ಕೋಟಿ ಕೋಟಿ ಬ್ಯುಸಿನೆಸ್ ಮಾಡ್ತಿದ್ದವ ಈಗ ರ್ಯಾಪಿಡೋ ಡ್ರೈವರ್, ಈತನ ಹೋರಾಟಕ್ಕೊಂದು ಸಲಾಂ

Published : Dec 25, 2025, 03:17 PM IST
Rapido Driver

ಸಾರಾಂಶ

Social Media Viral News : ಬದುಕು ನಾವಂದುಕೊಂಡಷ್ಟು ಸುಲಭವಿಲ್ಲ. ಆದ್ರೆ ಎಲ್ಲೂ ಸೋಲದೆ ಹೋರಾಟದ ಜೀವನ ನಡೆಸೋದು ಎಲ್ಲರಿಂದ ಸಾಧ್ಯವಿಲ್ಲ. ಈ ರ್ಯಾಪಿಡ್ ಚಾಲಕನ ಕಥೆ ನೋವು ನೀಡಿದ್ರೂ ಬದುಕಲು ಪ್ರೋತ್ಸಾಹ ನೀಡುತ್ತದೆ.

ನಾವಂದುಕೊಂಡಂತೆ ಬದುಕು ಸಾಗಿದ್ರೆ ಅದು ಜೀವನ ಅಲ್ವೇಅಲ್ಲ. ಜೀವನದಲ್ಲಿ ಒಂದಿಷ್ಟು ಏಳು – ಬೀಳು, ನೋವು ನಲಿವು ಸಾಮಾನ್ಯ. ಎಲ್ಲವೂ ಸರಳವಾಗಿದೆ, ಸರಾಗವಾಗಿ ನಡೆಯುತ್ತಿದೆ ಎಂದಾಗ್ಲೇ ದೊಡ್ಡ ಕಲ್ಲೊಂದು ತಲೆ ಮೇಲೆ ಬಿದ್ದಿರುತ್ತದೆ. ಅದನ್ನು ಎತ್ತಿ ಕೆಳಗಿಡುವ ಪ್ರಯತ್ನದಲ್ಲಿ ಸಫಲರಾಗೋರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಉಳಿದವರು ಸೋತು ಸುಣ್ಣವಾಗ್ತಾರೆ. ಕೊರೊನಾ ಮಹಾಮಾರಿ ಕೂಡ ಅನೇಕರನ್ನು ಬಲಿ ಪಡೆದಿದೆ. ಅನೇಕರ ಬದುಕು ನಾಶವಾಗಿದೆ. ನಷ್ಟದಿಂದ ಏಳಲಾಗದೆ ಕೆಲವರು ಈಗ್ಲೂ ಹೋರಾಟ ನಡೆಸುತ್ತಿದ್ದಾರೆ. ರ್ಯಾಪಿಡ್ (Rapid) ಚಾಲಕನ ಕಥೆ ಕೂಡ ಕರುಳು ಹಿಂಡುವಂತಿದೆ.

ರ್ಯಾಪಿಡ್‌ ಚಾಲಕನ ನೋವಿನ ಕಥೆ

ರ್ಯಾಪಿಡ್ ಬೈಕ್ ಬುಕ್ ಮಾಡುವ ಎಕ್ಸ್ ಖಾತೆದಾರ ಚಿರಾಗ್ ಬೈಕ್ ಏರುತ್ತಿದ್ದಂತೆ ಮಾತುಕತೆ ಶುರುವಾಗುತ್ತೆ. ಬೈಕ್ ಚಾಲಕ, ಚಿರಾಗ್ ಬಳಿ ಅವರ ಓದು, ಕಾಲೇಜಿನ ಬಗ್ಗೆ ಮಾಹಿತಿ ಕೇಳ್ತಾರೆ. ಸಾಮಾನ್ಯವಾಗಿದ್ದ ಮಾತುಕಥೆ ನಂತ್ರ ಮನಕಲಕುವ ಕಥೆಯತ್ತ ಕೊಂಡೊಯ್ಯುತ್ತದೆ. ಚಿರಾಗ್ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿದ ರ್ಯಾಪಿಡ್ ಚಾಲಕ ತಮ್ಮ ಕಥೆಯನ್ನು ಹೇಳಿಕೊಳ್ತಾರೆ.

Viral Video: ಬೈಕ್‌ ಸೀಟ್‌ನಲ್ಲಿ 57 ಲಕ್ಷ ಹವಾಲಾ ಹಣ ಸಾಗಿಸ್ತಿದ್ದ ಸ್ಮಗ್ಲರ್‌, ದಾಳಿ

ಯಾವುದೇ ವ್ಯಕ್ತಿಯ ಮುಖ ನೋಡಿ ಅವನ ಕಷ್ಟ, ನೋವನ್ನು ಹೇಳಲು ಸಾಧ್ಯವಿಲ್ಲ. ಮೇಲ್ನೋಟಕ್ಕೆ ಸಂತೋಷವಾಗಿ ಕಾಣುವ ವ್ಯಕ್ತಿ ಬದುಕಿನಲ್ಲಿ ನೋವಿನ ದೊಡ್ಡ ಮೂಟೆ ಇರ್ಬಹುದು. ರ್ಯಾಪಿಡೊ, ಉಬರ್ ಡ್ರೈವರ್, ಡೆಲಿವರಿ ಬಾಯ್ಸ್ ಇಲ್ಲ ಬೀದಿ ಬದಿಯಲ್ಲಿರುವ ವ್ಯಾಪಾರಸ್ಥ, ಬಹುಮಹಡಿ ಕಟ್ಟಡದಲ್ಲಿ ಕೆಲ್ಸ ಮಾಡುವ ಬ್ಯುಸಿನೆಸ್ ಮೆನ್ ಎಲ್ಲರ ಹಿಂದೊಂದಿಷ್ಟು ಸಮಸ್ಯೆ, ಹೋರಾಟ ಇದ್ದೇ ಇರುತ್ತೆ. ಈ ರ್ಯಾಪಿಡೊ ಡ್ರೈವರ್ ಕೂಡ ಅನಿವಾರ್ಯವಾಗಿ ಈ ಕೆಲ್ಸ ಮಾಡ್ತಿದ್ದಾರೆ.

ಅವರು ಅಮಿಟಿ ವಿಶ್ವವಿದ್ಯಾಲಯದಲ್ಲಿ ಹೊಟೇಲ್ ಮ್ಯಾನೇಜ್ಮೆಂಟ್ ಸ್ಟಡಿ ಮಾಡಿದ್ದಾರೆ. ಅವರ ತಂದೆ ಆರ್ಮಿಯಲ್ಲಿದ್ರೆ, ಫ್ಯಾಮಿಲಿ ಬ್ಯುಸಿನೆಸ್ ನಡೆಸುತ್ತಿದ್ದರು ಡ್ರೈವರ್. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಆದ್ರೆ ಕೊರೊನಾ ಇಡೀ ಜೀವನವನ್ನೇ ತಲೆಕೆಳಗೆ ಮಾಡಿತ್ತು. ಕೊರೊನಾದಿಂದಾಗಿ ಬ್ಯುಸಿನೆಸ್ ಸಂಪೂರ್ಣ ನಿಂತಿತ್ತು. 14 ಕೋಟಿ ರೂಪಾಯಿ ನಷ್ಟವುಂಟಾಗಿತ್ತು. ಇದ್ರಿಂದ ಸುಧಾರಿಸಿಕೊಳ್ಳಲು ಸ್ನೇಹಿತರ ಜೊತೆ ಸೇರಿ ಸ್ಟಾರ್ಟ್ ಅಪ್ ಶುರು ಮಾಡಿದ್ರು. ಆದ್ರೆ ಅದೂ ತುಂಬಾ ದಿನ ನಡೆಯಲಿಲ್ಲ. ಅದ್ರಿಂದ ನಾಲ್ಕು ಲಕ್ಷ ಹೆಚ್ಚುವರಿ ಹೊರೆಯಾಯ್ತು. ಎಲ್ಲ ಹಣ ಖಾಲಿಯಾಗಿತ್ತು. ಕೈನಲ್ಲಿದ್ದಿದ್ದು ಒಂದು ಬೈಕ್ ಮಾತ್ರ. ಜೀವನ ನಡೆಸುವ ಉದ್ದೇಶದಿಂದ ರ್ಯಾಪಿಡೋ ಓಡಿಸ್ತಿದ್ದೇನೆ ಎಂದು ಡ್ರೈವರ್ ಹೇಳಿದ್ದಾರೆ. ನಾನು ಈ ಹೋರಾಟದಿಂದ ಸುಸ್ತಾಗಿದ್ದೇನೆ, ಆದ್ರೆ ಸೋಲೊಪ್ಪಿಕೊಳ್ಳಲು ಸಿದ್ಧ ಇಲ್ಲ. ಸೋಲುವ ಮುನ್ನ ಕೊನೆಯ ಪ್ರಯತ್ನ ಮಾಡ್ತಿದ್ದೇನೆ ಎಂದು ಡ್ರೈವರ್ ಹೇಳಿದ್ದಾರೆ.

ಲಂಡನ್ ಬೀದಿಗಳಲ್ಲಿ ಗುಟ್ಕಾ ಕಲೆ; 'ಬಾಯಲ್ಲಿ ಕೇಸರಿ' ಹೇಳಿದ ಭಾರತೀಯರ ವಿಡಿಯೋ

ಡ್ರೈವರ್ ಈ ಮಾತು ಕೇಳಿ ಚಿರಾಗ್ ಭಾವುಕರಾಗಿದ್ದಾರೆ. ಆದ್ರೆ ಏನು ಹೇಳ್ಬೇಕು ಎಂಬುದು ಚಿರಾಗ್ ಅವರಿಗೆ ಗೊತ್ತಾಗ್ಲಿಲ್ಲ. ನಾನು ಸುಮ್ಮನೆ ಎಲ್ಲವನ್ನೂ ಕೇಳ್ತಾ ಬಂದೆ. ಜೀವನ ಕೆಲವೊಮ್ಮೆ ಅನಿರೀಕ್ಷಿತ ತಿರುವು ಪಡೆಯುತ್ತದೆ, ಕೆಲವರಿಗೆ ಅನ್ಯಾಯ ಮಾಡುತ್ತದೆ ಎಂದು ಚಿರಾಗ್ ಎಕ್ಸ್ ಖಾತೆಯಲ್ಲಿ ಡ್ರೈವರ್ ಕಥೆ ಬರೆದಿದ್ದಾರೆ.

ಚಿರಾಗ್ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಬಳಕೆದಾರರು ಭಾವುಕರಾಗಿದ್ದಾರೆ. ಕೊರೊನಾದಿಂದ ಅನೇಕ ಕುಟುಂಬಗಳನ್ನು ಆರ್ಥಿಕವಾಗಿ ಕುಸಿದಿವೆ. ಪ್ರತಿ ವ್ಯಕ್ತಿ ಹಿಂದೆ ಒಂದು ನೋವಿನ ಕಥೆ ಇದ್ದೇ ಇರುತ್ತದೆ ಎಂದು ಕಮೆಂಟ್ ಮಾಡಿದ್ದಾರೆ. ನೋಡಲು ಸಾಮಾನ್ಯರಂತೆ ಕಾಣುವ ಅದೆಷ್ಟೋ ಮಂದಿ ಒಳಗಿನಿಂದಲೇ ನೋವು ತಿನ್ನುತ್ತಿದ್ದಾರೆ, ಕಷ್ಟ ಅನುಭವಿಸುತ್ತಿದ್ದಾರೆ, ಜೀವನದ ಜೊತೆ ದೊಡ್ಡ ಯುದ್ಧ ಮಾಡ್ತಿದ್ದಾರೆ ಎಂದು ಜನರು ಕಮೆಂಟ್ ಮಾಡಿದ್ದಾರೆ.

 

 

PREV
Read more Articles on
click me!

Recommended Stories

ಕಾರವಾರದಲ್ಲಿ ಸಂಗೀತಪ್ರಿಯರನ್ನು ಹುಚ್ಚೆಬ್ಬಿಸಿದ ಸೋನು ನಿಗಮ್; ಕನ್ನಡಿಗರ ಕ್ಷಮೆ ಕೇಳಿ ಮನಗೆದ್ದ ಗಾಯಕ!
ಲಂಡನ್ ಬೀದಿಗಳಲ್ಲಿ ಗುಟ್ಕಾ ಕಲೆ; 'ಬಾಯಲ್ಲಿ ಕೇಸರಿ' ಹೇಳಿದ ಭಾರತೀಯರ ವಿಡಿಯೋ ವೈರಲ್ ಮಾಡಿ ಅವಮಾನಿಸಿದ ಪತ್ರಕರ್ತೆ!