Viral Video: ಏನೋ ಮಾಡಲು ಹೋಗಿ ಇನ್ನೇನೋ ಆಗೋಯ್ತು Pre-Wedding Photoshoot

Published : Sep 20, 2025, 02:16 PM IST
pre wedding photoshoot

ಸಾರಾಂಶ

Wedding Photography: ಹುಡುಗ ಹುಡುಗಿಯನ್ನು ಎತ್ತಿಕೊಂಡು ಇನ್ನೇನು ನಡೆಯಬೇಕು ಅನ್ನೋವಷ್ಟರಲ್ಲಿ ಅಯ್ಯಯ್ಯೋ...ಎನ್ನುವಂತಹ ಘಟನೆಯೊಂದು ನಡೆದಿದೆ. ಸದ್ಯ ಇದು ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಹಾಗಾದ್ರೆ ವಿಡಿಯೋದಲ್ಲೇನಿದೆ ಅಂತೀರಾ?. 

ಇತ್ತೀಚಿನ ವರ್ಷಗಳಲ್ಲಿ ಮದುವೆಗೆ ಮುನ್ನ ಪ್ರಿ-ವೆಡ್ಡಿಂಗ್ ಫೋಟೋಶೂಟ್ (Pre-wedding shoots)ಗಳ ಟ್ರೆಂಡ್ ಹೆಚ್ಚಾಗಿದೆ. ಆಗಾಗ್ಗೆ ಜೋಡಿಗಳು ತಮ್ಮ ಪ್ರಿ ವೆಡ್ಡಿಂಗ್ ಫೋಟೋಶೂಟ್‌ಗಾಗಿ, ಸ್ಥಳದಿಂದ ಹಿಡಿದು ಡ್ರೆಸ್‌ ಮತ್ತು ಪೋಸ್‌ಗಾಗಿ ತಿಂಗಳುಗಟ್ಟಲೆ ತಯಾರಿ ನಡೆಸುತ್ತಾರೆ. ಇಷ್ಟೆಲ್ಲಾ ಮಾಡಿದ ಮೇಲೆ ಒಂದು ಸಣ್ಣ ತಪ್ಪಿನಿಂದಾಗಿ ಇಡೀ ಪ್ಲಾನೇ ಹಾಳಾಗ್ಬೋದು. ಸದ್ಯ ಈ ವಿಚಾರ ಈಗ್ಯಾಕೆ ಅಂತೀರಾ?. ಜೋಡಿಯೊಂದು

ಬೀಚ್‌ನಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡುತ್ತಿದೆ. ಫೋಟೋಶೂಟ್ ಮಾಡುವಾಗ ಏನಾಯ್ತು ಅಂದ್ರೆ ಹುಡುಗ ಹುಡುಗಿಯನ್ನು ಎತ್ತಿಕೊಂಡು ಇನ್ನೇನು ನಡೆಯಬೇಕು ಅನ್ನೋವಷ್ಟರಲ್ಲಿ ಅಯ್ಯಯ್ಯೋ...ಎನ್ನುವಂತಹ ಘಟನೆಯೊಂದು ನಡೆದಿದೆ. ಸದ್ಯ ಇದು ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಹಾಗಾದ್ರೆ ವಿಡಿಯೋದಲ್ಲೇನಿದೆ ಅಂತೀರಾ?, ಮುಂದೆ ಓದಿ...

ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಜೋಡಿಯೊಂದು ಬೀಚ್‌ನಲ್ಲಿ ಪ್ರಿ-ವೆಡ್ಡಿಂಗ್ ಫೋಟೋಶೂಟ್ ನಡೆಸುತ್ತಿರುವುದು ಕಂಡುಬರುತ್ತದೆ. ಇಬ್ಬರೂ ಈ ಕ್ಷಣ ಸದಾ ನೆನಪಿನಲ್ಲಿರುವಂತೆ ಫುಲ್ ಜೂಮ್‌ನಲ್ಲಿ ಈ ಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಆ ಹುಡುಗ ತಾನು ಮದುವೆಯಾಗಬೇಕೆಂದುಕೊಂಡಿರುವ ಹುಡುಗಿಯ ಹಿಂದೆ ಬೀಚ್‌ನಲ್ಲಿ ಓಡುತ್ತಿರುವುದು ಕಂಡುಬರುತ್ತದೆ. ನಂತರ ಅವನು ಅವಳನ್ನು ಎತ್ತಿಕೊಳ್ಳಲು ಪ್ರಯತ್ನಿಸುತ್ತಾನೆ, ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಅವನ ಕಾಲು ಕಡಲತೀರದ ಒದ್ದೆಯಾದ ಮಣ್ಣಿನ ಮೇಲೆ ಜಾರುತ್ತದೆ. ಇಬ್ಬರೂ ಕೆಳಗೆ ಬೀಳುತ್ತಾರೆ.

ಈ ವೈರಲ್ ವಿಡಿಯೋವನ್ನು @JeetN25 ಖಾತೆಯಿಂದ X ನಲ್ಲಿ ಶೇರ್ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. "ಪ್ರಿ-ವೆಡ್ಡಿಂಗ್ ಫೋಟೋಶೂಟ್ WWE ಆಗಿ ಟರ್ನ್ ಆಯ್ತು" ಎಂದು ಶೀರ್ಷಿಕೆ ಸಹ ಕೊಡಲಾಗಿದೆ. ಸದ್ಯ ವಿಡಿಯೋ ಲಕ್ಷಾಂತರ ವೀಕ್ಷಣೆಯನ್ನೂ ಪಡೆದುಕೊಂಡಿದ್ದು, ಹಲವಾರು ಇಂಟರ್ನೆಟ್ ಬಳಕೆದಾರರು ಕಾಮೆಂಟ್ ಮಾಡುತ್ತಾ ಆನಂದಿಸುತ್ತಿರುವುದು ಕಂಡುಬಂದಿದೆ.

ಇದೇ ರೀತಿ ವೈರಲ್ ಆಗಿತ್ತು ಮದುವೆಯ ವಿಡಿಯೋ

ಇದೇ ರೀತಿಯ ತಮಾಷೆಯ ವಿಡಿಯೋವೊಂದು ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಅದ್ರೆ ಅದು ಪ್ರಿ-ವೆಡ್ಡಿಂಗ್ ಫೋಟೋಶೂಟ್ ಅಲ್ಲ, ಮದುವೆಯ ನಂತರ ನಡೆದ ಶೂಟಿಂಗ್. ಈ ವೈರಲ್ ವಿಡಿಯೋದಲ್ಲಿ ಏನಿದೆ ಎಂದು ನೋಡುವುದಾದರೆ..

ಮದುವೆ ಮಂಟಪ, ಸಭಾಂಗಣ ಅಂದ್ರೆ ನಮ್ಮೆಲ್ಲರಿಗೂ ನೆನಪಾಗುವ ದೃಶ್ಯ..ಸಂತೋಷದಿಂದ ಓಡಾಡುವ ಜನರು, ಕುಣಿದಾಡುವ ಮಕ್ಕಳು, ಮೇಕಪ್‌ನಲ್ಲೇ ಕಾಲಕಳೆಯುವ ಹೆಂಗಳೆಯರು, ಕಾಲೆಳೆಯುವ ಹುಡುಗರು...ಇದನ್ನೆಲ್ಲಾ ಹೇಳುವುದಕ್ಕಿಂತ, ಬರೆಯುವುದಕ್ಕಿಂತ ಅನುಭವಿಸಿದರೆ ಚೆನ್ನ. ವಿಶೇಷವಾಗಿ ವಧು ವರರಿಗೆ ಇಲ್ಲಿ ಪ್ರತಿ ಕ್ಷಣವೂ ವಿಶೇಷ ಮತ್ತು ಸ್ಮರಣೀಯ. ಆದರೆ ಇಲ್ಲೊಂದು ಮದುವೆಯ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಜೋಡಿಯೊಂದು ಅದ್ಧೂರಿಯಾಗಿ ವಿವಾಹವಾಗಿದೆ. ವರನು ತನ್ನ ವಧುವನ್ನು ತೋಳುಗಳಲ್ಲಿ ಎತ್ತಿಕೊಂಡು ಹೋಗುತ್ತಿದ್ದಾನೆ. ಆದರೆ ಇದಾದ ನಂತರ ಪರಿಸ್ಥಿತಿ ಹೇಗಿತ್ತೆಂದರೆ ಈಗ ಆ ವಿಡಿಯೋ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ವರನ ಜೊತೆ ಕೆಳಗೆ ಬಿದ್ದ ವಧು

ವಿಡಿಯೋದಲ್ಲಿ ತೋರಿಸಿರುವಂತೆ ವಧು ಕೆಂಪು ಬಣ್ಣದ ಡ್ರೆಸ್ ಧರಿಸಿರುವುದನ್ನು ಕಾಣಬಹುದು. ವರನು ಸಂಪೂರ್ಣ ಕಪ್ಪು ಬಣ್ಣದ ಶೇರ್ವಾನಿಯಲ್ಲಿದ್ದಾನೆ. ಈ ಸಮಯದಲ್ಲಿ ವರನು ವಧುವನ್ನು ಎತ್ತಿಕೊಂಡು ಹೋಗುತ್ತಿರುತ್ತಾನೆ. ಬಹುಶಃ ಅವನಿಗೆ ವಧುವಿನ ಭಾರದ ಲೆಹೆಂಗಾ ಜೊತೆಗೆ ಅವಳ ತೂಕವನ್ನು ಅಂದಾಜು ಮಾಡಲು ಸಾಧ್ಯವಾಗದಿರಬಹುದು. ಆರಂಭದಲ್ಲಿ ವರನು ವಧುವನ್ನು ಎತ್ತಿಕೊಂಡು ಎರಡು-ಮೂರು ಮೆಟ್ಟಿಲುಗಳನ್ನು ಹತ್ತಲು ಪ್ರಯತ್ನಿಸುತ್ತಾನೆ. ಆದರೆ ನಂತರ ಅವನ ಸ್ಥಿತಿ ...ಕೊನೆಗೆ ಅವನು ಅವಳೊಂದಿಗೆ ಕೆಳಗೆ ಬೀಳುತ್ತಾನೆ.

ಜನರಿಗೆ ಇಷ್ಟ ಆಯ್ತು ಈ ವಿಡಿಯೋ
ಈ ವಿಡಿಯೋವನ್ನು @chinmoy_sutradhar_ ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಶೇರ್ ಮಾಡಲಾಗಿದ್ದು, ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

PREV
Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್