
ಮುಂಬೈ (ಮಹಾರಾಷ್ಟ್ರ): ಜೀವನದ ದೊಡ್ಡ ಪಾಠಗಳು ಅಥವಾ ಸಂದೇಶಗಳು ಯಾವಾಗಲೂ ದಪ್ಪ ದಪ್ಪ ಪುಸ್ತಕಗಳಿಂದ ಅಥವಾ ಮೋಟಿವೇಷನಲ್ ಸ್ಪೀಕರ್‌ಗಳಿಂದಲೇ ಬರಬೇಕೆಂದಿಲ್ಲ. ಕೆಲವೊಮ್ಮೆ ಅನಿರೀಕ್ಷಿತವಾಗಿ ಭೇಟಿಯಾಗುವ ಅಪರಿಚಿತ ವ್ಯಕ್ತಿಗಳು ಕೂಡ ಅದ್ಭುತ ಪಾಠವನ್ನು ಕಲಿಸುತ್ತಾರೆ. ಮುಂಬೈನ ಉದ್ಯಮಿ ಆಶಿಶ್ ಜೈನ್ ಅವರಿಗೆ ಇತ್ತೀಚೆಗೆ ಇಂತಹದ್ದೇ ಒಂದು ಅಪರೂಪದ ಅನುಭವವಾಗಿದೆ.
ಪ್ರಖ್ಯಾತ ಉದ್ಯಮಿ ಮತ್ತು ಸ್ಟಾರ್ಟ್‌ಅಪ್ ಸಂಸ್ಥಾಪಕ ಆಶಿಶ್ ಜೈನ್ ಅವರು ರಾತ್ರಿ 8:25ರ ಸುಮಾರಿಗೆ ತಮ್ಮ ಕಚೇರಿಯಿಂದ ಗೆಸ್ಟ್ ಹೌಸ್‌ಗೆ ಹೋಗಲು ಉಬರ್ ಬೈಕ್ ಬುಕ್ ಮಾಡಿದ್ದರು. ರೈಡ್ ಕನ್ಫರ್ಮ್ ಆಗಿ ಚಾಲಕ ಸ್ಥಳಕ್ಕೆ ಬಂದಾಗ ಆಶಿಶ್ ಅವರಿಗೆ ತಮ್ಮ ಕಣ್ಣನ್ನೇ ನಂಬಲು ಸಾಧ್ಯವಾಗಲಿಲ್ಲ. ಏಕೆಂದರೆ ಆ ಯುವಕ ಸಾಮಾನ್ಯ ಬೈಕ್‌ನಲ್ಲಿ ಬಂದಿರಲಿಲ್ಲ, ಬದಲಾಗಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಐಷಾರಾಮಿ
ಇಷ್ಟು ದುಬಾರಿ ಬೈಕ್‌ನಲ್ಲಿ ಉಬರ್ ಓಡಿಸುತ್ತಿರುವುದನ್ನು ಕಂಡ ಆಶಿಶ್ ಅವರ ಕುತೂಹಲ ಹೆಚ್ಚಾಯಿತು. ಅವರು ಆ ಯುವಕನ ಬಳಿ, ಭಾಯ್, ಇಷ್ಟು ದುಬಾರಿ ಬೈಕ್ ಇಟ್ಟುಕೊಂಡು ನೀನು ಉಬರ್ ಯಾಕೆ ಓಡಿಸುತ್ತಿದ್ದೀಯಾ? ಎಂದು ಕೇಳಿದರು. ಆಗ ಆ ಯುವಕ ಹೆಲ್ಮೆಟ್ ತೆಗೆದು ನಗುತ್ತಾ ನೀಡಿದ ಉತ್ತರ ಆಶಿಶ್ ಅವರಿಗೆ ಮಾತ್ರವಲ್ಲ, ಇಡೀ ಇಂಟರ್ನೆಟ್ ಲೋಕಕ್ಕೆ ಸ್ಫೂರ್ತಿಯಾಗಿದೆ. ಆ ಯುವಕ ಇಂಜಿನಿಯರಿಂಗ್ ಪದವೀಧರ. ಆತ ಈಗಾಗಲೇ ಕೆಲವು ಸ್ವಂತ ಉದ್ಯಮಗಳನ್ನು (Businesses) ನಡೆಸುತ್ತಿದ್ದಾನೆ. ಕೆಲವು ಉದ್ಯಮಗಳಲ್ಲಿ ಲಾಭ ಗಳಿಸಿದರೆ, ಇನ್ನು ಕೆಲವು ವಿಫಲವಾಗಿ ಅನುಭವ ನೀಡಿದ್ದವು. ಆ ಸಂಭಾವನೆಯಿಂದಲೇ ಆತ ಈ ಬಿಎಂಡಬ್ಲ್ಯು ಬೈಕ್ ಖರೀದಿಸಿದ್ದಾನೆ. ಸದ್ಯದಲ್ಲೇ ಉನ್ನತ ವ್ಯಾಸಂಗಕ್ಕಾಗಿ (Masters) ಹೋಗಲು ಸಿದ್ಧತೆ ನಡೆಸುತ್ತಿರುವ ಆತನಿಗೆ ಇದು ಮೊದಲ ಉಬರ್ ರೈಡ್ ಆಗಿತ್ತು.
ಆ ಯುವಕ ಉಬರ್ ಓಡಿಸಲು ಕಾರಣ ಹಣದ ಕೊರತೆಯಲ್ಲ! ಬದಲಾಗಿ ಸಮಾಜದ ವಿವಿಧ ವರ್ಗದ ಜನರನ್ನು ಭೇಟಿಯಾಗುವುದು, ಅವರ ಜೊತೆ ಮಾತನಾಡುವುದು ಮತ್ತು ಜನರ ವಿಭಿನ್ನ ಆಲೋಚನಾ ವಿಧಾನಗಳನ್ನು ಅರ್ಥಮಾಡಿಕೊಳ್ಳುವುದು ಆತನ ಮುಖ್ಯ ಗುರಿಯಾಗಿತ್ತು. ಈ ಅನುಭವವನ್ನು ಆಶಿಶ್ ಜೈನ್ ಅವರು ಲಿಂಕ್ಡ್‌ಇನ್ (LinkedIn) ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪ್ರಯಾಣದಲ್ಲಿ ನನ್ನನ್ನು ಆಕರ್ಷಿಸಿದ್ದು ಆ ಐಷಾರಾಮಿ ಬೈಕ್ ಅಲ್ಲ, ಬದಲಾಗಿ ಹೆಲ್ಮೆಟ್ ಹಿಂದಿದ್ದ ಆ ಯುವಕನ ಅದ್ಭುತ ಆಲೋಚನೆ ಮತ್ತು ಕಲಿಯುವ ಹಂಬಲ. ಜೀವನದಲ್ಲಿ ದೊಡ್ಡ ಕನಸು ಕಾಣಲು ಹಣಕ್ಕಿಂತ ಹೆಚ್ಚಾಗಿ ಧೈರ್ಯ ಮತ್ತು ಆಸಕ್ತಿ ಇರಬೇಕು ಎಂಬುದಕ್ಕೆ ಈತನೇ ಸಾಕ್ಷಿ ಎಂದು ಆಶಿಶ್ ಬರೆದುಕೊಂಡಿದ್ದಾರೆ.
ಪ್ರಸ್ತುತ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಯುವಕನ ಪಾಸಿಟಿವ್ ಆಟಿಟ್ಯೂಡ್ ಮತ್ತು ಜೀವನವನ್ನು ನೋಡುವ ದೃಷ್ಟಿಕೋನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.