ಮಧ್ಯಾಹ್ನ 30 ನಿಮಿಷ ನಿದ್ದೆ ಬೇಕು, ಸಂದರ್ಶನದಲ್ಲಿ Gen-Z ಬೇಡಿಕೆ ಕೇಳಿ ಕಂಪನಿ ಸಿಇಒ ಮಾಡಿದ್ದೇನು?

Published : Aug 08, 2026, 03:50 PM IST
Gen Z Wants 30 Minute Afternoon Nap at Work

ಸಾರಾಂಶ

ಕಂಪನಿ ಸಂಸ್ಥಾಪಕ ಸಂದರ್ಶನ ನಡೆಸಿದ್ದರು. ಈ ವೇಳೆ ಜೆನ್‌ಝೀ ಅಭ್ಯರ್ಥಿಯ ಡಿಮ್ಯಾಂಡ್ ಮೋಡಿ ಸಂಸ್ಥಾಪಕನೇ ಬೆಚ್ಚಿ ಬಿದ್ದಿದ್ದಾರೆ. ಸಂದರ್ಶನದಲ್ಲಿ ಆಯ್ಕೆಯಾಗುತ್ತಿದ್ದಂತೆ ಜೆನ್‌ಝಿ ಮುಂದಿಟ್ಟ ಡಿಮ್ಯಾಂಡ್ ಏನು?

ನವದೆಹಲಿ (ಆ.08) ಜೆನ್‌ಜಿ ಯುವ ಸಮೂಹಗ ವರ್ಕಿಂಗ್ ಸ್ಟೈಲ್, ಅವರ ಗುರಿ, ಆಯ್ಕೆಗಳ ಕುರಿತು ಭಾರಿ ಚರ್ಚೆಯಾಗುತ್ತಿದೆ. ವಿಶೇಷವಾಗಿ ಕಂಪನಿಗಳಲ್ಲಿ ಜೆನ್‌ಝಿ ಉದ್ಯೋಗ ನಿರ್ವಹಿಸುತ್ತಿರುವ ರೀತಿಗಳ ಕುರಿತು ಚರ್ಚೆಯಾಗುತ್ತಿದೆ. ಇದರ ನಡುವೆ ಕಂಪನಿ ಸಂಸ್ಥಾಪಕ ತನ್ನ ಕಂಪನಿಗೆ ನಡೆದ ಉದ್ಯೋಗ ನೇಮಕಾತಿ ಸಂದರ್ಶನದ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ. ಸಂದರ್ಶನದಲ್ಲಿ ಜೆನ್‌ಝಿ ಮುಂದಿಟ್ಟ ಡಿಮ್ಯಾಂಡ್ ನೋಡಿ ಸಂಸ್ಥಾಪಕನೆ ಬೆಚ್ಚಿ ಬಿದಿದ್ದಾರೆ. ಸಂದರ್ಶನದಲ್ಲಿ ಬಹುತೇಕ ಆಯ್ಕೆ ಖಚಿತ ಎಂದಾಗಲೇ ಜೆನ್‌ಝಿ ಪ್ರಮುಖ ಬೇಡಿಕೆಯೊಂದನ್ನು ಮುಂದಿಟ್ಟಿದ್ದಾನೆ.

ನನಗೆ 30 ನಿಮಿಷ ಕಡ್ಡಾಯ...

ಖಾಸಗಿ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ನಿತಿನ್ ವರ್ಮಾ ತಮ್ಮ ಕಂಪನಿ ನೇಮಕಾತಿ ಮಾಡಿಕೊಳ್ಳುತ್ತಿದೆ ಎಂದು ಸೋಶಿಯಲ್ ಮೀಡಿಯಾ ಸೇರಿದಂತೆ ಕೆಲ ಸೈಟ್ ಮೂಲಕವೂ ಹೇಳಿಕೊಂಡಿದ್ದರು. ಸಂದರ್ಶನ ದಿನ ಅನುಭವಿಗಳು, ಫ್ರೆಶರ್ಸ್ ಸೇರಿದಂತೆ ಹಲವರು ಆಗಮಿಸಿದ್ದರು. ನೇಮಕಾತಿಗೆ ಸಂದರ್ಶನ ನಡೆದಿತ್ತು. ಒಂದೆರಡು ಸುತ್ತಿನ ಸಂದರ್ಶನ ಇದಾಗಿತ್ತು. ಅಂತಿಮ ಹಂತದಲ್ಲಿ ಕಂಪನಿ ಸಂಸ್ಥಾಪಕ ಹಾಗೂ ಸಿಇಒ ನಿತಿನ್ ವರ್ಮಾ ಕುಳಿತಿದ್ದರು. ಆರಂಭಿಕ ಸುತ್ತು ಪಾಸ್ ಆದ ಬಳಿಕ ನಿತಿನ್ ವರ್ಮಾ ಜೊತೆಗೆ ಅಂತಿಮ ಹಂತದ ಸಂದರ್ಶನವಿತ್ತು. ಈ ವೇಳೆ ಜೆನ್‌ಜಿ ಯುವಕನೊಬ್ಬ ತನಗೆ ಪ್ರತಿ ದಿನ ಊಟದ ಬಳಿಕ 30 ನಿಮಿಷ ನಿದ್ದೆ ಮಾಡಬೇಕು. ಇದು ಕಡ್ಡಾಯ. ಎಂದಿದ್ದಾನೆ.

ಉತ್ತಮ ಕೆಲಸಕ್ಕೆ ನಿದ್ದೆ ಅನಿವಾರ್ಯ

ನನ್ನ ಕೆಲಸ ಉತ್ತಮಪಡಿಸಲು, ಪ್ರಾಡಕ್ಟಿವಿಟಿ ಹೆಚ್ಚಿಸಲು ಪ್ರತಿ ದಿನ ಮಧ್ಯಾಹ್ನ ಬಳಿಕ 30 ನಿಮಿಷ ನಿದ್ದೆ ಮಾಡಬೇಕು. ಇದರಿಂದ ನಾನು ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ನನ್ನ ಉತ್ಸಾಹ ಹೆಚ್ಚಿರುತ್ತದೆ ಎಂದಿದ್ದಾನೆ.

ಸಂಸ್ಥಾಪಕ ಮಾಡಿದ್ದೇನು?

ಇದು ಜೋಕ್ ಅಲ್ಲ, ಜೆನ್‌ಝಿ ಯುವಕನ ಬೇಡಿಕೆ ಎಂದು ನಿತಿನ್ ವರ್ಮಾ ಹೇಳಿಕೊಂಡಿದ್ದಾರೆ. ಆತನ ಬೇಡಿಕೆ ನನ್ನನ್ನು ಗಂಭೀರವಾಗಿ ಯೋಚಿಸಲು ಪ್ರೇರೇಪಿಸಿತು. ಯುವಕನ ಬೇಡಿಕೆಯಲ್ಲಿ ತಪ್ಪೇನಿದೆ? ಕಾರ್ಪೋರೇಟ್ ಜಗತ್ತಿನ ಮಧ್ಯಾಹ್ನ 3 ಗಂಟೆಯ ಮೀಟಿಂಗ್‌ನಲ್ಲಿ ಬಹುತೇಕರು ತೂಕಡಿಸುತ್ತಲೇ ಇರುತ್ತಾರೆ. ಹಲವರು ಮರೆಮಾಚುತ್ತಾರೆ. ನಿದ್ದೆಗಣ್ಣಿನಲ್ಲೇ ಮೀಟಿಂಗ್ ಕೇಳಿಸಿಕೊಳ್ಳುತ್ತಾರೆ. ಆದರೆ ಜೆನ್‌ಜಡಿ ಯುವಕ ಧೈರ್ಯವಾಗಿ, ಪ್ರಮಾಣಿಕತೆಯಿಂದ ಹೇಳಿಕೊಂಡಿದ್ದ. ಆತನ ಪ್ರಮಾಣಿಕತೆಯನ್ನು ನಾನು ಗೌರವಿಸಿದೆ ಎಂದು ನಿತಿನ್ ವರ್ಮಾ ಹೇಳಿದ್ದಾನೆ.

ತಕ್ಕ ಸಮಯಕ್ಕೆ ಯಾವುದೇ ಸಮಸ್ಯ ಇಲ್ಲದೆ ಕೆಲಸ ಮುಗಿದರೆ ಸಾಕು

ಮಧ್ಯಾಹ್ನ ಸ್ವಲ್ಪ ಹೊತ್ತು ನಿದ್ದೆ ದೇಹಕ್ಕೆ ಹಾಗೂ ಮನಸ್ಸಿಗೆ ಉತ್ತಮ. ಆತನಿಗೆ, ನೀನು ನಿದ್ದೆ ಮಾಡು, ಹೇಗೆ ಬೇಕಾದರು ಕೆಲಸ ಮಾಡು, ನನಗೆ ಡೆಡ್‌ಲೈನ್ ಒಳಗೆ ಕೆಲಸ ಮುಗಿಯಬೇಕು. ಮಾಡಿದ ಕೆಲಸದಲ್ಲಿ ತಪ್ಪುಗಳು, ಸಮಸ್ಸೆಗಳು ಇರಬಾರದು. ನಿರೀಕ್ಷಿತ ಫಲಿತಾಂಶ ನೀಡಿದರೆ ನೀನು ಎಷ್ಟು ಗಂಟೆ ಕೆಲಸ ಮಾಡುತ್ತಿದ್ದಿಯಾ ಅನ್ನೋದು ನಾನು ಲೆಕ್ಕ ಹಾಕುವುದಿಲ್ಲ. ಒಂದು ವೇಳೆ ಕೆಲಸ ಮುಗಿಯದಿದ್ದರೆ, ಆಗದಿದ್ದರೆ, ಜಗತ್ತಿನ ಯಾವ ನಿದ್ದೆಯೂ ನಿನ್ನನ್ನು ಉಳಿಸುವುದಿಲ್ಲ ಎಂದು ಸ್ಪಷ್ಟವಾಗಿ ಆತನಿಗೆ ಹೇಳಿದೆ ಎಂದು ನಿತಿನ್ ವರ್ಮಾ ಹೇಳಿದ್ದಾರೆ.

PREV
Read more Articles on
click me!

Recommended Stories

ವಾಷಿಂಗ್ ಮಷಿನ್‌ನಲ್ಲಿ ಪ್ಯಾರಸಿಟಮಾಲ್ ಮಾತ್ರೆ ಹಾಕಿದ್ರೆ ಸಾಕು, ಕೊಳೆಯೆಲ್ಲಾ ಹೋಗಿ ಬಟ್ಟೆ ಹೊಸದರಂತೆ ಹೊಳೆಯುತ್ತೆ!
BMW ಬೈಕ್‌ನಲ್ಲಿ ಬಂದ Gen-Z ಉಬರ್ ರೈಡರ್.. ಲಕ್ಷಾಂತರ ಬೆಲೆಯ ಬೈಕ್‌ನಲ್ಲಿ ಟ್ಯಾಕ್ಸಿ ಓಡಿಸಲು ಕೊಟ್ಟ ಕಾರಣ ಅಚ್ಚರಿಯಾಗಿದೆ..