
ಸಾಮಾಜಿಕ ಜಾಲತಾಣದಲ್ಲಿ ಇಲಿ ಹೋದ್ರೆ ಹೋಯ್ತು ಎನ್ನುವ, ಸಣ್ಣ ಜ್ವರ ಬಂದು ಆಸ್ಪತ್ರೆ ಬಂದ್ರೂ ಸಾವಿನ ಸುದ್ದಿ ಹಬ್ಬಿಸುವ ನೆಟಿಜನ್ ಹೇಗೆಲ್ಲ ಅವಾಂತರ ಸೃಷ್ಟಿಸುತ್ತಾರೆ ಎಂಬುದಕ್ಕೆ ಇಲ್ಲೊಂದು ತಾಜಾ ಘಟನೆ ಸಾಕ್ಷಿಯಾಗಿದೆ.
ಆಹಾರ ಪ್ರಿಯನಾಗಿರುವ, ತಿನ್ನುವುದರಲ್ಲೇ ಜನಪ್ರಿಯರಾಗಿರುವ ಉಲ್ಲಾಸ್ ಕಾಮ್ತೆ(Ullas Kamthe) ಅವರ ಸಾವಿನ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ದೃಶ್ಯ ತೋರಿಸಲಾಗಿದೆ. ನಂತರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ವಿಡಿಯೋ ಆಧಾರಿಸಿ ಕೆಲವು ಮೀಡಿಯಾಗಳಲ್ಲೂ ವರದಿಯಾಗಿಬಿಟ್ಟಿದೆ. ಇತ್ತ ಅಭಿಮಾನಿಗಳು ಸಾವಿನ ಸುದ್ದಿ ತಿಳಿದು ಶಾಕ್ ಆಗಿದ್ದಾರೆ. ಉಲ್ಲಾಸ್ ಕಾಮ್ತೆಗೆ ಕಾಲ್ ಮಾಡಿದಾಗ ಅತ್ತ ಅವರೇ ಫೋನ್ ರಿಸಿವ್ ಮಾಡಿದ್ದರಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೆ ಸ್ವತಃ ವಿಡಿಯೋ ಕಾಲ್ ಮಾಡಿ, 'ನಾನು ಸತ್ತಿಲ್ಲಪ್ಪ ಬದುಕಿದ್ದೇನೆ' ಎಂದು ಸ್ಪಷ್ಟನೆ ನೀಡಬೇಕಾಯ್ತು! ಅಷ್ಟಕ್ಕೂ ಆಗಿದ್ದೇನು? ಚಿಕನ್ ಪೀಸ್ ನಿಂದ ಸಾವಿನ ವದಂತಿ ಹರಡಿದ್ದಾದ್ರೂ ಹೇಗೆ? ಅಸಲಿ ಘಟನೆ ಇಲ್ಲಿದೆ ನೋಡೀ.
ಉಲ್ಲಾಸ್ ವಿಡಿಯೋದಲ್ಲಿ ಹೇಳಿರುವಂತೆ, ಒಂದು ಹಾರರ್ ಚಿತ್ರ ನೋಡಿದ ಮೇಲೆ ಹೆದರಿಕೆಯಿಂದ ನನಗೆ ಜ್ವರ ಬಂದಂತಾಯ್ತು ಎಂದಿದ್ದಾರೆ. ನಿರ್ದೇಶಕ ರಾಜನ್ ವರ್ಮಾ ನಿರ್ದೇಶನ 'ಝಾಡ್-ಫೂಂಕ್' ಎಂಬ ಹಾರರ್ ಚಿತ್ರದ ಫಸ್ಟ್ ಶೋ ನೋಡಲು ಉಲ್ಲಾಸ್ಗೆ ಆಹ್ವಾನಿಸಿದ್ರು. ಆಗ ನಾನುಆಹಾರ ಪ್ರಿಯ, ಹಾರರ್ ಪ್ರಿಯ ಅಲ್ಲ ಎಂದು ಉಲ್ಲಾಸ್ ಹೇಳಿದ್ದಾರೆ. ಆದ್ರೂ ಚಿತ್ರತಂಡದ ಒತ್ತಾಯಕ್ಕೆ ಸಿನಿಮಾ ನೋಡಲು ಹೋಗಿದ್ದಾರೆ. ಸಿನಿಮಾದ ಒಂದು ಭಯಾನಕ ದೃಶ್ಯ ಹೇಗಿತ್ತೆಂದರೆ ಆ ದೃಶ್ಯನೋಡಿ ಉಲ್ಲಾಸ್ ಪ್ಯಾನಿಕ್ ಆಟ್ಯಾಕ್ಗೆ ಒಳಗಾಗಿದ್ದಾರೆ, ಥಿಯೇಟರ್ನಲ್ಲೇ ಮೂರ್ಚೆ ಹೋಗಿದ್ದಾರೆ. ತಕ್ಷಣ ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಲ್ಪ ಹೊತ್ತಿನಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹಿಂದಿರುಗಿದ್ದಾರೆ.
ಆದರೆ ಆಸ್ಪತ್ರೆಗೆ ಸಾಗಿಸುವ ದೃಶ್ಯವನ್ನು ಯಾವುದೋ ವ್ಯಕ್ತಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ಅದಕ್ಕೆ ಒಂದಿ ಮಸಾಲೆ ಸೇರಿಸಿ ಸೋಷಿಯಲ್ ಮೀಡಿಯಾಕ್ಕೆ ಹರಿಬಿಟ್ಟದ್ದಾನೆ. ಇಷ್ಟೇ ಸಾಕಾಯ್ತು ನೆಟಿಜನ್, ಮೆಮೆ ಪೇಜ್ಗಳಿಗೆ. ಈ ವಿಡಿಯೋವನ್ನು ಇಟ್ಟುಕೊಂಡು ವದಂತಿಗಳು ಶುರುವಾಗಿವೆ. ಕೆಲವರು 'Ullas kamthe passes away by heart attack ಎಂದೆಲ್ಲ ಪೋಸ್ಟ್ ಮಾಡುವ ಮಾಡಿದ್ದಾರೆ. ಆದರೆ ಯಾವುದೇ ವಿವರ ಹಾಕಿಲ್ಲ. ಇದು ಕಾಳ್ಗಿಚ್ಚಿನಂತೆ ಹಬ್ಬಿ, ಒಬ್ಬೊಬ್ಬರು ಒಂದೊಂದು ಸಾವಿನ ಕಾರಣ ನೀಡುತ್ತಾ ಶೇರ್ ಮಾಡಿಕೊಂಡಿದ್ದಾರೆ.
ಅಭಿಮಾನಿಗಳಿಂದ ತಿಳಿದು ಉಲ್ಲಾಸ್ ಗಾಬರಿಯಾಗಿದ್ದಾರೆ. ಬಳಿಕ ಚಿತ್ರತಂಡದೊಂದಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ಡೈರೆಕ್ಟರ್ ರಾಜನ್ ವರ್ಮಾ ಕೂಡ ಇದ್ದಾರೆ, 'ಉಲ್ಲಾಸ್ ಜೀವಂತವಾಗಿದ್ದಾರೆ, ಆರೋಗ್ಯವಾಗಿದ್ದಾರೆ,
ಉಲ್ಲಾಸ್ ಅವರಿಗೆ ಹೃದಯಾಘಾತವಾಗಿಲ್ಲ, ಅವರಿಗೆ ಹೃದಯಾಘಾತವಾಗಿಲ್ಲ. ಬದಲಿಗೆ ಚಿತ್ರದಲ್ಲಿನ ಒಂದು ಭಯಾನಕ ದೃಶ್ಯದಿಂದ ಭಯದಿಂದ ಸ್ವಲ್ಪ ಹೆದರಿದ್ದರು ಅಷ್ಟೇ ಎಂದು ಸ್ಪಷ್ಟನೆ ನೀಡಿದ ಬಳಿಕ ವದಂತಿಗೆ ತೆರೆ ಎಳೆದಿದೆ.
ಸ್ವತಃ ಚಿತ್ರತಂಡದೊಂದಿಗೆ ಉಲ್ಲಾಸ್ ಕಾಮ್ತೆ ವಿಡಿಯೋದಲ್ಲಿ ಕಾಣಿಸಿಕೊಂಡ ಬಳಿಕವೇ ಜನರು ನಿಟ್ಟಸಿರುವ ಬಿಟ್ಟಿದ್ದಾರೆ. ಈ ವೇಳೆ ಕೆಲವರು, 'ಚಿಕನ್ ಲೆಗ್ ಪೀಸ್ ಚೆನ್ನಾಗಿದೆ' ಎಂದು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು, ನೀವು ಇಷ್ಟು ಬೇಗ ಸಾಯಬಾರದು ಚಿಕನ್ ಲೆಗ್ ಪೀಸ್ ತಿನ್ನೋದು ತುಂಬಾ ಇದೆ' ಎಂದು ಕಾಮೆಂಟ್ ಮಾಡಿದ್ದಾರೆ, ಮತ್ತೊಬ್ಬರು, ಯಾರದೋ ಸಾವಿನ ಬಗ್ಗೆ ಶೇರ್ ಮಾಡುವ ಮುನ್ನ ಒಮ್ಮೆ ಅದನ್ನ ಕ್ರಾಸ್ ಚೆಕ್ ಮಾಡಬೇಕು, ಮಬ್ಬುಗಳಂತೆ ಹಿಂದೆ ಮುಂದೆ ನೋಡದೆ ಶೇರ್ ಮಾಡುವುದರಿಂದ ಇಂಥ ಅವಾಂತರ ಸೃಷ್ಟಿಯಾಗುತ್ತದೆ ಎಂದು ಬೆಂಡೆತ್ತಿದ್ದಾರೆ.