಯನ್ನು ಒದಗಿಸುತ್ತಿದ್ದಾರೆ.

ಹಣ ಪಡೆಯಲು ನಿರಾಕರಣೆ

"ಕೇವಲ ಹಣ ಸಂಪಾದಿಸುವುದಷ್ಟೇ ನನ್ನ ಗುರಿಯಲ್ಲ. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮತ್ತು ಮಹಿಳೆಯರಲ್ಲಿ ಸುರಕ್ಷಿತ ಭಾವನೆಯನ್ನು ಮೂಡಿಸುವುದು ನನ್ನ ಜೀವನದ ಉದ್ದೇಶ" ಎಂದು ಈ ಧೀರೆ ಹೆಮ್ಮೆಯಿಂದ ಹೇಳುತ್ತಾರೆ. ಎಷ್ಟೋ ಬಾರಿ ಪ್ರಯಾಣಿಕರು ಹಣ ಕೊಡಲು ಮುಂದಾದರೂ, ತುರ್ತು ಪರಿಸ್ಥಿತಿಯಲ್ಲಿದ್ದವರಿಂದ ಹಣ ಪಡೆಯಲು ಈಕೆ ನಿರಾಕರಿಸುತ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಸುರಿಮಳೆ

ಸನ್ಯಮ್ ಗಾರ್ಗ್ ಅವರು ಹಂಚಿಕೊಂಡ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ. ಲಕ್ಷಾಂತರ ಜನರು ಈ ಮಹಿಳೆಯ ಸೇವಾ ಮನೋಭಾವಕ್ಕೆ ಮಾರುಹೋಗಿದ್ದಾರೆ. "ಇಂದಿನ ಸ್ವಾರ್ಥಿ ಜಗತ್ತಿನಲ್ಲಿ ಇಂತಹವರು ದೇವರಿಗಿಂತ ಕಡಿಮೆ ಇಲ್ಲ" ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ವಡೋದರಾದ ಈ ಮಹಿಳೆ ನೂರಾರು ಜನರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ 

PREV
Read more Articles on
click me!

Recommended Stories

ಮೈಸೂರು ನಿವೃತ್ತ ಶಿಕ್ಷಕರ ಖಾತೆಗೆ 1.33 ಕೋಟಿ ಕ್ಯಾಶ್ ಡೆಪಾಸಿಟ್; ITR ಕೂಡ ಇಲ್ಲ, 26 ದಿನ ತಡವಾದ ನೋಟಿಸ್‌ನಿಂದ ITATನಲ್ಲಿ ಬಿಗ್ ಗೆಲುವು
1917ರಲ್ಲಿ ಬ್ರಿಟಿಷರಿಗೆ 35 ಸಾವಿರ ಸಾಲ: ಈಗ ಸಿಕ್ಕಿತು ದಾಖಲೆ- ಹಣ ವಾಪಸಿಗೆ ಮನವಿ; ಮುಂದಾಗಿದ್ದೇ ರೋಚಕ