Success Story: ಐಐಟಿ ಇಲ್ಲ, ಕ್ಯಾಂಪಸ್ ಪ್ಲೇಸ್‌ಮೆಂಟ್ ಇಲ್ಲ! ಆದರೂ ಫ್ರೆಶರ್ ಆಗಿ ಬರೋಬ್ಬರಿ ₹38 ಲಕ್ಷದ ಪ್ಯಾಕೇಜ್ ಪಡೆದ ಪ್ರತಿಭೆ!

Published : Aug 08, 2026, 07:15 PM IST
Success Story

ಸಾರಾಂಶ

ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯ ಪದವಿ ಅಥವಾ ಕ್ಯಾಂಪಸ್ ನೇಮಕಾತಿ ಇಲ್ಲದೆ, ಯುವತಿಯೊಬ್ಬಳು ಫ್ರೆಶರ್ ಆಗಿ ₹38 ಲಕ್ಷ ವಾರ್ಷಿಕ ವೇತನದ ಉದ್ಯೋಗ ಪಡೆದಿದ್ದಾಳೆ. ಇಂಟರ್ನ್‌ಶಿಪ್‌ಗಳು ಮತ್ತು ಸ್ವಂತ ಪರಿಶ್ರಮದಿಂದ ಯಶಸ್ಸು ಸಾಧಿಸಿದ ಆಕೆಯ ಕಥೆಯು, ಕೌಶಲ್ಯದ ಮಹತ್ವವನ್ನು ಸಾರುತ್ತಾ ಅನೇಕರಿಗೆ ಸ್ಫೂರ್ತಿ ನೀಡಿದೆ.

ಯಾವುದೇ ಉನ್ನತ ದರ್ಜೆಯ ಸಂಸ್ಥೆಯಲ್ಲಿ ಪದವಿ ಪಡೆಯದಿದ್ದರೂ ಹಾಗೂ ಕ್ಯಾಂಪಸ್ ನೇಮಕಾತಿಯ ಬೆಂಬಲವಿಲ್ಲದಿದ್ದರೂ, ಕೇವಲ ಸ್ವಂತ ಪರಿಶ್ರಮ ಮತ್ತು ಕೌಶಲ್ಯದ ಆಧಾರದ ಮೇಲೆ ಪ್ರಸ್ತುತ ದಿನಗಳಲ್ಲಿ ಯಶಸ್ಸು ಸಾಧಿಸುವುದು ಸಾಧ್ಯ ಎಂಬುದನ್ನು ಯುವತಿಯೊಬ್ಬಳು ನಿರೂಪಿಸಿ ತೋರಿಸಿದ್ದಾಳೆ. ಯಾವುದೇ ಫ್ಯಾನ್ಸಿ ಕಾಲೇಜು ಟ್ಯಾಗ್ ಇಲ್ಲದೆ, ಕೇವಲ ಇಂಟರ್ನ್‌ಶಿಪ್‌ಗಳು ಮತ್ತು ನಿರಂತರ ಕಲಿಕೆಯ ಮೂಲಕ ಈ ಯುವತಿಯು ಫ್ರೆಶರ್ ಆಗಿ ಬರೋಬ್ಬರಿ ₹38 ಲಕ್ಷ (LPA) ವಾರ್ಷಿಕ ವೇತನದ ಉದ್ಯೋಗ ಗಿಟ್ಟಿಸಿಕೊಂಡಿದ್ದು, ಆಕೆಯ ವೃತ್ತಿಜೀವನದ ಈ ಸಾಹಸಗಾಥೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಭಾರೀ ಸ್ಫೂರ್ತಿ ನೀಡುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಗೆಳತಿ!

ಸಾಮಾಜಿಕ ಮಾಧ್ಯಮ ವೇದಿಕೆಯಾದ 'X' ನಲ್ಲಿ (ಟ್ವಿಟರ್) ನಿಶಾ ಆನಂದಾನಿ ಎಂಬುವವರು ತಮ್ಮ ರೂಮ್‌ಮೇಟ್‌ ಸಾಧಿಸಿದ ಈ ಹೆಮ್ಮೆಯ ವಿಷಯವನ್ನು ಹಂಚಿಕೊಂಡಿದ್ದಾರೆ. ಕಾಲೇಜು ಹೆಸರಿಗಿಂತಲೂ ವ್ಯಕ್ತಿಯಲ್ಲಿರುವ ಕೌಶಲ್ಯ ಹಾಗೂ ಸತತ ಪ್ರಯತ್ನಗಳು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಒತ್ತಿಹೇಳುತ್ತದೆ. ಆನಂದಾನಿ ತಮ್ಮ ಪೋಸ್ಟ್‌ನಲ್ಲಿ, "ನನ್ನ ರೂಮ್‌ಮೇಟ್‌ಗೆ ಫ್ರೆಶರ್ ಆಗಿ ಬರೋಬ್ಬರಿ ₹38 LPA ಪ್ಯಾಕೇಜ್ ದೊರೆತಿದೆ. ಆಕೆಯು ಯಾವುದೇ ಐಐಟಿ (IIT) ಅಥವಾ ದೇಶದ ಗಣ್ಯ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದವಳಲ್ಲ. ಅಲ್ಲದೆ, ಆಕೆಗೆ ಕಾಲೇಜಿನಲ್ಲಿ ಯಾವುದೇ ರೀತಿಯ ಕ್ಯಾಂಪಸ್ ಪ್ಲೇಸ್‌ಮೆಂಟ್ ಅವಕಾಶಗಳು ಸಹ ಸಿಗಲಿಲ್ಲ. ಆದರೆ, ಆಕೆಯು ದೃತಿಗೆಡದೆ ತನ್ನ ಸ್ವಂತ ಶ್ರಮದಿಂದಲೇ ಈ ಎತ್ತರಕ್ಕೆ ಬೆಳೆದಿದ್ದಾಳೆ" ಎಂದು ಬರೆದುಕೊಂಡಿದ್ದಾರೆ.

ಹೈದರಾಬಾದನಲ್ಲಿ ಇಂಟರನ್‌ಶಿಪ್!

ಕ್ಯಾಂಪಸ್ ಪ್ಲೇಸ್‌ಮೆಂಟ್ ಸಿಗದಿದ್ದಾಗ ನಿರಾಶರಾಗುವ ಬದಲು, ಆ ಯುವತಿಯು ಪ್ರಾಯೋಗಿಕ ಅನುಭವವನ್ನು ಗಳಿಸಲು ನಿರ್ಧರಿಸಿದಳು. ಆಕೆಯ ಪ್ರೊಫೈಲ್ ನಿರ್ಮಾಣದ ಪ್ರಯಾಣವು ಇಂಟರ್ನ್‌ಶಿಪ್‌ಗಳ ಮೂಲಕವೇ ಆರಂಭವಾಯಿತು. ಮೊದಲು ಹೈದರಾಬಾದ್‌ನಲ್ಲಿ ಇಂಟರ್ನ್‌ಶಿಪ್ ಪೂರ್ಣಗೊಳಿಸಿದ ಆಕೆ, ನಂತರ ತನ್ನ ಕೌಶಲ್ಯಗಳನ್ನು ಮತ್ತಷ್ಟು ಚುರುಕುಗೊಳಿಸಲು ಬೆಂಗಳೂರಿನಲ್ಲಿ ಇನ್ನೊಂದು ಇಂಟರ್ನ್‌ಶಿಪ್‌ಗೆ ಸೇರಿಕೊಂಡಳು. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವಾಗ ಆಕೆಯು ತೋರಿದ ಅತ್ಯುತ್ತಮ ಕಾರ್ಯಕ್ಷಮತೆ, ಸಮರ್ಪಣೆ ಮತ್ತು ನಿಷ್ಠೆಯನ್ನು ಗಮನಿಸಿದ ಸಂಸ್ಥೆಯು, ಆಕೆಗೆ ಅಂತಿಮವಾಗಿ ₹38 ಲಕ್ಷ ಮೌಲ್ಯದ 'ಪ್ರಿ-ಪ್ಲೇಸ್‌ಮೆಂಟ್ ಆಫರ್' (PPO) ನೀಡಲು ಮುಂದಾಯಿತು.

ಕಷ್ಟದ ಆ ದಿನಗಳು!

ತನ್ನ ರೂಮ್‌ಮೇಟ್‌ ಹೊಂದಿದ್ದ ಕೆಲಸದ ಶೈಲಿ ಮತ್ತು ದೃಢ ಮನಸ್ಥಿತಿಯ ಬಗ್ಗೆ ವಿವರಿಸಿದ ಆನಂದಾನಿ, "ಆಕೆಯು ತನ್ನ ವೃತ್ತಿಬದುಕಿನ ಪ್ರಯಾಣವನ್ನು ಅಥವಾ ಬೆಳವಣಿಗೆಯನ್ನು ಎಂದಿಗೂ ಇತರರೊಂದಿಗೆ ಹೋಲಿಸಿಕೊಳ್ಳುತ್ತಿರಲಿಲ್ಲ. ಪ್ರತಿದಿನವೂ ನಿಯಮಿತವಾಗಿ ಕಷ್ಟಪಟ್ಟು ಕೆಲಸ ಮಾಡುವುದನ್ನು ಆಕೆ ಎಂದಿಗೂ ನಿಲ್ಲಿಸಲಿಲ್ಲ. ಇಲ್ಲಿ ಯಾವುದೇ ಶಾರ್ಟ್‌ಕಟ್‌ಗಳಿರಲಿಲ್ಲ, ಯಾವುದೇ ಫ್ಯಾನ್ಸಿ ಕಾಲೇಜಿನ ಹೆಸರಿರಲಿಲ್ಲ. ಅಲ್ಲಿ ಇದ್ದದ್ದು ಕೇವಲ ನಿರಂತರತೆ, ಕೌಶಲ್ಯ ಮತ್ತು ಅಪಾರವಾದ ತಾಳ್ಮೆ ಮಾತ್ರ" ಎಂದು ಶ್ಲಾಘಿಸಿದ್ದಾರೆ.

ಸೊಶಿಯಲ್‌ ಮಿಡಿಯಾದಲ್ಲಿ ವೈರಲ್!

ಸಾಮಾನ್ಯವಾಗಿ ನಗರಗಳ ಕಾಲೇಜುಗಳಲ್ಲಿ ಅಥವಾ ಸಣ್ಣ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಲ್ಲಿ, 'ದೊಡ್ಡ ಕಾಲೇಜಿನ ಟ್ಯಾಗ್ ಇಲ್ಲದಿರುವುದರಿಂದ ನಮಗೆ ಉತ್ತಮ ವೃತ್ತಿಜೀವನ ಸಿಗುವುದಿಲ್ಲವೇನೋ' ಎಂಬ ಆತಂಕ ಹಾಗೂ ಕೀಳರಿಮೆ ಕಾಡುವುದು ಸಹಜ. ಆದರೆ, ಈ ಯುವತಿಯ ಯಶಸ್ಸಿನ ಕಥೆಯು ಇಂತಹ ಸಾವಿರಾರು ಯುವ ಜನತೆಯಲ್ಲಿದ್ದ ಗೊಂದಲ ಮತ್ತು ಆತಂಕಗಳನ್ನು ದೂರ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಆಕೆಯ ದೃಢನಿಶ್ಚಯ ಮತ್ತು ಪರಿಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಪದವಿ ಪಡೆದ ಕಾಲೇಜಿನ ಹೆಸರು ಯಶಸ್ಸನ್ನು ನಿರ್ಧರಿಸುವುದಿಲ್ಲ, ಬದಲಿಗೆ ನಿರಂತರ ಕಲಿಕೆ, ಪ್ರಾಯೋಗಿಕ ಅನುಭವ ಹಾಗೂ ಸ್ವಂತವಾಗಿ ಬೆಳೆಯುವ ಛಲವಿದ್ದರೆ ಉದ್ಯೋಗ ಮಾರುಕಟ್ಟೆಯಲ್ಲಿ ಉನ್ನತ ಸ್ಥಾನಕ್ಕೇರಬಹುದು ಎಂಬುದಕ್ಕೆ ಈ ಯುವತಿಯ ಕಥೆಯೇ ಸಾಕ್ಷಿಯಾಗಿದೆ.

PREV
Read more Articles on
click me!

Recommended Stories

ದೆವ್ವ, ಆತ್ಮ, ನಿಗೂಢ ಶಬ್ದಗಳು.. ಹೈದರಾಬಾದ್‌ನ ಈ 7 ಜಾಗಗಳ ಕಥೆ ಕೇಳಿದ್ರೆ ಬೆಚ್ಚಿಬೀಳ್ತೀರಿ!
Toxic Trailer Launch: ಟಾಕ್ಸಿಕ್ ಟ್ರೇಲರ್‌ ಲಾಂಚ್‌- ಬೆಂಗಳೂರಿಗೆ ಬಂದಿಳಿದ 'ಲೇಡಿ ಸೂಪರ್ ಸ್ಟಾರ್' ನಯನತಾರಾ