Jan 3, 2025, 12:09 PM IST
ಬೆಂಗಳೂರು(ಜ.03): 23 ವರ್ಷದ ನಂತರ ಅಮೆರಿಕದಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದಿದೆ. ಹೊಸ ವರ್ಷದ ಸಂಬರ್ಭದಲ್ಲಿದ್ದ ಅಮೆರಿಕದಲ್ಲಿ ಮೂರು ಸರಣಿ ದಾಳಿಗಳಿ ಆಗಿವೆ. ಒಂದೇ ದಿನ ಟ್ರಕ್ ದಾಳಿ, ಕಾರು ಸ್ಫೋಟ ಹಾಗೂ ಗುಂಡಿನ ದಾಳಿ ನಡೆದಿವೆ. ಒಂದರ ಮೇಲೊಂದರಂತೆ ಮೂರು ಘಟನೆಗಳಿಂದ ಅಮೆರಿಕದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಟ್ರಕ್ ದಾಳಿಯಲ್ಲಿ 15 ಜನರು ಸಾವಿಗೀಡಾಗಿದ್ದು, ಗನ್ ಶೂಟಿಂಗ್‌ನಲ್ಲಿ 12 ಮಂದಿಗೆ ಗಾಯಗಳಾಗಿವೆ. ಟ್ರಕ್ ದಾಳಿ ನಡೆಸಿದ್ದ ಮೂಲಭೂತವಾದಿಗೆ ಐಸಿಸ್ ಸಂಪರ್ಕ ಇದೆಯಾ ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. ಇದು ಭಯೋತ್ಪಾದಕ ಕೃತ್ಯ ಎಂದು ಎಫ್‌ಬಿಐ ಖಚಿತಪಡಿಸಿದೆ. ನಿವೃತ್ತ ಅಮೆರಿಕನ್ ಸೈನಿಕ ಶಂಸುದ್ದಿನ್ ಜಬ್ಬಾರ್‌ನಿಂದ ಟ್ರಕ್ ದಾಳಿ ನಡೆದಿದೆ.