ಸಾರ್..ತಿಂಗಳಿಗೆ 75 ಸಾವಿರ ದುಡಿಯುತ್ತೇನೆ, ಅದ್ರೂ ಕೊನೆಗೆ ಸಾಲ ಎಂದ ಆಟೋ ಚಾಲಕನ ಮಾತು ವೈರಲ್

Published : Sep 23, 2026, 10:15 AM IST
Auto Driver

ಸಾರಾಂಶ

ಸಾರ್..ತಿಂಗಳಿಗೆ 75 ಸಾವಿರ ರೂಪಾಯಿ ದುಡಿಯುತ್ತೇನೆ. ಮಗಳ ವಾರ್ಷಿಕ ಶಾಲಾ ಫೀಸ್ 1.4 ಲಕ್ಷ ರೂಪಾಯಿ, ಬಾಡಿಗೆ ಎಲ್ಲಾ ಕೊಟ್ಟರೆ ತಿಂಗಳ ಕೊನೆಯಲ್ಲಿ ಸಾಲ ಎಂದು ಆಟೋ ಚಾಲಕನ ಮಾತುಗಳು ಇದೀಗ ಭಾರಿ ಚರ್ಚೆಯಾಗುತ್ತಿದೆ.

ಆಟೋ ಚಾಲಕರು ಪ್ರತಿ ದಿನ ಶ್ರಮವಹಿಸಿ ದುಡಿಯುತ್ತಾರೆ. ದಿನಕ್ಕೆ ಕನಿಷ್ಟ 1000 ರೂಪಾಯಿ ಮಾಡುತ್ತಾರೆ. ಹೆಚ್ಚುವರಿ ಸಮಯ ದುಡಿದು ಅಗತ್ಯತೆ, ಬೇಡಿಕೆ ಈಡೇರಿಸುತ್ತಾರೆ. ಹೀಗೆ ಆಟೋ ಚಾಲಕನ ಮಾತುಗಳು ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಪ್ರಯಾಣಿಕನ ಜೊತೆಗಿನ ಮಾತುಕತೆಯಲ್ಲಿ ಆಟೋ ಚಾಲಕ, ತಾನು ತಿಂಗಳಿಗೆ 75 ಸಾವಿರ ರೂಪಾಯಿ ದುಡಿಯುತ್ತಿರುವುದಾಗಿ ಹೇಳಿದ್ದಾನೆ. ಇಷ್ಟು ದುಡಿದರು ತಿಂಗಳ ಕೊನೆಯಲ್ಲಿ ಸಾಲ ಮಾಡಬೇಕಾದ ಪರಿಸ್ಥಿತಿ ಎಂದು ಆಟೋ ಚಾಲಕ ಹೇಳಿದ್ದಾನೆ. ಈ ಮಾತುಗಳೇ ವೈರಲ್ ಆಗಿದೆ.

ಉಳಿತಾಯ ಏನೂ ಇಲ್ಲ

ಹಲವರು ದಿನಕ್ಕೆ ಎಷ್ಟು ದುಡಿಯುತ್ತೀರಿ, ತಿಂಗಳಿಗೆ ಎಷ್ಟು ಎಂದು ಕೇಳುತ್ತಾರೆ. ಉತ್ತರ ಹೇಳಿದಾಗ 75 ಸಾವಿರ ದುಡಿಯುತ್ತೀರಾ ಎಂದು ಅಚ್ಚರಿಗೊಳ್ಳುತ್ತಾರೆ ಎಂದು ಆಟೋ ಚಾಲಕನ ತನ್ನ ನೋವುಗಳನ್ನು ತೋಡಿಕೊಂಡಿದ್ದಾರೆ. ಮನೆ ಖರ್ಚು ವೆಚ್ಚ, ಆಟೋ ನಿರ್ವಹಣೆ, ಪೆಟ್ರೋಲ್, ಮಗಳ ಶಾಲಾ ಖರ್ಚು ವೆಚ್ಚ, ಇತರ ಸಾಲದ ಕಂತು ಸೇರಿದಂತೆ ಹಲವು ಕಾರಣಗಳಿಂದ ತಿಗಂಲ 75 ಸಾವಿರ ದುಡಿಮೆ ಸಾಕಾಗುತ್ತಿಲ್ಲ ಎಂದು ಆಟೋ ಚಾಲಕ ವಿವರಿಸಿದ್ದಾನೆ.

ನಾನು ಓದಿಲ್ಲ, ಆದರೆ ಮಗಳು ಉತ್ತಮ ಶಾಲೆಯಲ್ಲಿ ಓದುತ್ತಿದ್ದಾಳೆ

ನಾನು ಓದಿಲ್ಲ, ಹೆಚ್ಚಿನ ವಿದ್ಯಾಭ್ಯಾಸ ನನಗಿಲ್ಲ. ಆದರೆ ನನ್ನ ಮಗಳನ್ನು ಉತ್ತಮ ಶಾಲೆಯಲ್ಲಿ ಹಾಕಿದ್ದಾನೆ. ವರ್ಷಕ್ಕೆ 1.4 ಲಕ್ಷ ರೂಪಾಯಿ ಶುಲ್ಕ. ಇನ್ನು ಇತರ ಖರ್ಚು ವೆಚ್ಚಗಳು ಬೇರೆ. ಆದರೆ ಮಗಳ ವಿಚಾರದಲ್ಲಿ ನಾನು ಖುಷಿಯಾಗಿದ್ದೇನೆ. ಆಕೆಯ ಉತ್ತಮವಾಗಿ ಓದಬೇಕು. ಆಕೆಯ ಶಿಕ್ಷಣಕ್ಕಾಗಿ ನಾನು ಹೆಚ್ಚು ಖರ್ಚು ಮಾಡುತ್ತೇನೆ. ಅದರಿಂದ ನನಗೆ ಅತೀವ ಸಂತೋಷವಿದೆ ಎಂದು ಆಟೋ ಚಾಲಕ ಹೇಳಿದ್ದಾನೆ.

ದಿನಕ್ಕೆ 2500 ರೂಪಾಯಿ

ಪ್ರತಿ ದಿನದ ಸರಾಸರಿ ಆದಾಯ 2500 ರೂಪಾಯಿ ಎಂದು ಆಟೋ ಚಾಲಕ ಹೇಳಿದ್ದಾನೆ. ಕನಿಷ್ಠ 2500 ರೂಪಾಯಿ ಮಾಡುತ್ತೇನೆ. ವಾರದ ಎಲ್ಲಾ ದಿನ ಕೆಲಸ ಮಾಡುತ್ತೇನೆ. ಹೀಗಾಗಿ ತಿಂಗಳಿಗೆ 75,000 ರೂಪಾಯಿ ವರೆಗೆ ದುಡಿಯುತ್ತೇನೆ. ಪ್ರತಿ ದಿನ ಆಟೋಗೆ ಪೆಟ್ರೋಲ್ ಖರ್ಚು 400 ರಿಂದ 500 ರೂಪಾಯಿ. ಆಟೋ ಕಂತು ದಿನಕ್ಕೆ 400 ರೂಪಾಯಿ, ಪ್ರತಿ ದಿನದ ನನ್ನ ಊಟ ತಿಂಡಿ, ಕಾಫಿ ಖರ್ಚು 200 ರೂಪಾಯಿ. ಮನೆಯ ಸಾಮಾನುಗಳ ಖರ್ಚು ಸರಿಸುಮಾರು 300 ರೂಪಾಯಿ, ಆಟೋ ಪಂಚರ್ ಸೇರಿದಂತೆ ದಿನದ ಇತರ ಖರ್ಚು 200 ರೂಪಾಯಿ. ಪ್ರತಿ ದಿನ ಖರ್ಚು ಒಂದೆಡೆಯಾದರೆ ತಿಂಗಳಿಗೆ 12 ಸಾವಿರ ರೂಪಾಯಿ ಮನೆ ಬಾಡಿಗೆ, ಇನ್ನು ವಾರ್ಷಿಕ 1.4 ಲಕ್ಷ ರೂಪಾಯಿ ಮಗಳ ಸ್ಕೂಲ್ ಫೀಸ್ ಎಂದು ಆಟೋ ಚಾಲಕನ ಪ್ರತಿ ದಿನದ ಖರ್ಚು ವೆಚ್ಚಗಳ ಕುರಿತು ಮಾಹಿತಿ ನೀಡಿದ್ದಾನೆ.

ಖರ್ಚು ವೆಚ್ಚಗಳಿಂದ ದಿನದ ದುಡಿಮೆ ಅಲ್ಲಿಗೆ ಸರಿಯಾಯಿತು. ಉಳಿತಾಯವಿಲ್ಲ, ದಿಢೀರ್ ಬರುವ ಆರೋಗ್ಯದ ಖರ್ಚುಗಳು, ಸಮಾರಂಭ, ಕಾರ್ಯಕ್ರಮಗಳು ಸೇರಿದಂತೆ ಹಲವು ಖರ್ಚುಗಳಿಗೆ ಸಾಲ ಮಾಡಬೇಕಾಗುತ್ತದೆ. ಬಳಿಕ ಒಂದೆಡೆ ತಿಂಗಳು ಸಾಲ ತೀರಿಸುವ ಚಿಂತೆ, ಮುಗಿಯುತ್ತಿದ್ದಂತೆ ಮತ್ತೊಂದು ಸವಾಲು ಎಂದು ಆಟೋ ಚಾಲಕ ದಿನಚರಿ ಹೇಳಿದ್ದಾನೆ.

ಚಾಲಕನ ಮಾತುಗಳು ಇದೀಗ ಭಾರಿ ಚರ್ಚೆಯಾಗುತ್ತಿದೆ. ಆಟೋ ಚಾಲಕ ಖರ್ಚು ವೆಚ್ಚ ಹೆಚ್ಚೇನು ಇಲ್ಲ. ಆದರೆ ದೇಶದಲ್ಲಿ ಎಲ್ಲವು ದುಬಾರಿಯಾಗಿದೆ. ಹೀಗಾಗಿ ಎಷ್ಟು ದುಡಿದರು ಸಾಲುತ್ತಿಲ್ಲ ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ಪ್ರೇಯಸಿ ಕುಟುಂಬದವರ ಮನವೊಲಿಸಲು ಮೊಣಕಾಲ ಮೇಲೆ 1,100 ಹೆಜ್ಜೆ ಹಾಕಿದ ಯುವಕ! ಮುಂದೇನಾಯ್ತು
Bigg Boss: ಹೊಸ ದಾಖಲೆ.. ಕೇವಲ 5 ವಾರಗಳಲ್ಲಿ 550 ಮಿಲಿಯನ್ ವಾಚ್ ಅವರ್ಸ್ ದಾಟಿದ ಸೌತ್ ಬಿಗ್ ಬಾಸ್!