Viral News: 30 ಕೆಜಿ ಡೈನಾಮೇಟ್ ಇಟ್ಟು ತನ್ನ ಕಾರನ್ನೇ ಸ್ಫೋಟಿಸಿದ ಭೂಪ!

Dec 22, 2021, 6:45 PM IST

ತುಂಬಾ ಇಷ್ಟಪಟ್ಟು ಖರೀದಿಸಿದ ಕಾರನ್ನು (Car) ಎಲ್ಲರೂ ಜಾಗರೂಕರಾಗಿ ನೋಡಿಕೊಳ್ಳುತ್ತಾರೆ. ಕಾರಿಗೆ ಚೂರು ಡ್ಯಾಮೇಜ್ ಆದರೂ, ತಮಗೇ ಆಯ್ತೇನೋ ಅನ್ನೋ ಹಾಗೆ ಆಡ್ತಾರೆ. ಆದರೆ ಇಲ್ಲೊಬ್ಬ ಭೂಪ ತಾನು ಇಷ್ಟ ಪಟ್ಟ ಕಾರನ್ನು ಡೈನಾಮೆಟ್ ಇಟ್ಟು ಬ್ಲಾಸ್ಟ್ ಮಾಡಿದ್ದಾನೆ. ಕಾರು ಪದೇ ಪದೇ ಕೈಕೊಡುತ್ತಿದೆ ಎಂದು ಸಿಟ್ಟಿನಲ್ಲಿ, 30 ಕೆಜಿ ಡೈನಾಮೇಟ್ ಇಟ್ಟು ಸ್ಪೋಟಿಸಿದ್ದಾನೆ. 

Viral News: ವರನಿದ್ದ ಕುದುರೆ ಗಾಡಿಗೆ ತಗುಲಿದ ಬೆಂಕಿ, ಮುಂದೇನಾಯ್ತು..? ವಿಡಿಯೋ ವೈರಲ್

ಕಾರಿನಲ್ಲಿ ಪದೇ ಪದೇ ಸಮಸ್ಯೆ ಕಾಣಿಸುತ್ತಿದೆ ಎಂದು ಕಂಪನಿಯವರಿಗೆ ತಿಳಿಸಿದಾಗ, ಸಂಪೂರ್ಣ ಬ್ಯಾಟರಿಯನ್ನೇ ಬದಲಾಯಿಸಿ ಎಂದು ಸಲಹೆ ನೀಡುತ್ತಾರೆ. ಅದಕ್ಕೆ 17 ಲಕ್ಷಕ್ಕೂ ಹೆಚ್ಚು ಖರ್ಷು ಮಾಡಬೇಕಿತ್ತು, ಆದರೂ ಸರಿಯಾಗುತ್ತದೆ ಎಂಬ ಗ್ಯಾರಂಟಿ ಇಲ್ಲ ಎಂದಿದ್ದರು. ಹೀಗಾಗಿ ಕಾರನ್ನೇ ಸ್ಫೋಟಿಸಿದ್ದಾನೆ.