ಭಾರತ, ಅಮೆರಿಕ, ಯುಕೆ ಎಲ್ಲಾ ಕಡೆ ಭೀಕರ ಹಿಮಪಾತ, ಕಾದಿದೆಯಾ ಆಪತ್ತು?

Jan 7, 2025, 4:44 PM IST

ಯುಕೆ.. ಯುಎಸ್.. ಭಾರತ..ಎಲ್ಲಲ್ಲೂ ಶುರುವಾಗಿದೆ ಚಳಿಗಾಳಿಯ ಯಮ ದಾಳಿ.. ಮಹಾ ನಗರಗಳು ಕೂಡ ಈಗ ಹಿಮಸಮಾಧಿ.. 4 ರಾಷ್ಟ್ರಗಳು.. 70 ಕೋಟಿ ಜನ.. ಹಿಮಾಸುರನ ಕಪಿಮುಷ್ಠಿಯಲ್ಲಿ ವಿಲವಿಲ ಒದ್ದಾಡೋ ವಾತಾವರಣ ಸೃಷ್ಟಿಯಾಗಿದ್ದೇಕೆ?ಅಮೆರಿಕಾನ ನಡುಗಿಸ್ತಾ ಇದೆ, ಯುರೋಪಿಯನ್ ದೇಶಗಳನ್ನ ಪತರಗುಟ್ಟಿಸ್ತಾ ಇದೆ.. ಇದೇ ಶೀತಗಾಳಿ, ಭಾರತದಲ್ಲೂ ತನ್ನ ಉಗ್ರಪ್ರತಾಪ ಮೆರೆಯೋಕೆ ಸಜ್ಜಾಗಿ ನಿಂತುಬಿಟ್ಟಿದೆ.ಭಾರತದಲ್ಲೂ ಕೂಡ ಈ ಚಳಿಯ ಆರ್ಭಟವೇನೂ ಕಮ್ಮಿ ಇಲ್ಲ.. ಇನ್ನು ಕರ್ನಾಟಕದ ಕತೆ ನಿಮಗೇ ಗೊತ್ತಿದೆ.. ಹಾಗಾದ್ರೆ, ಈ ಚಳಿ ರಕ್ಕಸನಿಂದ ಮುಕ್ತಿ ಸಿಗೋದು ಯಾವಾಗ?