
ಕೊಚ್ಚಿ (ಸೆ.18): ಚಿಕನ್ ಬಿರಿಯಾನಿಯಲ್ಲಿ ಚಿಕನ್ ಸಿಗದಿದ್ದಕ್ಕೆ ಟ್ರಾಫಿಕ್ ಹೋಂ ಗಾರ್ಡ್‌ಗಳ ನಡುವೆ ಹೊಡೆದಾಡಿಕೊಂಡ ಘಟನೆ ಕೊಚ್ಚಿಯ ಪಳ್ಳುರುತ್ತಿ ಟ್ರಾಫಿಕ್ ಪೊಲೀಸ್ ಸ್ಟೇಷನ್‌ನಲ್ಲಿ ನಡೆದಿದೆ.
ಸಹದ್ಯೋಗಿಯೊಬ್ಬನ ನಿವೃತ್ತಿಯಾಗಿದ್ದುಈ ಹಿನ್ನೆಲೆ ಪಾರ್ಟಿ ಮಾಡಲಾಡಲಾಗಿತ್ತು. ಈ ವೇಳೆ ಬಿರಿಯಾನಿ ಬಡಿಸಲಾಗಿತ್ತು. ಆದರೆ ಅದರಲ್ಲಿ ಚಿಕನ್ ಪೀಸ್ ಇಲ್ಲದಿರುವುದೇ ಘರ್ಷಣೆಗೆ ಕಾರಣವಾಗಿದೆ.
ಬಿರಿಯಾನಿಯಲ್ಲಿ ಚಿಕನ್ ಪೀಸ್‌ಗಳೇ ಇಲ್ಲ:
ಬಿರಿಯಾನಿಯಲ್ಲಿ ಚಿಕನ್ ಪೀ್‌ಸ್‌ಗಳ ಇಲ್ಲದ್ದಕ್ಕೆ ತಾಳ್ಮೆ ಕಳೆದುಕೊಂಡ ಟ್ರಾಫಿಕ್ ಹೋಂ ಗಾರ್ಡ್‌ಗಳಾದ ರಾಧಾಕೃಷ್ಣನ್ ಮತ್ತು ಜಾರ್ಜ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಇದು ಕೊನೆಗೆ ಹೊಡೆದಾಟಕ್ಕೆ ತಿರುಗಿದೆ.
ಇದನ್ನೂ ಓದಿ: ಪತ್ನಿಯ ಚಿತಾಭಸ್ಮ ವಿಸರ್ಜಿಸಲು ಹೋದ ಪತಿಯೂ ನೀರಿನಲ್ಲಿ ಮುಳುಗಿ ಸಾವು!
ನಿವೃತ್ತಿ ಆದ ಹಿನ್ನೆಲೆ ಊಟದ ವ್ಯವಸ್ಥೆ ಮಾಡಿದ್ದ ಸಹದ್ಯೋಗಿ ಗೆಳೆಯ. ಅವರಿಗಾಗಿಯೇ ಚಿಕನ್ ಬಿರಿಯಾನಿ ಊಟಕ್ಕೆ ಸಿದ್ಧವಾಗಿತ್ತು. ಆದರೆ ಮೊದಲು ಊಟಕ್ಕೆ ಕುಳಿತವರೇ ಚಿಕನ್ ಪೀಸ್ ತಿಂದು ತೇಗಿದ್ದಾರೆ. ಹೀಗಾಗಿ ಕೆಲವರಿಗೆ ಬಿರಿಯಾನಿಯಲ್ಲಿ ಚಿಕನ್ ಪೀಸ್‌ಗಳು ಸಿಕ್ಕಿಲ್ಲ. ಇದೇ ಕಾರಣಕ್ಕೆ ರಾಧಾಕೃಷ್ಣನ್ ಮತ್ತು ಜಾರ್ಜ್ ನಡುವೆ ವಾಗ್ವಾದ ಶುರುವಾಯಿತು. ವಾದ ತೀವ್ರಗೊಂಡು, ಕೆಲವೇ ಕ್ಷಣಗಳಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಬಡಿದಾಡಿಕೊಂಡು ಸಮಾರಂಭದ ವಾತಾವರಣ ಕೆಡಿಸಿದರು.
ಇದನ್ನೂ ಓದಿ: ಉತ್ತರ ಪ್ರದೇಶದಿಂದ ಹೆಂಡತಿ ಕರೆದುಕೊಂಡು ಬಂದು ಬೆಂಗಳೂರಲ್ಲಿ ಕೊಂದ ಗಂಡ!
ಈ ಘಟನೆಯಿಂದ ಸ್ಥಳದಲ್ಲಿದ್ದ ಇತರ ಸಿಬ್ಬಂದಿ ಊಟಕ್ಕೆ ಬಡಿದಾಡಿಕೊಂಡಿದ್ದನ್ನ ನೋಡಿ ಆಶ್ಚರ್ಯಗೊಂಡರು. ಸ್ಥಳೀಯ ಪೊಲೀಸರು ತಕ್ಷಣ ಮಧ್ಯಸ್ಥಿಕೆ ವಹಿಸಿ, ಇಬ್ಬರನ್ನೂ ಶಾಂತಗೊಳಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲವಾದರೂ, ಈ ವಿಚಿತ್ರ ಜಗಳವು ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ. ಚಿಕನ್ ಪೀಸ್ ಸಿಗದ್ದಕ್ಕೆ ಉಂಟಾದ ಈ ಗಲಾಟೆ ವಿಚಿತ್ರವೆನಿಸುತ್ತದಲ್ಲವೇ?